ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala: ಧರ್ಮಸ್ಥಳ ವಿರುದ್ಧದ ಅವಹೇಳನಕಾರಿ, ಆಧಾರರಹಿತ ವಿಡಿಯೋ ಡಿಲೀಟ್‌ ಮಾಡಲು ಕೋರ್ಟ್ ಸೂಚನೆ

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯ ನಿರ್ಬಂಧ ಹೇರಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಸ್ಥಾನ ಮತ್ತು ನಿರ್ದಿಷ್ಟ ಕುಟುಂಬದ ವಿರುದ್ಧದ ಆಧಾರರಹಿತ ಆರೋಪಗಳನ್ನು ತೆಗೆದುಹಾಕಲು ಸೂಚಿಸಲಾಗಿದ್ದು, ಇನ್ನು ಮುಂದೆ ಯಾವುದೇ ಮಾನಹಾನಿ ಹೇಳಿಕೆಗಳನ್ನು ನೀಡದಂತೆ ಸೂಚಿಸಿದೆ.

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ (Dharmasthala), ಡಾ. ಡಿ. ವೀರೇಂದ್ರ ಹೆಗ್ಗಡೆ (Veerendra Heggade) ಮತ್ತು ಅವರ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿದ್ದ ಅವಹೇಳನಕಾರಿ, ಆಧಾರರಹಿತ ವಿಡಿಯೋ ಮತ್ತು ಪೋಸ್ಟ್‌ಗಳಿಗೆ ಸಿಟಿ ಸಿವಿಲ್ ಕೋರ್ಟ್‌ (City Civil Court) ತಡೆಯಾಜ್ಞೆ ನೀಡಿದ್ದು, ತಕ್ಷಣವೇ ಅವುಗಳನ್ನು ಡಿಲೀಟ್ ಮಾಡಲು ಆದೇಶಿಸಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನಗಳ ಪ್ರಕಾರ ತಾತ್ಕಾಲಿಕ ಪರಿಹಾರ ನೀಡಲು ಬೆಂಗಳೂರು ನಗರ ಮತ್ತು ಸೆಷನ್ಸ್‌ ಕೋರ್ಟ್‌ ಅನುಮತಿ ನೀಡಿದೆ.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಪ್ರಕಟವಾದ ಮಾನಹಾನಿಕರ ವಿಡಿಯೋಗಳ ಕುರಿತು ಡಿ.ಹರ್ಷೇಂದ್ರ ಕುಮಾರ್ ಅವರು ಸಿಟಿ ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಹೀಗಾಗಿ ನ್ಯಾಯಾಲಯವು ತಡೆಯಾಜ್ಞೆ ನೀಡಿತ್ತು. ಆದರೆ, ʼಥರ್ಡ್ ಐʼ ಯೂಟ್ಯೂಬ್ ಚಾನೆಲ್ ಇದನ್ನು “ಗ್ಯಾಗ್ ಆರ್ಡರ್” ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಿಟ್ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಈ ವಿಷಯವನ್ನು ಹೈಕೋರ್ಟ್‌ನಲ್ಲಿ ಇತ್ಯರ್ಥಗೊಳಿಸಿಕೊಳ್ಳಲು ಸೂಚಿಸಿತ್ತು.

ನಂತರ ಕುಡ್ಲ ರ್ಯಾಂಪೇಜ್ ಹೈಕೋರ್ಟ್‌ಗೆ ರಿಟ್ ಸಲ್ಲಿಸಿತ್ತು. ಇದನ್ನು ಪುರಸ್ಕರಿಸಿದ್ದ ಹೈಕೋರ್ಟ್, ಸಿಟಿ ಸಿವಿಲ್ ಕೋರ್ಟ್‌ನ ಏಕಪಕ್ಷೀಯ ಆದೇಶವನ್ನು ರದ್ದುಗೊಳಿಸಿ, ಮರುತನಿಖೆಗೆ ಆದೇಶಿಸಿತ್ತು. ಇದರ ವಿರುದ್ಧ ಡಿ. ಹರ್ಷೇಂದ್ರ ಕುಮಾರ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್, ಹೈ ಕೋರ್ಟ್‌ ಆದೇಶವನ್ನು ಪರಿಗಣನೆಗೆ ತೆಗೆದುಕೊಳ್ಳದೆ ದಾಖಲೆಗಳು ಮತ್ತು ಪ್ರಕರಣವನ್ನು ಪರಿಗಣಿಸಿ ಎರಡು ವಾರಗಳಲ್ಲಿ ತೀರ್ಪು ನೀಡುವಂತೆ ಆದೇಶಿಸಿತ್ತು.

ಈ ಸುದ್ದಿಯನ್ನೂ ಓದಿ: Viral Video: ಅಭಿವೃದ್ಧಿ ಹೊಂದಿದ ದೇಶವಾದ್ರು ಇಲ್ಲೂ ನಿರಾಶ್ರಿತರು, ಬಡವರಿದ್ದಾರೆ ಎಂದಿದ್ಯಾಕೆ ನೆಟ್ಟಿಗರು? ಇಲ್ಲಿದೆ ನೋಡಿ ವಿಡಿಯೊ

ಸಿಟಿ ಸಿವಿಲ್ ಕೋರ್ಟ್ ಐದು ದಿನಗಳ ಕಾಲ ವಾದ-ವಿವಾದ ಆಲಿಸಿ, ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ. ಸೇರಿದಂತೆ ಇತರರಿಂದ ಪ್ರಕಟವಾದ ಮಾನಹಾನಿಕರ ವಿಡಿಯೊಗಳನ್ನು ವೀಕ್ಷಿಸಿ ತಡೆಯಾಜ್ಞೆ ನೀಡಿದ್ದು, ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಸೂಚಿಸಿದೆ.

ಡಿ.ಹರ್ಷೇಂದ್ರ ಕುಮಾರ್ ಪರವಾಗಿ ಹೈಕೋರ್ಟ್ ವಕೀಲ ರಾಜಶೇಖರ್ ಹಿಲ್ಯಾರ್ ಸುದೀರ್ಘ ವಾದ ಮಂಡಿಸಿದರು. ಈ ತಡೆಯಾಜ್ಞೆಯು ಧರ್ಮಸ್ಥಳದ ಗೌರವವನ್ನು ರಕ್ಷಿಸುವಲ್ಲಿ ಮಹತ್ವದ ಕ್ರಮವಾಗಿದೆ. ಬುರುಡೆ ಕೇಸ್‌ನ ನೆಪದಲ್ಲಿ ಮಾನಹಾನಿಕರ ಕೃತ್ಯಗಳನ್ನು ತಡೆಯಲು ನ್ಯಾಯಾಲಯದ ಈ ಆದೇಶವು ಪ್ರಮುಖ ಹೆಜ್ಜೆಯಾಗಿದೆ.