Ambigara Chaudaiah: ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ನಿಜಶರಣ ಅಂಬಿಗರ ಚೌಡಯ್ಯ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಜಿಲ್ಲಾಡಳಿತ ಭವನದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮ ದಲ್ಲಿ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು

PNR
Profile Ashok Nayak January 21, 2025 69

Source : Chikkaballapur Reporter

ಚಿಕ್ಕಬಳ್ಳಾಪುರ : 12ನೇ ಶತಮಾನದಂತಹ ಅತ್ಯಂತ ಮಹತ್ವದ ಕಾಲಘಟ್ಟದಲ್ಲಿ ಜೀವಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಸಮಾಜದಲ್ಲಿನ ಹಲವು ತಾರತಮ್ಯಗಳನ್ನು ಹೋಗಲಾಡಿಸಲು ಶ್ರಮಿಸಿದ ನಿಜಶರಣ ಆಗಿದ್ದಾರೆ.ಈ ಕಾಲಘಟ್ಟದ ಶಿವಶರಣರ ಚಿಂತನೆಗಳು ವಚನ ಸಾಹಿತ್ಯವಾಗಿ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿ ದರು.

ಜಿಲ್ಲಾಡಳಿತ ಭವನದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ದರು.

12ನೇ ಶತಮಾನದ ಶಿವಶರಣರು ಆಧ್ಯಾತ್ಮಿಕವಾಗಿ ಹೊಸ ಲೋಕವೊಂದನ್ನೇ ತೆರೆದಿಟ್ಟರು. ಹಲವು ತಾರತಮ್ಯಗಳ ವಿರುದ್ಧ ದನಿ ಎತ್ತುವ ಮೂಲಕ ಸಮಾಜದಲ್ಲಿನ ನಾನಾ ಅಂಕುಡೊಂಕುಗಳನ್ನು ತಿದ್ದಲು ಯತ್ನಿಸಿದರು. ೮೦೦ ವರ್ಷಗಳ ಹಿಂದೆ ರಚನೆಯಾದ ಶಿವಶರಣರ ವಚನಗಳು ಸಾರ್ವ ಕಾಲಿಕ ಮತ್ತು ಸಾರ್ವತ್ರಿಕ. ಅಂಬಿಗರ ಚೌಡಯ್ಯನವರೂ ವಚನ ಸಾಹಿತ್ಯಕ್ಕೆ ತಮ್ಮದೇ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಮನುಷ್ಯನ ಬದುಕಿನಲ್ಲಿ ಭಕ್ತಿ ಹೇಗಿರಬೇಕು ಹಾಗೂ ಮನುಷ್ಯ ಹೇಗೆ ಸಮಾಜ ದಲ್ಲಿ ಬದುಕಬೇಕು ಎಂಬುದನ್ನು ಅತ್ಯಂತ ಸರಳ,ಸುಂದರ ಭಾಷೆಯಲ್ಲಿ ಮನ ಮುಟ್ಟುವಂತೆ ಹೇಳಿದ್ದಾರೆ. ಅವರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದರು.

ಅAಬಿಗರ ಚೌಡಯ್ಯ ಅವರ ವಚನಗಳು ಒಂದು ಸಂಘ ಸಮುದಾಯಕ್ಕೆ ಸೀಮಿತವಲ್ಲ. ಅವರ ವಚನಗಳಲ್ಲಿ ಸಮಾನತೆ, ಸಾಮಾಜಿಕ ಸಾಮರಸ್ಯ ಅಡಗಿದ್ದು, ಪ್ರತಿಯೊಬ್ಬರೂ ಅವರ ಆದರ್ಶ ಗಳನ್ನು ಪಾಲಿಸಬೇಕು ೧೨ನೇ ಶತಮಾನ ಎಂಬುದು ಕನ್ನಡ ನಾಡಿನ ಒಂದು ಸಾಹಿತ್ಯದ ಸುವರ್ಣ ಯುಗವಾಗಿದ್ದು, ಬಸವಣ್ಣನವರು ಸೇರಿದಂತೆ ಅನೇಕ ವಚನಕಾರರು ಸಾಮಾಜಿಕ ಕ್ರಾಂತಿಕಾರಿ ಬದಲಾವಣೆಗೆ ಶ್ರಮಿಸಿದರು. ನಾವು ಚಿಂತೆಯಲ್ಲೇ ಹುಟ್ಟಿ ಚಿಂತೆಯ ಜೊತೆಯಲ್ಲೇ ಹೋಗುತ್ತೇವೆ. ಈ ಹುಟ್ಟು ಸಾವಿನ ನಡುವೆ ಇರುವ ಸಮಯದಲ್ಲಿ ನಾವೆಲ್ಲರೂ ಕೂಡ ಒಂದು ಛಲದಿಂದ ಸಾಮಾಜಿಕ ಸುಧಾರಣೆಗಾಗಿ ಬದುಕಬೇಕು. ಸಾಧನೆ ಇಲ್ಲದಂತಹ ಸಾವು ಅದು ಸಾವಲ್ಲ ಎಂದು ಸಲಹೆ ನೀಡಿದರು.

ಉಪನ್ಯಾಸಕ ಬಿ.ವಿ ಪ್ರಕಾಶ್ ಮಾತನಾಡಿ, ಜಗತ್ತು ಕಂಡ ಶ್ರೇಷ್ಠ ದೇಶ ಭಾರತ.  ಭಾರತ ಕಂಡ ಶ್ರೇಷ್ಠ ನಾಡು ನಮ್ಮ ಕನ್ನಡ ನಾಡು. ಈ ಕನ್ನಡ ನಾಡಿನ ಇತಿಹಾಸದಲ್ಲಿ ಸುವರ್ಣಾಕ್ಷದಲ್ಲಿ ಬರೆದಿರುವ ಒಂದು ಯುಗವೆಂದರೆ ಅದು ೧೨ನೇ ಶತಮಾನ. ಇವತ್ತಿನ ಈ ಸಮಾಜಕ್ಕೆ ದಾರಿದೀಪ ವಾಗಿ ಅನೇಕ ವಚನಕಾರರ ಆದರ್ಶಗಳು ಜೀವಂತವಾಗಿವೆ. ಶಿವಶರಣರದಲ್ಲಿ ನಿಜಶರಣ ಎನಿಸಿ ಕೊಂಡ ಶ್ರೀ ಅಂಬಿಗರ ಚೌಡಯ್ಯ ತನ್ನ ಮಾತು ಮತ್ತು ಕೃತಿಗೂ ವ್ಯತ್ಯಾಸವಿಲ್ಲದಂತೆ ನಡೆದು ಕೊಳ್ಳುವ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಯತ್ನಿಸಿದರು. ಶರಣರ ತತ್ವಸಿದ್ದಾಂತ ಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.

ಅಂಬಿಗರ ಚೌಡಯ್ಯನವರು ಕೇವಲ ಒಂದು ಸಮಾಜಕ್ಕೆ ಮಾತ್ರ ಸೀಮಿತವಲ್ಲ, ಇಡೀ ಮನುಕುಲಕ್ಕೆ ದಾರಿ ದೀಪವಾಗಿದ್ದಾರೆ. ತಮ್ಮ ವಚನಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.  ವಿಶ್ವದಲ್ಲಿಯೇ ಭಾರತ ದೇಶವು ಹಲವಾರು ಮಹಾನ್ ವ್ಯಕ್ತಿಗಳು, ಚಿಂತಕರು, ಕ್ರಾಂತಿಕಾರರು ಹಾಗೂ ಸಾಧು ಸಂತರನ್ನು ಹೊಂದಿದ ಹೆಗ್ಗಳಿಕೆ ಪಡೆದಿದೆ. ಅಂತಹ ಮಹಾನ್ ಸಾಧಕರಿಂದ ಪ್ರತಿ ಯೊಬ್ಬರೂ ಪ್ರೇರೆಪಿತರಾಗಿ ಉತ್ತಮ ಶಿಕ್ಷಣ ಪಡೆದು ವಿಶ್ವದಲ್ಲಿಯೇ ನಮ್ಮ ದೇಶವನ್ನು ಜ್ಞಾನದ ಗುರು ಎಂದು ಹೆಸರಾಗುವಂತೆ ಶ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಕನ್ನಡ  ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಜಿಲ್ಲಾ ಪಂಚಾಯತ್ ನ ಮುಖ್ಯ ಲೆಕ್ಕಾಧಿಕಾರಿ ಮುರುಗೇಶ್, ಸಮುದಾಯದ ಮುಖಂಡರಾದ ಕೆ.ಜಯರಾಮ್, ಆರ್.ಎ.ರವಿಕುಮಾರ್, ನರಸಿಂಹ, ಸುಬ್ರಮಣ್ಯಂ, ಜಿಲ್ಲಾ ಮಟ್ಟದ ಅಧಿಕಾರಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: Chikkaballapur(Chinthamani) News: ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ