ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಬೆಂಬಲ ಬೆಲೆಯಡಿ ರಾಗಿ,ಭತ್ತ,ಬಿಳಿಜೋಳ ಖರೀದಿಗೆ  ನೋಂದಣಿ ಮಾಡಿಕೊಳ್ಳಿ: ಜಿಲ್ಲಾಧಿಕಾರಿ ಪಿ. ಎನ್ ರವೀಂದ್ರ  ರೈತರಲ್ಲಿ ಮನವಿ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ, ಸಿರಿಧಾನ್ಯ ಮತ್ತು ಬಿಳಿ ಜೋಳ ಮಾರಾಟ ಮಾಡಲು ಇಚ್ಛಿಸುವ  ರೈತರ ನೋಂದಣಿ ಪ್ರಕ್ರಿಯೆಯು ಈಗಾಗಲೇ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದು, ಆಸಕ್ತ ರೈತರು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ತೆರೆದಿರುವ ನೋಂದಣಿ ಕೇಂದ್ರಗಳನ್ನು ಸಂಪರ್ಕಿಸಿ ಕೂಡಲೆ ನೋಂದಣಿ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ರೈತರಲ್ಲಿ ಮನವಿ ಮಾಡಿದರು.

ಬೆಂಬಲ ಬೆಲೆಯಡಿ ರಾಗಿ,ಭತ್ತ,ಬಿಳಿಜೋಳ ಖರೀದಿಗೆ  ನೋಂದಣಿ ಮಾಡಿಕೊಳ್ಳಿ

ಬೆಂಬಲ ಬೆಲೆಯಡಿ ರಾಗಿ,ಭತ್ತ,ಬಿಳಿಜೋಳ ಖರೀದಿಗೆ  ನೋಂದಣಿ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಪಿ. ಎನ್ ರವೀಂದ್ರ  ರೈತರಲ್ಲಿ ಮನವಿ ಮಾಡಿದರು. -

Ashok Nayak Ashok Nayak Oct 14, 2025 1:05 AM

ಚಿಕ್ಕಬಳ್ಳಾಪುರ : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ, ಸಿರಿಧಾನ್ಯ ಮತ್ತು ಬಿಳಿ ಜೋಳ ಮಾರಾಟ ಮಾಡಲು ಇಚ್ಛಿಸುವ  ರೈತರ ನೋಂದಣಿ ಪ್ರಕ್ರಿಯೆಯು ಈಗಾಗಲೇ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದು, ಆಸಕ್ತ ರೈತರು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ತೆರೆದಿರುವ ನೋಂದಣಿ ಕೇಂದ್ರಗಳನ್ನು ಸಂಪರ್ಕಿಸಿ ಕೂಡಲೆ ನೋಂದಣಿ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ರೈತರಲ್ಲಿ ಮನವಿ ಮಾಡಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಸೋಮವಾರ ನಡೆದ "ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ರಾಗಿ, ಕಿರು ಸೀರಿಧಾನ್ಯ, ಭತ್ತ ಮತ್ತು ಬಿಳಿಜೋಳ ಖರೀದಿ" ಕುರಿತ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ೨೦೨೪-೨೫ ನೇ ಸಾಲಿನಲ್ಲಿ ೯೭,೮೬೯ ಕ್ವಿಂಟಲ್ ರಾಗಿಯನ್ನು ಖರೀದಿ ಮಾಡಿ ೪೧.೮೨ ಕೋಟಿ ರೂ ಮೊತ್ತವನ್ನು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ೬,೪೯೭ ರೈತರ ಖಾತೆಗಳಿಗೆ ಹಣ ಪಾವತಿ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur News: ಪ್ರತಿಭಾವಂತರನ್ನು ಗುರುತಿಸಿ ಪುರಸ್ಕರಿಸುವುದು ನಾಗರೀಕ ಸಮಾಜದ ಜವಾಬ್ದಾರಿ : ಸಿ.ಹೆಚ್.ವಿಜಯಶಂಕರ್

ದರ ಎಷ್ಟು

ಸರ್ಕಾರವು ೨೦೨೫-೨೬ ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಲಾಗುವ ರಾಗಿ ಪ್ರತಿ ಕ್ವಿಂಟಾಲ್ ಗೆ ೪,೮೮೬ ರೂ, ಕಿರು ಸಿರಿಧಾನ್ಯಗಳಿಗೆ (ಸಾಮೆ ಮತ್ತು ನವಣೆ) ೪,೮೮೬ ರೂ,  ಭತ್ತ - ಸಾಮಾನ್ಯ ೨,೩೬೯, ಎ ಗ್ರೇಡ್ ಭತ್ತ ೨,೩೮೯, ಹೈಬ್ರಿಡ್ ಬಿಳಿಜೋಳ ೩,೬೯೯, ಮಾಲ್ದಂಡಿ ಬಿಳಿಜೋಳ ೩,೭೪೯ ರೂ ದರಗಳನ್ನು ನಿಗದಿಪಡಿಸಲಾಗಿರುತ್ತದೆ. ಜಿಲ್ಲೆಯ ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ ೧೦ ಕ್ವಿಂಟಾಲ್‌ನಂತೆ ಗರಿಷ್ಠ ೫೦ ಕ್ವಿಂಟಾಲ್ ರಾಗಿಯನ್ನು, ಪ್ರತಿ ಎಕರೆಗೆ ೧೦ ಕ್ವಿಂಟಾಲ್‌ನಂತೆ ಗರಿಷ್ಠ ೫೦ ಕ್ವಿಂಟಾಲ್ ಕಿರು ಸಿರಿಧಾನ್ಯಗಳನ್ನು (ಸಾಮೆ ಮತ್ತು ನವಣೆ), ಪ್ರತಿ ಎಕರೆಗೆ ೨೫ ಕ್ವಿಂಟಾಲ್‌ನಂತೆ ಗರಿಷ್ಠ ೫೦ ಕ್ವಿಂಟಾಲ್ ಭತ್ತವನ್ನು ಮತ್ತು ಪ್ರತಿ ಎಕರೆಗೆ ೧೫ ಕ್ವಿಂಟಾಲ್‌ನAತೆ ಗರಿಷ್ಠ ೧೫೦ ಕ್ವಿಂಟಾಲ್ ಜೋಳವನ್ನು ಖರೀದಿಸಲು ಮಿತಿ ನಿಗದಿಪಡಿಸಲಾಗಿದೆ ಈ ಮಿತಿಯಲ್ಲಿ ರೈತರು ಮಾರಾಟ ಮಾಡಬಹುದು ಎಂದರು.

ಎಲ್ಲಾ ತಾಲ್ಲೂಕುಗಳ ಎ.ಪಿ.ಎಂ.ಸಿ ಕೇಂದ್ರಗಳಲ್ಲಿ ಈಗಾಗಲೇ ರೈತರ ನೋಂದಣಿ ಕಾರ್ಯ ಪ್ರಾರಂಭವಾಗಿದ್ದು, ಡಿಸೆಂಬರ್ ೧೨ರವರೆಗೆ ನೊಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಆದ್ದರಿಂದ ಜಿಲ್ಲೆಯ ಅರ್ಹ ರೈತರು ಅಗತ್ಯ ದಾಖಲೆ (ಆಧಾರ್ ಕಾರ್ಡ್, ಫ್ರೂಟ್ ಐಡಿ ಮತ್ತು ಇತರ)ಸಂಬಂಧಪಟ್ಟ ತಾಲ್ಲೂಕಿನ ನೋಂದಣಿ ಕೇಂದ್ರಗಳಿಗೆ ಭೇಟಿ ನೀಡಿ ನಿಯಮಾನುಸಾರ ನೋಂದಾಯಿಸಿಕೊಂಡು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ಕೋರಿದೆ. ದಿ:೦೧.೦೧.೨೦೨೬ ರಿಂದ ದಿ:೩೧.೦೩.೨೦೨೬ ರವರೆಗೆ ಖರೀದಿ ಪ್ರಕ್ರಿಯೆ ನಿರ್ವಹಿಸಲಾಗುತ್ತದೆ ಎಂದು ತಿಳಿಸಿದರು.

ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ವ್ಯವಸ್ಥಾಪಕರು ಮೊ:೯೧೦೮೨೨೧೪೧೬, ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ (ಕೆಎಫ್‌ಸಿಎಸ್‌ಸಿ), ಚಿಕ್ಕಬಳ್ಳಾಪುರ ರವರ ಕಚೇರಿಗೆ ಭೇಟಿ ನೀಡಲು ಕೋರಿದೆ. ಕಚೇರಿ ದೂರವಾಣಿ ಸಂಖ್ಯೆ:- ೦೮೧೫೬-೨೭೭೧೦೮ ಗೆ ಸಂಪರ್ಕಿಸಬಹುದು ಎಂದರು.

ಈ ಸಂದರ್ಭದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ಕೆಳಗಿನ ಮನಿ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ ಪ್ರಧಾನ ವ್ಯವಸ್ಥಾಪಕ ಪಿ.ಎನ್. ಮಂಜುನಾಥ್, ಜಿಲ್ಲಾ ವ್ಯವಸ್ಥಾಪಕ ವಿಜಯ್ ಕುಮಾರ್ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.