ಗೌರಿಬಿದನೂರು: ನಗರದ ಎಎಸ್‌ಎಸ್‌ಇಎ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡದಲ್ಲಿ ವಿದ್ಯಾರ್ಥಿನಿಯರಿಗಾಗಿ ‘ತಂಗಿ ಮನೆ- ಪಿಂಕ್ ರೂಂ’ (ಹೆಣ್ಣು ಮಕ್ಕಳ ವಿಶ್ರಾಂತಿ ಕೊಠಡಿ) ಉದ್ಘಾಟನೆಯಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಜಿ.ವಿ ಶ್ರೀನಿವಾಸ್ ಮಾತನಾಡಿ, ಈ ವಿಶ್ರಾಂತಿ ಕೊಠಡಿಯು ವಿದ್ಯಾರ್ಥಿನಿಯರು ತಮ್ಮ ಮಾಸಿಕ ಚಕ್ರದ ಅವಧಿಯಲ್ಲಿ ವಿಶ್ರಾಂತಿ ಪಡೆಯಲು ಸುರಕ್ಷಿತ ಮತ್ತು ಆರಾಮದಾಯಕ ಸ್ಥಳವನ್ನು ಒದಗಿಸುತ್ತದೆ. ಈ ಸೌಲಭ್ಯವನ್ನು ಬೆಂಗಳೂರಿನ ಹಾರ್ಟ್ ಆಫ್ ಗೀವಿಂಗ್" ನೀಡುವ ಫೌಂಡೇಶನ್, ಇವರ ವತಿಯಿಂದ ಆಂಥೋನಿ ಸಾಜಿತ್ ಮತ್ತು ಅವರ ತಂಡದ ಸಹಕಾದೊಂದಿಗೆ ಸ್ಥಾಪಿಸಲಾಗಿದೆ.
ಇದನ್ನೂ ಓದಿ: Gauribidanur News: ಗೌರಿಬಿದನೂರು ಮನೆ ಮನೆಗೂ ಪೊಲೀಸ್ ಭೇಟಿ
ಕಾಲೇಜಿನ ಪರವಾಗಿ ಅವರಿಗೆ ಕೃತಜ್ಞತೆಯನ್ನು ಅರ್ಪಿಸುವುದಾಗಿ ತಿಳಿಸಿದ ಅವರು ಹಿಂದೆ ವಿದ್ಯಾರ್ಥಿನಿಯರು ಈ ಅವಧಿಯಲ್ಲಿ ಮನೆಗೆ ತೆರಳುತ್ತಿದ್ದರಿಂದ ಹಾಜರಾತಿ ಪ್ರಮಾಣ ಕಡಿಮೆ ಆಗುತ್ತಿತ್ತು. ಈ ಹೊಸ ಸೌಲಭ್ಯದಿಂದಾಗಿ ಅವರು ಕಾಲೇಜಿನಲ್ಲಿಯೇ ವಿಶ್ರಾಂತಿ ಪಡೆದು ತರಗತಿಗಳಿಗೆ ಹಾಜರಾಗಬಹುದು,ಈ ಉಪಕ್ರಮವು ವಿದ್ಯಾರ್ಥಿನಿಯರ ಗೈರು ಹಾಜರಾಗುವುದನ್ನು ಕಡಿಮೆ ಮಾಡುವುದರ ಜೊತೆಗೆ, ಮಾಸಿಕ ಆರೋಗ್ಯದ ಅರಿವು ಕೂಡ ಬೆಳೆಸುತ್ತದೆ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ನಿವೃತ್ತ ಉಪನಿರ್ದೇಶಕ ಟಿ.ಅಶ್ವತ್ಥರೆಡ್ಡಿ ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.