ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಬಯಲುಸೀಮೆ ಜಿಲ್ಲೆಗಳ ನೀರಿನ ಬವಣೆ ತಪ್ಪಿಸಲು ಕ್ರಾಂತಿಕಾರಿ ಹೋರಾಟ ಅನಿವಾರ್ಯ : ಆರ್.ಆಂಜನೇಯರೆಡ್ಡಿ

ನದಿ ನಾಲೆಗಳ ನೀರಾವರಿ ಸೌಲಭ್ಯವಿಲ್ಲದ ಬಲಯಸೀಮೆಯ ಜಿಲ್ಲೆಗಳಲ್ಲಿ ಇಲ್ಲಿನ ಜನತೆ ಅಂತರ್ಜಲ ವನ್ನೇ ಹೆಚ್ಚಾಗಿ ಅವಲಂಭಿಸಿದ್ದಾರೆ. ಆದರೆ ಅಂತರ್ಜಲವು ಅಪಾಯಕಾರಿ ಮಟ್ಟಕ್ಕೆ ಕುಸಿದಿರುವುದರಿಂದ ನೀರಿನಲ್ಲಿ ಯುರೇನಿಯಂ, ನೈಟ್ರೇಟ್ ಅಂಶವುಳ್ಳ ವಿಷಕಾರಿ ಲವಣ ಪತ್ತೆ ಯಾಗಿರುವುದು ಕಳವಳಕಾರಿ ಸಂಗತಿಯಾಗಿದೆ.

ಬಯಲುಸೀಮೆ ಜಿಲ್ಲೆಗಳ ನೀರಿನ ಬವಣೆ ತಪ್ಪಿಸಲು ಕ್ರಾಂತಿಕಾರಿ ಹೋರಾಟ ಅನಿವಾರ್ಯ

ಬಯಲುಸೀಮೆ ಜಿಲ್ಲೆಗಳ ನೀರಿನ ಬವಣೆ ತಪ್ಪಿಸಲು ಕ್ರಾಂತಿಕಾರಿ ಹೋರಾಟ ಅನಿವಾರ್ಯ  ಎಂದು ಶಾಶ್ವತ ನೀರಾವರಿ ಹೊರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ತಿಳಿಸಿದರು. -

Ashok Nayak Ashok Nayak Oct 2, 2025 6:42 AM

ಚಿಕ್ಕಬಳ್ಳಾಪುರ: ಬಯಲುಸೀಮೆ ಜಿಲ್ಲೆಗಳಲ್ಲಿ ನೀರಿನ ಬವಣೆ ನೀಗಿಸಲು ಕಳೆದ ಮೂರು ದಶಕಗಳ ನಾನಾ ರೀತಿಯ ಹೋರಾಟಗಳಿಗೆ ಆಳುವ ಸರ್ಕಾರಗಳು ಸ್ಪಂದಿಸಿಲ್ಲ. ಈ ನಿಟ್ಟಿನಲ್ಲಿ ಕ್ರಾಂತಿಕಾರಿ ಹೋರಾಟ ಅನಿವಾರ್ಯ ಆಗಿರುವುದರಿಂದ ನ್ಯಾಯಮೂರ್ತಿ ಜಸ್ಟೀಸ್ ಗೋಪಾಲಗೌಡರಂತಹ ಪ್ರಬುದ್ದ ನಾಯಕರೊನ್ನಳಗೊಂಡ ಸಮಿತಿ ರಚಿಸಲು ಅ.೨ ರಂದು ಜಲಾಗ್ರಹ ಸಮಾವೇಶ ಕೈಗೊಳ್ಳ ಲಾಗಿದೆ ಎಂದು ಶಾಶ್ವತ ನೀರಾವರಿ ಹೊರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ತಿಳಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ನದಿ ನಾಲೆಗಳ ನೀರಾವರಿ ಸೌಲಭ್ಯವಿಲ್ಲದ ಬಲಯಸೀಮೆಯ ಜಿಲ್ಲೆಗಳಲ್ಲಿ ಇಲ್ಲಿನ ಜನತೆ ಅಂತರ್ಜಲವನ್ನೇ ಹೆಚ್ಚಾಗಿ ಅವಲಂಭಿಸಿದ್ದಾರೆ. ಆದರೆ ಅಂತರ್ಜಲವು ಅಪಾಯಕಾರಿ ಮಟ್ಟಕ್ಕೆ ಕುಸಿದಿರುವುದರಿಂದ ನೀರಿನಲ್ಲಿ ಯುರೇನಿಯಂ, ನೈಟ್ರೇಟ್ ಅಂಶವುಳ್ಳ ವಿಷಕಾರಿ ಲವಣ ಪತ್ತೆ ಯಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ನೀರಾವರಿ ಸೌಲಭ್ಯ ಕಲ್ಪಿಸಬೇಕಾದ ಸರ್ಕಾರಗಳ ನಿರ್ಲಕ್ಷö್ಯದಿಂದ ಈ ಭಾಗದಲ್ಲಿ ತ್ಯಾಜ್ಯ ನೀರು, ಖಾಲಿ ಪೈಪುಗಳ ಪ್ರದರ್ಶನ ವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: Chikkaballapur News: ಸ್ವಚ್ಛತಾ ಹೀ ಸೇವಾ ಅಭಿಯಾನದಲ್ಲಿ ೫೩೧೮ ಬ್ಲಾಕ್ ಸ್ಪಾಟ್ ಗಳ ಸ್ವಚ್ಛತೆ: ಜಿಲ್ಲೆಯಾದ್ಯಂತ ಅಭಿಯಾನ ಯಶಸ್ವಿ

ಜಿಲ್ಲೆಯ ಜನತೆ ಇವೆಲ್ಲವುಗಳಿಂದ ಜಾಗೃತರಾಗಿ ಆಳುವ ಸರಕಾರಗಳನ್ನು ಬಡಿದೆಬ್ಬಿಸಲು ಹೋರಾಟ ಅನಿವಾರ್ಯವಾಗಿದೆ.ಆದರೆ ನಮ್ಮ ಹೋರಾಟದ ಹಾದಿಯನ್ನು ನಾವು ಬದಲಾಯಿಸ ಬೇಕಿದೆ. ಶಾಂತಿಯ ಹೋರಾಟ ಬಿಟ್ಟು ಕ್ರಾಂತಿಕಾರಿ ಹೋರಾಟದ ಹಾದಿಯನ್ನು ತುಳಿಯ ಬೇಕಾಗಿದೆ. ಈ ನಿಟ್ಟಿನಲ್ಲಿ ಹೋರಾಟಗಳನ್ನು ರೂಪಿಸಲು ನೀರಾವರಿ ಹೋರಾಟ ಸಮಿತಿ, ವಿವಿಧ ಸಂಘಟನೆಗಳ ಹೋರಾಟಗಾರರನ್ನೊಳಗೊಂಡಂತೆ ನ್ಯಾಯಮೂರ್ತಿ ವಿ.ಗೋಪಾಲಗೌಡರ ನೇತೃತ್ವದಲ್ಲಿ ಸಮಿತಿ ರವಿಸಲಾಗುತ್ತಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಹೇಳಿದರು.

ನಗರದ ಕೆಇಬಿ ಸಮುದಾಯ ಭವನದಲ್ಲಿ ಅ.೨ರಂದು ಜಲಾಗ್ರಹ ಸಮಾವೇಶ ಹಮ್ಮಿಕೊಂಡಿದ್ದು, ಈ ಸಮಾವೇಶದಲ್ಲಿ ಹೆಚ್ವಿನ ಸಂಖ್ಯೆಯಲ್ಲಿ ಜನಪರ ಕಾಳಜಿಯುಳ್ಳ ಸಂಘಸಂಸ್ಥೆಗಳ ನಾಯಕರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಜೆಜೆಹಳ್ಳಿ ನಾರಾಯಣಸ್ವಾಮಿ, ಮಳ್ಳೂರು ಹರೀಶ್, ಸುಷ್ಮಾ ಶ್ರೀನಿವಾಸ್, ರಾಮೇಗೌಡ, ಲೋಕೇಶ್, ಲಕ್ಷ್ಮಯ್ಯ, ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಮುನಿವೆಂಕಟ ರೆಡ್ಡಿ ಇತರರು ಇದ್ದರು.