ಚಿಕ್ಕಮಗಳೂರು: ಹೈಕೋರ್ಟ್ ಆದೇಶದಂತೆ ನಡೆಸಿದ್ದ ಶೃಂಗೇರಿ ಕ್ಷೇತ್ರದ (Sringeri assembly constituency) ಮರು ಮತ ಎಣಿಕೆ ಪ್ರಕ್ರಿಯೆ ಮಾ.3ರಂದು ಭಾನುವಾರ ಬೆಳಗಿನ ಜಾವ ಮುಕ್ತಾಯಗೊಂಡಿದೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಜಯಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆ. ಕೋರ್ಟ್ ನಿರ್ದೇಶನದಂತೆ ನಡೆದ ಮರು ಮತಎಣಿಕೆ ವೇಳೆ ಜೀವರಾಜ್ ಅವರಿಗೆ ಮುನ್ನಡೆ ಲಭಿಸಿತ್ತು. ಫಲಿತಾಂಶ ಘೋಷಣೆಯಷ್ಟೇ ಬಾಕಿ ಇತ್ತು. ಇದೀಗ ಫಲಿತಾಂಶ ಹೊರ ಬಿದ್ದಿದ್ದು ಕಾಂಗ್ರೆಸ್‌ಗೆ ಶಾಕ್ ಎದುರಾಗಿದೆ.
1,540 ಮತಗಳಲ್ಲಿ ಶನಿವಾರ ಮರುಎಣಿಕೆ ವೇಳೆ 255 ಮತಗಳು ಅಸಿಂಧುವಾಗಿದ್ದವು. , ಬಿಜೆಪಿ ಅಭ್ಯರ್ಥಿಗೆ ಬಂದಿದ್ದ ಜೀವರಾಜ್ ಗೆ ಬಂದಿದ್ದ ಮತಗಳಲ್ಲಿ 2 ಮತಗಳು ಅಮಾನ್ಯವಾಗಿದೆ. ಈ ಮೂಲಕ ಜೀವರಾಜ್ ಅವರು ಸುಮಾರು 52 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ ಎಂದು ತಿಳಿದು ಬಂದಿತ್ತು. 2023 ಚುನಾವಣೆಯಲ್ಲಿ ರಾಜೇಗೌಡರಿಗೆ 201 ಮತಗಳ ಗೆಲುವು ಸಿಕ್ಕಿತ್ತು. 1822 ಅಂಚೆ ಮತಗಳಲ್ಲಿ 279 ಮತಗಳು ತಿರಸ್ಕಾರಗೊಂಡಿದ್ದವು. ಮೊದಲು 279 ಮತಪತ್ರ ಎಣಿಕೆ ಕಾರ್ಯ, ನಂತರ 1540 ಮತಗಳ ಎಣಿಕೆ ಕಾರ್ಯ, 3 ನೋಟಾ ಮತಗಳು ಸೇರಿ ಒಟ್ಟು 1822 ಅಂಚೆ ಮತಗಳು ಬಿದ್ದಿದ್ದವು. ಅಭ್ಯರ್ಥಿಗಳು ಸಮ್ಮುಖದಲ್ಲಿ ಈಗ ಮತ ಎಣಿಕೆ ಕಾರ್ಯ ನಡೆಸಲಾಗಿತ್ತು. 2023ರಲ್ಲಿ 12 ಜನ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ಸಿನ ಟಿ.ಡಿ.ರಾಜೇಗೌಡ 201 ಮತಗಳ ಅಂತರದಿಂದ ಗೆಲುವು ಕಂಡಿದ್ದರು. 2023ರಲ್ಲಿ ಮತ ಎಣಿಕೆಯ ಸಂದರ್ಭದಲ್ಲಿ ಇಬ್ಬರು ಅಭ್ಯರ್ಥಿಗಳು ಗೈರಾಗಿದ್ದರು.
ಮತ ಮರುಎಣಿಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಚುನಾವಣಾಧಿಕಾರಿ ಗೌರವ್ ಶೆಟ್ಟಿ "2023ರ ಚುನಾವಣೆಯಲ್ಲಿ ಎಣಿಕೆಯಲ್ಲಿ ಚಲಾವಣೆಯಾಗಿದ್ದ 1,822 ಅಂಚೆ ಮತಗಳ ಪೈಕಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಗೆ 692 ಮತಗಳು ಲಭಿಸಿದರೆ, ಶಾಸಕ ಟಿ.ಡಿ.ರಾಜೇಗೌಡಗೆ 569 ಮತ ಬಿದ್ದಿತ್ತು. ಆದರೆ, ಈಗಿನ ಮತ ಮರುಎಣಿಕೆಯಲ್ಲಿ ಜೀವ್ ರಾಜ್ ಅವರಿಗೆ690 ಮತಗಳು ಲಭಿಸಿದೆ, ಆದರೆ, ಟಿ.ಡಿ.ರಾಜೇಗೌಡ ಅವರ ಮತಗಳು 255 ಅಮಾನ್ಯವಾಗಿದ್ದು, ಈ ಮೂಲಕ 314ಕ್ಕೆ ಇಳಿಕೆಯಾಗಿದೆ" ಎಂದು ತಿಳಿಸಿದ್ದಾರೆ.
ಇದೀಗ ಈ ಕುರಿತು ಬಿಜೆಪಿ ನಾಯಕ ಆರ್.ಅಶೋಕ್ "ಶೃಂಗೇರಿಯಲ್ಲಿ ಕಾಂಗ್ರೆಸ್ ಅಸಿಂಧು-ಸತ್ಯಕ್ಕೆ ಜಯ: ವೋಟ್ ಚೋರ್ ಕೌನ್ ಹೈ, ರಾಹುಲ್ ಗಾಂಧಿ ಹೈ" ಎಂಬ ಪೋಸ್ಟ್ರ್ ಹಂಚಿಕೊಂಡಿದ್ದು, ಇದಕ್ಕೆ ಶೀರ್ಷಿಕೆಯಾಗಿ "ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಫಲಿತಾಂಶ ಕಾಂಗ್ರೆಸ್ ಪಕ್ಷದ ಕರಾಳ ಮುಖವನ್ನ ಮತ್ತೊಮ್ಮೆ ಬಯಲು ಮಾಡಿದ್ದು, 2023ರಲ್ಲಿ ಶೃಂಗೇರಿಯಲ್ಲಿ ಅಕ್ರಮವಾಗಿ ತಿರಸ್ಕರಿಸಿದ್ದ ಮತಗಳನ್ನು ಪ್ರಶ್ನಿಸಿ ಕಾನೂನು ಹೋರಾಟ ಮಾಡುವ ಮೂಲಕ ಇಂದು ಬಿಜೆಪಿ ಅಭ್ಯರ್ಥಿ ಜೀವರಾಜ್ ನ್ಯಾಯ ಪಡೆದುಕೊಂಡಿದೆ. ಇದು ಪ್ರಜಾಪ್ರಭುತ್ವದ ಗೆಲುವು. ಶೃಂಗೇರಿಯ ಮತದಾರರ ಮತದ ಮೌಲ್ಯಕ್ಕೆ ಸಂದ ಜಯವಾಗಿದೆ" ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.