Chikkaballapur News ಆರೋಪಿಯ ಶವಯಾತ್ರೆ ನಡೆಸಿದ ಆರ್‌ಪಿಐ ಮತ್ತು ಸಮತ ಸೈನಿಕ ದಳ ಕಾರ್ಯಕರ್ತರು
ನಗರದ ಅಂಬೇಡ್ಕರ್ ಭವನದಿಂದ ಅಂಬೇಡ್ಕರ್ ವೃತ್ತದ ವರೆಗೆ ನೂರಾರು ಸಂಖ್ಯೆಯಲ್ಲಿ ಪ್ರತಿ ಭಟನಾ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಸಮತಾ ಸೈನಿಕದಳ ಮತ್ತು ಮತ್ತುಆರ್‌ಪಿಐ ಕಾರ್ಯಕರ್ತರು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ( Chief Justice BR Gawai) ಅವರ ಮೇಲೆ ಶೂ ಎಸೆದ ಆರೋಪಿ ರಾಕೇಶ್ ಕಿಶೋರ್‌ನ ಶವಯಾತ್ರೆ ನಡೆಸಿ ತೀವ್ರ ಆಕ್ರೋಶ ಹೊರ ಹಾಕಿ ಗಮನ ಸೆಳೆದರು.

-

ಚಿಕ್ಕಬಳ್ಳಾಪುರ: ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕಪ್ಪು ಚುಕ್ಕೆಯಾದ ಮುಖ್ಯ ನ್ಯಾಯಮೂರ್ತಿ ಗವಾಯಿ (Chief Justice Gavai)ಅವರ ಮೇಲಿನ ಶೂ ಎಸೆದ ಪ್ರಕರಣ( Shoe throwing case)ವನ್ನು ಖಂಡಿಸಿ ಆರ್.ಪಿ .ಐ ಪಕ್ಷ ಮತ್ತು ಸಮತಾ ಸೈನಿಕ ದಳದ ನೇತೃತ್ವದಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಆರೋಪಿ ರಾಕೇಶ್ ಕಿಶೋರ್ ಅವರ ಶವಯಾತ್ರೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಿಂದ ಅಂಬೇಡ್ಕರ್ ವೃತ್ತದ ವರೆಗೆ ನೂರಾರು ಸಂಖ್ಯೆಯಲ್ಲಿ ಪ್ರತಿ ಭಟನಾ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಸಮತಾ ಸೈನಿಕದಳ ಮತ್ತು ಮತ್ತುಆರ್‌ಪಿಐ ಕಾರ್ಯ ಕರ್ತರು ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ( Chief Justice BR Gawai) ಅವರ ಮೇಲೆ ಶೂ ಎಸೆದ ಆರೋಪಿ ರಾಕೇಶ್ ಕಿಶೋರ್‌ನ ಶವಯಾತ್ರೆ ನಡೆಸಿ ತೀವ್ರ ಆಕ್ರೋಶ ಹೊರಹಾಕಿ ಗಮನ ಸೆಳೆದರು.
ಆರ್‌ಪಿಐ ಮತ್ತು ಸಮತ ಸೈನಿಕ ದಳದ ನೂರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ಕೆಲವು ಕಾಲ ಮಾನವ ಸರಪಳಿ ನಿರ್ಮಿಸಿ ಘಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ: Chikkaballapur(Chinthamani) News: ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ
ಈ ವೇಳೆ ಆರ್‌ಪಿಐ ದಕ್ಷಿಣ ಭಾರತದ ಪ್ರಧಾನ ಕಾರ್ಯದರ್ಶಿ ಜಿ.ಸಿ.ವೆಂಕಟರಮಣಪ್ಪ ಮಾತನಾಡಿ ಚೀಫ್ ಜಸ್ಟೀಸ್ ಮೇಲೆ ಶೂ ಎಸೆದ ಪ್ರಕರಣ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಡೆದ ಪ್ರಥಮ ಪ್ರಕರಣವಾಗಿದ್ದು ಒಕ್ಕೂಟ ವ್ಯವಸ್ಥೆಯಲ್ಲಿ ಇದೊಂದು ಕಪ್ಪು ಚುಕ್ಕೆಯಾಗಿದೆ.
ಘಟನೆಯ ನಂತರದಲ್ಲಿ ಸನಾತನ ಧರ್ಮದಲ್ಲಿ ನಂಬಿಕೆ ಇಟ್ಟಿರುವವನಂತೆ ನಟಿಸಿರುವ ರಾಕೇಶ್ ಕಿಶೋರ್ ದುರುದ್ದೇಶ ಪೂರಿತ ಪಿಐಎಲ್ ಸಲ್ಲಿಸಿದ್ದ ವೇಳೆ ಈ ಅರ್ಜಿಯನ್ನು ಮುಖ್ಯ ನ್ಯಾಯಾಧೀಶ ಬಿ.ಆರ್. ಗವಾಯಿ ಅವರಿದ್ದ ಪೀಠ ವಜಾಗೊಳಿಸಿತ್ತು.
ಇದನ್ನು ಅರಗಿಸಿಕೊಳ್ಳಲಾಗದ ವಕೀಲ ರಾಕೇಶ್ ಕಿಶೋರ್ ಸನಾತನ ಧರ್ಮದ ಮೇಲಿನ ಅಪಮಾನ ಸಹಿಸುವುದಿಲ್ಲ ಎಂದು ಸುಳ್ಳು ಹೇಳುತ್ತಾ ಶೂ ಎಸೆಯುವ ಮೂಲಕ ನ್ಯಾಯಾಧೀಶರಿಗೆ ಅಪಮಾನ ಮಾಡಿದ್ದಾರೆ.ತಮ್ಮ ರಕ್ಷಣೆಗಾಗಿ ಹಿಂದೂ ಧರ್ಮದ ಮೊರೆಹೋಗಿದ್ದಾನೆ. ಆದ್ದರಿಂದ ಈತನ ವಿರುದ್ಧ ದೇಶದ್ರೋಹದ ಕಾಯ್ದೆಯಡಿ ಕ್ರಮವಹಿಸಿ ಕಠಿಣ ಶಿಕ್ಷೆ ನೀಡಬೇಕು ಆಮೂಲಕ ಭವಿಷ್ಯದಲ್ಲಿ ಯಾರೂ ಕೂಡ ಈ ತರದ ಕುಕೃತ್ಯಗಳನ್ನು ಎಸೆಯಬಾರದು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ನಾವು ಈತನ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದ್ದು ರಾಕೇಶ್ ಕಿಶೋರ್ ತನ್ನ ರಕ್ಷಣೆಗಾಗಿ ಸನಾತನ ಧರ್ಮದ ಹೆಸರನ್ನು ಹೇಳಿದ್ದಾನೆ ವಿನಹ ಎಂದೂ ಕೂಡ ಈ ಧರ್ಮದ ಪರವಾಗಿ ವಕಾಲತ್ತು ವಹಿಸಿಲ್ಲ. ಆದ್ದರಿಂದ ಹಿಂದೂ ಧರ್ಮದ ಮುಖಂಡರು ಈತನ ಮೇಲೆ ಶಿಕ್ಷೆ ಆಗುವಂತೆ ಒತ್ತಡ ಹೇರಬೇಕು ಎಂದರು.
ಭಾರತ ದೇಶದ ಸಮಗ್ರತೆ ಮತ್ತು ಐಕ್ಯತೆಯನ್ನು ಕಾಪಾಡುತ್ತಿರುವ ಸಂವಿಧಾನಬದ್ಧ ಪೀಠದ ಮೇಲೆ ದುರಹಂಕಾರದಿಂದ ಶೂ ಎಸೆದಿರುವುದನ್ನು ೧೪೦ ಕೋಟಿ ಭಾರತೀಯರು ಖಂಡಿಸಬೇಕು ಈತನ ಮೇಲೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಬೇಕೆಂದು ಮನವಿ ಮಾಡಿದರು.