Chikkaballapur News: ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದ ನೀಟ್ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ
ಎನ್‌ಟಿಎ ಸಂಸ್ಥೆಯ ಮೇಲುಸ್ತುವಾರಿಯಲ್ಲಿ ನಡೆದ ಈ ಬಾರಿಯ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಕೇಂದ್ರ ಸರಕಾರ ಸೂಚನೆ ನೀಡಿದ್ದರಿಂದ ಈ ಹಿಂದಿನ ಪರೀಕ್ಷೆಗಳಿಗಿಂತ ಸಾಕಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಬಯೋ ಮೆಟ್ರಿಕ್ ಹಾಜರಾತಿ ಜತೆಗೆ ವಿದ್ಯಾರ್ಥಿಗಳನ್ನು ಪರಿಶೋಧನೆಗೆ ಒಳಪಡಿಸಲಾಗಿತ್ತು.ಸಿಸಿ ಟಿವಿ ಕಣ್ಗಾವಲಿ ನಲ್ಲಿ ಪರೀಕ್ಷೆ ಬರೆದರೂ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಸಹ ಅಳವಡಿಸ ಲಾಗಿತ್ತು

ನಗರ ಹೊರವಲಯ ಚಿತ್ರಾವತಿ ಬಿಎಡ್ ಕಾಲೇಜಿನಲ್ಲಿ ಪರೀಕ್ಷೆ ಬರೆದು ಹೊರಬರುತ್ತಿರುವ ವಿದ್ಯಾರ್ಥಿಗಳು.

೧೦ ಪರೀಕ್ಷಾ ಕೇಂದ್ರ, ನೋಂದಣಿ- ೩೫೪೦ ,ಹಾಜರಿ-೩೪೧೬ ಗೈರುಹಾಜರಿ- ೧೨೪
ಚಿಕ್ಕಬಳ್ಳಾಪುರ: ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ಜಿಲ್ಲೆಯಲ್ಲಿ ಭಾನುವಾರ ನಡೆಸಿದ 2025ನೇ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯನ್ನು ಕೇಂದ್ರ ಸರಕಾರದ ಮಾರ್ಗಸೂಚಿ ಯಂತೆ ಸುಸೂತ್ರವಾಗಿ ನಡೆಸಲಾಯಿತು. ಜಿಲ್ಲೆಯ 10 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಭಾನುವಾರ ಪರೀಕ್ಷೆಯನ್ನು ಬರೆದಿದ್ದಾರೆ. ನೀಟ್ ಪರೀಕ್ಷೆ ಬರೆದು ವೈದ್ಯರಾಗುವ ಕನಸುಕಂಡಿರುವ 3540 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಆದರೆ ಭಾನುವಾರದ ಪರೀಕ್ಷೆಗೆ 3416 ವಿದ್ಯಾರ್ಥಿಗಳ ಮಾತ್ರ ಹಾಜರಾಗಿ ಪರೀಕ್ಷೆ ಬರೆದರೆ 124 ವಿದ್ಯಾರ್ಥಿಗಳು ಪರೀಕ್ಷೆಯಿಂದ ಹೊರಗುಳಿ ದರು.
ಜಿಲ್ಲಾಕೇಂದ್ರದಲ್ಲಿ ೫ ಕೇಂದ್ರ, ಗೌರಿಬಿದನೂರಿನಲ್ಲಿ ೨, ಚಿಂತಾಮಣಿಯಲ್ಲಿ ೩ ಒಟ್ಟು ೧೦ ಪರೀಕ್ಷಾ ಕೇಂದ್ರಗಳಲ್ಲಿ 3416 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಫಲಿತಾಂಶದ ನೀರಿಕ್ಷೆಯಲ್ಲಿದ್ದಾರೆ.
ಬಿಗಿಕ್ರಮ!!
ಎನ್‌ಟಿಎ ಸಂಸ್ಥೆಯ ಮೇಲುಸ್ತುವಾರಿಯಲ್ಲಿ ನಡೆದ ಈ ಬಾರಿಯ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಕೇಂದ್ರ ಸರಕಾರ ಸೂಚನೆ ನೀಡಿದ್ದರಿಂದ ಈ ಹಿಂದಿನ ಪರೀಕ್ಷೆಗಳಿಗಿಂತ ಸಾಕಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಬಯೋಮೆಟ್ರಿಕ್ ಹಾಜರಾತಿ ಜತೆಗೆ ವಿದ್ಯಾರ್ಥಿಗಳನ್ನು ಪರಿಶೋಧನೆಗೆ ಒಳಪಡಿಸಲಾಗಿತ್ತು.ಸಿಸಿ ಟಿವಿ ಕಣ್ಗಾವಲಿನಲ್ಲಿ ಪರೀಕ್ಷೆ ಬರೆದರೂ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಸಹ ಅಳವಡಿಸ ಲಾಗಿತ್ತು. ಪರೀಕ್ಷಾ ಕೇಂದ್ರದ ಹೊರಗೆ ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ಪರೀಕ್ಷಾ ಸಿಬ್ಬಂದಿ ಹೊರತುಪಡಿಸಿ ಉಳಿದವರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.
ಸಮಯಪಾಲನೆ
ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ ಮದ್ಯಾಹ್ನ 2 ರಿಂದ 5ರವರೆಗೆ ಪರೀಕ್ಷೆ ನಡೆದರೂ ಪರೀಕ್ಷಾ ಸಿಬ್ಬಂದಿಗೆ ಬೆಳಿಗ್ಗೆ 10.30ರ ಒಳಗೆ ಪ್ರವೇಶಕ್ಕೆ ಅವಕಾಶ ನೀಡಿದ್ದರೆ ವಿದ್ಯಾರ್ಥಿಗಳಿಗೆ 11ರಿಂದ 1.30 ಗಂಟೆವರೆಗೆ ಅವಕಾಶ ನೀಡಲಾಗಿತ್ತು.ಪರೀಕ್ಷೆ ಪ್ರಾರಂಭದಿಂದ ಪ್ರಾರಂಭವಾಗಿ ಮುಕ್ತಾಯದ ತನಕ ಪ್ರತಿಗಂಟೆಗೆ ಬೆಲ್ ಮಾಡಿ ವಿದ್ಯಾರ್ಥಿಗಳಿಗೆ ಸಮಯ ಪಾಲನೆ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿತ್ತು.
ಏನೇನಿತ್ತು?
ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳಿಗಾಗಿ ನಿರಂತರ ವಿದ್ಯುತ್ ವ್ಯವಸ್ಥೆ, ಆರೋಗ್ಯ ಸಿಬ್ಬಂದಿ, ತುರ್ತು ನಿಯೋಗಗಳ ಯೋಜನೆ, ಕೊಠಡಿಗಳಲ್ಲಿ ಗಾಳಿ ಬೆಳಕಿನ ವ್ಯವಸ್ಥೆ, ವಿಶೇಷ ಚೇತನರಿಗಾಗಿ ಗಾಲಿಕುರ್ಚಿ ವ್ಯವಸ್ಥೆ ಮಾಡಲಾಗಿತ್ತು.
ಪರೀಕ್ಷಾರ್ಥಿಗಳು ಪೂರ್ಣತೋಳಿರುವ, ದೊಡ್ಡ ಬಟನ್‌ಗಳಿರುವ ಷರ್ಟ್, ಶೂ ಸಾಕ್ಸ್, ಎತ್ತರದ ಚಪ್ಪಲಿ ಶೋ ಧರಿಸಿ ಬರುವಂತಿರಲಿಲ್ಲ. ಹೆಣ್ಣು ಮಕ್ಕಳು ಕಿವಿಯೋಲೆ, ಬಳೆ ಸರ ಕಾಲಗೆಜ್ಜೆ, ಮೂಗುತಿ, ಜಡೆ ಕ್ಲಿಪ್, ಸಹಿತ ಯಾವುದೇ ಮೆಟಲ್ ಉಪಕರಣಗಳನ್ನು ಧರಿಸುವುದನ್ನು ನಿಷೇಧಿಸ ಲಾಗಿದ್ದು ಪರೀಕ್ಷಾ ಕೇಂದ್ರದ ಪ್ರವೇಶಾತಿ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಅವಳವರಿಸಲಾಗಿತ್ತು.
ಈ ಎಲ್ಲಾ ಬಿಗಿ ಕ್ರಮಗಳ ಪರಿಣಾಮವಾಗಿ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಶಾಂತವಾಗಿ ನೀಟ್ ಪರೀಕ್ಷೆಯನ್ನು ಬರೆದು ವೈದ್ಯರಾಗುವ ತಮ್ಮ ಕನಸನ್ನು ಒಎಮ್‌ಆರ್ ಹಾಳೆಗಳಲ್ಲಿ ಹುದುಗಿಸಿದ್ದಾರೆ. ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಮೌಲ್ಯಮಾಪನವನ್ನು ಕೂಡ ಇಷ್ಟೇ ಕಟ್ಟು ನಿಟ್ಟಾಗಿ ನಡೆಸಿದಲ್ಲಿ ಬಡವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ ಎನ್ನುವುದು ಪೋಷಕರ ಅನಿಸಿಕೆಯಾಗಿದೆ.
ಜಿಲ್ಲೆಯಲ್ಲಿ ನಡೆದ ನೀಟ್ ಪರೀಕ್ಷೆಯ ಜಿಲ್ಲಾ ಕೋಆರ್ಡಿನೇಟರ್‌ಗಳಾಗಿ ಪ್ರೇಮಾ ಅರುಳ್ ಕೆಲಸ ಮಾಡಿದರೆ ಸಹಾಯಕ ಕೋಆರ್ಡಿನೇಟರಾಗಿ ಗೂಗಲೇತ ರಾಮ ಕಾರ್ಯನಿರ್ವಹಿಸಿದ್ದು, ಶಾಂತ ವಾಗಿ ಪರೀಕ್ಷೆ ನಡೆಸಲು ಸಹಕಾರ ನೀಡಿದ ಎಲ್ಲಾ ಕಾಲೇಜಿನ ಪ್ರಾಂಶುಪಾಲರಿಗೆ ಜಿಲ್ಲಾಡಳಿತಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.