Srinivasa Sagara Dam: ಗಂಗಮ್ಮ ದೇವಿ ವಿಗ್ರಹದ ಮೇಲೆ ಕಾಲಿಟ್ಟು ಅನ್ಯ ಕೋಮಿನ ಯುವತಿಯರ ದುರ್ವರ್ತನೆ; ವಿಡಿಯೋ ವೈರಲ್
chikkaballapur Falls: ಚಿಕ್ಕಬಳ್ಳಾಪುರದ ಶ್ರೀನಿವಾಸಸಾಗರ ಜಲಾಶಯದ ಬಳಿ ನೀರಿನಲ್ಲಿ ಆಟವಾಡುವ ಸಮಯದಲ್ಲಿ ಗಂಗಮ್ಮ ದೇವಿ ವಿಗ್ರಹದ ಮೇಲೆ ಅನ್ಯ ಕೋಮಿನ ಯುವತಿಯರು ಕಾಲಿಟ್ಟು ದುರ್ವರ್ತನೆ ತೋರಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಹಿಂದೂಪರ ಮುಖಂಡರುಗಳಿಂದ ಆಕ್ರೋಶ ವ್ಯಕ್ತವಾಗಿದೆ.

-

ಚಿಕ್ಕಬಳ್ಳಾಪುರ, ಅ. 08: ಗಂಗಮ್ಮ ದೇವಿ ವಿಗ್ರಹದ ಮೇಲೆ ಕಾಲಿಟ್ಟು ಅನ್ಯಕೋಮಿನ ಯುವತಿಯರು ದುರ್ವರ್ತನೆ ತೋರಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರದ (Srinivasa Sagara) ಬಳಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಿಂದೂಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಶ್ರೀನಿವಾಸಸಾಗರ ಜಲಾಶಯದ ಬಳಿ ಮೇಲಿನಿಂದ ಧುಮುಕುವ ನೀರಿನಲ್ಲಿ ಆಟವಾಡುವ ಸಮಯದಲ್ಲಿ ಗಂಗಮ್ಮ ದೇವಿ ವಿಗ್ರಹದ ಮೇಲೆ ಮಹಿಳೆಯರು ಕಾಲಿಟ್ಟು ದುರ್ವರ್ತನೆ ತೋರಿದ್ದಾರೆ.
ಯುವತಿಯರ ದುರ್ವರ್ತನೆಯ ವಿಡಿಯೋ ಇಲ್ಲಿದೆ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಹಿಂದೂಪರ ಮುಖಂಡರುಗಳಿಂದ ಆಕ್ರೋಶ ವ್ಯಕ್ತವಾಗಿದೆ. ಕಳೆದ ಮೂರು ದಿನಗಳ ಹಿಂದೆ ಜಲಾಶಯಕ್ಕೆ ಬಂದವರಿಂದ ಕೃತ್ಯ ನಡೆದಿದೆ. ಈ ರೀತಿ ದುರ್ವರ್ತನೆ ತೋರಿದವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಈ ಸುದ್ದಿಯನ್ನೂ ಓದಿ | Madduru Stone Pelting: ಮದ್ದೂರು ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪೂರ್ವಯೋಜಿತ ಕೃತ್ಯವೇ? ಬಯಲಾಯ್ತು ಸ್ಫೋಟಕ ಸಂಗತಿ
ಮಾರ್ಕೋನಹಳ್ಳಿ ಡ್ಯಾಂನಲ್ಲಿ 6 ಮಂದಿ ನೀರುಪಾಲು

ತುಮಕೂರು: ಜಿಲ್ಲೆಯ ಕುಣಿಗಲ್‌ನಲ್ಲಿರುವ (Tumkur news) ಮಾರ್ಕೊನಹಳ್ಳಿ ಡ್ಯಾಂ (Markonahalli Dam) ಹಿನ್ನೀರಿನಲ್ಲಿ 6 ಮಂದಿ ಕೊಚ್ಚಿ (Drowned) ಹೋಗಿದ್ದಾರೆ. ಈ ಘಟನೆಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. 15 ಜನ ಬೈಕ್ ಹಾಗೂ ಓಮಿನಿಯಲ್ಲಿ ಮಾಗಡಿ ಪಾಳ್ಯದಲ್ಲಿರುವ ಅಮೃತೂರು ಠಾಣೆ ಎಎಸ್‍ಐ ಜಿಲಾನಿ ಅವರ ಮನೆಗೆ ಬಂದಿದ್ದರು. ಅಲ್ಲಿ ಊಟ ಮುಗಿಸಿ ಮಾರ್ಕೊನಹಳ್ಳಿ ಡ್ಯಾಂಗೆ ತೆರಳಿದ್ದರು. ಇದರಲ್ಲಿ 12 ಜನ ನೀರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ 6 ಮಂದಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.
ಮೃತರನ್ನು ತುಮಕೂರು ನಗರದ ತಬಸಮ್ (42), ಶಬಾನಾ (44), ಮಿಶ್ರಾ (4), ಮಹಿಬ್ (ಈ ನಾಲ್ವರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ), ಶಾಜಿಯಾ (25), ಅರ್ಬಿನ್ (30) (ಈ ಇಬ್ಬರ ಶವಗಳು ಪತ್ತೆಯಾಗಿದೆ) ಎಂದು ಗುರುತಿಸಲಾಗಿದೆ. ಈ ಅವಘಡದಲ್ಲಿ ನವಾಜ್ (22) ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ರಜೆ ನಿಮಿತ್ತ ಮಾರ್ಕೋನಹಳ್ಳಿ ಜಲಾಶಯಕ್ಕೆ ಭೇಟಿ ನೀಡಿದ್ದರು.
ಇದನ್ನೂ ಓದಿ: Drowned: ಕಾಂತಾರ ಸಿನಿಮಾ ಟಿಕೆಟ್ ಸಿಗದೆ ಈಜಲು ಹೋದ ಇಬ್ಬರು ಯುವಕರು ನಾಲೆಯಲ್ಲಿ ಮುಳುಗಿ ಸಾವು
ಎಎಸ್ ಪಿ ಗೋಪಾಲ್, ಪುರುಷೋತ್ತಮ್, ಕುಣಿಗಲ್ ಡಿವೈಎಸ್ ಪಿ ಓಂ ಪ್ರಕಾಶ್, ಹಾಗೂ ಅಮೃತೂರು ಪಿಎಸ್ಐ ಶಮಂತ್ ಗೌಡ, ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.