ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

25 ಲಕ್ಷ ಕೊಡು, ಇಲ್ಲವೇ ನನ್ನ ಜತೆ ಮಲಗು; ಗಂಡನ ಬಂಧಿಸಿ ಹೆಂಡತಿಗೆ ಮೂಡುಬಿದಿರೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಲೈಂಗಿಕ ಕಿರುಕುಳ!

Moodubidire Police Inspector Case: ರಾಜ್ಯ ಪೊಲೀಸ್ ಇಲಾಖೆಯೇ ತಲೆತಗ್ಗಿಸುವಂತಹ ಪ್ರಕರಣವೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರ ಗಂಡನ ವಿರುದ್ಧ ಸುಳ್ಳು ಕೇಸ್‌ ಹಾಕಿ, ಬಳಿಕ ತಾನು ಹೇಳಿದಂತೆ ಕೇಳದಿದ್ದರೆ ನಿನ್ನ ಗಂಡ ಬಿಡುಗಡೆಯಾಗಲ್ಲ ಎಂದು ಬೆದರಿಕೆ ಹಾಕಿ, ಲೈಂಗಿಕ ಕಿರುಕುಳ ನೀಡಿರುವ ಆರೋಪ ಮೂಡುಬಿದಿರೆ ಪೊಲೀಸ್‌ ಇನ್ಸ್‌ಪೆಕ್ಟರ್‌ ವಿರುದ್ಧ ಕೇಳಿಬಂದಿದೆ.

ಮೂಡುಬಿದಿರೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಪಿ.ಜಿ. ಸಂದೇಶ್‌ ಮತ್ತು ಸಂತ್ರಸ್ತ ಮಹಿಳೆ

ಮಂಗಳೂರು: ಗಂಡನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಆತನ ಹೆಂಡತಿಗೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಜಿ. ಸಂದೇಶ್ ವಿರುದ್ಧ ಕೇಳಿಬಂದಿದೆ. ಸದ್ಯ ಈ ಪ್ರಕರಣದಿಂದ (Moodubidire Police Inspector Case) ರಾಜ್ಯ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತೆ ಆಗಿದೆ. ಇನ್ಸ್‌ಪೆಕ್ಟರ್‌ ಕಿರುಕುಳದ ಬಗ್ಗೆಸಂತ್ರಸ್ತ ಮಹಿಳೆಯಿಂದ ಡಿಜಿ-ಐಜಿಪಿ, ಗೃಹ ಸಚಿವರು ಹಾಗೂ ಸಿಎಂ ಅವರಿಗೆ ದೂರು ನೀಡಲಾಗಿದೆ.

ಸಂತ್ರಸ್ತ ಮಹಿಳೆಯ ಪತಿ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಕಳೆದ ಜುಲೈನಲ್ಲಿ ಕೆಲವು ಮಹಿಳೆಯರು ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಕಿರುಕುಳದ ದೂರು ಹೊತ್ತು ಬಂದಾಗ, ಸಂತ್ರಸ್ತ ಮಹಿಳೆಯ ಪತಿ ಅವರಿಗೆ ಸಹಾಯ ಮಾಡಿದ್ದರು. ಪೊಲೀಸ್ ಕಮಿಷನರ್‌ಗೆ ದೂರು ನೀಡಲು ಸಲಹೆ ನೀಡಿದ್ದರು. ಈ ವಿಚಾರ ತಿಳಿದು ಇನ್ಸ್‌ಪೆಕ್ಟರ್ ಸಂದೇಶ್, ಸಾಮಾಜಿಕ ಕಾರ್ಯಕರ್ತನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಬಂಧಿಸಿದ್ದರು ಎನ್ನಲಾಗಿದೆ.

ನಾನು ಗೃಹ ಸಚಿವರಿಗೆ 50 ಲಕ್ಷ ರೂ. ಹಣ ಕೊಟ್ಟು ಮೂಡುಬಿದಿರೆಗೆ ಪೋಸ್ಟಿಂಗ್ ಹಾಕಿಸಿಕೊಂಡು ಬಂದಿದ್ದೇನೆ. ನನ್ನ ಮೇಲೆ ದೂರು ಕೊಟ್ಟ ನಿನ್ನ ಗಂಡನನ್ನ ಅರೆಸ್ಟ್ ಮಾಡಿದ್ದೇನೆ. ಈ ನಿನ್ನ ಗಂಡನ ಬಿಡಬೇಕು ಎಂದರೆ 25 ಲಕ್ಷ ರೂ. ಹಣ ಕೊಡು ಅಥವಾ ನನ್ನೊಂದಿಗೆ ಮಲಗು ಎಂದು ಇನ್ಸ್‌ಪೆಕ್ಟರ್ ಸಂದೇಶ್ ಡಿಮ್ಯಾಂಡ್ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಮಹಿಳೆಯ ಪತಿಯನ್ನು ಬಂಧಿಸಲಾಗಿತ್ತು. ಹೀಗಾಗಿ ಪತಿಯ ಬಿಡುಗಡೆಗಾಗಿ ಮನವಿ ಮಾಡಲು ಪತ್ನಿ ಇನ್ಸ್‌ಪೆಕ್ಟರ್ ಬಳಿ ಹೋಗಿದ್ದಾರೆ. ಆದರೆ, ನಿನ್ನ ಗಂಡನನ್ನು ಬಿಡಬೇಕೆಂದರೆ 25 ಲಕ್ಷ ರೂಪಾಯಿ ಹಣ ನೀಡಬೇಕು, ಇಲ್ಲವೇ ನನ್ನೊಂದಿಗೆ ಮಲಗಬೇಕು' ಎಂದು ಇನ್ಸ್‌ಪೆಕ್ಟರ್ ಅಸಭ್ಯವಾಗಿ ಬೇಡಿಕೆ ಇಟ್ಟಿದ್ದಾರೆ. ನಾನು ಕೇಳಿದ ಹಣ ಕೊಡದಿದ್ದರೆ ನಿನ್ನ ಪತಿಯ ಮೇಲೆ ರೌಡಿಶೀಟರ್ ತೆರೆಯುತ್ತೇನೆ' ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಹಣ ನೀಡಲು ಸಾಧ್ಯವಾಗದ ಮಹಿಳೆ, ಕೈಲಾದ 50 ಸಾವಿರ ರೂಪಾಯಿ ನೀಡಿ ಪತಿಯನ್ನು ಸ್ಟೇಷನ್ ಬೇಲ್ ಮೇಲೆ ಬಿಡಿಸಿಕೊಂಡಿದ್ದಾರೆ. ಆದರೆ, ನಂತರವೂ ಇನ್ಸ್‌ಪೆಕ್ಟರ್ ಕಾಟ ನಿಂತಿಲ್ಲ. ಪತಿಯು ಇನ್ಸ್‌ಪೆಕ್ಟರ್‌ ಕಿರುಕುಳ ತಾಳಲಾರದೆ ಊರು ಬಿಟ್ಟು ಹೋಗಿದ್ದಾರೆ. ಈಗ ಪತಿಯನ್ನು ಹುಡುಕುವ ನೆಪದಲ್ಲಿ ತನ್ನನ್ನು ಸ್ಟೇಷನ್‌ಗೆ ಅಥವಾ ತಾನು ಹೇಳಿದ ಕಡೆಗೆ ಬರುವಂತೆ ಇನ್ಸ್‌ಪೆಕ್ಟರ್ ಪೀಡಿಸುತ್ತಿದ್ದಾರೆ ಎಂದು ಮಹಿಳೆ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.

ಹಲವು ಮಹಿಳೆಯರಿಗೆ ಕಿರುಕುಳ ಆರೋಪ

ಈ ಪ್ರಕರಣ ಮಾತ್ರವಲ್ಲದೆ ಇನ್ನೂ ಹಲವು ಮಹಿಳೆಯರಿಗೆ ಕಿರುಕುಳ ನೀಡಿರುವ ಆರೋಪ ಇನ್ಸ್‌ಪೆಕ್ಟರ್‌ ಸಂದೇಶ್‌ ವಿರುದ್ಧ ಕೇಳಿಬಂದಿದೆ. ಇನ್ನೂ 3-4 ಮಹಿಳೆಯರಿಂದ ಇದೇ ರೀತಿಯ ದೂರು ದಾಖಲಾಗಿದೆ. ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಗಂಡ-ಹೆಂಡತಿ ಜಗಳ ಕೇಸ್‌ಗಳು ಬಂದರೆ ಮಹಿಳೆಯರನ್ನು ಟಾರ್ಗೆಟ್‌ ಮಾಡಿ ಇನ್ಸ್‌ಪೆಕ್ಟರ್‌ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಕಾಂಪೌಂಡ್ ಹಾರಿ ಮನೆಗೆ ನುಗ್ಗಿದ ಪೊಲೀಸಪ್ಪ!

ಇನ್ನು ಮತ್ತೊಬ್ಬ ಮಹಿಳೆಯ ಗಂಡ ದುಬೈನಲ್ಲಿದ್ದು, ಮಗುವಿನೊಂದಿಗೆ ಆಕೆ ಒಬ್ಬಂಟಿಯಾಗಿ ವಾಸವಾಗಿದ್ದಾರೆ. ಆ ಮಹಿಳೆಗೆ ಬೆದರಿಕೆ ಹಾಕಿರುವ ಇನ್ಸ್‌ಪೆಕ್ಟರ್‌, ರಾತ್ರೋರಾತ್ರಿ ಮನೆಯ ಕಾಂಪೌಂಡ್ ಹಾರಿ ಒಳಗೆ ನುಗ್ಗಿ ಕಿರುಕುಳ ನೀಡಿರುವ ಸಿಸಿಟಿವಿ ವಿಡಿಯೊ ವೈರಲ್‌ ಆಗಿದೆ. ಈ ಬಗ್ಗೆ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ತ ಮಹಿಳೆ ಅಳಲು ತೋಡಿಕೊಂಡಿದ್ದಾರೆ.

ರೈಲಿನಲ್ಲಿ ವಿದೇಶಿ ಮಹಿಳೆಗೆ ಕಿರುಕುಳ: ಶೌಚಾಲಯದವರೆಗೂ ಹಿಂಬಾಲಿಸಿ ಬಾಗಿಲು ತೆರೆಯಲು ಯತ್ನಿಸಿದ ಕಾಮುಕರು!

ತಾಯಿ ಬಳಿಕ ಆಕೆಯ ಮಗಳ ಮೇಲೂ ಕಣ್ಣು?; ಆಡಿಯೋ ವೈರಲ್



ಇಷ್ಟು ಮಾತ್ರವಲ್ಲದರೆ ಈ ಪೊಲೀಸ್‌ ಅಧಿಕಾರಿಯು ಮಹಿಳೆಯೊಬ್ಬರ ಜತೆ ಅನೈತಿಕ ಸಂಬಂಧ ಹೊಂದಿದ್ದು, ಈಗ ಆಕೆಯ ಮಗಳನ್ನೂ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದ್ದ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿ ಮಹಿಳೆ ಜತೆ ಇನ್ಸ್‌ಪೆಕ್ಟರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್‌ ಆಗಿದೆ.

ಆಡಿಯೋದಲ್ಲಿ, "ನೋಡು ಸಂದೇಶ ನಿನ್ನ ಮರ್ಯಾದೆ ಹಾಳಾಗಬಾರದು ಎನ್ನುವ ಉದ್ದೇಶದಿಂದ ಇಷ್ಟು ವರ್ಷ ಸಹಿಸಿಕೊಂಡಿದ್ದೇನೆ. ನೀನು ನನ್ನೊಂದಿಗೆ 8 ವರ್ಷ ಇದ್ದರೂ ನಾನು ಎಲ್ಲಿಯೂ ದೂರು ಕೊಟ್ಟಿಲ್ಲ. ಈಗ ನನ್ನ ಮಗಳ ಮೇಲೆ ಕಣ್ಣಾಕಿರುವುದು ಸರಿಯಲ್ಲ. ನೀನು ಅವಳ ತಂಟೆಗೆ ಬಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ನಿನಗೆ ಒಂದು ಗತಿ ಕಾಣಿಸುತ್ತೇನೆ ಎಂದು ಮಹಿಳೆ ಕೂಗಾಡುವುದು ಆಡಿಯೋದಲ್ಲಿದೆ.