Dharmasthala case: ಇಂದು ಮಾಸ್ಕ್ ಮ್ಯಾನ್ ಚಿನ್ನಯ್ಯನ ಎಸ್‌ಐಟಿ ಕಸ್ಟಡಿ ಅಂತ್ಯ, ನ್ಯಾಯಾಂಗ ಬಂಧನ ಸಾಧ್ಯತೆ
Mask Man: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೊಂಡು ಪ್ರತ್ಯಕ್ಷನಾಗಿದ್ದ ಈತನ ಹೇಳಿಕೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿ ತನಿಖೆಗೆ ಆದೇಶ ನೀಡಿತ್ತು. ಆದರೆ ತನಿಖೆಯಲ್ಲಿ ಟ್ವಿಸ್ಟ್ ಸಿಕ್ಕಿದ್ದು, ದೂರುದಾರ ಚಿನ್ನಯ್ಯನ ವಿರುದ್ಧವೇ ತನಿಖೆಯ ತೂಗುಗತ್ತಿ ತಿರುಗಿತ್ತು. ತಾನು ದೊಡ್ಡದೊಂದು ತಂಡದ ಷಡ್ಯಂತ್ರದ ಭಾಗ ಎಂದು ಆತ ಒಪ್ಪಿಕೊಂಡಿದ್ದ.

-

ದಕ್ಷಿಣ ಕನ್ನಡ: ಧರ್ಮಸ್ಥಳ ಕೇಸ್ (Dharmasthala case) ಪ್ರಮುಖ ಪಾತ್ರಧಾರಿಯಾಗಿರುವ ʼಮಾಸ್ಕ್ ಮ್ಯಾನ್ʼ ಚಿನ್ನಯ್ಯನ (Mask man chinnayya) ಎಸ್‌ಐಟಿ ಕಸ್ಟಡಿ ಇಂದು ಮುಕ್ತಾಯವಾಗುತ್ತಿದೆ. ಇಂದು ಚಿನ್ನಯ್ಯನನ್ನು ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಚಿನ್ನಯ್ಯನನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ. 15 ದಿನಗಳಿಂದ ಚಿನ್ನಯ್ಯ ಎಸ್ಐಟಿ ಪೊಲೀಸರ ಕಸ್ಟಡಿಯಲ್ಲಿ ಇದ್ದಾನೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೊಂಡು ಪ್ರತ್ಯಕ್ಷನಾಗಿದ್ದ ಈತನ ಹೇಳಿಕೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿ ತನಿಖೆಗೆ ಆದೇಶ ನೀಡಿತ್ತು. ಆದರೆ ತನಿಖೆಯಲ್ಲಿ ಟ್ವಿಸ್ಟ್ ಸಿಕ್ಕಿದ್ದು, ದೂರುದಾರ ಚಿನ್ನಯ್ಯನ ವಿರುದ್ಧವೇ ತನಿಖೆಯ ತೂಗುಗತ್ತಿ ತಿರುಗಿತ್ತು. ತಾನು ದೊಡ್ಡದೊಂದು ತಂಡದ ಷಡ್ಯಂತ್ರದ ಭಾಗ ಎಂದು ಆತ ಒಪ್ಪಿಕೊಂಡಿದ್ದ.
ಬಳಿಕ ಮಾಸ್ ಮ್ಯಾನ್ ಚಿನ್ನಯ್ಯನನ್ನು SIT ಅಧಿಕಾರಿಗಳು ವಶಕ್ಕೆ ಪಡೆದು ಕೋರ್ಟಿಗೆ ಹಾಜರುಪಡಿಸಿದ್ದರು. ಈ ವೇಳೆ ಕೋರ್ಟ್ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಎಸ್ಐಟಿ ಕಸ್ಟಡಿಗೆ ನೀಡಿತ್ತು. ಆಗಸ್ಟ್ 23 ರಂದು ಎಸ್ಐಟಿ ಅಧಿಕಾರಿಗಳು ಚಿನ್ನಯನನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ್ದರು. ಈ ವೇಳೆ ಪ್ರಾರಂಭದಲ್ಲಿ 12 ದಿನಗಳ ಕಾಲ ನ್ಯಾಯಾಲಯ ಕಸ್ಟಡಿಗೆ ನೀಡಿತ್ತು. ಬಳಿಕ ಮತ್ತೆ ಮೂರು ದಿನ ಕಸ್ಟಡಿಗೆ ಎಸ್ಐಟಿ ಪೊಲೀಸರು ಪಡೆದಿದ್ದರು. ಇದೀಗ ಒಟ್ಟು 15 ದಿನಗಳ ಕಾಲ ಎಸ್‌ಐಟಿ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗುತ್ತಿದೆ.
ಇಂದು ಮತ್ತೆ ಚಿನ್ನಯ್ಯನನ್ನು ಕೋರ್ಟಿಗೆ ಹಾಜರಪಡಿಸಲಿದ್ದು ಚಿನ್ನಯ್ಯ ಬಹುತೇಕ ಜೈಲು ಪಾಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಂದು ಮತ್ತೆ ಆತನ ವೈದ್ಯಕೀಯ ತಪಾಸಣೆ ಮಾಡಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಯಲಿದೆ. ಬಳಿಕ ಬೆಳ್ತಂಗಡಿ ಕೋರ್ಟಿಗೆ ಚಿನ್ನಯ್ಯನನ್ನು ಹಾಜರುಪಡಿಸಲಿದ್ದಾರೆ.
ಈ ನಡುವೆ, ಕೇಸ್‌ಗೆ ದಿನಕ್ಕೊಂದು ತಿರುವು ಸಿಗುತ್ತಿದೆ. ಧರ್ಮಸ್ಥಳದ ತಲೆ ಬುರುಡೆ ಪ್ರಕರಣದಲ್ಲಿ ಒಬ್ಬೊಬ್ಬರನ್ನೇ ಎಸ್ಐಟಿ (SIT) ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ತಲೆಬುರುಡೆ ರಹಸ್ಯದ ಬಗ್ಗೆ ದೂರುದಾರ ಜಯಂತ್ ಬಾಯ್ಬಿಟ್ಟಿದ್ದು, ತಲೆ ಬುರುಡೆ ತಂದುಕೊಟ್ಟಿದ್ದು ಗಿರೀಶ್ ಮಟ್ಟಣ್ೞನವರ್ ಎಂದು ಹೇಳಿಕೆ ನೀಡಿದ್ದಾನೆ ಎಂದು ಗೊತ್ತಾಗಿದೆ. ಬೆಳ್ತಂಗಡಿಯಲ್ಲಿ ಎಸ್‌ಐಟಿ ಕಚೇರಿಗೆ ಬಂದು ವಿಚಾರಣೆ ಎದುರಿಸಿದ ಜಯಂತ್, ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ.
ಕೊಲೆಯಾದ ಸೌಜನ್ಯ ಮಾವ ವಿಠಲ ಗೌಡನನ್ನು ಕೂಡ ನೋಟೀಸ್ ನೀಡಿ ಎಸ್‌ಐಟಿ ಕಚೇರಿಗೆ ಕರೆಸಲಾಗಿದೆ. ಬುರುಡೆ ಕೇಸ್ನಲ್ಲಿ ಕೇರಳ ಮೂಲದ ಯೂಟ್ಯೂಬರ್ ಮನಾಫ್ಗೆ ಎಸ್ಐಟಿ ನೊಟೀಸ್ ನೀಟಿದೆ. ಬುರುಡೆ ಪ್ರಕರಣ ಸಂಬಂಧಿಸಿದಂತೆ ಆರಂಭದಿಂದಲೂ ತನ್ನ ಯೂಟ್ಯೂಬ್‌ನಲ್ಲಿ ಈ ಮುನಾಫ್ ನಾನಾ ಕಥೆಗಳನ್ನು ಕಟ್ಟಿದ್ದ.
ಯೂಟ್ಯೂಬರ್ ಸುಮಂತ್ ಎಂಬವರು, ಧರ್ಮಸ್ಥಳ ವಿರುದ್ಧ ಷಡ್ಯಂತ್ರ ರೂಪಿಸಲಾಗಿದ್ದು, ಈ ಷಡ್ಯಂತ್ರವನ್ನು ಉತ್ತೇಜಿಸಲು ಕೆಲವು ಯೂಟ್ಯೂಬರ್‌ಗಳಿಗೆ ದೊಡ್ಡಮಟ್ಟದಲ್ಲಿ ಆರ್ಥಿಕ ನೆರವು ಒದಗಿಸಲಾಗಿದೆ ಎಂದು ಆರೋಪಿಸಿದ್ದಾರೆ. ತನಗೂ ಈ ಷಡ್ಯಂತ್ರವನ್ನು ಉತ್ತೇಜಿಸುವಂತಹ ಆಫರ್ ಬಂದಿತ್ತು ಎಂದು ಬಹಿರಂಗಪಡಿಸಿದ್ದಾನೆ.
ಇದನ್ನೂ ಓದಿ: Dharmasthala Case: ಗಿರೀಶ್ ಮಟ್ಟಣ್ಣವರ್ ವಿರುದ್ಧ ಮತ್ತೊಂದು ಎಫ್‌ಐಆರ್