ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಅ.26ಕ್ಕೆ ಸ್ಮೈಲ್ಸ್ ಆಸ್ಪತ್ರೆ ವತಿಯಿಂದ ಉಚಿತ ಫೈಲ್ಸ್ ತಪಾಸಣಾ ಶಿಬಿರ

ಚಿಕ್ಕಬಳ್ಳಾಪುರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಶಾಲೆಯ ಆವರಣದಲ್ಲಿ ಲಯನ್ಸ್ ಕ್ಲಬ್ ಚಿಕ್ಕಬಳ್ಳಾ ಪುರದ ಸಹಯೋಗ ದಲ್ಲಿ ಅಕ್ಟೋಬರ್ ೨೬ರಂದು ಭಾನುವಾರ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಇದರಲ್ಲಿ ಸ್ಮೈಲ್ಸ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಸಿ.ಎಂ.ಪರಮೇಶ್ವರ್ ಭಾಗಿ ಯಾಗಲಿದ್ದು ನಾಗರೀಕರಿಗೆ ಮೂಲವ್ಯಾದಿ ಸಂಬಂಧಿ ಯಾವುದೇ ಸಮಸ್ಯೆಯಿದ್ದರೂ ವೈದ್ಯರಿಂದ ಆಪ್ತ ಸಮಾಲೋಚನೆ ಪಡೆಯಬಹುದು

ಚಿಕ್ಕಬಳ್ಳಾಪುರ : ಅಕ್ಟೋಬರ್ ೨೬ ರ ಭಾನುವಾರ ಭಾರತದ ಏಕೈಕ ವಿಶೇಷ ಪೈಲ್ಸ್ ಆಸ್ಪತ್ರೆಯಾದ ಸ್ಮೈಲ್ಸ್ ವತಿಯಿಂದ ಮೂಲವ್ಯಾಧಿ, ಫಿಷರ್, ಫಿಸ್ತುಲಾ ಮತ್ತು ಜೀರ್ಣಕಾರಿ ಖಾಯಿಲೆಗಳಿಗೆ ಲೇಸರ್ ಚಿಕಿತ್ಸೆ ಮೂಲಕ ಗುಣಪಡಿಸುವ ಕುರಿತು ವಿಶೇಷ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ಕ್ಯಾಂಪ್ ಕೋಆರ್ಡಿನೇಟರ್ ಆರ್.ದೀಪಕ್‌ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಚಿಕ್ಕಬಳ್ಳಾಪುರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಶಾಲೆಯ ಆವರಣದಲ್ಲಿ ಲಯನ್ಸ್ ಕ್ಲಬ್ ಚಿಕ್ಕಬಳ್ಳಾಪುರದ ಸಹಯೋಗ ದಲ್ಲಿ ಅಕ್ಟೋಬರ್ ೨೬ರಂದು ಭಾನುವಾರ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಇದರಲ್ಲಿ ಸ್ಮೈಲ್ಸ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಸಿ.ಎಂ.ಪರಮೇಶ್ವರ್ ಭಾಗಿಯಾಗಲಿದ್ದು ನಾಗರೀಕರಿಗೆ ಮೂಲವ್ಯಾದಿ ಸಂಬಂಧಿ ಯಾವುದೇ ಸಮಸ್ಯೆಯಿದ್ದರೂ ವೈದ್ಯರಿಂದ ಆಪ್ತ ಸಮಾಲೋಚನೆ ಪಡೆಯಬಹುದು.

ಇದನ್ನೂ ಓದಿ: Chikkaballapur News: ಇಂದಿನಿಂದ ನಾಗಾರ್ಜುನ ತಾಂತ್ರಿಕ ಕಾಲೇಜಿನಲ್ಲಿ ೩ ದಿನಗಳ ೬ನೇ ಅಂತರಾಷ್ಟ್ರೀಯ ತಾಂತ್ರಿಕ ಸಮ್ಮೇಳನ

ಮಹಿಳೆಯರಿಗೆ ಮಹಿಳಾ ವೈದ್ಯರಿಂದಲೇ ತಪಾಸಣೆ ಮಾಡಿಸಲಾಗುವುದು.ಯಾರಿಗೆಲ್ಲಾ ಮೂಲ ವ್ಯಾಧಿ ಸಂಬಂಧಿತ ಫೈಲ್ಸ್ ಅಥವಾ ಮೊಳೆರೋಗ, ಫಿಷರ್, ಫಿಸ್ಟುಲಾ, ಮಲಬದ್ಧತೆ, ದೊಡ್ಡಕರುಳು ಖಾಯಿಲೆಗಳಿಗೆ ಶಾಶ್ವತ ಪರಿಹಾರ ಸೂಚಿಸುತ್ತಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಜನತೆ ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳಬಹುದು. ಭಾನುವಾರ ಬೆಳಿಗ್ಗೆ ೧೦ಗಂಟೆಯಿಂದ ಸಂಜೆ ೫ ಗಂಟೆಯ ತನಕ ಶಿಬಿರ ನಡೆಯಲಿದೆ. ರೋಗಬಾಧೆಯಿಂದ ನರಳುತ್ತಿರುವವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಯಶಸ್ವಿನಿ ಯೋಜನೆಯಡಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸ್ಮೆöÊಲ್ಸ್ ಆಸ್ಪತ್ರೆಯ ದೂರವಾಣಿ- ೯೩೫೫೫ ೨೧೪೮೧, ಕ್ಯಾಂಪ್‌ ಕೋಆರ್ಡಿನೇಟರ್ ದೀಪಕ್ ಕುಮಾರ್.ಆರ್-೯೧೬೪೫೫೮೮೪೪ ಸಂಖ್ಯೆಗೆ ಕರೆ ಮಾಡಬಹುದು ಎಂದು ಮನವಿ ಮಾಡಿದ್ದಾರೆ.