ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sadhguru Shri Madhusudan Sai: ಮಕ್ಕಳಿಗೆ ಸೌಲಭ್ಯ ನೀಡಿ ಜಾಗತಿಕ ನಾಗರಿಕರನ್ನಾಗಿ ಮಾಡುವುದೇ ನಮ್ಮ ಗುರಿ: ಸದ್ಗುರು ಶ್ರೀ ಮಧುಸೂದನ ಸಾಯಿ

ಮಗು ಯಾರದ್ದೇ ಆಗಿರಲಿ, ಯಾವುದೇ ಭಾಗದಲ್ಲಿ ಇರಲಿ ಆ ಮಗು ಜಾಗತಿಕ ನಾಗರಿಕ. ಮಗುವನ್ನು ನೋಡಿಕೊಳ್ಳುವುದು ಕೇವಲ ಪೋಷಕರ ಜವಾಬ್ದಾರಿಯಲ್ಲ ಇಡೀ ಸಮಾಜದ ಜವಾಬ್ದಾರಿಯಾಗಿದೆ. ಅವರು ಎಲ್ಲಿದ್ದರೂ ಅವರನ್ನು ನೋಡಿಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ನಮ್ಮಂತೆಯೇ ಯೋಚಿಸುವ ಸಂಸ್ಥೆಗಳಿಂದಿಗೆ ಕೆಲಸ ಮಾಡುವುದನ್ನು ನಾವು ನಿಜವಾಗಿಯೂ ಆನಂದಿಸುತ್ತೇವೆ.

ಚಿಕ್ಕಬಳ್ಳಾಪುರ: ಸೌಲಭ್ಯಗಳಿಂದ ವಂಚಿತವಾಗಿರುವ ಮಕ್ಕಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡಿ ಜಾಗತಿಕ ನಾಗರಿಕರನ್ನಾಗಿ ಮಾಡುವುದೇ ನಮ್ಮ ಮಿಷನ್‌ನ ಗುರಿಯಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದ ೮೦ನೇ ದಿನವಾದ ಸೋಮವಾರ  ಆಶೀರ್ವಚನ ನೀಡಿದ ಸದ್ಗುರು, ಯಾವ ಮಗು ಹಸಿವಿನಿಂದ ಬಳಲುತ್ತದೆಯೋ ಅದರ ಕೋಪವು ಒಂದು ದಿನ ಹಿಂಸಾ ಚಾರಕ್ಕೆ ಕಾರಣವಾಗುತ್ತದೆ. ಇದು ಯಾರಿಗೂ ಒಳ್ಳೆಯದಲ್ಲ, ಅದಕ್ಕಾಗಿಯೇ ನಾವು ಮಕ್ಕಳನ್ನು ರಕ್ಷಣಾತ್ಮಕವಾಗಿ ಬೆಳೆಸುತ್ತಿದ್ದೇವೆ ಎಂದರು.

ಮಗು ಯಾರದ್ದೇ ಆಗಿರಲಿ, ಯಾವುದೇ ಭಾಗದಲ್ಲಿ ಇರಲಿ ಆ ಮಗು ಜಾಗತಿಕ ನಾಗರಿಕ. ಮಗುವನ್ನು ನೋಡಿಕೊಳ್ಳುವುದು ಕೇವಲ ಪೋಷಕರ ಜವಾಬ್ದಾರಿಯಲ್ಲ ಇಡೀ ಸಮಾಜದ ಜವಾಬ್ದಾರಿಯಾಗಿದೆ. ಅವರು ಎಲ್ಲಿದ್ದರೂ ಅವರನ್ನು ನೋಡಿಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ನಮ್ಮಂತೆಯೇ ಯೋಚಿಸುವ ಸಂಸ್ಥೆಗಳಿಂದಿಗೆ ಕೆಲಸ ಮಾಡುವುದನ್ನು ನಾವು ನಿಜವಾಗಿಯೂ ಆನಂದಿಸುತ್ತೇವೆ. ಯಾವ ಮಗುವು ಕೂಡ ಶಿಕ್ಷಣ, ಆರೋಗ್ಯ ಹಾಗೂ ಪೌಷ್ಟಿಕ ಆಹಾರದಿಂದ ವಂಚಿತವಾಗಬಾರದು ಎಂಬುದೇ ನಮ್ಮ ಉದ್ದೇಶ ಎಂದು ನುಡಿದರು.

ಇದನ್ನೂ ಓದಿ: Chikkaballapur News: ಮೂಲವ್ಯಾಧಿ ಬಗ್ಗೆ ಜಾಗೃತೆಯಿರಲಿ ; ನಕಲಿ ವೈದ್ಯರ ಬಳಿ ಚಿಕಿತ್ಸೆ ಖಂಡಿತ ಬೇಡ : ಡಾ.ಮಾದೇಶ್

ಎಲ್ಲಾ ಮಕ್ಕಳಿಗೂ ಸಿಗಬೇಕಾದ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಮಾನವೀಯತೆ ಯನ್ನು ಮುಂದುವರಿಸುತ್ತಿದ್ದೇವೆ. ಬೀಜವನ್ನು ನೆಟ್ಟು ಮರವನ್ನಾಗಿ ಮಾಡಲು ಹೇಗೆ ಪೋಷಣೆ ಮಾಡಲಾಗುತ್ತದೆಯೋ ಅದೇ ರೀತಿ ಮಕ್ಕಳನ್ನು ಪೋಷಣೆಯೊಂದಿಗೆ ಉತ್ತಮವಾಗಿ ಬೆಳೆಸುತ್ತಿದ್ದೇವೆ. ಹೆಚ್ಚಿನ ಮಕ್ಕಳು ಒಳ್ಳೆಯ ಫಲವನ್ನು ನೀಡುತ್ತಾರೆ. ಏಕೆಂದರೆ ನಾವು ಒಳ್ಳೆಯ  ಮನುಷ್ಯರನ್ನು ಸೃಷ್ಟಿಸಿದ ನಂತರ ಅದು ಶಾಶ್ವತ ಚಕ್ರವಾಗಿ ಒಳ್ಳೆಯತನವನ್ನು ಮುಂದುವರಿಸುತ್ತದೆ. ಅವರು ಅನೇಕ ಒಳ್ಳೆಯ ಮನುಷ್ಯರನ್ನು ಸೃಷ್ಟಿಸಲು ಸಮರ್ಥರಾಗುತ್ತಾರೆ. ಎಲ್ಲಾ ಸಮಸ್ಯೆಗಳಿಗೆ ಇಂದೇ ಪರಿಹಾರವಾಗಿದೆ ಎಂದು ವಿವರಿಸಿದರು.

ಅತಿಥಿ ದೇಶಗಳಾದ ಎಸ್ವಾಟಿನಿ ಮತ್ತು ಲೆಸೋಥೊ ಬಗ್ಗೆ ಮಾತನಾಡಿದ ಸದ್ಗುರು, ಹೆಚ್ಚಿನ ಆಫ್ರಿಕಾದ ರಾಷ್ಟ್ರಗಳಿಂದ ಪರಸ್ಪರ ಅವಲಂಬನೆ, ಸಂಬಂಧದ ಪರಿಕಲ್ಪನೆಯನ್ನು ನೋಡು ತ್ತಿದ್ದೇವೆ. ಪರಸ್ಪರ ಅವಲಂಬಿತರಾಗಿರುವುದರಿಂದ ಬದುಕುತ್ತೇವೆ ಎಂಬುದನ್ನು ಅರಿತುಕೊಂಡಿ ದ್ದಾರೆ. ಇದು ಆಫ್ರಿಕನ್ ರಾಷ್ಟ್ರಗಳ ಕಲ್ಪನೆ, ಇವರು ಬಹಳ ಹಿಂದೆಯೇ ಕಂಡುಕೊಂಡಿದ್ದಾರೆ. ಈ ದೇಶಗಳು ಚಿಕ್ಕವು, ಆದರೆ ಅವುಗಳಿಗೆ ತಮ್ಮದೇ ಆದ ಸವಾಲುಗಳಿವೆ ಎಂದು ಹೇಳಿದರು.

'ಶ್ರೀ ಸತ್ಯ ಸಾಯಿ ಅನ್ನಪೂರ್ಣ ಪೌಷ್ಟಿಕ ಆಹಾರ ಕಾರ್ಯಕ್ರಮ'ಕ್ಕೆ ಬೆಂಬಲ ನೀಡುತ್ತಿರುವ 'ಶೇರ್ ಅವರ್ ಸ್ಟ್ರೆಂತ್ ಫೌಂಡೇಶನ್'ಗೆ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸ ಲಾಯಿತು.

ಫೌಂಡೇಶನ್‌ನ ಸಂಸ್ಥಾಪಕರು ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಬಿಲ್ಲಿ ಶೋರ್ ಅವರು ಪ್ರಶಸ್ತಿ ಸ್ವೀಕರಿಸಿದರು. ಈಚ್ ಒನ್ ಎಜುಕೇಟ್ ಒನ್ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತಿರುವ ಕಪಿಲ್ ಗ್ರೂಪ್‌ಗೆ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಪಿಲ್ ಚಿಟ್ಸ್ ಕರ್ನಾಟಕ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ವಿನೋದ್ ಕೃಷ್ಣ ಕುಮಾರ್, ನಿರ್ದೇಶಕ ಕಟಕಂ ದಯಾನಂದA ಹಾಗೂ ಕಪಿಲ್ ಗ್ರೂಪ್ ಮಾರ್ಕೆಟಿಂಗ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾದ ಎಜ್ಜಗಾನಿ ರಾಮಕೃಷ್ಣನ್ ಅವರು ಪ್ರಶಸ್ತಿ ಸ್ವೀಕರಿಸಿದರು.

ಲೆಸೋಥೊ ದೇಶದ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಮೊಹಲೆ ಸೆಂಟೆಲ್ ಅಬ್ದುಲ್ಲಾ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ' ನೀಡಿ ಗೌರವಿಸಲಾಯಿತು. ಎಸ್ವಾಟಿನಿ ದೇಶದ ಪ್ರತಿನಿಧಿ ಡೊನಾಲ್ಡ್ ಸೋಲೋ , ಲೆಸೋಥೋ ದೇಶದ ಪ್ರತಿನಿಧಿ ಫಾಹ್ಲೇನ್ ಫ್ರಾನ್ಸಿಸ್ ಮಕೊಕೋ ಅವರು ತಮ್ಮ ದೇಶಗಳ ಭಾಷೆ, ಕಲೆ, ಸಂಸ್ಕೃತಿ, ಕರೆನ್ಸಿ, ಪ್ರಸಿದ್ಧ ತಾಣಗಳು, ಖಾದ್ಯ ಗಳು, ಸಾಂಪ್ರದಾಯಿಕ ಉಡುಪು, ಸಂಗೀತ, ಆಧ್ಯಾತ್ಮಿಕತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊAಡರು.