Chikkaballapur News: ತೋಟದ ಕೂಲಿಗಳನ್ನು ಸನ್ಮಾನಿಸಿ ಕಾರ್ಮಿಕ ದಿನಾಚರಣೆ ಆಚರಿಸಿದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಯಲುವಹಳ್ಳಿ.ಎನ್.ರಮೇಶ್
ಕಾರ್ಮಿಕ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಅಲ್ಲಲ್ಲಿ ಏರ್ಪಡಿಸಲಾಗುವ ಕಾರ್ಯಕ್ರಮಗಳಲ್ಲಿ ಸನ್ಮಾನ ಗೌರವ ನಡೆಯುತ್ತದೆ. ಇಂತಹ ಕಾರ್ಯಕ್ರಮ ಗಳಲ್ಲಿ ನಾನೂ ಕೂಡ ಅತಿಥಿಯಾಗಿ ಹೋಗಿ ಭಾಷಣ ಮಾಡಿದ್ದಿದೆ. ಆದರೆ ನಾನು ಗಮನಿಸಿದಂತೆ ಕೃಷಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಕೃಷಿ ಕೂಲಿ ಕಾರ್ಮಿಕರಿಗೆ ಎಲ್ಲೂ ಸನ್ಮಾನ ನಡೆದಿಲ್ಲ

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಯಲುವಹಳ್ಳಿ.ಎನ್.ರಮೇಶ್ ತಮ್ಮ ಕುಟುಂಬಸ್ಥರೊAದಿಗೆ ಕೂಡಿಕೊಂಡು ಕೃಷಿ ಕೂಲಿ ಕಾರ್ಮಿಕರಿಗೆ ಸನ್ಮಾನ ಮಾಡುವ ಮೂಲಕ ವಿಶಿಷ್ಟವಾಗಿ ಕಾರ್ಮಿಕ ದಿನಾಚರಣೆ ಆಚರಿಸಿದರು.

ಚಿಕ್ಕಬಳ್ಳಾಪುರ: ತೋಟದಲ್ಲಿ ವರ್ಷೊಂಬತ್ತು ಕಾಲ ಕೆಲಸ ಮಾಡುವ ಕೃಷಿ ಕೂಲಿ ಕಾರ್ಮಿಕರ ಬೆವರಿನ ಋಣ ನಮ್ಮ ಮೇಲಿದೆ.ಕೂಲಿ ಬಿಟ್ಟಿರೆ ಬೇರೇನೂ ಅಪೇಕ್ಷೆ ಪಡದ ಕಾಯಕ ಜೀವಿಗಳನ್ನು ಸನ್ಮಾನಿಸುತ್ತಿರುವುದು ಅತ್ಯಂತ ಹೆಮ್ಮೆಯ ಕೆಲಸವಾಗಿದೆ ಎಂದು ಒಕ್ಕಲಿಗರ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಯಲುವಹಳ್ಳಿ. ಎನ್.ರಮೇಶ್ ತಿಳಿಸಿದರು. ತಾಲ್ಲೂಕಿನ ಯಲುವಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಯಲು ವಹಳ್ಳಿ.ಎನ್.ರಮೇಶ್ ಅವರ ದ್ರಾಕ್ಷಿ ತೋಟದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಮಿಕ ದಿನಾ ಚರಣೆ ಕಾರ್ಯಕ್ರಮದಲ್ಲಿ 30 ಮಂದಿ ಕೂಲಿಯಾಳುಗಳನ್ನು ಅಭಿನಂದಿಸಿ ಅವರು ಮಾತನಾ ಡಿದರು.
ಕಾರ್ಮಿಕ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಅಲ್ಲಲ್ಲಿ ಏರ್ಪಡಿಸಲಾಗುವ ಕಾರ್ಯಕ್ರಮಗಳಲ್ಲಿ ಸನ್ಮಾನ ಗೌರವ ನಡೆಯುತ್ತದೆ. ಇಂತಹ ಕಾರ್ಯಕ್ರಮ ಗಳಲ್ಲಿ ನಾನೂ ಕೂಡ ಅತಿಥಿಯಾಗಿ ಹೋಗಿ ಭಾಷಣ ಮಾಡಿದ್ದಿದೆ. ಆದರೆ ನಾನು ಗಮನಿಸಿದಂತೆ ಕೃಷಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಕೃಷಿ ಕೂಲಿ ಕಾರ್ಮಿಕರಿಗೆ ಎಲ್ಲೂ ಸನ್ಮಾನ ನಡೆದಿಲ್ಲ. ಎಂತಲೇ ನಾನು ಏಕೆ ನಮ್ಮ ಹೊಲ,ತೋಟ ಮತ್ತು ಮನೆಯಲ್ಲಿ ಕೆಲಸ ಮಾಡುವ ಕೃಷಿ ಕೂಲಿ ಕಾರ್ಮಿಕ ರಿಗಾಗಿಯೇ ಕಾರ್ಯಕ್ರಮ ಮಾಡಿ ಅವರಿಗೆ ಸನ್ಮಾನ ಮಾಡಿದ್ದೇನೆಂದರು.
ಇದನ್ನೂ ಓದಿ: Chikkaballapur News: ಸಚಿವ ಡಾ.ಎಂ.ಸಿ.ಸುಧಾಕರ್ ಅವರೇ ಹಸಿರು ಶಾಲುಗಳ ಬಗ್ಗೆ ಹಗುರವಾಗಿ ಮಾತನಾಡಬೇಡಿ
ಕೃಷಿ ಕಾರ್ಮಿಕರು ಮತ್ತು ದೇಶ ಕಾಯುವ ಯೋಧರು, ನಗರ ಪಟ್ಟಣಗಳ ಕಸವನ್ನು ಸ್ವಚ್ಛ ಮಾಡುವ ಪೌರ ಕಾರ್ಮಿಕರ ಸೇವೆಯನ್ನು ಎಂದಿಗೂ ಕೂಡ ಸಮಾಜ ಮರೆಯಬಾರದು. ಕೃಷಿ ಕಾರ್ಮಿಕರು ಬೆವರು ಸುರಿಸಿ ದುಡಿದ ಅನ್ನವನ್ನು ನಾವು ತಿನ್ನುತ್ತಿದ್ದೇವೆ. ನಮ್ಮ ಹೊಲ, ತೋಟ ಗಳಲ್ಲಿ ಬೆಳೆ ಬೆಳೆಯುವಂತಹ ಕಾರ್ಮಿಕರಿಗೆ ಗೌರವ ಕೊಡುವ ಸಲುವಾಗಿ ಕುಟುಂಬ ಸಮೇತ ದವಸ ಧಾನ್ಯ,ಸಹಿತ ಶಾಲು ಹೊದಿಸಿ,ಹಾರತುರಾಯಿಟ್ಟು ಸಿಹಿ ನೀಡಿ, ಗೌರವಿಸಿದ್ದೇನೆ. ಇದು ತೋರಿಕೆಯ ಕಾರ್ಯಕ್ರಮವಲ್ಲ ಬದಲಿಗೆ ಅಂತರಂಗದಲ್ಲಿ ಮೊಳೆತ ಸತ್ಕಾರ್ಯವಾಗಿದೆ ಎಂದರು.
ಪ್ರತಿ ವರ್ಷ ಸರಕಾರದಿಂದ ನಡೆಯುವ ಕಾರ್ಮಿಕರ ದಿನಾಚರಣೆಯಂದು ಅಸಂಘಟಿತ ವಲಯದ ಕಾರ್ಮಿಕರ ಜತೆಗೆ ಕೃಷಿ ಕಾರ್ಮಿಕರಿಗೂ ಸನ್ಮಾನ ಗೌರವ ನೀಡಬೇಕು.ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸರಕಾರ ಗಂಭೀರವಾಗಿ ಚಿಂತಿಸಬೇಕಿದೆ. ಈ ಸಂಬಂಧ ಸರ್ಕಾರಕ್ಕೂ ಮನವಿ ಮಾಡುವುದಾಗಿ ತಿಳಿಸಿದರು.
ಯಲುವಹಳ್ಳಿ.ಎನ್.ರಮೇಶ್ ನಡೆಸಿದ ಕಾರ್ಮಿಕರ ದಿನಾಚರಣೆಯಲ್ಲಿ ಪುರುಷ ಕಾರ್ಮಿಕರಿಗೆ ದವಸ ನಗದಿನೊಂದಿಗೆ ಶಾಲು ಮತ್ತು ಹಾರತುರಾಯಿಯೊಂದಿಗೆ ಸಿಹಿ ಹಂಚಿ, ಸತ್ಕರಿಸಿದರೆ ಮಹಿಳಾ ಕಾರ್ಮಿಕರಿಗೆ ಸೀರೆ ಕುಪ್ಪಸ ಅರಿಶಿಣ ಕುಂಕುಮ ಬಳೆ ನೀಡಿದ್ದಾರೆ.ಎಲ್ಲರಿಗೂ ಕೂಡ ಒಂದು ವೇತನಸಹಿತ ರಜೆಯನ್ನು ಘೋಷಿಸಿದ್ದರಿಂದ ಕಾರ್ಮಿಕರ ಮೊಗದಲ್ಲಿ ಧನ್ಯತಾಭಾವ ಮನೆ ಮಾಡಿತ್ತು.ಈ ಕಾರ್ಯಕ್ರಮದಲ್ಲಿ ತಮ್ಮ ತೋಟದಲ್ಲಿ ಇಪ್ಪತ್ತು ವರ್ಷಗಳಿಗೂ ಹೆಚ್ಚುಕಾಲದಿಂದ ದುಡಿಯುತ್ತಿರುವ 30ಕ್ಕೂ ಹೆಚ್ಚು ಕೃಷಿ ಕೂಲಿ ಕಾರ್ಮಿಕರನ್ನು ದ್ರಾಕ್ಷಿ ತೋಟದಲ್ಲಿ ಸತ್ಕರಿಸಿದ್ದು ವಿಶೇಷಗಳಲ್ಲಿ ವಿಶೇಷವಾಗಿತ್ತು.
ಈ ವೇಳೆ ಮಾತನಾಡಿದ ಕಾರ್ಮಿಕರು ರಮೇಶಣ್ಣ ಕೂಲಿಗಳನ್ನು ಕೂಡ ಕುಟುಂಬದ ಸದಸ್ಯರಂತೆ ಕಾಣುತ್ತಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದೇವೆ.ನಮ್ಮ ಕಷ್ಟಗಳಿಗೆ ಯಾವತ್ತು ಇಲ್ಲ ಎಂದಿಲ್ಲ. ದೇವರು ರಮೇಶಣ್ಣ ಅವರ ಕುಟುಂಬಕ್ಕೆ ಆಯಸ್ಸು, ಆರೋಗ್ಯ, ಐಶ್ವರ್ಯ ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.
ಈ ವೇಳೆ ಯಲುವಹಳ್ಳಿ.ಎನ್.ರಮೇಶ್ ಪುತ್ರ ಯಲುವಹಳ್ಳಿ ಜನಾರ್ದನ್ ಸೇರಿ ರಮೇಶ್ ಅವರ ಎಲ್ಲ ಕುಟುಂಬ ಸದಸ್ಯರು ಇದ್ದರು.