15 ಅಡಿ ಅಗೆದರೂ ಒಂದು ಮೂಳೆಯೂ ಸಿಕ್ಕಿಲ್ಲ
ತಲೆ ಬುರುಡೆ ಇರಲಿ, ಒಂದೇ ಒಂದು ಮೂಳೆಯೂ ಪತ್ತೆಯಾಗಿಲ್ಲ. ಧರ್ಮಸ್ಥಳದ ಸ್ನಾನಘಟ್ಟದ ಸಮೀಪದ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಶವಗಳನ್ನು ಹೂತಿಡಲಾಗಿದೆ ಎಂದು ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ್ದರು. ಆತ ಗುರುತಿಸಿದ ಮೊದಲನೇ ಜಾಗವನ್ನು ಬರೋಬ್ಬರಿ 15 ಅಡಿ ಆಳ, 8 ಅಡಿ ಅಗಲ ಅಗೆದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ.


ಧರ್ಮಸ್ಥಳದ ಸುತ್ತ ನಿಗೂಢ ಸಾವುಗಳ ತನಿಖೆ ಚುರುಕುಗೊಳಿಸಿದ ಎಸ್‌ಐಟಿ
ಅನಾಮಿಕ ವ್ಯಕ್ತಿ ತೋರಿಸಿದ ಜಾಗದಲ್ಲಿ ಅಗೆದರೂ ಯಾವುದೇ ಕುರುಹು ಇಲ್ಲ
ಧರ್ಮಸ್ಥಳ: ಧರ್ಮಸ್ಥಳ ಪರಿಸರದಲ್ಲಿ ನೂರಾರು ಶವ ಹೂತಿರುವುದಾಗಿ ಅನಾಮಿಕ ವ್ಯಕ್ತಿ ನೀಡಿದ ದೂರಿನನ್ವಯ ವಿಶೇಷ ಪೊಲೀಸ್ ತನಿಖಾ ತಂಡ ಮಂಗಳವಾರ ಮೊದಲನೇ ಸಮಾಧಿ ಆಗೆದರಾದರೂ ಯಾವುದೇ ಕುರುಹು ಪತ್ತೆಯಾಗಿಲ್ಲ.
ತಲೆ ಬುರುಡೆ ಇರಲಿ, ಒಂದೇ ಒಂದು ಮೂಳೆಯೂ ಪತ್ತೆಯಾಗಿಲ್ಲ. ಧರ್ಮಸ್ಥಳದ ಸ್ನಾನಘಟ್ಟದ ಸಮೀಪದ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಶವಗಳನ್ನು ಹೂತಿಡಲಾಗಿದೆ ಎಂದು ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ್ದರು. ಆತ ಗುರುತಿಸಿದ ಮೊದಲನೇ ಜಾಗವನ್ನು ಬರೋಬ್ಬರಿ 15 ಅಡಿ ಆಳ, 8 ಅಡಿ ಅಗಲ ಅಗೆದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಆರಂಭದಲ್ಲಿ ಕಾರ್ಮಿಕರು 4 ಅಡಿ ಆಳ ಅಗೆದಿದ್ದರು. ಕಳೇಬರ ಪತ್ತೆಯಾಗದ ಹಿನ್ನೆಲೆಯಲ್ಲಿ ಮತ್ತಷ್ಟು ಅಡಿ ಆಳ ಅಗೆಯಲು ದೂರುದಾರ ಸೂಚಿಸಿದ್ದ.
ಹೀಗಾಗಿ ಜೆಸಿಬಿ ಮೂಲಕ 15 ಅಡಿ ಆಳ ಸಮಾಧಿ ಅಗೆಯಲಾಗಿದೆ. ಆದರೆ ಕಳೇಬರ ಪತ್ತೆಯಾಗಿಲ್ಲ. ಹೀಗಾಗಿ ಮಧ್ಯಾಹ್ನ 3.30 ರಿಂದ ಆರಂಭವಾದ ಹಿಟಾಚಿ ಕಾರ್ಯಾಚರಣೆ ಸಂಜೆ 6.15ರವರೆಗೆ ಅಂತ್ಯ ಮಾಡಲಾಯಿತು. ಇದೀಗ ದೂರುದಾರ ಗುರುತಿಸಿದ 2ನೇ ಸಮಾಧಿ ಸ್ಥಳ ಅಗೆಯುವ ಕಾರ್ಯ ಬುಧವಾರ ಆರಂಭಗೊಳ್ಳಲಿದೆ.
ಇದನ್ನೂ ಓದಿ: Roopa Gururaj Column: ದಾನ ಮಾಡಿದ ಅಕ್ಕಿಯ ಕಾಳು ಬಂಗಾರವಾದಾಗ
ಪೊಲೀಸ್ ನಾಯಿ ಬಳಕೆ: ಕಳೇಬರಗಳು ಅಕ್ಕಪಕ್ಕ ಇದ್ದರೆ ಸಿಗಲೇಬೇಕು ಎಂಬ ಛಲದಿಂದ ವಿಶೇಷ ಪೊಲೀಸ್ ತನಿಖಾ ತಂಡ ಕಾರ್ಯಾಚರಣೆಗೆ ಪೊಲೀಸ್ ನಾಯಿ ಬಳಕೆ ಮಾಡಿದೆ. ಸ್ವಲ್ಪ ಸುಳಿವು ಸಿಕ್ಕರೂ ಪ್ರಕರಣದಲ್ಲಿ ಯಶಸ್ಸು ಸಾಧಿಸಬಹುದು ಎಂಬ ನಿಟ್ಟಿನಲ್ಲಿ ಸಣ್ಣ ಅಂಶವನ್ನೂ ತನಿಖಾ ತಂಡವು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಮುಂದುವರಿದ ಸ್ಥಳ ಮಹಜರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ದೂರು ನೀಡಿದ್ದ ಅನಾಮಿಕ ವ್ಯಕ್ತಿಯು ಮೊದಲ ದಿನದ ಸ್ಥಳ ಮಹಜರು ವೇಳೆ 13 ಸ್ಥಳಗಳನ್ನು ಗುರುತಿ ಸಿದ್ದ. ಎರಡನೇ ದಿನವಾದ ಮಂಗಳವಾರ ಕೂಡ ಸ್ಥಳ ಮಹಜರು ಪ್ರಕ್ರಿಯೆ ಮುಂದುವರಿದಿದೆ. ಎಸ್‌ಐಟಿ ಅಧಿಕಾರಿಗಳ ಒಂದು ತಂಡ ದೂರುದಾರನ ಜತೆ ಸ್ಥಳ ಮಹಜರು ಪ್ರಕ್ರಿಯೆ ಮಾಡಿದೆ. ಮತ್ತಷ್ಟು ಸಮಾಧಿ ಗುರುತಿಸಿರುವ ಮಾಹಿತಿ ಲಭ್ಯವಾಗಿದೆ.
ಕೋರ್ಟ್ ಆದೇಶ ಉಲ್ಲಂಘನೆ ಏಕೆ?
ಬೆಂಗಳೂರು: ನ್ಯಾಯಾಲಯದ ಆದೇಶಗಳನ್ನು ಏಕೆ ಪದೇ ಪದೆ ಉಲ್ಲಂಘನೆ ಮಾಡುತ್ತಿದ್ದೀರಿ’ ಎಂದು ಯೂ ಟ್ಯೂಬರ್‌ಗಳನ್ನು ಪ್ರಶ್ನಿಸಿರುವ ಹೈಕೋರ್ಟ್, ಪ್ರತಿಬಂಧಕ ಆದೇಶ ನೀಡಿದ ಮೇಲೂ ಒಂದರ ನಂತರ ಮತ್ತೊಂದು (ಯೂ ಟ್ಯೂಬ್) ಚಾನಲ್ ಆರಂಭಿಸುತ್ತಿರುವುದೇಕೆ? ಎಂದು ಮೌಖಿಕವಾಗಿ ಪ್ರಶ್ನಿಸಿದೆ.
ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಸಹೋದರ ಡಿ.ಹರ್ಷೇಂದ್ರ ಕುಮಾರ್ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ ಅಥವಾ ಪ್ರಕಟ ಮಾಡಬಾರದು ಎಂದು ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿದ ಅರ್ಜಿ ಯನ್ನು ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಮಂಗಳೂರಿನ ಕೋಡಿಬೈಲ್ ವಿಳಾಸ ಹೊಂದಿರುವ ಯೂ ಟ್ಯೂಬ್ ಚಾನಲ್ ‘ಕುಡ್ಲ ರ‍್ಯಾಂಪೇಜ್’ ಸಂಪಾದಕ ಅಜಯ್ ಬಿನ್ ರಾಮಕೃಷ್ಣ ಪೂಜಾರಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ನ್ಯಾಯ ಪೀಠ, ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿರುವ ವ್ಯಕ್ತಿಯ ಅರ್ಜಿಯನ್ನು ಪರಿಗಣಿಸಬೇಕು ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ? ಎಂದು ಅರ್ಜಿದಾರರನ್ನು ಪ್ರಶ್ನಿಸಿತು.