ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಗಮನ ಸೆಳೆದ ಮಾಯಾಮೃಗ ಹಾಗೂ ಬಾನು ಮುಷ್ತಾಕ್ ಅವರ ಎದೆಯ ಹಣತೆ ನಾಟಕ ಪ್ರದರ್ಶನ

ತೇಜಸ್ವಿ ಮತ್ತು ಬಾನು ಮಸ್ತಾಕ್ ಅವರು ಪ್ರಗತಿಪರ ಲೇಖಕರು ಅವರು ತಮ್ಮ ಕಥೆಗಳ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಮುಲಾಮು ಹುಡುಕುವ ಕೆಲಸ ಮಾಡಿದ್ದಾರೆ. ಇನ್ನು ಪೂರ್ಣಚಂದ್ರ ತೇಜಸ್ವಿ ಅವರ ಮಾಮಾಯಾಮೃಗ ಕಥೆಯಲ್ಲಿ  ಅಸ್ತಿತ್ವ ಮತ್ತು ಭ್ರಮೆಯ ನಡುವಿನ ಎಳೆಯನ್ನು ಭೂತಗಳ ಹುಡುಕಾಟಕ್ಕೆ ಸ್ಮಶಾನಕ್ಕೆ ಹೋಗಿ ಇಬ್ಬರು ಸ್ನೇಹಿತರು ಎದುರಿಸುವ ವಿಚಿತ್ರ ಘಟನೆಗಳ ಮೂಲಕ ಸೊಗಸಾಗಿ ಚಿತ್ರಿಸಿದ್ಧಾರೆ.

ಬಾನು ಮುಷ್ತಾಕ್ ಅವರ ಎದೆಯ ಹಣತೆ ನಾಟಕ ಪ್ರದರ್ಶನ

ಗಮನಸೆಳೆದ ಮಾಯಾಮೃಗ ಹಾಗೂ ಬಾನು ಮುಷ್ತಾಕ್ ಅವರ ಎದೆಯ ಹಣತೆ ನಾಟಕ ಪ್ರದರ್ಶನದ ಚಿತ್ರಗಳು

Profile Ashok Nayak Jul 17, 2025 11:39 PM

ಗೌರಿಬಿದನೂರು: ನಗರದ ಡಾ.ಎಚ್. ಎನ್ ಕಲಾಭವನದಲ್ಲಿ ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಇಡಗೂರು ಹಾಗೂ ಹೆಗ್ಗೋಡಿನ ಸತ್ಯಶೋಧನಾ ರಂಗ ಸಮುದಾಯದ ಜನಮನದಾಟ ತಂಡದಿಂದ ಪ್ರಸ್ತುತಪಡಿಸಿದ ಪರಿಸರ ಪ್ರೇಮಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ರವರ ಮಾಯಾಮೃಗ ಮತ್ತು ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮಸ್ತಾಕ್ ಅವರ ಎದೆಯ ಹಣತೆ  ಕಥೆಗಳ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ನಾಟಕ ಪ್ರದರ್ಶನದ ನಂತ ಡಾ. ಎಚ್ ಎನ್ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎನ್.ಹೆಚ್. ಶಿವಶಂಕರರೆಡ್ಡಿ ಮಾತನಾಡಿ, ತೇಜಸ್ವಿ ಮತ್ತು ಬಾನು ಮಸ್ತಾಕ್ ಅವರು ಪ್ರಗತಿಪರ ಲೇಖಕರು ಅವರು ತಮ್ಮ ಕಥೆಗಳ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಮುಲಾಮು ಹುಡುಕುವ ಕೆಲಸ ಮಾಡಿದ್ದಾರೆ. ಇನ್ನು ಪೂರ್ಣಚಂದ್ರ ತೇಜಸ್ವಿ ಅವರ ಮಾಮಾಯಾಮೃಗ ಕಥೆಯಲ್ಲಿ  ಅಸ್ತಿತ್ವ ಮತ್ತು ಭ್ರಮೆಯ ನಡುವಿನ ಎಳೆಯನ್ನು ಭೂತಗಳ ಹುಡುಕಾಟಕ್ಕೆ ಸ್ಮಶಾನಕ್ಕೆ ಹೋಗಿ ಇಬ್ಬರು ಸ್ನೇಹಿತರು ಎದುರಿಸುವ ವಿಚಿತ್ರ ಘಟನೆಗಳ ಮೂಲಕ ಸೊಗಸಾಗಿ ಚಿತ್ರಿಸಿದ್ಧಾರೆ. ನಟರು ಕಥಾ ವಸ್ತುವನ್ನು ರಂಗದ ಮುಖೇನ ಬಹಳ ಅರ್ಥಪೂರ್ಣವಾಗಿ ಪ್ರೇಕ್ಷಕರಿಗೆ ದಾಟಿಸಿದ್ದಾರೆ. ಮೌಢ್ಯ ಮತ್ತು ಕಂದಾ ಚಾರಗಳನ್ನು ಧಿಕ್ಕರಿಸಲು, ನಮ್ಮನ್ನು ನಾವು ಗಟ್ಟಿಗೊಳಿಸಿಕೊಳ್ಳಲು ಕಥಾವಸ್ತು ಉತ್ತಮವಾಗಿರ ಬೇಕು. ರಂಗ ಪ್ರಯೋಗಯೂ ಮನೋಜ್ಞವಾಗಿರಬೇಕು ಎಂದರು.

ಇದನ್ನೂ ಓದಿ: Chikkaballapur News: ರೈತರ ಜಮೀನಿಗೆ ಹೋಗಲು ಅನುಕೂಲ ಮಾಡಿಕೊಟ್ಟ ಅಧಿಕಾರಿಗಳು

ಬಾನು ಮುಸ್ತಾಕ್ ರವರ ಎದೆಯ ಹಣತೆ ಕಥೆ ಆಧರಿಸಿದ ನಾಟಕದಲ್ಲಿ ಹೆಣ್ಣಿನ ದುರಂತಗಳು ಮತ್ತು ಸಮಾಜದ ಬಲವಂತದ ಹೇರಿಕೆಗಳು ಸೊಗಸಾಗಿ ಚಿತ್ರಿಸಲಾಗಿದೆ. ಪಾತ್ರಧಾರಿ ಮೆಹರುನ್ ಅನುಭವಿ ಸುವ ನೋವು ಮತ್ತು ತನಗೆ ಆದ ಅನ್ಯಾಯ ಎದುರಿಸಬೇಕು ಎನ್ನುವ ಕಥಾ ನಿರೂಪಣೆ ರೋಮಾಂ ಚನ ಮೂಡಿಸುತ್ತದೆ, ಮುಸ್ಲಿಂ ಕುಟುಂಬ ಒಂದರ ಮಹಿಳೆಯೊಬ್ಬರು ಅನುಭವಿಸುವ ತೊಳಲಾಟ ಮತ್ತು ವೇದನೆ ನಮ್ಮ ಕಣ್ಣಾಲೆಗಳು ತುಂಬುವಂತೆ ಮಾಡಿವೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಜೆಪಿ ಪಕ್ಷದ ಮುಖಂಡ ಡಾ. ಶಶಿಧರ್ ಮಾತನಾಡಿ, ಬಾನು ಮಸ್ತಾಕ್ ರವರ ಕಥೆಗಳ ನಾಟಕವು ಬಹಳ ಅರ್ಥಪೂರ್ಣವಾಗಿ ಒಂದು ಕಡೆ ತೇಜಸ್ವಿ ಕಥೆಯಲ್ಲಿ ಮನುಷ್ಯನ ಮನಸ್ಸಿನ ಅಪಾರ ಸಾಧ್ಯತೆಗಳನ್ನು ನಂಬಿಕೆಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದರೆ, ಮೂಢನಂಬಿಕೆಗಳನ್ನು ಧಿಕ್ಕರಿಸುವ ಪಾತ್ರಧಾರಿಗಳ ಮನೋಜ್ಞ ಅಭಿನಯ ಮನ ಸೆಳೆಯಿತು. ಬಾನು ಮಸ್ತಾಕ್ ಅವರ ಎದೆಯ ಹಣತೆ ಕಥೆಯನ್ನು ರಂಗದ ಮೇಲೆ ನಿರ್ದೇಶಿಸಿರುವ ಡಾ. ಗಣೇಶ್ ಮತ್ತು ವಿನ್ಯಾಸ ಪರಿಕಲ್ಪನೆಯಲ್ಲಿ ಅಭಿನಯಿಸಿರುವ ಸಲ್ಮಾ ದಂಡಿನ್ ರವರ ಪಾತ್ರ ಸಾಯುವ ಹಂತದ ಸನ್ನಿವೇಶದ ಪಾತ್ರ ನನ್ನಲ್ಲಿ ಕಣ್ಣ ಹನಿಗಳು ಮೂಡುವಂತೆ ಮಾಡಿವೆ, ಒಟ್ಟಾರೆ ಪ್ರತಿ ಯೊಬ್ಬ ಪಾತ್ರಧಾರಿ ಪ್ರೇಕ್ಷಕರನ್ನ ಹಿಡಿದಿಟ್ಟು ನಾಟಕದ ತಿರುಳನ್ನ ಮನಸ್ಸುಗಳಿಗೆ ಮುಟ್ಟುವಂತೆ ಮಾಡಿರುವುದು ಸಮರ್ಥ ನಿರ್ದೇಶನದ ಗಟ್ಟಿತನ ಎಂದರು.

bukar

ಕಾರ್ಯಕ್ರಮದಲ್ಲಿ ಮಾತನಾಡಿದ ಹೈಕೋರ್ಟ್ ವಕೀಲ ಜಿ .ಟಿ .ನರೇಂದ್ರ ಮಾತನಾಡಿ ತೇಜಸ್ವಿ ಮತ್ತು ಕುವೆಂಪು ವೈಚಾರಿಕ ಪ್ರಜ್ಞೆಯನ್ನು ಮೂಡಿಸಿರುವ ಶ್ರೇಷ್ಠ ಜೀವಪರ ಸಂತರು. ಅವರ ಕಥಾ ವಸ್ತುಗಳು ಸಮಾಜದ ದಾರಿ ದೀಪದ ಮುನ್ನೋಟ. ಹಾಗೆಯೇ ಇತ್ತೀಚೆಗೆ ಬೂಕರ್ ಪ್ರಶಸ್ತಿಯನ್ನು ಪಡೆದ ಭಾನು ಮುಸ್ತಾಕ್ ರವರ ಕಥಾ ವಸ್ತು ಬಹಳ ಅರ್ಥಗರ್ಭಿತವಾಗಿ ನಟನೆಯ ಮೂಲಕ ಕಥಾ ತಿರುಳನ್ನು ಮನಮುಟ್ಟುವಂತೆ ಮನಸುಗಳಿಗೆ ಮುಟ್ಟಿಸಿರುವುದು ಬಹಳ ಹೆಮ್ಮೆಯ ವಿಚಾರ ಎಂದರು.

ಈ ಸಂಧರ್ಭದಲ್ಲಿ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲೆ ಶೈಲಜಾ ಸಪ್ತಗಿರಿ, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಕೆಪಿ ಸತ್ಯನಾರಾಯಣ್, ವಕೀಲ ಎಚ್ ಎಲ್ ವಿ ವೆಂಕಟೇಶ್ , ಸೋಮಯ್ಯ ನೀನಾಸಮ್ ಬಾನು ಪ್ರತಾಪ್ ಕೆ ವಿ ನಾಯಕ್ ಕಾರ್ಯಕ್ರಮದ ಸಂಕಲ್ಪ ಗೌರೀಶ್ ಸಂಘಟಕ ಕಲಾವಿದ ಇಡುಗುರು ಪ್ರಸನ್ನ ಹಾಗೂ ಇನ್ನಿತರರು ಉಪಸ್ಥಿತರಿದ್ದರು.