ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MP Dr K Sudhakar: ಪಿಎಂ ಸ್ವನಿಧಿ ಯೋಜನೆಯಡಿ 139 ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ವಿತರಣೆ ಮಾಡಿದ ಸಂಸದ ಡಾ. ಸುಧಾಕರ್

“ಬೀದಿ ಬದಿ ವ್ಯಾಪಾರಿಗಳು ನಗರ ಜೀವನದ ಅವಿಭಾಜ್ಯ ಅಂಗ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆರಂಭವಾದ ಪಿಎಂ ಸ್ವನಿಧಿ ಯೋಜನೆ ಬೀದಿ ವ್ಯಾಪಾರಿಗಳಿಗೆ ಆಧಾರರಹಿತ, ಕಡಿಮೆ ಬಡ್ಡಿದರದ ಸುಲಭ ಸಾಲವನ್ನು ಒದಗಿಸುವ ಮೂಲಕ ಅವರಿಗೆ ಆತ್ಮನಿರ್ಭರ ಜೀವನ ಕಟ್ಟಿಕೊಡುತ್ತಿದೆ. ದೇಶಾದ್ಯಂತ ಈಗಾಗಲೇ 68 ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳು ಇದರ ಲಾಭ ಪಡೆದಿದ್ದಾರೆ”

ಪಿಎಂ ಸ್ವನಿಧಿ ಯೋಜನೆಯಡಿ 139 ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ವಿತರಣೆ

-

Ashok Nayak Ashok Nayak Oct 2, 2025 6:38 AM

ಚಿಕ್ಕಬಳ್ಳಾಪುರ : ನಗರದ ನಗರಸಭೆ ಆವರಣದಲ್ಲಿರುವ ಸರ್.ಎಂ.ವಿ ಸಭಾಂಗಣದಲ್ಲಿ ನಡೆದ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಡಾ. ಕೆ. ಸುಧಾಕರ್ ಅವರು ಪಿ.ಎಂ. ಸ್ವನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ 34.5ಲಕ್ಷದ ಸಾಲದ ಚೆಕ್ಕುಗಳನ್ನು ವಿತರಿಸಿ ಮಾತನಾಡಿದರು.

“ಬೀದಿ ಬದಿ ವ್ಯಾಪಾರಿಗಳು ನಗರ ಜೀವನದ ಅವಿಭಾಜ್ಯ ಅಂಗ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆರಂಭವಾದ ಪಿಎಂ ಸ್ವನಿಧಿ ಯೋಜನೆ ಬೀದಿ ವ್ಯಾಪಾರಿಗಳಿಗೆ ಆಧಾರರಹಿತ, ಕಡಿಮೆ ಬಡ್ಡಿದರದ ಸುಲಭ ಸಾಲವನ್ನು ಒದಗಿಸುವ ಮೂಲಕ ಅವರಿಗೆ ಆತ್ಮನಿರ್ಭರ ಜೀವನ ಕಟ್ಟಿಕೊಡುತ್ತಿದೆ. ದೇಶಾದ್ಯಂತ ಈಗಾಗಲೇ 68 ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳು ಇದರ ಲಾಭ ಪಡೆದಿದ್ದಾರೆ” ಎಂದರು.

ಇದನ್ನೂ ಓದಿ: MP Dr K Sudhakar: ಜಿಎಸ್‌ಟಿ ೨.೦ ರ ಲಾಭವನ್ನು ಜನರಿಗೆ ವರ್ಗಾಯಿಸುವಂತೆ ವ್ಯಾಪಾರಿಗಳಿಗೆ ಸಂಸದ ಡಾ.ಕೆ.ಸುಧಾಕರ್ ಮನವಿ

ಇದೇ ವೇಳೆ ಅವರು ಜಿಎಸ್‌ಟಿ ಸುಧಾರಣೆಯ ಬಗ್ಗೆ ಜಾಗೃತಿ ಅಭಿಯಾನದ ಅಂಗವಾಗಿ ಜನ ಔಷಧಿ ಮಳಿಗೆ, ಹಾಡ್ವೇðರ್, ಕಟ್ಟಡ ಸಾಮಗ್ರಿ, ಸ್ಟೇಷನರಿ ಸೇರಿದಂತೆ ಚಿಕ್ಕಬಳ್ಳಾಪುರದ ಹಲವು ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ವ್ಯಾಪಾರಿಗಳೊಂದಿಗೆ, ಗ್ರಾಹಕರೊಂದಿಗೆ ಮಾತುಕತೆ ನಡೆಸಿದರು. “ಜಿಎಸ್‌ಟಿ ಸುಧಾರಣೆಗಳಿಂದ ಜನಸಾಮಾನ್ಯರಿಗೆ ಪ್ರತಿಯೊಂದು ವಸ್ತುವಿನಲ್ಲೂ ಉಳಿತಾಯ ಸಾಧ್ಯವಾಗಿದ್ದು, ವ್ಯಾಪಾರ ವಹಿವಾಟಿಗೆ ಹೊಸ ಚೈತನ್ಯ ಬಂದಿದೆ. ಮೋದಿ ಸರ್ಕಾರದ ಈ ಜನಪರ ಕ್ರಮಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ” ಎಂದು ಹೇಳಿದರು.

ಡಾ.ಸುಧಾಕರ್ ಅವರು ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ತೀವ್ರವಾಗಿ ಖಂಡಿಸಿದರು.“ಕಾAಗ್ರೆಸ್ ಸರ್ಕಾರ ಲೂಟಿಕೋರರ ಸರ್ಕಾರ. ಬಿಹಾರ ಚುನಾವಣೆಗಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ?೨,೦೦೦ ಕೋಟಿ ಕಳುಹಿಸಲು ಕರ್ನಾಟಕವನ್ನು ಎಟಿಎಂ ಸರ್ಕಾರವಾಗಿ ಬಳಸ ಲಾಗುತ್ತಿದೆ. ಎಲ್ಲ ಸಚಿವರಿಗೆ ಟಾರ್ಗೆಟ್ ನೀಡಿ ಭ್ರಷ್ಟಾಚಾರ ಮಾಡಲು ಫ್ರೀ ಹ್ಯಾಂಡ್ ಕೊಟ್ಟಿದ್ದಾರೆ. ಜನರ ಹಣ ದೋಚಿ ಹೈಕಮಾಂಡ್‌ಗೆ ಕಳುಹಿಸುವ ಈ ಲೂಟಿಯನ್ನು  ಕಾಂಗ್ರೆಸ್ ಸರ್ಕಾರ ನಿಲ್ಲಿಸಬೇಕು” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.