Dharna: ರಸ್ತೆಗಾಗಿ ಬೀದಿಗಿಳಿದ ಜನತೆ : ಮುಷ್ಟೂರು ಗ್ರಾಮದಲ್ಲಿ ಅಹೋರಾತ್ರಿ ಧರಣಿ
ಚಿಕ್ಕಬಳ್ಳಾಪುರ ನಗರದಿಂದ ಈಶಾ ಧ್ಯಾನಕೇಂದ್ರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಿಗೆ ಪ್ರಮುಖ ಸಂಪರ್ಕ ಸೇತುವೆಯಗಿರುವ ಈ ರಸ್ತೆಯನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡಲು ಮಾರ್ಚ್ ತಿಂಗಳಲ್ಲಿ ಶಾಸಕ ಪ್ರದೀಪ್ ಈಶ್ವರ್ ಭೂಮಿಪೂಜೆ ನೆರವೇರಿಸಿದ್ದರು.ಇದಾಗಿ ತಿಂಗಳ ಹಿಮದೆ ಗುತ್ತಿಗೆ ದಾರ ರಸ್ತೆಯನ್ನು ಪೂರ್ಣ ವಾಗಿ ಕಿತ್ತಿದ್ದಾರೆ. ನಂತರ ಯಾವುದೇ ಕೆಲಸ ಮಾಡಿಲ್ಲ.ಇದರಿಂದಾಗಿ ಈ ರಸ್ತೆಯಲ್ಲಿ ಓಡಾ ಡಲು ಕಷ್ಟವಾಗುತ್ತಿದೆ.

ಕೂಡಲೇ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು ಎಂದು ಮುಷ್ಟೂರು ಗ್ರಾಮಸ್ಥರು ಅಹೋರಾತ್ರಿ ಧರಣಿ ನಡೆಸಿ ಗಮನ ಸೆಳೆದರು.

ಚಿಕ್ಕಬಳ್ಳಾಪುರ : ಭೂಮಿಪೂಜೆ ನೆರವೇರಿಸಿ ನಾಲ್ಕು ತಿಂಗಳಾದರೂ ಕಾಮಗಾರಿ ಪ್ರಾರಂಭಿಸಿಲ್ಲ, ರಸ್ತೆ ನಿರ್ಮಾಣ ಮಾಡುವುದಾಗಿ ಗುತ್ತಿಗೆದಾರ ರಸ್ತೆಯನ್ನು ಕಿತ್ತಿರುವುದರಿಂದ ಮಳೆಗಾಲದಲ್ಲಿ ರಸ್ತೆಗಳಲ್ಲಿ ಗುಂಡಿ ನಿರ್ಮಾಣವಾಗಿ ಸಂಚಾರಕ್ಕೆ ಹರಸಾಹಸ ಪಡಬೇಕಾಗಿದೆ, ಕೂಡಲೇ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು ಎಂದು ಮುಷ್ಟೂರು ಗ್ರಾಮಸ್ಥರು ಅಹೋರಾತ್ರಿ ಧರಣಿ ನಡೆಸಿ ಗಮನ ಸೆಳೆದರು.
ನಗರಕ್ಕೆ ಹೊಂದಿಕೊAಡAತಿರುವ ಮುಷ್ಟೂರಿನ ಗ್ರಾಮಸ್ಥರು ಸುರಿವ ಮಳೆಯನ್ನು ಲೆಕ್ಕಿಸದೆ, ನಡುರಸ್ತೆಯಲ್ಲಿಯೇ ಕುಳಿತು ವಾಹನಗಳನ್ನು ತಡೆದು ರಸ್ತೆ ನಿರ್ಮಾಣಕ್ಕಾಗಿ ಪ್ರತಿಭಟಿಸಿದರು.
ಇದನ್ನೂ ಓದಿ: Chikkaballapur News: ಗೌರಿಬಿದನೂರು ನಗರಕ್ಕೆ ಕುಡಿಯುವ ನೀರು ಪೂರೈಸುವ 66 ಕೋಟಿ ರೂ ಯೋಜನೆಯ ಕಾಮಗಾರಿಗೆ ಭೂಮಿಪೂಜೆ
ಈ ವೇಳೆ ಮುಖಂಡ ಮುಷ್ಟೂರು ನಿವಾಸಿ ಶ್ರೀಧರ್ ಮಾತನಾಡಿ ಚಿಕ್ಕಬಳ್ಳಾಪುರ ನಗರದಿಂದ ಈಶಾ ಧ್ಯಾನಕೇಂದ್ರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಿಗೆ ಪ್ರಮುಖ ಸಂಪರ್ಕ ಸೇತುವೆಯಗಿರುವ ಈ ರಸ್ತೆಯನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡಲು ಮಾರ್ಚ್ ತಿಂಗಳಲ್ಲಿ ಶಾಸಕ ಪ್ರದೀಪ್ ಈಶ್ವರ್ ಭೂಮಿಪೂಜೆ ನೆರವೇರಿಸಿದ್ದರು.ಇದಾಗಿ ತಿಂಗಳ ಹಿಮದೆ ಗುತ್ತಿಗೆದಾರ ರಸ್ತೆಯನ್ನು ಪೂರ್ಣ ವಾಗಿ ಕಿತ್ತಿದ್ದಾರೆ. ನಂತರ ಯಾವುದೇ ಕೆಲಸ ಮಾಡಿಲ್ಲ.ಇದರಿಂದಾಗಿ ಈ ರಸ್ತೆಯಲ್ಲಿ ಓಡಾ ಡಲು ಕಷ್ಟವಾಗುತ್ತಿದೆ. ಈಶ ಗಾಡಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದೇ ಮಾರ್ಗದಲ್ಲಿ ಸಂಚರಿಸುವ ಕಾರಣ ಮುಷ್ಟೂರು ಗ್ರಾಮಸ್ಥರಿಗೆ ತೀವ್ರ ಸಂಕಷ್ಟ ಎದುರಾಗಿದೆ ಎಂದರು.

ಮುಷ್ಟೂರು ರಸ್ತೆ ನಿರ್ಮಾಣ ಮಾಡಲು ಶಾಸಕ ಪ್ರದೀಪ್ ಈಶ್ವರ್ ೩ ಕೋಟಿ ಅನುದಾನ ನೀಡಿ ಭೂಮಿಪೂಜೆ ನೆರವೇರಿಸಿದ್ದರು.ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಹಾಳಾಗಿರುವ ಈ ರಸ್ತೆಯಲ್ಲಿಯೇ 15ಕ್ಕೂ ಹೆಚ್ಚು ಗ್ರಾಮಗಳ ಜನತೆ ನಾನಾ ಕಾರಣಗಳಿಗೆ ನಗರಕ್ಕೆ ಬಂದು ಹೋಗುತ್ತಿದ್ದಾರೆ. ಹಾಳಾಗಿರುವ ಈ ರಸ್ತೆಯಲ್ಲಿ ಹಾಲು ಹಣ್ಣು ಹೂವು ತರಕಾರಿ ಸಾಗಿಸಲು ಪಡಿಪಾಟಲು ಪಡುತ್ತಿದ್ದಾರೆ. ಗುಂಡಿಗಳಿಂದಾಗಿ ಅಪಘಾತಗಳು ಹೆಚ್ಚಾಗಿದ್ದು ಇತ್ತೀಚೆಗೆ ಒಬ್ಬ ಯುವ ಮೃತಪಟ್ಟಿದ್ದಾನೆ. ಈಶಾ ಕೇಂದ್ರಕ್ಕೆ ಬರುವ ಪ್ರವಾಸಿಗಳ ವಾಹನಗಳು ರಾತ್ರಿ ೧ ಗಂಟೆ ಯಾದರೂ ಸಂಚಾರ ಮಾಡುವ ಕಾರಣ ದೂಳು ಕೆಸರು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಾಲದ್ದಕ್ಕೆ ಟಿಪ್ಪರ್ ಲಾರಿಗಳ ಹಾವಳಿ ಮಿತಿ ಮೀರಿದ್ದು ರಸ್ತೆ ಹಾಳಾಗಲು ಇದೂ ಪ್ರಮುಖ ಕಾರಣವಾಗಿದೆ ಎಂದು ದೂರಿದರು.
ಗ್ರಾಮಸ್ಥರಿಗೆ ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದ ಶಾಸಕರು ೩ ಕೋಟಿ ಅನುದಾನ ನೀಡಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದಾರೆ. ಆದರೆ ಶಾಸಕರಿಗೆ ಕಳಂಕ ತರಬೇಕು ಎನ್ನುವ ನಿಟ್ಟಿನಲ್ಲಿ ಗುತ್ತಿಗೆದಾರ ಕಾಮಗಾರಿ ಪ್ರಾರಂಭಿಸದೆ ಜನರ ಜೀವನದ ಜತೆ ಚೆಲ್ಲಾಟ ವಾಡುತ್ತಿದ್ದಾನೆ. ಈತ ರಸ್ತೆಯನ್ನು ಕೀಳುವ ಮೊದಲು ಹೇಗೋ ಸಂಚಾರ ಮಾಡಬಹುದಿತ್ತು. ಆದರೆ ಈತ ರಸ್ತೆ ಯನ್ನು ಕಿತ್ತ ನಂತರ ಸಂಚಾರವೇ ಕಷ್ಟವಾಗಿದೆ.ಇದನ್ನು ಮನಗಂಡು ಕೂಡಲೇ ಈ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ತಿಪ್ಪೇನಹಳ್ಳಿ ಗ್ರಾಪಂ ಅಧ್ಯಕ್ಷ ಶಿವಕುಮಾರ್ ಮಾತನಾಡಿ ಮುಷ್ಟೂರು ರಸ್ತೆ ಅಭಿವೃದ್ಧಿಗೆ ಸಂಸದ ಸುಧಾಕರ್ ಸಚಿವರಾಗಿದ್ದ ವೇಳೆ ೫.೫೦ ಕೋಟಿ ಅನುದಾನ ನೀಡಿದ್ದರು. ಕಾಮಗಾರಿ ಪ್ರಾರಂಭ ವಾಗುವ ವೇಳೆಗೆ ಅವರು ಚುನಾವಣೆಯಲ್ಲಿ ಸೋತರು.ಬದಲಾದ ರಾಜಕೀಯದಲ್ಲಿ ಶಾಸಕ ಪ್ರದೀಪ್ ಈಶ್ವರ್ ೩ಕೋಟಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿ ೩ ತಿಂಗಳಾಗಿದೆ. ಈವರೆಗೆ ಕೆಲಸ ಆಗಿಲ್ಲ, ಶಾಸಕರು ಅನುದಾನ ನೀಡಲಾಗಿದೆ ಎನ್ನುತ್ತಾರೆ. ಹಾಗಾದರೆ ಯಾಕೆ ಗುತ್ತಿಗೆ ದಾರ ಕೆಲಸ ಪ್ರಾರಂಭ ಮಾಡಿಲ್ಲ ಎಂಬುದನ್ನು ಗುತ್ತಿಗೆದಾರನೇ ಹೇಳಬೇಕು. ಕೂಡಲೇ ಈ ಸಮಸ್ಯೆ ಸರಿಪಡಿಸಬೇಕು. ಇಲ್ಲವೇ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಗ್ರಾಮಸ್ಥರಾದ ಗೋವಿಂದ್, ಬೈರಾರಡ್ಡಿ, ಶಿವಣ್ಣ, ವೆಂಕಟೇಶ್, ಸುಮಿತ್ರ, ನಾಗರಾಜ್, ಚಲಪತಿ, ಮುನಿನಾರಾಯಣ, ಮುನಿಸ್ವಾಮಿ , ರಾಮು ಗಜೇಂದ್ರ, ಮುರಳಿ ಇದ್ದರು.