ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Factory Labour Strike on 2nd day: ಎರಡನೇ ದಿನಕ್ಕೆ ರೈಮೆಂಡ್ಸ್ ಕಾರ್ಖಾನೆ ಕಾರ್ಮಿಕರ ಮುಷ್ಕರ: ತಹಸೀಲ್ದಾರ್ ಭೇಟಿ

ಸರ್ಕಾರ ಕಾರ್ಮಿಕರಿಗೆ ೧೦ ಗಂಟೆ ಕೆಲಸ ಮಾಡಿ ವಾರದಲ್ಲಿ ಎರಡು ದಿನ ರಜೆ ಪಡೆಯಿರಿ ಎಂಬ ಅವೈಜ್ಞಾನಿಕ ನೀತಿಯನ್ನು ಜಾರಿ ಮಾಡಲು ಮುಂದಾಗಿರುವುದನ್ನು ತೀವ್ರವಾಗಿ ಖಂಡಿಸಿದ ಅವರು  ಎಂಟು ಗಂಟೆ ಕೆಲಸ ಎಂಟು ಗಂಟೆ ವಿಶ್ರಾಂತಿ ಉಳಿದ ಸಮಯ ಮನೆ ಕೆಲಸ ಮಾಡಬೇಕು ಎಂದು ಕಾರ್ಮಿಕ ಇಲಾಖೆಯ ಸುತ್ತೋಲೆ ಇದೆ

ಎರಡನೇ ದಿನಕ್ಕೆಕಾರ್ಖಾನೆ ಕಾರ್ಮಿಕರ ಮುಷ್ಕರ : ತಹಸೀಲ್ದಾರ್ ಭೇಟಿ

ನಗರದ ಹೊರವಲಯದಲ್ಲಿರುವ ರೈಮೆಂಡ್ಸ್ ಕಾರ್ಖಾನೆ ಕಾರ್ಮಿಕರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಕಾರ್ಮಿಕರು ಕಾರ್ಖಾನೆಯ ಆವರಣದಲ್ಲಿ ಪ್ರತಿಭಟನೆಯನ್ನು ಮುಂದುವರಿಸಿದರು.

Profile Ashok Nayak Jul 18, 2025 12:05 AM

ಗೌರಿಬಿದನೂರು : ನಗರದ ಹೊರವಲಯದಲ್ಲಿರುವ ರೈಮೆಂಡ್ಸ್ ಕಾರ್ಖಾನೆ ಕಾರ್ಮಿಕರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಕಾರ್ಮಿಕರು ಕಾರ್ಖಾನೆಯ ಆವರಣದಲ್ಲಿ ಪ್ರತಿಭಟನೆಯನ್ನು ಮುಂದುವರಿಸಿದರು.

ನಗರದ ಹೊರವಲಯದಲ್ಲಿರುವ ರೈಮೆಂಡ್ಸ್ ಕಾರ್ಖಾನೆ ಎದುರು ಮುಷ್ಕರ ನಿರತ ಕಾರ್ಮಿಕರನ್ನು ಉದ್ದೇಶಿಸಿ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಸಿದ್ದಗಂಗಪ್ಪ ಮಾತನಾಡಿದರು.

ಸರ್ಕಾರ ಕಾರ್ಮಿಕರಿಗೆ ೧೦ ಗಂಟೆ ಕೆಲಸ ಮಾಡಿ ವಾರದಲ್ಲಿ ಎರಡು ದಿನ ರಜೆ ಪಡೆಯಿರಿ ಎಂಬ ಅವೈಜ್ಞಾನಿಕ ನೀತಿಯನ್ನು ಜಾರಿ ಮಾಡಲು ಮುಂದಾಗಿರುವುದನ್ನು ತೀವ್ರವಾಗಿ ಖಂಡಿಸಿದ ಅವರು  ಎಂಟು ಗಂಟೆ ಕೆಲಸ ಎಂಟು ಗಂಟೆ ವಿಶ್ರಾಂತಿ ಉಳಿದ ಸಮಯ ಮನೆ ಕೆಲಸ ಮಾಡಬೇಕು ಎಂದು ಕಾರ್ಮಿಕ ಇಲಾಖೆಯ ಸುತ್ತೋಲೆ ಇದೆ,ಅದರೆ ಇವರ ಲಾಭಕ್ಕಾಗಿ ಸಮಯ  ಹೆಚ್ಚಿಸಿ, ಕಾರ್ಮಿಕರ ಶೋಷಣೆ ನಡೆಸುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದ ಅವರು ಈ ಹಿಂದೆ ಇದ್ದಂತೆ ಎಂಟು ಗಂಟೆ ಕೆಲಸದ ಅವದಿಯನ್ನೇ ಮುಂದುವರಿಸಬೇಕು ಮತ್ತು ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ: Chikkaballapur News: ಚಿಕ್ಕಬಳ್ಳಾಪುರ ನಗರಸಭೆಗೆ ಜಿಲ್ಲಾಧಿಕಾರಿಗಳ ದಿಢೀರ್ ಭೇಟಿ : ಅಧ್ಯಕ್ಷರೊಂದಿಗೆ ಸಭೆ

ಕಾರ್ಮಿಕ ಇಲಾಖೆಯ ನೀರಿಕ್ಷಕ ಸತೀಶ್ ಮಾತನಾಡಿ ಕಾರ್ಮಿಕರ ಏನೇ ಸಮಸ್ಯೆ ಇದ್ದರೂ ಕಾರ್ಮಿಕ ಇಲಾಖೆಗೆ ದೂರು ನೀಡಿ, ಎಂಟು ಗಂಟೆ ಮೇಲೆ ಕಾರ್ಖಾನೆಯಲ್ಲಿ ಕೆಲಸ ಮಾಡಿಸಿದರೆ ಅದಕ್ಕೆ ಪ್ರತ್ಯೇಕ ಭತ್ಯ ನೀಡಬೇಕು ಅದು ನಿಮ್ಮ ಹಕ್ಕು, ನಾವು ಮೇಲಧಿಕಾರಿಯೊಂದಿಗೆ ಮಾತನಾಡಿ ನಿಮ್ಮ ಭತ್ಯ ನೀಡಲು ಶಿಪಾರಸ್ಸು ಮಾಡುತ್ತೇವೆ ಎಂದರು.

ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಅರವಿಂದ್ ಆಗಮಿಸಿ ಮುಷ್ಕರ ನಿರತ ಕಾರ್ಮಿಕರ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ನಂತರ ಕಾರ್ಮಿಕರ ಜೊತೆ ಚರ್ಚಿಸಿ ನಂತರ ಕಾರ್ಖಾನೆಯ ಆಡಳಿತದವರನ್ನು ಸ್ಥಳಕ್ಕೆ ಕರೆಸಿ,ಕಾರ್ಮಿಕರ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕೆಂದು ಸೂಚಿಸಿದರು.

ಕಾರ್ಖಾನೆಯ ಆಡಳಿತ ಮಂಡಳಿ ನೀಡಿದ ಭರವಸೆಯಂತೆ ಕಾರ್ಮಿಕರು  ಮುಷ್ಕರವನ್ನು ತಾತ್ಕಾಲಿಕವಾಗಿ ಕೈಬಿಟ್ಟು ಕಾರ್ಖಾನೆಯ ಕೆಲಸಕ್ಕೆ ಹಾಜರಾದರು.ಈ ಸಂಧರ್ಭದಲ್ಲಿ ಪೊಲೀಸರು ಯಾವುದೇ ರೀತಿಯಲ್ಲಿ ಶಾಂತಿಗೆ ಭಂಗವಾಗದAತೆ ಬಿಗಿ ಪೋಲಿಸ್ ಬಂದೋಬಸ್ತು ಏರ್ಪಡಿಸ ಲಾಗಿತ್ತು