ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ರಾಜಲಕ್ಷ್ಮೀ ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ

ಪ್ರಧಾನ ಅರ್ಚಕರಾದ ಭೂಮರಾಜು ನರೇಂದ್ರಶರ್ಮ ನೇತೃತ್ವದಲ್ಲಿ ಮುಂಜಾನೆಯಿಂದಲೇ ರಾಜ ಲಕ್ಷ್ಮೀ ದೇವಿಗೆ ಅಭಿಷೇಕ, ಅರ್ಚನೆ, ಅಲಂಕಾರ, ವರಮಹಾ ಲಕ್ಷ್ಮೀ ವ್ರತ, ಕನಕಾಭಿಷೇಕ, ದಿಂಡಿ ಉತ್ಸವ, ಅಷ್ಠಾವಧಾನ ಸೇವೆ,ಗೋಪೂಜೆ ಮುಂತಾದ ದೇವತಾ ಕಾರ್ಯಗಳನ್ನು ನೆರವೇರಿಸ ಲಾಯಿತು. ಮಧ್ಯಾಹ್ನ ಮಹಾಮಂಗಳಾರತಿ ನಂತರ ಭಕ್ತಾಧಿಗಳಿಗೆ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು. ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಬೆಳಗ್ಗೆಯಿಂದಲೆ ಸಾವಿರಾರು ಮಂದಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದುಕೊಂಡರು.

ರಾಜಲಕ್ಷ್ಮೀ ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ

ತಾಲೂಕಿನ ಚಿಕ್ಕಕುರುಗೋಡು ಸಮೀಪವಿರುವ ಶ್ರೀ ಚಕ್ರಸಹಿತ ರಾಜಲಕ್ಷ್ಮೀ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಹೋಮ ಹವನಗಳು ಹಾಗೂ ದೇವತಾ ಕಾರ್ಯಗಳು ಶ್ರದ್ದಾಭಕ್ತಿಯಿಂದ ನೆರವೇರಿಸಲಾಯಿತು.

Ashok Nayak Ashok Nayak Aug 9, 2025 12:44 PM

ಗೌರಿಬಿದನೂರು:ತಾಲೂಕಿನ ಚಿಕ್ಕಕುರುಗೋಡು ಸಮೀಪವಿರುವ ಶ್ರೀ ಚಕ್ರಸಹಿತ ರಾಜಲಕ್ಷ್ಮೀ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಹೋಮ ಹವನಗಳು ಹಾಗೂ ದೇವತಾ ಕಾರ್ಯಗಳು ಶ್ರದ್ದಾಭಕ್ತಿಯಿಂದ ನೆರವೇರಿಸಲಾಯಿತು.

ಪ್ರಧಾನ ಅರ್ಚಕರಾದ ಭೂಮರಾಜು ನರೇಂದ್ರಶರ್ಮ ನೇತೃತ್ವದಲ್ಲಿ ಮುಂಜಾನೆಯಿಂದಲೇ ರಾಜಲಕ್ಷ್ಮೀ ದೇವಿಗೆ ಅಭಿಷೇಕ, ಅರ್ಚನೆ, ಅಲಂಕಾರ, ವರಮಹಾ ಲಕ್ಷ್ಮೀ ವ್ರತ, ಕನಕಾಭಿಷೇಕ, ದಿಂಡಿ ಉತ್ಸವ, ಅಷ್ಠಾವಧಾನ ಸೇವೆ,ಗೋಪೂಜೆ ಮುಂತಾದ ದೇವತಾ ಕಾರ್ಯಗಳನ್ನು ನೆರವೇರಿಸ ಲಾಯಿತು. ಮಧ್ಯಾಹ್ನ ಮಹಾಮಂಗಳಾರತಿ ನಂತರ ಭಕ್ತಾಧಿಗಳಿಗೆ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು. ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಬೆಳಗ್ಗೆಯಿಂದಲೆ ಸಾವಿರಾರು ಮಂದಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದುಕೊಂಡರು.

ಇದನ್ನೂ ಓದಿ: Chikkanayakanahalli News: ಚಿಕ್ಕನಾಯಕನಹಳ್ಳಿಯಲ್ಲಿ ಇನ್ನೂ ಖಾಸಗಿ ಕಟ್ಟಡದಲ್ಲೇ ಕಾರ್ಯಾಚರಿಸುತ್ತಿದೆ ಅಬಕಾರಿ ಇಲಾಖೆ: ದಂಧೆ ರೂಪ ಪಡೆದ ಬಾಡಿಗೆ ವಹಿವಾಟು?

ನಂತರ ರಾಜಲಕ್ಷ್ಮೀ ದೇವಿಯನ್ನು ಬೆಳ್ಳಿ ರಥದಲ್ಲಿ ನಗರದ ರಾಜಬೀದಿಗಳಲ್ಲಿ ಮೆರವಣಿಗೆಯನ್ನು ನೂರಾರು ಮಂದಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಮಾಜಿ ಶಾಸಕಿ ಜ್ಯೋತಿರೆಡ್ಡಿ, ಕಾದಲವೇಣಿ ಬಾಲಕೃಷ್ಣ, ಲೋಕೇಶ್ ಗೌಡ, ಮಿಲಿಟರಿ ರಾಮಕೃಷ್ಣ, ನಾಗರಾಜ್, ವೆಂಕಟೇಶ್, ಪ್ರಕಾಶ್, ರಮೇಶ್, ಶ್ರೀಧರ್, ರಾಮು,ಮಿಲ್ ಬಾಬು, ಕಾಂತರಾಜ್, ಆದಿನಾರಾಯಣಪ್ಪ, ಸುದಪ್ಪ, ಲಂಕಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.