ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA B.N. Ravikumar: ಮಾಜಿ ಪ್ರಧಾನಿ ದೇವೇಗೌಡರು ದೇವರ ಆಶೀರ್ವಾದದಿಂದ ಆರೋಗ್ಯವಾಗಿದ್ದಾರೆ : ಶಾಸಕ ಬಿ.ಎನ್.ರವಿಕುಮಾರ್

ಕೇಂದ್ರ ಸಚಿವ ಹೆಚ್.ಡಿ.ದೇವೇಗೌಡರು ಮತ್ತು ಹೆಚ್.ಡಿ.ದೇವೇಗೌಡರು ನಮ್ಮ ಪಕ್ಷದ ಎರಡು ಕಣ್ಣಿದ್ದಂತೆ.ಕುಮಾರಸ್ವಾಮಿ ಕರ್ನಾಟಕಕ್ಕೆ ಆಧಾರವಾಗಿದ್ದರೆ, ದೇವೇಗೌಡರು ಭಾರತ ದೇಶದ ರಾಜಕಾರಣಕ್ಕೆ ಆಧಾರ. ಇವರಿಬ್ಬರೂ ಕೂಡ ಆಯುರಾರೋಗ್ಯದಿಂದರುವಂತೆ ಕಾರ್ಯಕರ್ತರು ಮುಖಂಡರು ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಿಸುತ್ತಿರುವುದೇ ಇವರ ಮೇಲಿನ ಪ್ರೀತಿಗೆ ದ್ಯೋತಕವಾಗಿದೆ

ಮಾಜಿ ಪ್ರಧಾನಿ ದೇವೇಗೌಡರು ದೇವರ ಆಶೀರ್ವಾದಿಂದ ಆರೋಗ್ಯವಾಗಿದ್ದಾರೆ  ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ಶಿಡ್ಲಘಟ್ಟ : ಜ್ವರ ಮತ್ತು ಮೂತ್ರನಾಳದ ಸಮಸ್ಯೆ ಕಾರಣವಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾ ಗಿದ್ದ ಮಾಜಿ ಪ್ರಧಾನಿ ದೇವೇಗೌಡರು ದೇವರ ಆಶೀರ್ವಾದ ಬಲದಿಂದ ಆರೋಗ್ಯವಾಗಿದ್ದಾರೆ. ಆದಿಚುಂಚನಗಿರಿ ಪೀಠಾಧ್ಯಕ್ಷರು ನಿನ್ನೆ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ್ದು ಅವರೂ ಕೂಡ ಯೋಗಕ್ಷೇಮ ವಿಚಾರಿಸಿದ್ದು ಹರ್ಷಚಿತ್ತದಿಂದ ಇದ್ದಾರೆಂದು ತಿಳಿಸಿದ್ದಾರೆ ಎಂದು ಶಾಸಕ ಬಿ.ಎನ್. ರವಿಕುಮಾರ್ ( MLA B.N. Ravikumar) ತಿಳಿಸಿದ್ದಾರೆ.

ಪತ್ರಿಕೆಯ ವರದಿಗಾರರೊಂದಿಗೆ ಪೋನ್ ಕರೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ಮಾಜಿ ಪ್ರಧಾನಿ ಮಂತ್ರಿಗಳಾದ ಎಚ್ ಡಿ ದೇವೇಗೌಡರ ತತ್ವ ಸಿದ್ಧಾಂತಗಳನ್ನು ನಂಬಿ ರಾಜಕೀಯಕ್ಕೆ ಬಂದಿದ್ದೇನೆ. ಅವರ ಆಶೀರ್ವಾದದಿಂದ ಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ:Shidlaghatta News: ಪೊಲೀಸ್ ಇಲಾಖೆಯ ಬಗ್ಗೆ ಸಾರ್ವಜನಿಕರಿಗೆ ವಿಶ್ವಾಸವಿರಲಿ ಭಯಬೇಡ: ಪಿ.ಎಸ್.ಐ ವೇಣುಗೋಪಾಲ್

ಕೇಂದ್ರ ಸಚಿವ ಹೆಚ್.ಡಿ.ದೇವೇಗೌಡರು ಮತ್ತು ಹೆಚ್.ಡಿ.ದೇವೇಗೌಡರು ನಮ್ಮ ಪಕ್ಷದ ಎರಡು ಕಣ್ಣಿದ್ದಂತೆ.ಕುಮಾರಸ್ವಾಮಿ ಕರ್ನಾಟಕಕ್ಕೆ ಆಧಾರವಾಗಿದ್ದರೆ, ದೇವೇಗೌಡರು ಭಾರತ ದೇಶದ ರಾಜಕಾರಣಕ್ಕೆ ಆಧಾರ.ಇವರಿಬ್ಬರೂ ಕೂಡ ಆಯುರಾರೋಗ್ಯದಿಂದರುವAತೆ ಕಾರ್ಯಕರ್ತರು ಮುಖಂಡರು ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಿಸುತ್ತಿರುವುದೇ ಇವರ ಮೇಲಿನ ಪ್ರೀತಿಗೆ ದ್ಯೋತಕವಾಗಿದೆ ಎಂದರು.

ನನಗಿರುವ ಅನುದಾನದಲ್ಲಿ ಕ್ಷೇತ್ರದ ಅಭಿವೃದ್ದಿಗೆ ಕಟಿಬದ್ಧನಾಗಿದ್ದೇನೆ. ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ರಸ್ತೆಗಳ ರಿಪೇರಿ ಮಾಡಬೇಕಿದೆ ಹಲವು ಗ್ರಾಮಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರು ಕೂಡ ರಸ್ತೆ ಅಭಿವೃದ್ಧಿ ಸೇರಿದಂತೆ ಇತರೆ ಸಮಸ್ಯೆಗಳನ್ನು ಕುರಿತು ಗಮನ ಸೆಳೆಯುತ್ತಾ ಸರಿಪಡಿ ಸಲು ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಅವರ ಮನವಿಗೆ ಸ್ಪಂಧಿಸುವುದು ಶಾಸಕನಾಗಿ ನನ್ನ ಕರ್ತವ್ಯ.ಹಂತ ಹಂತವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೂಲಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಅ.೨೭ಕ್ಕೆ ಶಿಡ್ಲಘಟ್ಟಕ್ಕೆ ಮುಖ್ಯಮಂತ್ರಿಗಳು ಬರುತ್ತಿದ್ದಾರೆ. ಅವರಿಗೆ ಕ್ಷೇತ್ರದ ಅಭಿವೃದ್ದಿಗೆ ಬೇಕಾದ ಅನುದಾನ ಒದಗಿಸುವಂತೆ ಮನವಿ ಮಾಡುತ್ತೇನೆ. ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣದ ಶಂಕುಸ್ಥಾಪನೆಗಾಗಿ ಅವರು ಆಗಮಿಸುತ್ತಿರುವುದು ರೇಷ್ಮೆ ಬೆಳೆಗಾರರ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದೆ. ಈ ಕಾರ್ಯಕ್ರಮದಲ್ಲಿ ಶಾಸಕನಾಗಿ ನಾನು ಭಾಗಿಯಾಗುವುದು,ಇಲ್ಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದು ನನಗೆ ಸಿಕ್ಕಿರುವ ಅವಕಾಶವೆಂದು ಭಾವಿಸುತ್ತೇನೆ.