Chikkamagaluru News: ಹಸುವಿನ ಬಾಲಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದ ಬಾಲಕ; ಪ್ರಕರಣ ದಾಖಲು
Set fire to the cow's tail: ಕೃತ್ಯ ಎಸಗಿದ ಬಾಲಕನ ವಿರುದ್ಧ ಚಿಕ್ಕಮಗಳೂರಿನ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಮಗನಿಗೆ ಥಳಿಸಿದ ಹಿಂದೂ ಕಾರ್ಯಕರ್ತರ ಮೇಲೂ ಬಾಲಕನ ತಾಯಿ ದೂರು ನೀಡಿದ್ದಾರೆ. ಅಪ್ರಾಪ್ತ ಬಾಲಕನ ಮನಸ್ಥಿತಿ ಬಗ್ಗೆ ಸ್ಥಳೀಯರು ಆತಂಕ ಹೊರಹಾಕಿದ್ದಾರೆ.

-

ಚಿಕ್ಕಮಗಳೂರು: ನಗರದಲ್ಲಿ ಬಾಲಕನೊಬ್ಬ, ಹಸುವಿನ ಬಾಲಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದ ಘಟನೆ ನಡೆದಿದ್ದು, ಆತನನ್ನು ಹಿಂದೂ ಕಾರ್ಯಕರ್ತರು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ವಿಜಯಪುರ ಬಡಾವಣೆಯಲ್ಲಿ (Chikkamagaluru News) 16 ವರ್ಷದ ಬಾಲಕ, ಹಸುವಿನ ಬಾಲಕ್ಕೆ ಸೆಂಟ್ ಸ್ಪ್ರೇ ಮಾಡಿ ಬೆಂಕಿ ಹಚ್ಚಿದ್ದಾನೆ. ಬಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕೃತ್ಯ ಎಸಗಿದ ಬಾಲಕನ ವಿರುದ್ಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಮಗನಿಗೆ ಥಳಿಸಿದ ಹಿಂದೂ ಕಾರ್ಯಕರ್ತರ ಮೇಲೂ ಬಾಲಕನ ತಾಯಿ ದೂರು ನೀಡಿದ್ದಾರೆ. ಅಪ್ರಾಪ್ತ ಬಾಲಕನ ಮನಸ್ಥಿತಿ ಬಗ್ಗೆ ಸ್ಥಳೀಯರು ಆತಂಕ ಹೊರಹಾಕಿದ್ದಾರೆ. ಬಾಲಕ ಕೃತ್ಯಕ್ಕೆ ಬಳಸಿದ ಲೈಟರ್ ಹಾಗೂ ಸೆಂಟ್ ಬಾಟಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕ್ರಮಕ್ಕೆ ಮುಂದಾಗಿದ್ದಾರೆ.
ಹನೂರಿನಲ್ಲಿ ಹುಲಿ ಹತ್ಯೆ, ಒಬ್ಬನ ಬಂಧನ, ಮತ್ತೊಬ್ಬ ಪರಾರಿ
ಚಾಮರಾಜನಗರ: ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದಲ್ಲಿ (Male Mahadeshwar hill) ವಿಷವಿಕ್ಕಿ 5 ಹುಲಿಗಳ ಹತ್ಯೆ (Tiger kill) ಪ್ರಕರಣ ಮಾಸುವ ಮುನ್ನವೇ ಎರಡು ದಿನಗಳ ಹಿಂದೆ ಜಿಲ್ಲೆಯಲ್ಲಿ ಮತ್ತೊಂದು ಹುಲಿಯನ್ನು ವಿಷವಿಕ್ಕಿ ಹತ್ಯೆ ಮಾಡಲಾಗಿದೆ. ಪ್ರಕರಣ ಸಂಬಂಧ ಒಬ್ಬ ಶಂಕಿತನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಶಂಕಿತ ಪರಾರಿಯಾಗಿದ್ದಾನೆ.
ಹನೂರು ವಲಯದ ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯ ಅರ್ಧ ದೇಹ ಮಣ್ಣಿನಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇನ್ನರ್ಧ ದೇಹಕ್ಕಾಗಿ ಅರಣ್ಯ ಸಿಬ್ಬಂದಿ ಶೋಧ ಕಾರ್ಯ ನಡೆಸಿದಾಗ ಅನತಿ ದೂರದಲ್ಲಿರುವ ಪೊಟರೆಯೊಂದರಲ್ಲಿ ಹುಲಿಯ ಇನ್ನರ್ಧ ದೇಹವನ್ನು ಬಚ್ಚಿಟ್ಟಿರುವುದು ಪತ್ತೆಯಾಗಿತ್ತು. ಮುಖ್ಯ ಆರೋಪಿ ಪಚ್ಚೆದೊಡ್ಡಿ ಗ್ರಾಮದ ಪಚ್ಚಮಲ್ಲು ಆಲಿಯಾಸ್ ಸಣ್ಣ ಬಂಧನವಾಗಿದ್ದು, ಮತ್ತೆ ಇಬ್ಬರು ಶಂಕಿತ ವ್ಯಕ್ತಿಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ಇದೇ ವೇಳೆ ಇನ್ನೊಬ್ಬ ಶಂಕಿತ ಪರಾರಿಯಾಗಿದ್ದು, ಎಲ್ಲಾ ಶಂಕಿತ ಆರೋಪಿಗಳು ಹನೂರಿನ ಪಚ್ಚೆದೊಡ್ಡಿ ಗ್ರಾಮದವರಾಗಿದ್ದಾರೆ.
ಇದನ್ನೂ ಓದಿ: Tiger Kill: ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೊಂದು ಹುಲಿ ಹತ್ಯೆ, ತನಿಖೆಗೆ ಆದೇಶ
12 ವರ್ಷ ವಯಸ್ಸಿನ 250 ಕೆಜಿಗೂ ಹೆಚ್ಚು ತೂಕದ ಭಾರೀ ಗಾತ್ರದ ಹುಲಿ ಇದಾಗಿದ್ದು, ಇದರ ಹಲ್ಲು ಹಾಗು ಉಗುರುಗಳನ್ನು ಕಿತ್ತಿರಲಿಲ್ಲ. ಹುಲಿಯನ್ನು ಕೊಡಲಿಯಿಂದ ಮೂರು ತುಂಡುಗಳಾಗಿ ಮಾಡಿ ಭೀಕರವಾಗಿ ಕೊಲ್ಲಲಾಗಿದೆ. ಹುಲಿ ಹತ್ಯೆ ಮಾಹಿತಿ ತಿಳಿದ ಕೂಡಲೇ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತನಿಖೆ ನಡೆಸಲು ಪಿಸಿಸಿಎಫ್ ಸ್ಮಿತಾ ಬಿಜ್ಜೂರು ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದು, ಎಂಟು ದಿನಗಳಲ್ಲಿ ತನಿಖಾ ವರದಿ ಸಲ್ಲಿಸಲು ಸೂಚಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿರುವ ಪ್ರಾಣಿಗಳ ಹತ್ಯೆ ಹಾಗು ಬೇಟೆ ಪ್ರಕರಣಗಳ ಬಗ್ಗೆ ವರದಿ ಸೇರಿದಂತೆ ಕಳ್ಳ ಬೇಟೆಗಾರರನ್ನು ಕೂಡಲೇ ಪತ್ತೆ ಹಚ್ಚುವುದಲ್ಲದೆ ಕರ್ತವ್ಯ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸುವಂತೆ ಅವರು ಸೂಚಿಸಿದ್ದಾರೆ.