ಜು.29ರಂದು ರೈತರಿಗೆ ಒಂದು ದಿನದ ನೈಸರ್ಗಿಕ ಕೃಷಿ ಕಾರ್ಯಾಗಾರ
ಭಾರತೀಯ ಕಿಸಾನ್ ಸಂಘದ ವತಿಯಿಂದ ನಗರದ ಉಡುವಲೋಡು ದಿನ್ನೆಯಲ್ಲಿರುವ ಶ್ರೀ ಸಾಯಿ ಬಾಬ ಮಂದಿರದ ಆವರಣದಲ್ಲಿ ತಾಲೂಕಿನ ರೈತರಿಗಾಗಿ ಒಂದು ದಿನದ ನೈಸರ್ಗಿಕ ಕೃಷಿ ಕಾರ್ಯಾಗಾರ ವನ್ನು ಜು.29ರಂದು ಮಂಗಳವಾರ ಏರ್ಪಡಿಸಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ್ ತಿಳಿಸಿದ್ದಾರೆ.


ಗೌರಿಬಿದನೂರು : ಭಾರತೀಯ ಕಿಸಾನ್ ಸಂಘದ ವತಿಯಿಂದ ನಗರದ ಉಡುವಲೋಡು ದಿನ್ನೆಯ ಲ್ಲಿರುವ ಶ್ರೀ ಸಾಯಿಬಾಬ ಮಂದಿರದ ಆವರಣದಲ್ಲಿ ತಾಲೂಕಿನ ರೈತರಿಗಾಗಿ ಒಂದು ದಿನದ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಜು.29ರಂದು ಮಂಗಳವಾರ ಏರ್ಪಡಿಸಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ್ ತಿಳಿಸಿದ್ದಾರೆ.
ಇದನ್ನೂ ಓದಿ: Chikkaballapur News: ಪ್ರತಿ ತಿಂಗಳಿಗೊಮ್ಮೆ ಓವರ್ ಹೆಡ್ ಟ್ಯಾಂಕ್ ಸ್ವಚ್ಛತೆ ಕಡ್ಡಾಯ: ಸಿಇಒ ಡಾ.ನವೀನ್ ಭಟ್.ವೈ
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ,ನೈಸರ್ಗಿಕ ಕೃಷಿ ತಜ್ಞ ಪ್ರಸನ್ನಕುಮಾರ್ ಭಾಗವಹಿಸಿ ರೈತರಿಗೆ ನೈಸರ್ಗಿಕ ಕೃಷಿಯ ಕುರಿತು ಅರಿವು ಮೂಡಿಸಲಿದ್ದಾರೆ.ಕಾರ್ಯಾಗಾರವು ಬೆಳಿಗ್ಗೆ ೮.೩೦ ಯಿಂದ ಸಂಜೆ 6 ಗಂಟೆಯವರೆಗೂ ನಡೆಯಲಿದ್ದು,ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಾಗಾರದಲ್ಲಿ ಭಾಗವಹಿಸಬೇಕೆಂದು ಅವರು ತಿಳಿಸಿದ್ದಾರೆ.