ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

BESCOM Online Services: ಸಾಫ್ಟ್‌ವೇರ್‌ ಅಳವಡಿಕೆ: 20 ಪಟ್ಟಣಗಳಲ್ಲಿ ಬೆಸ್ಕಾಂ ಆನ್‌ಲೈನ್‌ ಸೇವೆ ಅಲಭ್ಯ

ಐಪಿಡಿಎಸ್‌ ಐಟಿ ಅಪ್ಲಿಕೇಶನ್‌ ಅನ್ನು ಬೆಸ್ಕಾಂ ವ್ಯಾಪ್ತಿಯ 20 ಐಪಿಡಿಎಸ್‌ ಪಟ್ಟಣ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ವಿವಿಧ ಪಟ್ಟಣ ಪ್ರದೇಶಗಳಲ್ಲಿ ಜೂನ್‌ 10ರಿಂದ 30ರವರೆಗೆ ಬೆಸ್ಕಾಂನ ಆನ್‌ಲೈನ್‌ ಸೇವೆಗಳು ಲಭ್ಯ ವಿರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು, ಜೂ.8: ಸಮಗ್ರ ವಿದ್ಯುತ್‌ ಅಭಿವೃದ್ದಿ ಯೋಜನೆಯ (ಐಪಿಡಿಎಸ್‌) ಹಂತ-2 ರ ಅಡಿಯಲ್ಲಿ ಬೆಸ್ಕಾಂ ವ್ಯಾಪ್ತಿಯ (BESCOM) ನಗರ ಪ್ರದೇಶದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಐಪಿಡಿಎಸ್‌ ಐಟಿ ಅಪ್ಲಿಕೇಶನ್‌ ಅನ್ನು ಬೆಸ್ಕಾಂ ವ್ಯಾಪ್ತಿಯ 20 ಐಪಿಡಿಎಸ್‌ ಪಟ್ಟಣ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ವಿವಿಧ ಪಟ್ಟಣ ಪ್ರದೇಶಗಳಲ್ಲಿ ಜೂನ್‌ 10ರಿಂದ 30ರವರೆಗೆ ಬೆಸ್ಕಾಂನ ಆನ್‌ಲೈನ್‌ ಸೇವೆಗಳು ಲಭ್ಯ ವಿರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

ಈ ಬಗ್ಗೆ ಬೆಸ್ಕಾಂ ಪ್ರಕಟಣೆ ಹೊರಡಿಸಿದ್ದು, ಪ್ರಸ್ತುತ ಚಾಲ್ತಿಯಲ್ಲಿರುವ ಟಿಆರ್‌ಎಂ ಸಾಫ್ಟ್‌ವೇರ್‌ ಬದಲಿಗೆ ಐಪಿಡಿಎಸ್‌ ಐಟಿ ಅಪ್ಲಿಕೇಶನ್‌ ಅಳವಡಿಸಿಕೊಳ್ಳುವುದರಿಂದ ದತ್ತಾಂಶ ವರ್ಗಾವಣೆ ಮಾಡುವ ಸಲುವಾಗಿ 21 ದಿನಗಳ ಕಾಲ ಆನ್‌ಲೈನ್‌ ಸೇವೆಗಳಾದ ಹೊಸ ಸಂಪರ್ಕ, ಹೆಸರು ವರ್ಗಾವಣೆ, ಲೋಡ್‌ ಹೆಚ್ಚಳ, ಬಿಲ್‌ ಪಾವತಿ, ಸೇರಿದಂತೆ ಆನ್‌ಲೈನ್‌ ಸೇವೆಗಳು ಸ್ಥಗಿತಗೊಳ್ಳಲಿದೆ. ಗ್ರಾಹಕರು ಥರ್ಡ್‌ ಪಾರ್ಟಿ ಬಿಲ್‌ ಪಾವತಿ ವ್ಯವಸ್ಥೆಗಳಾದ ಗೂಗಲ್‌ ಪೇ, ಫೋನ್‌ ಪೇ ಮೂಲಕ ಬಿಲ್‌ ಪಾವತಿ ಮಾಡಲು ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದೆ.

ಆನ್‌ಲೈನ್‌ ಸೇವೆ ಸ್ಥಗಿತಗೊಳ್ಳುವ ಪಟ್ಟಣಗಳು

ಬಾಗೇಪಲ್ಲಿ, ದೇವನಹಳ್ಳಿ, ಗುಡಿಬಂಡೆ, ಮಾಗಡಿ, ಮಾಲೂರು, ನೆಲಮಂಗಲ, ಶ್ರೀನಿವಾಸಪುರ, ವಿಜಯಪುರ, ಚನ್ನಗಿರಿ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಹೊಳಲ್ಕೆರೆ, ಹೊನ್ನಾಳಿ, ಹೊಸದುರ್ಗ, ಜಗಳೂರು, ಕೊರಟಗೆರೆ, ಮಧುಗಿರಿ, ಮೊಳಕಾಲ್ಮೂರು, ಪಾವಗಡ ಹಾಗೂ ತುರುವೇಕೆರೆ.

ಹೃದಯ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ: ಭಾರತಕ್ಕೆ ಬಂತು 3D ಮ್ಯಾಪಿಂಗ್ ಆಧಾರಿತ 'ವೇರಿಪಲ್ಸ್ ಪ್ಲಾಟ್‌ಫಾರ್ಮ್'

ಐಪಿಡಿಎಸ್‌ ಪಟ್ಟಣ ಪ್ರದೇಶಗಳಿಗೆ ಹೊಸ ಐಟಿ ಅಪ್ಲಿಕೇಶನ್ಅನ್ನು ವಿಸ್ತರಿಸುವ ಸಲುವಾಗಿ ಈ ಪಟ್ಟಣ ಪ್ರದೇಶಗಳ ಉಪ ವಿಭಾಗಗಳಲ್ಲಿ ಸದ್ಯ ಚಾಲ್ತಿಯಲ್ಲಿರುವ ಟಿಆರ್‌ಎಂ ಅಪ್ಲಿಕೇಶನ್‌ ಅನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಲಾಗಿದೆ. ಐಪಿಡಿಎಸ್‌ ಸಾಫ್ಟ್‌ವೇರ್‌ ಅಳವಡಿಕೆ ಹಿನ್ನೆಲೆಯಲ್ಲಿಆನ್‌ಲೈನ್‌ ಸೇವೆ ಅಲಭ್ಯವಿರುವುದರಿಂದ ಈ 20 ಪಟ್ಟಣ ಪ್ರದೇಶಗಳ ಗ್ರಾಹಕರು ಸಹಕರಿಸಬೇಕಾಗಿ ಬೆಸ್ಕಾಂ ಕೋರಿದೆ.