ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Drowned: ಕಾಂತಾರ ಸಿನಿಮಾ ಟಿಕೆಟ್‌ ಸಿಗದೆ ಈಜಲು ಹೋದ ಇಬ್ಬರು ಯುವಕರು ನಾಲೆಯಲ್ಲಿ ಮುಳುಗಿ ಸಾವು

Raichur News: ಮುದುಗಲ್‌ನಿಂದ ಮಸ್ಕಿಗೆ ‘ಕಾಂತಾರ ಚಾಪ್ಟರ್ 1’ ಸಿನಿಮಾ ನೋಡಲು ಬಂದಿದ್ದರು. ಮಧ್ಯಾಹ್ನದ ಪ್ರದರ್ಶನಕ್ಕೆ ಟಿಕೆಟ್ ಸಿಗದ ಕಾರಣ ನಾಲೆಯಲ್ಲಿ ಈಜಲು ಹೋಗಿದ್ದರು. ಈಜು ಬಾರದಿದ್ದ ಕಾರಣ ನಾಲೆಯಲ್ಲಿ ಯಲ್ಲಾಲಿಂಗ ಕೊಚ್ಚಿ ಹೋಗಿದ್ದಾನೆ. ಆತನ ರಕ್ಷಣೆ ಮಾಡಲು ಹೋಗಿ ವೆಂಕಟೇಶನೂ ಸಾವನ್ನಪ್ಪಿದ್ದಾನೆ.

ಕಾಂತಾರ ಸಿನಿಮಾ ಟಿಕೆಟ್‌ ಸಿಗದೆ ಈಜಲು ಹೋದ ಇಬ್ಬರು ಯುವಕರು ಮುಳುಗಿ ಸಾವು

-

ಹರೀಶ್‌ ಕೇರ ಹರೀಶ್‌ ಕೇರ Oct 6, 2025 9:13 AM

ರಾಯಚೂರು: ಕಾಂತಾರ ಚಾಪ್ಟರ್‌ 1 (Kantara chapter 1) ಸಿನಿಮಾ ನೋಡಲು ಹೋಗಿ ಟಿಕೆಟ್‌ ಸಿಗದೆ ಈಜಲು ಹೋದ ಇಬ್ಬರು ಯುವಕರು ನಾಲೆಯಲ್ಲಿ ಮುಳುಗಿ (drowned) ಸಾವನ್ನಪ್ಪಿರುವ ಘಟನೆ ರಾಯಚೂರು (Raichur news) ಜಿಲ್ಲೆ ಮಸ್ಕಿ ಪಟ್ಟಣದಲ್ಲಿ ನಡೆದಿದೆ. ಮಸ್ಕಿ ಪಟ್ಟಣದ ಹೊರ ವಲಯದಲ್ಲಿ ಈಜಲು ಹೋಗಿದ್ದ ಮುದಗಲ್ ಪಟ್ಟಣದ ವೆಂಕಟೇಶ (28), ಯಲ್ಲಾಲಿಂಗ (28) ಮೃತಪಟ್ಟಿದ್ದಾರೆ.

ಇವರು ಮುದುಗಲ್‌ನಿಂದ ಮಸ್ಕಿಗೆ ‘ಕಾಂತಾರ ಚಾಪ್ಟರ್ 1’ ಸಿನಿಮಾ ನೋಡಲು ಬಂದಿದ್ದರು. ಮಧ್ಯಾಹ್ನದ ಪ್ರದರ್ಶನಕ್ಕೆ ಟಿಕೆಟ್ ಸಿಗದ ಕಾರಣ ನಾಲೆಯಲ್ಲಿ ಈಜಲು ಹೋಗಿದ್ದರು. ಈಜು ಬಾರದಿದ್ದ ಕಾರಣ ನಾಲೆಯಲ್ಲಿ ಯಲ್ಲಾಲಿಂಗ ಕೊಚ್ಚಿ ಹೋಗಿದ್ದಾನೆ. ಆತನ ರಕ್ಷಣೆ ಮಾಡಲು ಹೋಗಿ ವೆಂಕಟೇಶನೂ ಸಾವನ್ನಪ್ಪಿದ್ದಾನೆ. ಸಿರವಾರ ಬಳಿ ವೆಂಕಟೇಶ, ಯಲ್ಲಾಲಿಂಗ ಶವಗಳು ಪತ್ತೆಯಾಗಿವೆ. ರಾಯಚೂರು ಜಿಲ್ಲೆ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Kantara: Chapter 1: 'ಕಾಂತಾರ: ಚಾಪ್ಟರ್ 1’ ಅಬ್ಬರ; ಮೂರು ದಿನದ ಕಲೆಕ್ಷನ್ ಎಷ್ಟು?

ಬೆಂಗಳೂರಿನಲ್ಲಿ ಮರ ಬಿದ್ದು ಯುವತಿ ಸಾವು

ಬೆಂಗಳೂರು: ನಗರದಲ್ಲಿ ಬೃಹತ್ ಮರದ ಕೊಂಬೆ ಬಿದ್ದು ಯುವತಿಯೊಬ್ಬಳು ಸ್ಥಳದಲ್ಲೇ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ (Bengaluru News) ನಡೆದಿದೆ. ಬೆಂಗಳೂರಿನ ಉತ್ತರ ತಾಲೂಕಿನ ಸೋಲದೇವನಹಳ್ಳಿ ಠಾಣೆಯ ಬಳಿ ದುರ್ಘಟನೆ ಸಂಭವಿಸಿದೆ. ಬೆಂಗಳೂರಿನ ಆರ್‌ಟಿ ನಗರದ ಕೀರ್ತನಾ (23) ಮೃತ ವಿದ್ಯಾರ್ಥಿ.

ಆಚಾರ್ಯ ಕಾಲೇಜು ಮೈದಾನದಲ್ಲಿ ಸ್ಯಾಂಡಲ್ ವುಡ್ ಪ್ರೀಮಿಯರ್ ಲೀಗ್‌ ಕ್ರಿಕೆಟ್‌ ಪಂದ್ಯ ನೋಡಲು ಕೀರ್ತನಾ ತೆರಳಿದ್ದರು. ಸ್ನೇಹಿತೆ ಜತೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಮರ ಉರುಳಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯಲ್ಲಿ ಮತ್ತೊಬ್ಬ ಬೈಕ್ ಸವಾರ ಭಾಸ್ಕರ್‌ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮರ ಬಿದ್ದ ತಕ್ಷಣ ಕೊಂಬೆಗಳನ್ನು ತೆರವು ಮಾಡಿ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಯುವತಿ ಮೃತಪಟ್ಟ ಮಾಹಿತಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಪೊಷಕರು ದೌಡಾಯಿಸಿದ್ದಾರೆ. ಈ ವೇಳೆ ಅವರ ಆಕ್ರಂದನ ಮುಗಿಲು ಮುಟ್ಟಿದೆ.