ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಸಿಎಂ ಬದಲಾವಣೆಯಾದಲ್ಲಿ ದಲಿತ ಜನಪ್ರತಿನಿಧಿಗಳಿಗೆ ಸಿಎಂ ಪಟ್ಟ ನೀಡಬೇಕಿದೆ. ಈ ಬಾರಿಯೂ ಮೋಸ ಮಾಡಿದರೆ, ದಲಿತರಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ನಿರ್ಣಾಮ ಆಗಲಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಶಾಪ ಹಾಕಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರೆದಲ್ಲಿ ಯಾವುದೇ ಅಭ್ಯಂತರ ಇಲ್ಲ. ಆದರೆ ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಆತಂರಿಕ ಕಚ್ಚಾಟ ಹೆಚ್ಚಾ ಗಿದ್ದು, ಡಿಕೆಶಿ ಹಾಗೂ ಸಿಎಂ ಬಣಗಳ ನಡುವೆ ಕಿತ್ತಾಟವು ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಹಿಂದೆಯೂ ದಲಿತ ಸಿಎಂ ಎಂಬ ಹೋರಾಟ ಆರಂಭವಾಗಿತ್ತು. ಆದರೆ ಕಾಲಕ್ರಮೇಣ ಹೋರಾಟ ವನ್ನು ದಿಕ್ಕುತಪ್ಪಿಸಲಾಯಿತು. ಇದೀಗ ಹೋರಾಟಕ್ಕೆ ಮರು ಜೀವ ನೀಡಲು ಒಕ್ಕೂಟವು ನಿರ್ಧರಿಸಿದೆ ಎಂದರು.
ಕಾAಗ್ರೆಸ್‌ನಲ್ಲಿ ದಲಿರತಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಡಾ.ಜಿ.ಪರೇಶ್ವರ್, ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ ಸಿಎಂ ಆಗಲು ಅರ್ಹರಿದ್ದು, ಅವರಲ್ಲಿ ಯಾರನ್ನು ಬೇಕಾದರೂ ಪಕ್ಷದ ಹೈಕಮಾಂಡ್ ಸಿಎಂ ಆಗಿ ಮಾಡಲಿ, ದಲಿತ ಜನಪ್ರತಿನಿಧಿಗಳು ರಾಜಕೀಯ ಸನ್ಯಾಸಿಗಳು ಅಲ್ಲ. ಅವಕಾಶ ನೀಡಿದರೆ ಅವರೂ ಸಿಎಂ ಆಗುತ್ತಾರೆ ಎಂದು ಅಭಿಪ್ರಾಯಪಟ್ಟರು.;
ಇದನ್ನೂ ಓದಿ: Chikkaballapur News: ನ.೫ಕ್ಕೆ ಕನ್ನಡ ಭವನದಲ್ಲಿ ವಿ.ಕೃಷ್ಣರಾವ್ ಶತಮಾನೋತ್ಸವ ಕಾರ್ಯಕ್ರಮ : ಲಾಯರ್ ನಾರಾಯಣಸ್ವಾಮಿ
ದಲಿತ ಸಿಎಂ ಕೂಗು ಎತ್ತಿದ ವೇಳೆ ಅದನ್ನು ಷಡ್ಯಂತರ ನಡೆಯುತ್ತದೆ. ಸಿಎಂ ಆಗಲು ಹೈಕಮಾಂಡ್ ಬಿಡುತ್ತಿಲ್ಲ. ಎಸ್‌ಸಿ ಎಸ್‌ಟಿ ಸೇರಿ ೧.೫ ಕೋಟಿ ಜನಸಂಖ್ಯೆಯಿದ್ದು, ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಅವಕಾಶ ಲಭಿಸಿಲ್ಲ. ಎರಡು ವರ್ಷಗಳಿಗೆ ದಲಿತ ಸಿಎಂ ಆದಲೇಬೇಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ದಲಿತರೇ ಮುಖ್ಯ ಕಾರಣ, ಈ ನಿಟ್ಟಿನಲ್ಲಿ ದಲಿತರ ಋಣ ತೀರಿಸಲು ಖುರ್ಚಿ ನೀಡಬೇಕಿದೆ ಎಂದು ಹೇಳಿದರು.
ಕೋಲಾರದ ಸಭೆಯಲ್ಲಿ ಡಿಕೆಶಿ ಅವರು ಖರ್ಗೆ ಅವರು ಸಿಎಂ ಆಗುವುದಾದರೆ ಬೆಂಬಲ ನೀಡುವು ದಾಗಿ ಹೇಳಿದ್ದರು. ಇದೀಗ ಅವರ ಹೇಳಿಕೆಯಂತೆ ಖರ್ಗೆ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಟ್ಟು ೨೦೨೮ಕ್ಕೆ ಅವರು ಸಿಎಂ ಆಗಲಿ, ಇದಕ್ಕೆ ಎಲ್ಲರ ಬೆಂಬಲವೂ ಸಿಗಲಿದೆ. ಇಲ್ಲವಾದಲ್ಲಿ ಕಷ್ಟ ದಿನಗಳು ಎದುರಾಗಲಿದೆ. ನಮ್ಮ ಶಾಪ ತಟ್ಟುತ್ತೆ. ನ.೨೦ ರವರೆಗೆ ಕಾಯಲಿದ್ದು, ಹೈಕಮಾಂಡ್ ನಮಗೆ ಸ್ಪಂದಿಸದೇ ಇದ್ದಲ್ಲಿ ವಿಧಾನಸಭೆ ಮುತ್ತಿಗೆ ಹಾಕಿ ಖುರ್ಚಿಯನ್ನು ಪಡೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಒಕ್ಕೂಟದ ಮುನಿಆಂಜಿನಪ್ಪ ಮಾತನಾಡಿ, ದಲಿತರು ಈ ಬಾರಿ ಸಿಎಂ ಖುರ್ಚಿಯನ್ನು ಪಡೆಯಲೇ ಬೇಕೆಂದು ಹಠಕ್ಕೆ ಬಿದ್ದಿದ್ದು, ೧೦ ಲಕ್ಷ ಜನರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸಿದ್ಧ ರಿದ್ದೇವೆ. ಡೆಲ್ಲಿ ಹೈಕಮಾಂಡ್ ಬೆಂಗಳೂರಿಗೆ ಆಗಮಿಸಿ ನಮ್ಮ ಬೇಡಿಕೆ ಈಡೇರಿಸುವಂತೆ ಮಾಡಲಾ ಗುವುದು. ಪಕ್ಷದಿಂದ ದಶಕಗಳಿಂದ ಸಮುದಾಯಕ್ಕೆ ಮೋಸ ಆಗಿದೆ. ಜನಸಂಖ್ಯೆಗೆ ಅನುಗುಣವಾಗಿ ಸಿಎಂ ಸ್ಥಾನ ಸಿಗಬೇಕಿದೆ. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಪಕ್ಷವು ನಾಶ ಆಗಲಿದೆ ಎಂದು ನುಡಿದರು.
ಬಿ.ಎನ್.ಗಂಗಾಧರಪ್ಪ, ಕೆ.ಎಸ್.ಅರುಣ್‌ಕುಮಾರ್, ಜಿ.ಸಿ.ವೆಂಕಟರವಣಪ್ಪ, ಲಯನ್ ಬಾಲಕೃಷ್ಣ, ಶಂಕರ್ ರಾಮಲಿಂಗಯ್ಯ, ಅಶ್ವತ್ಥ್ ಅಂತ್ಯೆಜಿ, ಜಗನ್ನಾಥ್, ಎನ್.ರಾಮಕೃಷ್ಣಪ್ಪ, ದಾಸರಬೀದಿ ಮುರಳಿ, ವೈ.ಶಂಕರ್, ಬಸವರಾಜ್‌ನಾಯಕ್, ರ‍್ಯಾಗರಾಜ್, ಕೋಡಗಲ್ ರಮೇಶ್, ಬಾಬು, ಕೃಷ್ಣಮೂರ್ತಿ, ಶ್ರೀಧರ್, ಈಶ್ವರಪ್ಪ ಇದ್ದರು.