ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bagepally News: ಮಿಟ್ಟೇಮರಿ ಪುವಾಡಮ್ಮ ಕೆರೆ ಕೋಡಿ:ಗ್ರಾಮ ಪಂಚಾಯತಿ ವತಿಯಿಂದ ಗಂಗೆ ಪೂಜೆ ಹಾಗೂ ಬಾಗಿನ ಸಮರ್ಪಣೆ

ಕಳೆದ ಎರಡು ವರ್ಷಗಳಿಂದ ತುಂಬಿರಲಿಲ್ಲ ಪುವಾಡಮ್ಮ ಕೆರೆ ತುಂಬಿ ಬಂದಿದ್ದು ಕೋಡಿ ಹರಿದ ಶುಭ ಸಂಕೇತವಾಗಿ ಇಂದು ಗಂಗೆ ಪೂಜೆ ಮಾಡಿ ಬಾಗಿನ ಅರ್ಪಿಸಲಾಯಿತು. ಕಳೆದ ಎರಡು ದಿನಗಳಿಂದ ಬರದ ನಾಡಿನಲ್ಲಿ ಉತ್ತಮ ಮಳೆಯಾಗಿದ್ದು. ಕೆರೆ- ಕಟ್ಟೆಗಳು ತುಂಬಿ ಹರಿಯುತ್ತಿರುವುದರಿಂದ, ಬೆಳೆಗಳು ಸಮೃದ್ಧಿಯಾಗಿ ಬೆಳೆದಿವೆ.

ಬಾಗೇಪಲ್ಲಿ: ತಾಲ್ಲೂಕು ಮಿಟ್ಟೇಮರಿ ಹೋಬಳಿ ಕೇಂದ್ರದ ವ್ಯಾಪ್ತಿಯ ಪುವಾಡಮ್ಮ ಕೆರೆ ಕೋಡಿ ಹೋದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಅದ್ಯಕ್ಷ ಹಾಗೂ ಉಪಾದ್ಯಕ್ಷ ಕೆರೆಗೆ ಬಾಗಿನ ಅರ್ಪಿಸಿ ಗಂಗೆ ಪೂಜೆ ನೆರವೇರಿಸಿದರು.

ಬಳಿಕ ಉಪಾದ್ಯಕ್ಷ ಗೌತಮಿ ವಿಜಯ್ ಗೋಪಾಲ ರೆಡ್ಡಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ತುಂಬಿರಲಿಲ್ಲ ಪುವಾಡಮ್ಮ ಕೆರೆ ತುಂಬಿ ಬಂದಿದ್ದು ಕೋಡಿ ಹರಿದ ಶುಭ ಸಂಕೇತವಾಗಿ ಇಂದು ಗಂಗೆ ಪೂಜೆ ಮಾಡಿ ಬಾಗಿನ ಅರ್ಪಿಸಲಾಯಿತು.

ಇದನ್ನೂ ಓದಿ: Bagepally News: ಎಚ್‌ಐವಿ ಸೋಂಕಿತರನ್ನು ನೋಡುತ್ತಿರುವ ಸಮಾಜದ ಮನೋಸ್ಥಿತಿ ಬದಲಾಗಬೇಕು: ಮಂಜುಳಾ ಹೇಳಿಕೆ

ಕಳೆದ ಎರಡು ದಿನಗಳಿಂದ ಬರದ ನಾಡಿನಲ್ಲಿ ಉತ್ತಮ ಮಳೆಯಾಗಿದ್ದು. ಕೆರೆ- ಕಟ್ಟೆಗಳು ತುಂಬಿ ಹರಿಯುತ್ತಿರುವುದರಿಂದ, ಬೆಳೆಗಳು ಸಮೃದ್ಧಿಯಾಗಿ ಬೆಳೆದಿವೆ. ಇದರಿಂದಾಗಿ ರೈತರಲ್ಲಿ ಹರ್ಷ ತಂದಿದೆ, ರೈತರ ಕ್ಷೇಮವೇ ನಾಡಿನ ಕ್ಷೇಮ ಎಂದರು. 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅದ್ಯಕ್ಷೆ ಸೀತಮ್ಮ,ಸದಸ್ಯರಾದ ಎಂ.ಬಿ.ಲಕ್ಷ್ಮೀ ನರಸಿಂಹಯ್ಯ, ನಾರಾಯಣ ಸ್ವಾಮಿ, ವೆಂಕಟೇಶ್, ಮುಖಂಡರಾದ ಕಾಮರೆಡ್ಡಿ ಮಂಜುನಾಥ, ಶ್ರೀನಿವಾಸ್ ರಘು ,ಪಿಡಿಓ ವೆಂಕಟೇಶ್, ಸಿಬ್ಬಂದಿ ವರ್ಗ ಜಲಗಾರರು ಹಾಜರಿದ್ದರು.