ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

CJ Roy Death: ಕಾನ್ಫಿಡೆಂಟ್ ಗ್ರೂಫ್‌ ಚೇರ್ಮನ್ ಸಿಜೆ ರಾಯ್ ಸಾವಿನ ಆ ಕೊನೆಯ ಕ್ಷಣಗಳಲ್ಲಿ ಏನಾಯ್ತು?

ಕಾನ್ಫಿಡೆಂಟ್‌ ಗ್ರೂಪ್ ಡೈರೆಕ್ಟರ್ ನೀಡಿದ ದೂರು ದಾಖಲಿಸಿ ಎಫ್‌ಐಆರ್ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ. ಇತ್ತ ಸೋಕೋ ಟೀಂ ಸ್ಥಳಕ್ಕೆ ಆಗಮಿಸಿ ಪರೀಶೀಲನೆ ನಡೆಸಿದ್ದಾರೆ. ಘಟನೆ ನಡೆದ ಚೇಂಬರ್, ರಕ್ತದ ಕಲೆಗಳು, ಪಿಸ್ತೂಲ್ ಮೇಲಿನ‌ ಫಿಂಗರ್ ಪ್ರಿಂಟ್ ಸಂಗ್ರಹ ಮಾಡಲಾಗಿದೆ. ಮೊಬೈಲ್ ಫೋನ್, ಪಿಸ್ತೂಲ್ ಸೇರಿದಂತೆ ಕೆಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿಜಿ ರಾಯ್

ಬೆಂಗಳೂರು, ಜ.31: ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಾನ್ಫಿಡೆಂಟ್ ಗ್ರೂಪ್ (Confident Group) ಕಟ್ಟಿದ್ದ ಶ್ರೀಮಂತ ಐಟಿ ಇಕ್ಕಳಕ್ಕೆ ಸಿಲುಕಿ ಆತ್ಮಹತ್ಯೆ (CJ Roy Death case) ಮಾಡಿಕೊಂಡಿದ್ದಾರೆ. ಆದರೆ ಈ ಶ್ರೀಮಂತ ಉದ್ಯಮಿಯ ದುರಂತ ಸಾವಿನ ಕುರಿತು ಅನುಮಾನಗಳು ಬೆಳೆಯುತ್ತಿದೆ. ಕಳೆದ ಕೆಲ ದಿನಗಳಿಂದ ಐಟಿ ಅಧಿಕಾರಿಗಳ ದಾಳಿಯಿಂದ ಬೇಸತ್ತಿದ್ದರು ಎಂಬ ಮಾಹಿತಿಗಳು ಎಲ್ಲೆಡೆ ಹರಿದಾಡುತ್ತಿದೆ. ನಿನ್ನೆಯೂ ಐಟಿ ಅಧಿಕಾರಿಗಳ (IT raid) ಕಚೇರಿ ಶೋಧದ ನಡುವೆ ಸಿಜೆ ರಾಯ್ ಗುಂಡು ಹಾರಿಸಿಕೊಂಡು ದುರಂತ ಅಂತ್ಯ ಕಂಡಿದ್ದಾರೆ.

ಘಟನೆ ಕುರಿತು ಸಾಕಷ್ಟು ಅನುಮಾನಗಳು, ಐಟಿ ಅಧಿಕಾರಿಗಳ ವಿರುದ್ದ ಆರೋಪಗಳು ಕೇಳಿಬರುತ್ತಿದೆ. ಈ ಬೆಳವಣಿಗೆ ನಡುವೆ ಕಾನ್ಫಿಡೆಂಟ್ ಗ್ರೂಪ್ ಡೈರೆಕ್ಟರ್ ಟಿಜೆ ಜೊಸೆಫ್ ರಾಯ್ ಸಾವಿನ ತನಿಖೆಗೆ ಆಗ್ರಹಿಸಿ ದೂರು ನೀಡಿದ್ದಾರೆ. ನಾರಾಯಣ ಆಸ್ಪತ್ರೆಯಲ್ಲಿ ಟಿಜೆ ಜೊಸೆಫ್ ದೂರು ದಾಖಲಿಸಿದ್ದಾರೆ. ಟಿಜೆ ಜೋಸೆಫ್ ಉಲ್ಲೇಖಿಸಿದ ಅನುಮಾನಸ್ಪದ ಅಂಶಗಳೇನು?

ಆತಂಕದಲ್ಲಿ ಕಚೇರಿಗೆ ಬಂದ ಸಿಜೆ ರಾಯ್

ರಾಯ್ ನಿನ್ನೆ (ಜ.30) ಮಧ್ಯಾಹ್ನ ಲ್ಯಾಂಗ್ ಫೋರ್ಡ್ ರಸ್ತೆ ಕಚೇರಿಗೆ ಬಂದಿದ್ದಾರೆ. ಸಿಜೆ ರಾಯ್ ಯಾವತ್ತೂ ಕೂಲ್ ಮನುಷ್ಯ. ಎಲ್ಲಾ ಸವಾಲುಗಳನ್ನು ತುಂಬಾ ತಾಳ್ಮೆಯಿಂದ ಹಸ್ಮನುಖವಾಗಿಯೇ ಎದುರಿಸುತ್ತಿದ್ದರು. ಆತಂಕ, ಭಯ ಅವರಲ್ಲಿ ಇರುತ್ತಿರಲಿಲ್ಲ. ಆದರೆ ನಿನ್ನೆ ಗಾಬರಿಯಿಂದ ಸಿಜೆ ರಾಯ್ ಕಚೇರಿಗೆ ಬಂದಿದ್ದು. ಕೆಳಗಡೆ ಕಾರಿನಿಂದ ಇಳಿದು ಲಿಫ್ಟ್ ಬಳಸದೇ ನಡೆದುಕೊಂಡೇ ಮೇಲೆ ಬಂದಿದ್ದಾರೆ.

CJ Roy Death case: ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ಸಿಐಡಿ ತನಿಖೆಗೆ?

ಗನ್ ಮ್ಯಾನ್ ಹೊರಗಡೆ ಇರಲು ಸೂಚಿಸಿದ ರಾಯ್

ಮೇಲೆ ಬಂದ ಸಿಜೆ ರಾಯ್ ಗನ್ ಮ್ಯಾನ್‌ನನ್ನು ಹೊರಗಡೆ ನಿಲ್ಲಲು ಸೂಚಿಸಿದ್ದರು. ಯಾವತ್ತೂ ಗನ್ ಮ್ಯಾನ್ ಸಿಜೆ ರಾಯ್ ಜೊತೆಗೆ ಇರುತ್ತಿದ್ದರು. ಅವರಿಗೆ ನಿರ್ಬಂಧ ಇರಲಿಲ್ಲ. ಆದರೆ ನಿನ್ನೆ ಹೊರಗಡೆ ನಿಲ್ಲಲು ಸೂಚಿಸಿದ್ದರು. ಇಷ್ಟೇ ಅಲ್ಲ ಯಾರನ್ನೂ ಹೊರಗಡೆ ಬಿಡಬೇಡ ಎಂದು ಸೂಚಿಸಿ ಹೇಳಿ ಕಚೇರಿ ಒಳ ಪ್ರವೇಶಿಸಿದ್ದಾರೆ ಎಂದು ಟಿಜೆ ಜೊಸೆಫ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೊಠಡಿಗೆ ಹೋಗಿ ಲಾಕ್

ಕಚೇರಿಯ ಕೊಠಡಿಗೆ ತೆರಳಿದೆ ಸಿಜೆ ರಾಯ್ ಬಾಗಿಲು ಲಾಕ್ ಮಾಡಿದ್ದಾರೆ. 15 ನಿಮಿಷ ಯಾವುದೇ ಸುಳಿವು ಇರಲಿಲ್ಲ. ಸಾಮಾನ್ಯವಾಗಿ ಹೀಗೆ ಮಾಡುವವರಲ್ಲ. ಲಾಕ್ ಮಾಡಿಕೊಳ್ಳುವುದು, ಏಕಾಂತದಲ್ಲಿರುವ ಅಭ್ಯಾಸ ರಾಯ್‌ಗೆ ಇಲ್ಲ. 15 ನಿಮಿಷದ ಬಳಿಕ ಬುಲೆಟ್ ಶಬ್ದ ಕೇಳಿದೆ. ಗನ್ ಫೈರಿಂಗ್ ಶಬ್ದ ಕೇಳಿದ ಬೆನ್ನಲ್ಲೇ ಸಿಬ್ಬಂದಿಗಳು ಕೊಠಡಿಯತ್ತ ದೌಡಾಯಿಸಿದ್ದಾರೆ. ಅಷ್ಟರಲ್ಲೇ ಸಿಜೆ ರಾಯ್ ನೆಲದ ಮೇಲೆ ಬಿದ್ದಿದ್ದರು. ಸಿಬ್ಬಂದಿಗಳು ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನ ಆಗಲಿಲ್ಲ. ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಟಿಜೆ ಜೊಸೆಫ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕೆಲ ಅನುಮಾನಗಳು ವ್ಯಕ್ತಪಡಿಸಿದ್ದಾರೆ.

C J Roy: ಮಗಳಿಗಾಗಿ ಖರೀದಿಸಿದ್ದ ಜಾಗವನ್ನು ನಟ ಪುನೀತ್‌ ರಾಜ್‌ಕುಮಾರ್‌ಗೆ ನೀಡಿದ್ದ ಸಿ.ಜೆ. ರಾಯ್‌

ದೂರು ದಾಖಲಿಸಿ ಎಫ್ಐಆರ್

ಡೈರೆಕ್ಟರ್ ನೀಡಿದ ದೂರು ದಾಖಲಿಸಿ ಎಫ್‌ಐಆರ್ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ. ಇತ್ತ ಸೋಕೋ ಟೀಂ ಸ್ಥಳಕ್ಕೆ ಆಗಮಿಸಿ ಪರೀಶೀಲನೆ ನಡೆಸಿದ್ದಾರೆ. ಘಟನೆ ನಡೆದ ಚೇಂಬರ್, ರಕ್ತದ ಕಲೆಗಳು, ಪಿಸ್ತೂಲ್ ಮೇಲಿನ‌ ಫಿಂಗರ್ ಪ್ರಿಂಟ್ ಸಂಗ್ರಹ ಮಾಡಲಾಗಿದೆ. ಮೊಬೈಲ್ ಫೋನ್, ಪಿಸ್ತೂಲ್ ಸೇರಿದಂತೆ ಕೆಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹರೀಶ್‌ ಕೇರ

View all posts by this author