ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಕೈಗಾರಿಕೆಗಳು ಅಭಿವೃದ್ಧಿಯಾದರೆ ದೇಶದ ಪ್ರಗತಿ: ಜಂಟಿ ನಿರ್ದೇಶಕ ಕೆ. ಶಿವಲಿಂಗಯ್ಯ

ಭಾರತದಲ್ಲಿ ಜಾಗತೀಕರಣ ನಂತರ ಕೈಗಾರಿಕೆಗಳು ವೇಗವಾಗಿ ಬೆಳೆಯಲು ಸಾಧ್ಯವಾಯಿತು. ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಯನ್ನು ಕೈಗಾರಿಕೆ ನೀಡಿದೆ. ಉದ್ದಿಮೆಗಳನ್ನು ಪ್ರಾರಂಭಿಸಲು ಸರ್ಕಾರ ಸಹಾಯಧನ ನೀಡುತ್ತದೆ. ಉದ್ದಿಮೆಗಳ ಆರಂಭವೆಷ್ಟು ಮುಖ್ಯವೋ ನಂತರ ಮಾರುಕಟ್ಟೆ ಕೌಶಲ್ಯವೂ ಅಷ್ಟೆ ಮುಖ್ಯವಾಗಿದ್ದು, ಈ ಕುರಿತು ಈ ಕಾರ್ಯಾಗಾರವು ಉದಯೋನ್ಮುಖ ಉದ್ದಿಮೆದಾರರಿಗೆ ಸಹಕಾರಿಯಾಗಿದೆ

ಕೈಗಾರಿಕೆಗಳು ಅಭಿವೃದ್ಧಿಯಾದರೆ ದೇಶದ ಪ್ರಗತಿ

ಸಣ್ಣ, ಮಧ್ಯಮ ಕೈಗಾರಿಕೆಗಳನ್ನು ಆರಂಭಿಸುವವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಹಾಗೂ ಸೌಲಭ್ಯಗಳನ್ನು ಜಾರಿಗೊಳಿಸಿವೆ ಎಂದು ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಕೆ. ಶಿವಲಿಂಗಯ್ಯ ಅವರು ತಿಳಿಸಿದರು. -

Ashok Nayak Ashok Nayak Oct 10, 2025 3:37 PM

ಚಿಕ್ಕಬಳ್ಳಾಪುರ: ಸಣ್ಣ, ಮಧ್ಯಮ ಕೈಗಾರಿಕೆಗಳನ್ನು ಆರಂಭಿಸುವವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಹಾಗೂ ಸೌಲಭ್ಯಗಳನ್ನು ಜಾರಿಗೊಳಿಸಿವೆ ಎಂದು ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಕೆ.ಶಿವಲಿಂಗಯ್ಯ ಅವರು ತಿಳಿಸಿದರು.

ನಗರ ಹೊರವಲಯದಲ್ಲಿರುವ ಖಾಸಗಿ ಹೋಟೆಲೊಂದರಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ “ಎಂ.ಎಸ್.ಎM.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವ" ಲೀನ್ ಯೋಜನೆ ಮತ್ತು ಝಡ್.ಇ.ಡಿ. ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೃಷಿ ಕ್ಷೇತ್ರ ಹೊರತುಪಡಿಸಿ ಅತಿ ಹೆಚ್ಚು ಉದ್ಯೋಗ ಕಲ್ಪಿಸುತ್ತಿರುವ ಕೈಗಾರಿಕಾ ಕ್ಷೇತ್ರಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು ಕಡಿಮೆ ಬಡ್ಡಿಯ ಸಾಲ ಹಾಗೂ ಸಹಾಯಧನ ರೂಪದ ಸಾಲ ಸೌಲಭ್ಯಗಳನ್ನು ನೀಡುತ್ತಿವೆ. ಗುಡಿ ಹಾಗೂ ಸಣ್ಣ ಕೈಗಾರಿಕೆಗಳ ಸ್ಥಾಪನೆ ಹಾಗೂ ಘಟಕಗಳ ವಿಸ್ತರಣೆಗೆ ಮತ್ತು ಆಧುನಿಕ ತಾಂತ್ರಿಕ ಉನ್ನತೀಕರಣಕ್ಕೆ ವಿವಿಧ ಸೌಲಭ್ಯಗಳು ಲಭ್ಯವಿದ್ದು ಉದ್ಯಮಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಭಾರತದಲ್ಲಿ ಜಾಗತೀಕರಣ ನಂತರ ಕೈಗಾರಿಕೆಗಳು ವೇಗವಾಗಿ ಬೆಳೆಯಲು ಸಾಧ್ಯವಾಯಿತು. ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಯನ್ನು ಕೈಗಾರಿಕೆ ನೀಡಿದೆ. ಉದ್ದಿಮೆಗಳನ್ನು ಪ್ರಾರಂಭಿಸಲು ಸರ್ಕಾರ ಸಹಾಯಧನ ನೀಡುತ್ತದೆ. ಉದ್ದಿಮೆಗಳ ಆರಂಭವೆಷ್ಟು ಮುಖ್ಯವೋ ನಂತರ ಮಾರುಕಟ್ಟೆ ಕೌಶಲ್ಯವೂ ಅಷ್ಟೆ ಮುಖ್ಯವಾಗಿದ್ದು, ಈ ಕುರಿತು ಈ ಕಾರ್ಯಾಗಾರವು ಉದಯೋನ್ಮುಖ ಉದ್ದಿಮೆದಾರರಿಗೆ ಸಹಕಾರಿಯಾಗಿದೆ ಎಂದರು.

ಇದನ್ನೂ ಓದಿ: Chikkaballapur News: ಹೃದಯವಂತನ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ!

ಕೈಗಾರಿಕೆಗಳು ಅಭಿವೃದ್ಧಿಯಾದರೆ ದೇಶದ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಉದ್ದಿಮೆಗಳಲ್ಲಿ ಮಾರುಕಟ್ಟೆ ಜ್ಞಾನ ಬಹಳ ಮುಖ್ಯವಾಗಿರುತ್ತದೆ. ಮಾರುಕಟ್ಟೆಯ ಕುರಿತು ಹೆಚ್ಚು ಅಧ್ಯಯನ ಮಾಡಬೇಕು. ಉದ್ದಿಮೆದಾರರು ಸರ್ಕಾರ ನೀಡುವ ಎಲ್ಲ ಮೂಲಭೂತ ಸೌಕರ್ಯಗಳು ಹಾಗೂ ಸಾಲ ಸೌಲಭ್ಯವನ್ನು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಭಾರತದ ರಫ್ತು ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಗತಿ ಸಾಧಿಸಬೇಕು, ವಸ್ತುವಿನ ಗುಣಮಟ್ಟಕ್ಕೆ ಆದ್ಯತೆ ನೀಡಿದರೆ ಮಾರುಕಟ್ಟೆ ಸೃಷ್ಟಿ ಯಾಗುತ್ತದೆ. ಯುವ ಸಮುದಾಯ ಉದ್ಯೋಗಕ್ಕಾಗಿ ಅಂಬಲಿಸುವ ಬದಲಾಗಿ ಕೆಲಸ ನೀಡುವ ಉದ್ದಿಮೆದಾರರಾಗಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಮಾಹಿತಿಯನ್ನು ಪಡೆಯಲು ಕೈಗಾರಿಕಾ ಇಲಾಖೆಯ ಜಿಲ್ಲಾ ಕಚೇರಿಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್ ವೆಂಕಟಕೃಷ್ಣ  ಮಾತನಾಡುತ್ತ, ಯಾವುದೇ ಉದ್ಯಮ ಹಾಗೂ ಕೈಗಾರಿಕೆ ಪ್ರಾರಂಭಿಸಲು ಬ್ಯಾಂಕ್ಗಳು ನೀಡುವ ಸಾಲ ಸೌಲಭ್ಯಗಳು ಅತ್ಯವಶ್ಯಕವಾಗಿ ಬೇಕಾಗಿರು ತ್ತದೆ. ಜಿಲ್ಲೆಯಲ್ಲಿ ೨೪ ಬ್ಯಾಂಕ್ಗಳ ೧೮೧ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಉದ್ದಿಮೆದಾರರು ಸೂಕ್ತ ದಾಖಲಾತಿಗಳೊಂದಿಗೆ ಸಾಲ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿದ ೧೫ ದಿನಗಳ ಒಳಗಾಗಿ ಬ್ಯಾಂಕುಗಳಿ<ದ ಸಾಲ ಮಂಜೂರು ಆಗದಿದ್ದರೆ ಲೀಡ್ ಬ್ಯಾಂಕ್ ನ ಮಿಂಚMಚೆ ವಿಳಾಸ ಅಥವಾ ದೂ.ಸಂ: ೯೪೪೮೦೪೭೪೯೪ ಅನ್ನು ಸಂಪರ್ಕಿಸಿ ದೂರು ನೀಡಬಹುದು. ಅಲ್ಲದೇ ಲೀಡ್ ಬ್ಯಾಂಕ್ ವತಿಯಿಂದ ನೀಡಲಾಗುವ ವಿವಿಧ ತರಬೇತಿಗಳನ್ನು ಪಡೆದು ಕೈಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿ ಕೊಳ್ಳಲು ಬಯಸುವವರು ದೂ.ಸಂ: ೯೯೦೧೦೬೯೬೬೪ ಅನ್ನು ಸಂಪರ್ಕಿಸಬಹುದು. ಎಂದು ಉದ್ದಿಮೆದಾರರಲ್ಲಿ ಹಾಗೂ ಉದ್ಯೋಗಾಕಾಂಕ್ಷಿಗಳಲ್ಲಿ ಮನವಿ ಮಾಡಿದರು.

ಸರ್.ಎಂ. ವಿ ಕೈಗಾರಿಕಾ ಸಂಘದ ಅಧ್ಯಕ್ಷ ಹೆಚ್.ಆರ್  ಗೋವಿಂದರಾಜು ಅವರು ಮಾತನಾಡಿ, ಹೊಸ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಹಾಗೂ ಅಭಿವೃದ್ಧಿ ಪಡಿಸುವ ಉದ್ದೇಶಕ್ಕೆ ಸಾಲ ನೀಡಲು ಪ್ರಸ್ತುತ ಭಾರತೀಯ ಬ್ಯಾಂಕುಗಳು ಮುಂಚೂಣಿಯಲ್ಲಿವೆ. ಸರ್ಕಾರಗಳು ಸಹ ಸಾಲ ಸೌಲಭ್ಯಗಳ ಮೇಲೆ ಹೆಚ್ಚಿನ ರೂಪದಲ್ಲಿ ಸಹಾಯಧನವನ್ನು ನೀಡುತ್ತಿವೆ. ಟೆಕ್ಸ್ ಟೈಲ್ ಉದ್ದಿಮೆ ಮಾಡಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. ೯೦ ರಷ್ಟು ಸಹಾಯಧನವಿದೆ. ೧೮೦೦ ಕೋಟಿ ಹಣವನ್ನು ಕೃಷಿ ಆಧಾರಿತ ಕೈಗಾರಿಕೆಗಳ ಉತ್ತೇಜನಕ್ಕೆ ಸರ್ಕಾರ ಪ್ರತಿ ವರ್ಷ ಮೀಸಲಿಡುತ್ತಿದೆ. Sಣಚಿಟಿಜ Uಠಿ Iಟಿಜiಚಿ ಯೋಜನೆಯಡಿ ಒಟ್ಟು ಹೂಡಿಕೆಯಲ್ಲಿ ಶೇ. ೮೫ ರಷ್ಟು ಸಾಲವನ್ನು ಬ್ಯಾಂಕುಗಳಿAದ ಪಡೆಯಬಹುದು. ಬ್ಯಾಂಕಿMಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರು ಪ್ರಮಾಣಿಕವಾಗಿ ಹಾಗೂ ಕಾರ್ಯಕ್ಷಮತೆಯಿಂದ ದುಡಿಯುತ್ತಿದ್ದು, ಉದ್ದಿಮೆದಾರರಿಗೆ ಉತ್ತಮ ಸ್ಪಂದನೆ ನೀಡುತ್ತಿರುವುದಕ್ಕೆ ಧನ್ಯವಾದ ತಿಳಿಸಲು ಇಚ್ಚಿಸುತ್ತೇನೆ. ಒಟ್ಟಾರೆ ಕೈಗಾರಿಕಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಇದು ಸಕಾಲವಾಗಿದೆ. ಯುವ ಉದ್ದಿಮೆದಾರರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷ ನಿಂಗಣ್ಣ  ಎಸ್ ಬಿರಾದರ, ಉಪಸಮಿತಿಯ ಅಧ್ಯಕ್ಷ ಅನಿಲ್ ಕುಮಾರ್, ಗ್ರಾಮೀಣ ಜಂಟಿ ಕಾರ್ಯದರ್ಶಿ ವಿ ದಿನೇಶ್ ಕುಮಾರ್, ಎಸ್.ಸಿ.ಎಸ್.ಟಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ನರಸಿಂಹ, ಸರ್ ಎಂ.ವಿ ಕೈಗಾರಿಕಾ ಸಂಘದ ಅಧ್ಯಕ್ಷ ಹೆಚ್.ಆರ್. ಗೋವಿಂದರಾಜು, ಸಣ್ಣ ಹಾಗೂ ಮಧ್ಯಮ ಕೈಗರಿಕೆಗಳ ಉದ್ಯಮೆದಾರರು, ಉದಯೋನ್ಮುಖ ಕೈಗಾರಿಕೋದ್ಯಮಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.