Gauribidanur News: ಪೋಷಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು: ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೀ ಗಣೇಶ್
ಹಿಂದೆ ಅಡಿಗೆ ಮನೆಗೆ ಮಾತ್ರ ಸೀಮಿತವಾದ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿದಿ ದ್ದಾರೆ. ಅವರನ್ನು ಪ್ರೋತ್ಸಾಹಿಸುವ ಹೊಣಗಾರಿಕೆ ಪೋಷಕರ ಮೇಲಿದೆ ಎಂದರು. ಬಾಲ್ಯ ವಿವಾಹ ಗಳನ್ನು ಮಾಡಬೇಡಿ.ಹೆಣ್ಣು ಮಕ್ಕಳಿಗಾಗಿ ನ್ಯಾಯಾಲಯದ ಆವರಣದಲ್ಲಿ ಉಚಿತ ನ್ಯಾಯ ಸಲಹೆ ನೀಡುವ ಅವಕಾಶಗಳನ್ನು ಸರ್ಕಾರ ಒದಿಗಿಸಿದೆ.

ಪೋಷಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು.ಹಿಂದೆ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುವದೇ ದುಸ್ತರವಾಗಿತ್ತು. ಇಂದು ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿದಿದ್ದಾರೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೀಗಣೇಶ್ ತಿಳಿಸಿದರು. -

ಗೌರಿಬಿದನೂರು : ಪೋಷಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು.ಹಿಂದೆ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುವದೇ ದುಸ್ತರವಾಗಿತ್ತು. ಇಂದು ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿದಿದ್ದಾರೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೀಗಣೇಶ್ ( Chief Civil Judge Shri Ganesh) ತಿಳಿಸಿದರು.
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ತಾಲೂಕು ನ್ಯಾಯಾಲಯ ಮತ್ತು ವಕೀಲರ ಸಂಘ ಮುಂತಾದ ಸರ್ಕಾರೀ ಇಲಾಖೆಗಳಿಂದ ನಡೆದ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ ಹಾಗು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: Gauribadinur News: ಕಾದಲವೇಣಿ ಗ್ರಾ.ಪಂ:ಉಪಾಧ್ಯಕ್ಷರಾಗಿ ಗೋಪಾಲ್ ಆಯ್ಕೆ
ಹಿಂದೆ ಅಡಿಗೆ ಮನೆಗೆ ಮಾತ್ರ ಸೀಮಿತವಾದ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿದಿ ದ್ದಾರೆ. ಅವರನ್ನು ಪ್ರೋತ್ಸಾಹಿಸುವ ಹೊಣಗಾರಿಕೆ ಪೋಷಕರ ಮೇಲಿದೆ ಎಂದರು. ಬಾಲ್ಯ ವಿವಾಹ ಗಳನ್ನು ಮಾಡಬೇಡಿ.ಹೆಣ್ಣು ಮಕ್ಕಳಿಗಾಗಿ ನ್ಯಾಯಾಲಯದ ಆವರಣದಲ್ಲಿ ಉಚಿತ ನ್ಯಾಯ ಸಲಹೆ ನೀಡುವ ಅವಕಾಶಗಳನ್ನು ಸರ್ಕಾರ ಒದಿಗಿಸಿದೆ. ಇದನ್ನು ಹೆಣ್ಣುಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಮಾನಸಿಕ ಆರೋಗ್ಯ ಚಿಕಿತ್ಸಾ ವೈದ್ಯರಾದ ಡಾ ಲಾವಣ್ಯ ಮಾತನಾಡಿ ಚಿಕ್ಕ ತನದಿಂದಲೇ ಪೋಷಕರು ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.ಮಕ್ಕಳಲ್ಲಿ ಮಾನಸಿಕ ಅನಾರೋಗ್ಯ ಕಂಡುಬAದಲ್ಲಿ ವೈದ್ಯರನ್ನು ಸಂಪರ್ಕಿಸಬೇಕೆAದರು.ಮಾನಸಿಕ ಆರೋಗ್ಯದ ಬಗ್ಗೆ ವಿಧ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ವಿಜಯಕುಮಾರ್, ಪ್ರಾಂಶುಪಾಲ ಮಂಜು ನಾಥ್, ಗೋಪಾಲ್, ನಾಗರಾಜು, ನರಸಿಂಹಮೂರ್ತಿ, ಸತೀಶ್ ಮುಂತಾದವರು ಭಾಗವಹಿಸಿದ್ದರು.