ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಕೈವಾರ ಪಟ್ಟಣ ಪಂಚಾಯತಿಯಾಗಿ ಘೋಷಣೆ: ಗ್ರಾಮದಲ್ಲಿ ಪಟಾಕಿ ಸಿಡಿಸಿ ಸಂಭ್ರಮ

ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಚಿಂತಾಮಣಿ ತಾಲ್ಲೂಕಿನ ಪವಿತ್ರ ಯಾತ್ರಾಸ್ಥಳವಾದ ಕೈವಾರ ಮತ್ತು ಕೈಗಾರಿಕಾ ಪ್ರದೇಶ ಮಸ್ತೇನ ಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಿ ಕೈವಾರ ಪಟ್ಟಣ ಪಂಚಾಯತಿ ಎಂದು ಘೋಷಿಸಲಾಯಿತು.

ಕೈವಾರ ಪಟ್ಟಣ ಪಂಚಾಯತಿಯಾಗಿ ಘೋಷಣೆ

Ashok Nayak Ashok Nayak Aug 9, 2025 12:24 PM

ಚಿಂತಾಮಣಿ: ಕರ್ನಾಟಕ ಪುರಸಭೆಗಳ ಕಾಯ್ದೆ ಪ್ರಕಾರ ಚಿಂತಾಮಣಿ ತಾಲ್ಲೂಕಿನ ಕೈವಾರ ಮತ್ತು ಮಸ್ತೇನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಮೇಲ್ದರ್ಜೆಗೇರಿಸಿ ಕೈವಾರ ಪಟ್ಟಣ ಪಂಚಾಯತಿ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ರಾತ್ರಿ ಗ್ರಾಮದ ಕೈವಾರ ತಾತಯ್ಯನವರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮುಖಂಡರು ನಂತರ ಗ್ರಾಮದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಇದನ್ನೂ ಓದಿ: Chikkaballapur News: “ನೀರ ಜಾಡು” ಯುವ ಕೃಷಿಕರ ಅಧ್ಯಯನ ಯಾತ್ರೆಗೆ ಚಾಲನೆ

ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಚಿಂತಾಮಣಿ ತಾಲ್ಲೂಕಿನ ಪವಿತ್ರ ಯಾತ್ರಾಸ್ಥಳವಾದ ಕೈವಾರ ಮತ್ತು ಕೈಗಾರಿಕಾ ಪ್ರದೇಶ ಮಸ್ತೇನ ಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಿ ಕೈವಾರ ಪಟ್ಟಣ ಪಂಚಾಯತಿ ಎಂದು ಘೋಷಿಸಲಾಯಿತು.

ಸಚಿವ ಸಂಪುಟದ ತೀರ್ಮಾನ ತಿಳಿಯುತ್ತಿದ್ದಂತೆ ಗ್ಯಾರೆಂಟಿ ಸಮಿತಿಯ ಅಧ್ಯಕ್ಷರಾದ ಜಂಗಮಶಿಗೇ ಹಳ್ಳಿ ಮುನಿ ನಾರಾಯಣಪ್ಪ, ಗ್ರಾಮದ ಮುಖಂಡರಾದ ಮಂಜುನಾಥ ರೆಡ್ಡಿ, ಮುಸ್ತಫಾ, ಅಸ್ಲಾಂ ಪಾಷ ಉರ್ಫ್ ಪಿಟ್ಟು, ಅಂಬರೀಷ್, ಚಂದ್ರ, ಸೀನಪ್ಪ, ಮೌಲಾ, ನಾಗ, ನಾಗರಾಜ್, ಅಲ್ಲಾ ಬಕಾಶ್ ಸೇರಿದಂತೆ ಮತ್ತಿತರರು ಇದ್ದರು.