ಗೌರಿಬಿದನೂರು : ದಿವಂಗತ ಪ್ರೊ ಬಿ ಗಂಗಾಧರ ಮೂರ್ತಿ ಅವರ ಆದರ್ಶಗಳು ನಮಗೆ ಎಂದೆಂದಿಗೂ ಆಚರಣೆಗೆ ಯೋಗ್ಯ ಎಂದು ಪ್ರೊ ಬಿಜಿಎಂ ಸಾಮಾಜಿಕ ಸಾಂಸ್ಕೃತಿಕ ಪರಿವರ್ತನಾ ಸಂಸ್ಥೆಯ ಕಾರ್ಯದರ್ಶಿ ಎಂಕೆ ರಾಮಚಂದ್ರ ತಿಳಿಸಿದರು.
ನಗರದಲ್ಲಿನ ಕರೇಕಲ್ಲಹಳ್ಳಿಯ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಗುರುವಾರ ಪ್ರೊ ಬಿ.ಜಿ.ಎಂ. ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿವರ್ತನಾ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಪ್ರ‍್ರೊ.ಗಂಗಾಧರ ಮೂರ್ತಿ ಅವರ ಎಂಬತ್ತನೇ ಜನ್ಮ ದಿನಾಚರಣೆ ಹಾಗು ಸಂಸ್ಮರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯ ಕಂಡ ಶ್ರೇಷ್ಠ ಸಾಹಿತಿ, ಅಲ್ಲದೇ ದಲಿತ, ಕನ್ನಡಪರ, ರೈತ ಚಳುವಳಿಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಇಂದಿನ ಯುವ ಜನತೆಗೆ ಪ್ರೇರಣೆಯಾಗಿದ್ದರು. ಅವರ ಶಿಷ್ಯ ಕೂಟ ಅವರ ಆಶಯ ಗಳನ್ನು ನೆರವೇರಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: Gauribidanur News: ಪೋಷಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು: ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೀ ಗಣೇಶ್
ವಿದುರಾಶ್ವತ್ಥದಲ್ಲಿ ವೀರ ಸ್ಥೂಪ, ನಗರದ ಎಂ.ಜಿ ವೃತ್ತ ದಲ್ಲಿ ಗಾಂಧಿ ಸ್ತೂಪ, ಡಾ.ಅಂಬೇಡ್ಕರ್ ಸಮಾನತಾ ಸೌಧ ನಿರ್ಮಾಣಕ್ಕೆ ಇವರೇ ಪ್ರಮುಖ ಕಾರಣ ಕರ್ತರು.ಸಮಾನತಾ ಸೌಧದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷಗಳಿಗೆ ತರಬೇತಿ ನೀಡಿ,ಆ ಮೂಲಕ ತಾಲೂಕಿನ ಯುವ ಜನತೆ ಉನ್ನತ ಹುದ್ದೆಗಳಿಗೆ ಹೋಗಬೇಕೆಂಬ ಬಯಕೆ ಹಾಗೂ ಆಶಯ ಅವರದಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ತಳಸಮುದಾಯಗಳ ಸಮನ್ವಯ ವೇದಿಕೆಯ ಸಹಕಾರದಿಂದ ಶಾಲಾ ಮಕ್ಕಳಿಗೆ ನೋಟು ಪುಸ್ತಕಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹೆಚ್ವಿ ವೆಂಕಟೇಶ್,ಬಿಎನ್ ಚಂದ್ರಪ್ಪ,ನಾಗರಾಜಪ್ಪ, ನಂಜುಂಡಪ್ಪ, ತ್ಯಾಗರಾಜು, ನಿರಂಜನಮೂರ್ತಿ, ಆನಂದ ರಾಮ್, ಕುಮಾರ್,ಜಿವಿ ಶ್ರೀನಿವಾಸ್, ಗೌರೀಶ್, ವಿಶ್ವನಾಥನಾಯಕ, ರಾಮಕೃಷ್ಣ, ಗೌರಮ್ಮ ಬಿಜಿಎಂ, ಲಕ್ಷ್ಮಣಪ್ಪ, ಪ್ರದೀಪ್ ಮುಂತಾದವರು ಭಾಗವಹಿಸಿದ್ದರು.