ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kalladka Prabhakar Bhat: ಹಿಂದೂ ಹೆಣ್ಣು ಮಕ್ಕಳು ಇನ್ನುಮುಂದೆ ಬ್ಯಾಗ್‌ನಲ್ಲಿ ಚೂರಿ ಇಟ್ಕೊಂಡು ಓಡಾಡಿ: ಕಲ್ಲಡ್ಕ ಪ್ರಭಾಕರ ಭಟ್

Kalladka Prabhakar Bhat: ಹಿಂದೂ ಹೆಣ್ಣು ಮಕ್ಕಳು ನಿಮ್ಮನ್ನು ನೀವು ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಇನ್ನು ಮುಂದೆ ಹೊರಗೆ ಹೋಗುವಾಗ ಬ್ಯಾಗ್‌ನಲ್ಲಿ ಆರಿಂಚು ಉದ್ದದ ಚೂರಿ ಇಟ್ಕೊಳ್ಳಿ. ಸಂಜೆ ಮೇಲೆ ಹೊರಗಡೆ ಹೋಗುವಾಗ ನಿಮ್ಮ ಸುರಕ್ಷತೆಗೆ ಬೇಕಾಗುತ್ತದೆ ಎಂದು ಆರ್‌ಎಸ್ಎಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

ಹಿಂದೂ ಹೆಣ್ಣು ಮಕ್ಕಳು ಚೂರಿ ಇಟ್ಕೊಂಡು ಓಡಾಡಿ: ಪ್ರಭಾಕರ ಭಟ್

Profile Prabhakara R Apr 29, 2025 2:07 PM

ಕಾಸರಗೋಡು: ಹಿಂದೂ ಹೆಣ್ಣು ಮಕ್ಕಳು ಇನ್ನು ಮುಂದೆ ಬ್ಯಾಗ್‌ನಲ್ಲಿ ಚೂರಿ ಇಟ್ಕೊಂಡು ಓಡಾಡಿ. ಆಗ ನಿಮಗೆ ಯಾರೂ ಏನೂ ಮಾಡಕ್ಕಾಗಲ್ಲ ಎಂದು ಆರ್‌ಎಸ್ಎಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakar Bhat) ಹೇಳಿದ್ದಾರೆ. ಪಹಲ್ಗಾಮ್‌ನಲ್ಲಿ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಉಗ್ರರು ದಾಳಿ ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಒಂದು ವೇಳೆ ಪಹಲ್ಗಾಮ್‌ನಲ್ಲಿ ಉಗ್ರರಿಗೆ ತಲ್ವಾರ್ ತೋರಿಸಿದರೂ ಸಾಕಿತ್ತು. ಕತೆಯೇ ಬೇರೆ ಆಗುತ್ತಿತ್ತು ಎಂದಿದ್ದಾರೆ.

ಹಿಂದೂ ಹೆಣ್ಣು ಮಕ್ಕಳು ವ್ಯಾನಿಟಿ ಬ್ಯಾಗ್‌ನಲ್ಲಿ ಪೌಡರ್‌, ಬಾಚಣಿಗೆ ಜತೆಗೆ ಚೂರಿಯನ್ನೂ ಇಟ್ಟುಕೊಳ್ಳಬೇಕು. ನಿಮ್ಮನ್ನು ನೀವು ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಇನ್ನು ಮುಂದೆ ಹೊರಗೆ ಹೋಗುವಾಗ ಬ್ಯಾಗ್‌ನಲ್ಲಿ ಆರಿಂಚು ಉದ್ದದ ಚೂರಿ ಇಟ್ಕೊಳ್ಳಿ. ಸಂಜೆ ಮೇಲೆ ಹೊರಗಡೆ ಹೋಗುವಾಗ ನಿಮ್ಮ ಸುರಕ್ಷತೆಗೆ ಬೇಕಾಗುತ್ತದೆ.

ಚೂರಿ ಇಟ್ಕೊಳ್ಳಲು ಯಾರ ಪರ್ಮಿಷನ್ ಕೂಡ ಬೇಕಾಗಿಲ್ಲ. ಸಂಜೆ ಮೇಲೆ ಓಡಾಡುವಾಗ ಯಾರಾದರೂ ನಿಮ್ಮ ಮೇಲೆ ಆಕ್ರಮಣ ಮಾಡುತ್ತಾರೆ. ಆಗ ಅವರ ಬಳಿ ಬೇಡಿಕೊಂಡರೆ ಪ್ರಯೋಜನವಿಲ್ಲ. ಅದರ ಬದಲು ಚೂರಿ ತೋರಿಸಿ ಬಾ ಎಂದು ಸವಾಲು ಹಾಕಿ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಸಲಹೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ | Chakravarthy Sulibele: ಮತಾಂತರ ಮಾಡಲು ಹಿಂದೂಗಳಿಗೆ ಕರೆ ನೀಡಿದ ಚಕ್ರವರ್ತಿ ಸೂಲಿಬೆಲೆ!

ಹಿಂದೂಗಳು ನನ್ನ ಹಿಂದೆ ಬಿದ್ದಿದ್ದಾರೆ, ನಾನು ಭಾರತವನ್ನು ದ್ವೇಷಿಸುತ್ತೇನೆ; ವೈದ್ಯೆ ಪೋಸ್ಟ್

Mangalore Doctor Controversy

ದಕ್ಷಿಣ ಕನ್ನಡ: ಮಂಗಳೂರಿನ ವೈದ್ಯೆ ಅಫೀಫಾ ಫಾತಿಮಾ ಎಂಬಾಕೆ ದೇಶ ವಿರೋಧಿ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆ ಆಕೆಯನ್ನು ವಜಾಗೊಳಿಸಿದೆ. ಆಸ್ಪತ್ರೆಯ ಹೆಚ್​ಆರ್ ಆಕೆಯ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಂಗಳೂರಿನ ವೈದ್ಯೆಯೊಬ್ಬಳು ದೇಶ ವಿರೋಧಿ ಪೋಸ್ಟ್‌ ಹಾಕಿದ್ದು, (Mangalore Doctor Controversy) ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕಾಪಾಡಿ, ಕೊಳಕು ಹಿಂದೂಗಳು ನನ್ನ ಹಿಂದೆ ಬಿದ್ದಿದ್ದಾರೆ. ಹೌದು ನಾನು ಭಾರತೀಯಳು, ಹೌದು ನಾನು ಭಾರತವನ್ನು ದ್ವೇಷಿಸುತ್ತೇನೆ ಎಂದು ಆಕೆ ತನ್ನ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾಳೆ.

ಪಹಲ್ಗಾಮ್ ದಾಳಿ ನಂತರ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಇರುವ ಸಂದರ್ಭದಲ್ಲಿಯೇ ವೈದ್ಯೆ ಈ ರೀತಿ ಪೋಸ್ಟ್ ಮಾಡಿರುವುದಕ್ಕೆ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆ ವೈದ್ಯೆ ಅಫೀಫ ಫಾತಿಮಾ ಎಂಬಾಕೆ ದೇಶ ವಿರೋಧಿ ಸಂದೇಶ ಪ್ರಕಟಿಸಿದ್ದು, ಸದ್ಯ ಆಕೆಯ ವಿರುದ್ಧ ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ. ಹೈಲ್ಯಾಂಡ್ ಆಸ್ಪತ್ರೆ ಹೆಚ್​ಆರ್​ ಮೊಹಮ್ಮದ್ ಅಸ್ಲಾಂ ದೂರು ಆಧರಿಸಿ ಬಿಎನ್​ಎಸ್​​ ಕಲಂ 196(1)(a), 353(2) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಪಹಲ್ಗಾಮ್​ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಯನ್ನು ಆಡಳಿತ ಪಕ್ಷ ಹಾಗೂ ಗುಪ್ತಚರ ಇಲಾಖೆ ಮತ್ತು ಭದ್ರತಾಪಡೆಗಳ ವೈಫಲ್ಯ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ಭೋಜ್‌ಪುರಿ ಗಾಯಕಿ ನೇಹಾ ಸಿಂಗ್ ರಾಥೋಡ್ ವಿರುದ್ಧ ದೇಶದ್ರೋಹ ಕೇಸ್‌ ಹಾಕಲಾಗಿದೆ . ಗಾಯಕಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ 40 ಸಿಆರ್‌ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ ನಂತರ, ಪ್ರಧಾನಿ ಮೋದಿ ಈಗ ಬಿಹಾರದಲ್ಲಿ ಪಹಲ್ಗಾಮ್ ದಾಳಿಯ ಹೆಸರಿನಲ್ಲಿ ಮತ ಯಾಚಿಸುತ್ತಾರೆ ಎಂಬ ಪೋಸ್ಟ್‌ನನ್ನು ಹಂಚಿಕೊಂಡಿದ್ದರು.

ಈ ಸುದ್ದಿಯನ್ನೂ ಓದಿ: Taliban foreign minister: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಆದ ಕೆಲವೇ ದಿನಗಳಲ್ಲಿ ತಾಲಿಬಾನ್‌ ವಿದೇಶಾಂಗ ಸಚಿವರನ್ನು ಭೇಟಿಯಾದ ಭಾರತೀಯ ರಾಯಭಾರಿ!

ಪಾಕಿಸ್ತಾನಿ ಪತ್ರಕರ್ತರ ಗುಂಪಿನಿಂದ ನಡೆಸಲ್ಪಡುವ ಎಕ್ಸ್ ಹ್ಯಾಂಡಲ್‌ನಿಂದ ಈ ವಿಡಿಯೋವನ್ನು ಮೊದಲು ಪೋಸ್ಟ್‌ ಮಾಡಲಾಗಿತ್ತು. ಇದೀಗ ನೇಹಾ ಅದನ್ನು ಮರುಪೋಸ್ಟ್‌ ಮಾಡಿದ್ದರು. ದೇಶದ್ರೋಹದ ಆರೋಪದ ಮೇಲೆ ಲಕ್ನೋದ ಹಜರತ್‌ಗಂಜ್‌ನಲ್ಲಿ ನೇಹಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಾಯಕಿ ಈ ಹಿಂದೆ ಇದೇ ರೀತಿಯ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗಾಗಿ ವಿವಾದಗಳಿಗೆ ಸಿಲುಕಿದ್ದರು. ಉಗ್ರರ ದಾಳಿಯನ್ನು ಸಮರ್ಥಿಸಿಕೊಂಡಿದ್ದ ಅಸ್ಸಾಂ ಶಾಸಕರೊಬ್ಬರನ್ನು ಬಂಧಿಸಲಾಗಿದೆ.