ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shidlaghatta News: ಪೊಲೀಸ್ ಇಲಾಖೆಯ ಬಗ್ಗೆ ಸಾರ್ವಜನಿಕರಿಗೆ ವಿಶ್ವಾಸವಿರಲಿ ಭಯಬೇಡ: ಪಿ.ಎಸ್.ಐ ವೇಣುಗೋಪಾಲ್

ಮಕ್ಕಳು ಮೊಬೈಲ್ ಫೋನ್‌ಗಳನ್ನು ಅತಿಯಾಗಿ ಬಳಸುತ್ತಿರುವುದರ ಬಗ್ಗೆ ಪೋಷಕರು ಜಾಗರೂಕ ರಾಗಬೇಕು ಎಂದು ಎಚ್ಚರಿಕೆ ನೀಡಿದರು. ಬೆಟ್ಟಿಂಗ್ ಹಾಗೂ ಮಾದಕವಸ್ತುಗಳ ಪ್ರಭಾವದಿಂದ ಮಕ್ಕಳು ದಾರಿ ತಪ್ಪುತ್ತಿರುವುದರಿಂದ ಅವರಿಗೆ ಉತ್ತಮ ವಿದ್ಯಾಭ್ಯಾಸ ಹಾಗೂ ನೈತಿಕ ಮಾರ್ಗದರ್ಶನ ನೀಡಬೇಕೆಂದರು.

ಪೊಲೀಸ್ ಇಲಾಖೆಯ ಬಗ್ಗೆ ಸಾರ್ವಜನಿಕರಿಗೆ ವಿಶ್ವಾಸವಿರಲಿ ಭಯಬೇಡ

ಶಿಡ್ಲಘಟ್ಟ ನಗರದ 11ನೇ ವಾರ್ಡ್ನಲ್ಲಿ ಪೊಲೀಸ್ ಇಲಾಖೆಯ ಸಹಯೋಗದಲ್ಲಿ “ಮನೆ ಮನಗೆ ಪೊಲೀಸ್” ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಅನಿಲ್ ಕುಮಾರ್ ಮಾತನಾಡಿದರು. -

Ashok Nayak Ashok Nayak Oct 12, 2025 10:14 AM

ಶಿಡ್ಲಘಟ್ಟ: ಸಾರ್ವಜನಿಕರ ಭದ್ರತೆಗಾಗಿಯೇ ಪೊಲೀಸ್ ವ್ಯವಸ್ಥೆಯನ್ನು ಸರ್ಕಾರ ರೂಪಿಸಿದ್ದು ಪೊಲೀಸ್ ಇಲಾಖೆಯ ಬಗ್ಗೆ ಸಾರ್ವಜನಿಕರಲ್ಲಿ ಭಯ ಬೇಡ. ಭರವಸೆ ಇರಲಿ ಎಂದು ನಗರ ಪೊಲೀಸ್ ಠಾಣೆ ಪಿಎಸ್‌ಐ ವೇಣುಗೋಪಾಲ್ ತಿಳಿಸಿದರು.

ನಗರದ 11ನೇ ವಾರ್ಡ್ನಲ್ಲಿ ಪೊಲೀಸ್ ಇಲಾಖೆಯ ಸಹಯೋಗದಲ್ಲಿ “ಮನೆ ಮನೆಗೆ ಪೊಲೀಸ್” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯಲು ಸರ್ಕಾರ ಪೋಕ್ಸೊ ಜಾರಿಗೊಳಿಸಿದೆ. ಹೆಣ್ಣು ಮಕ್ಕಳು ತಮ್ಮ ಮೇಲೆ ಆಗುತ್ತಿರುವ ಕಿರುಕುಳದ ಬಗ್ಗೆ ಮುಕ್ತವಾಗಿ ಪೊಲೀಸರ ಗಮನಕ್ಕೆ ತಂದು ರಕ್ಷಣೆ ಪಡೆಯಿರಿ ಎಂದರು.

ಇದನ್ನೂ ಓದಿ: Shidlaghatta News: ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ ಪುನರ್ ಪ್ರತಿಷ್ಠಾಪನೆ : ಪುಟ್ಟು ಆಂಜಿನಪ್ಪ ಭಾಗಿ

ಮಕ್ಕಳು ಮೊಬೈಲ್ ಫೋನ್‌ಗಳನ್ನು ಅತಿಯಾಗಿ ಬಳಸುತ್ತಿರುವುದರ ಬಗ್ಗೆ ಪೋಷಕರು ಜಾಗರೂಕ ರಾಗಬೇಕು ಎಂದು ಎಚ್ಚರಿಕೆ ನೀಡಿದರು. ಬೆಟ್ಟಿಂಗ್ ಹಾಗೂ ಮಾದಕವಸ್ತುಗಳ ಪ್ರಭಾವದಿಂದ ಮಕ್ಕಳು ದಾರಿ ತಪ್ಪುತ್ತಿರುವುದರಿಂದ ಅವರಿಗೆ ಉತ್ತಮ ವಿದ್ಯಾಭ್ಯಾಸ ಹಾಗೂ ನೈತಿಕ ಮಾರ್ಗ ದರ್ಶನ ನೀಡಬೇಕೆಂದರು.

ನಗರಸಭೆ ಸದಸ್ಯ ಅನಿಲ್ ಕುಮಾರ್ ಮಾತನಾಡಿ, ನಮ್ಮ ನೆಚ್ಚಿನ ವಾರ್ಡ್ ಇದು ಈ 11ನೇ ವಾರ್ಡ್ನಲ್ಲಿ ನಗರಸಭೆ ಅಧಿಕಾರಿಗಳ ಸಹಕಾರದಿಂದ ನೀರು,ಸ್ವಚ್ಛತೆ,ಬೀದಿ ದೀಪಗಳು ಹಾಗೂ ಆರೋಗ್ಯ ಕಾರ್ಡ್ ವಿತರಣೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.

ಅದರಂತೆ ಉತ್ತಮವಾಗಿ ನಿಮ್ಮಗಳ ಸಹಕಾರ ನನಗೆ ಸಿಕ್ಕಿದೆ  ಅದರಂತೆ ಸಹ ಪೋಲಿಸರ ಸಹಕಾರ ಮನಗೆ ಇರಲಿ,ನಮ್ಮ ವಾರ್ಡಿಗೆ ಬೀಟ್ ಪೊಲೀಸ್ ಹೆಚ್ಚಿನ ಅವಶ್ಯಕತೆ ಇದ್ದು ಅಧಿಕಾರಿಗಳು ಗಮನಹರಿಸಲಿ ಎಂದರು.

ಈ ಸಂದರ್ಭದಲ್ಲಿ ನಗರ ಠಾಣೆ ಎ.ಎಸ್.ಐ ಶಂಕ್ರಾಚಾರಿ, ಬೀಟ್ ಮುಖ್ಯ ಪೇದೆ ರಾಜೇಶ್,ಹಾಗೂ ಸಂಪತ್ ಕುಮಾರ್, ೧೧ ನೇ ವಾರ್ಡ್ ಮುಖ್ಯಸ್ಥರು, ಮಹಿಳೆಯರು, ಮಕ್ಕಳು ಹಾಜರಿದ್ದರು.

*

"ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಾಮರಸ್ಯದಿಂದ ಇರಬೇಕು. ಸರ್ಕಾರದಿಂದ ಆಯೋಜಿಸಲಾದ ಈ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಮುಖ್ಯವಾಗಿದೆ ಎಂದರು"
-ಅಮೃತ ಜಿ ನಗರಸಭೆ ಪೌರಾಯುಕ್ತೆ