ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Varamahalakshmi Pooja: ಆಲಂಬಗಿರಿಯಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ

ಅರ್ಚಕ ವೃಂದದವರು ಲಕ್ಷ್ಮೀ ಅಷ್ಟೋತ್ತರವನ್ನು ಹೇಳುತ್ತಿದ್ದರೆ, ಮುತ್ತೈದೆಯರು ಕುಳಿತ ಲ್ಲಿಯೇ ಕುಂಕುಮಾರ್ಚನೆಯನ್ನು ಶ್ರದ್ದಾ ಭಕ್ತಿಗಳಿಂದ ಪೂಜಿಸಿದರು. ಸರ್ವಾಲಂಕೃತವಾದ ಪೀಠ ದಲ್ಲಿ ಲಕ್ಷ್ಮೀ ಅಮ್ಮನವರನ್ನು ಆಸೀನಗೊಳಿಸಲಾಗಿತ್ತು. ನೂತನ ವಸ್ತ್ರಾಭರಣ ಹಾಗೂ ವಿವಿಧ ಬಗೆಯ ಹೂಗಳಿಂದ, ಅಮ್ಮನವರನ್ನು ಸಿಂಗರಿಸಲಾಗಿತ್ತು. ಸಭಾಪ್ರಾರ್ಥನೆ, ವಿಶ್ವಕ್ಸೇನ ಪೂಜಾ, ಕಲಶಾ ರಾಧನೆ, ಪೀಠಪೂಜೆ, ದ್ವಾರಪಾಲಕ ಪೂಜೆ, ಪ್ರಾಣಪ್ರತಿಷ್ಠೆ, ಲಕ್ಷ್ಮೀ ಅಷ್ಟೋತ್ತರ ಶತನಾ ಮಾವಳಿ ಪೂಜೆ, ಧೂಪ, ದೀಪ ನೈವೇದ್ಯಗಳನ್ನು ಸಮರ್ಪಿಸಲಾಯಿತು.

ಆಲಂಬಗಿರಿಯಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ

Ashok Nayak Ashok Nayak Aug 9, 2025 1:31 PM

ಚಿಂತಾಮಣಿ : ತಾಲ್ಲೂಕಿನ ಪ್ರಸಿದ್ದ ಆಲಂಬಗಿರಿ ಕ್ಷೇತ್ರದ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜಾ ವ್ರತವನ್ನು ಶ್ರದ್ಧಾಭಕ್ತಿಗಳಿಂದ  ಆಚರಿಸಲಾಯಿತು. ದೇವಾಲಯದ ಆವರಣದಲ್ಲಿರುವ ಲಕ್ಷ್ಮೀ ಅಮ್ಮನವರ ದೇವಾಲಯದ ಮುಂಭಾಗದಲ್ಲಿ ಸಾಮೂಹಿಕ ವರಮಹಾಲಕ್ಷೀ ಪೂಜಾವ್ರತದ ವ್ಯವಸ್ಥೆಯನ್ನು ಮಾಡಲಾಗಿತ್ತು.  

ಊರಿನ ಗ್ರಾಮಸ್ಥರು ಮತ್ತು ಸುತ್ತ ಮುತ್ತಲಿನ ಗ್ರಾಮಸ್ಥರು ಸೇರಿ ವರಮಹಾಲಕ್ಷ್ಮೀ ವ್ರತಾ ಚರಣೆಯನ್ನು ಮಾಡಿದರು. ಆಗಮಿಸಿದ್ದ ಪ್ರತಿಯೊಬ್ಬ ಮುತ್ತೈದೆಯರಿಗೂ ಪೂಜಾ ಸಾಮಾಗ್ರಿ ಗಳನ್ನು ಶ್ರೀಯೋಗಿನಾರೇಯಣ ಮಠದ ವತಿಯಿಂದ ಓದಗಿಸಲಾಗಿತ್ತು.  

ಅರ್ಚಕ ವೃಂದದವರು ಲಕ್ಷ್ಮೀ ಅಷ್ಟೋತ್ತರವನ್ನು ಹೇಳುತ್ತಿದ್ದರೆ, ಮುತ್ತೈದೆಯರು ಕುಳಿತ ಲ್ಲಿಯೇ ಕುಂಕುಮಾರ್ಚನೆಯನ್ನು ಶ್ರದ್ದಾ ಭಕ್ತಿಗಳಿಂದ ಪೂಜಿಸಿದರು. ಸರ್ವಾಲಂಕೃತವಾದ ಪೀಠ ದಲ್ಲಿ ಲಕ್ಷ್ಮೀ ಅಮ್ಮನವರನ್ನು ಆಸೀನಗೊಳಿಸಲಾಗಿತ್ತು. ನೂತನ ವಸ್ತ್ರಾಭರಣ ಹಾಗೂ ವಿವಿಧ ಬಗೆಯ ಹೂಗಳಿಂದ, ಅಮ್ಮನವರನ್ನು ಸಿಂಗರಿಸಲಾಗಿತ್ತು. ಸಭಾಪ್ರಾರ್ಥನೆ, ವಿಶ್ವಕ್ಸೇನ ಪೂಜಾ, ಕಲಶಾ ರಾಧನೆ, ಪೀಠಪೂಜೆ, ದ್ವಾರಪಾಲಕ ಪೂಜೆ, ಪ್ರಾಣಪ್ರತಿಷ್ಠೆ, ಲಕ್ಷ್ಮೀ ಅಷ್ಟೋತ್ತರ ಶತನಾ ಮಾವಳಿ ಪೂಜೆ, ಧೂಪ, ದೀಪ ನೈವೇದ್ಯಗಳನ್ನು ಸಮರ್ಪಿಸಲಾಯಿತು. ಅಷ್ಟಾವಧಾನ ಸೇವೆ ಯನ್ನು ನೆರವೇರಿಸಿ ಮಂಗಳಾರತಿಗಳನ್ನು ಬೆಳಗಲಾಯಿತು. ತೀರ್ಥಪ್ರಸಾದಗಳನ್ನು ವಿತರಿಸಲಾಯಿತು. ಗರ್ಭಗುಡಿಯಲ್ಲಿರುವ ಮೂಲ ವಿಗ್ರಹಗಳಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.

ಪೂಜೆಯ ಅಂಗವಾಗಿ ವೇದಿಕೆಯಲ್ಲಿ ವರಮಹಾಲಕ್ಷ್ಮೀ ಅಮ್ಮನವರ ವಿಗ್ರಹ ಮತ್ತು ಶ್ರೀ ವೆಂಕಟ ರಮಣಸ್ವಾಮಿ ವಿಗ್ರಹವನ್ನು ಸರ್ವಾಲಂಕೃತವಾಗಿ ಅಲಂಕರಿಸಲಾಗಿತ್ತು. ಲಕ್ಷ್ಮೀ ಅಮ್ಮನವರ ದೇವಾಲಯದಲ್ಲಿ ವಿಶೇಷ ಆಲಂಕಾರವನ್ನು ಮಾಡಲಾಗಿತ್ತು. ಈ ಶುಭ ದಿನದಂದು ಭಾಗವಹಿಸಿದ್ದ ಭಕ್ತಾದಿಗಳು ಸೇವಾ ಕೈಂಕರ್ಯಗಳಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನ ಭಾಗ್ಯ ವನ್ನು ಪಡೆದು ಕೃತಾರ್ಥರಾದರು. ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ದಂಪತಿ ಗಳು ಪೂಜೆಯಲ್ಲಿ ಭಾಗವಹಿಸಿದ್ದರು.