Pawan Kalyan: ಧರ್ಮಸ್ಥಳ ಪರ ನಿಂತ ಆಂಧ್ರ ಡಿಸಿಎಂ ಪವನ್ ಕಲ್ಯಾಣ್; ಸೆ.11ಕ್ಕೆ ಭೇಟಿ
Dharmasthala Case: ಸೆಪ್ಟೆಂಬರ್ 11 ಗುರುವಾರ ಸಂಜೆ 5 ಗಂಟೆಗೆ ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ದೇವರಿಗೆ ವಿಶೇಷ ಸೇವೆ ಹಮ್ಮಿಕೊಳ್ಳಲಾಗಿದೆ. ಕ್ಷೇತ್ರದ ಅಪಪ್ರಚಾರ ವಿರುದ್ಧ ವಿಶೇಷ ಪೂಜೆ ಸಲ್ಲಿಸಲು ಪವನ್ ಕಲ್ಯಾಣ್ ಮುಂದಾಗಿದ್ದಾರೆ ಎನ್ನಲಾಗಿದೆ.

-

ಧರ್ಮಸ್ಥಳ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಬಿಜೆಪಿ, ಜೆಡಿಎಸ್‌ನಿಂದ ಧರ್ಮಸ್ಥಳ ಚಲೋ ಬೆನ್ನಲ್ಲೇ ಇದೀಗ ಧರ್ಮಸ್ಥಳದ ಪರ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ನಿಂತಿದ್ದಾರೆ. ಪವನ್ ಕಲ್ಯಾಣ್ ಅವರು ಸೆಪ್ಟೆಂಬರ್ 11 ರಂದು ಧರ್ಮಸ್ಥಳಕ್ಕೆ ಭೇಟಿ ನೀಡಿ, ಮಂಜುನಾಥನ ದರ್ಶನ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 11 ಗುರುವಾರ ಸಂಜೆ 5 ಗಂಟೆಗೆ ಪವನ್ ಕಲ್ಯಾಣ್ ನೇತೃತ್ವದಲ್ಲಿ ದೇವರಿಗೆ ವಿಶೇಷ ಸೇವೆ ಹಮ್ಮಿಕೊಳ್ಳಲಾಗಿದೆ. ಕ್ಷೇತ್ರದ ಅಪಪ್ರಚಾರ ವಿರುದ್ಧ ವಿಶೇಷ ಪೂಜೆ ಸಲ್ಲಿಸಲು ಪವನ್ ಕಲ್ಯಾಣ್ ಮುಂದಾಗಿದ್ದಾರೆ ಎನ್ನಲಾಗಿದೆ. ಸಂಜೆ ದೇವಸ್ಥಾನದ ಮುಂಭಾಗ ವಿಶೇಷ ಆರತಿ ಸೇವೆ ಕೂಡ ನಡೆಯಲಿದೆ.
ತಿರುಪತಿ ತಿಮ್ಮಪ್ಪನ ಲಡ್ಡು ವಿವಾದದ ವೇಳೆ ಕೂಡ ಪವನ್ ಕಲ್ಯಾಣ್ ಧರ್ಮ ರಕ್ಷಣೆ ನಮ್ಮ ಗುರಿ ಎಂದಿದ್ದರು. ಹಿಂದೂ ಧರ್ಮದ ರಕ್ಷಣೆಗೆ ನಾನು ಸದಾ ಸಿದ್ಧ ಎಂದು ಘೋಷಿಸಿದ್ದರು. ಇದೀಗ ಪವನ್ ಕಲ್ಯಾಣ್ ಧರ್ಮಸ್ಥಳ ಪರ ಬೆಂಬಲ ವ್ಯಕ್ತಪಡಿಸಲು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ | Tumkur News: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಮನೆ ಹಸ್ತಾಂತರ
ಸೌಜನ್ಯಳನ್ನು ಕೊಂದಿದ್ದು ಆಕೆಯ ಮಾವ ವಿಠಲ್ ಗೌಡ: ಸ್ನೇಹಮಯಿ ಕೃಷ್ಣ ದೂರು
ಮಂಗಳೂರು: ಸೌಜನ್ಯ ಮೇಲೆ ಅತ್ಯಾಚಾರ ಎಸಗಿ, ಕೊಲೆ (Sowjanya case) ಮಾಡಿದ್ದು ಆಕೆಯ ಮಾವ ವಿಠಲ್ ಗೌಡ ಎಂದು ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ದಕ್ಷಿಣ ಕನ್ನಡ ಎಸ್‌ಪಿ ಡಾ.ಅರುಣ್ ಕುಮಾರ್‌ಗೆ ದೂರು ಅರ್ಜಿ ಸಲ್ಲಿಸಿದ್ದಾರೆ.
ಸೌಜನ್ಯಳ ಮೇಲೆ ಸೋದರಮಾವ ವಿಠಲ ಗೌಡಗೆ ಕೆಟ್ಟ ದೃಷ್ಟಿ ಇತ್ತು. ಆಕೆಯನ್ನು ಬಳಸಿಕೊಳ್ಳಲು ಬಹಳ ಸಮಯದಿಂದ ಹವಣಿಸುತ್ತಿದ್ದ. ಒಪ್ಪದೇ ಇದ್ದಂತಹ ಸಂದರ್ಭದಲ್ಲಿ ಆಕೆ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದಿದ್ದಾನೆ ಎಂದು ಆರೋಪಿಸಿದ್ದಾರೆ.
ಸೌಜನ್ಯ ತಾಯಿ ಕುಸುಮಾವತಿಗೂ ಸಹೋದರ ವಿಠಲ್ ಗೌಡನ ಮೇಲೆ ಸಂಶಯವಿತ್ತು. ಮಗಳ ಮೃತದೇಹವನ್ನು ನೋಡಲು ಕುಸುಮಾವತಿ ಹೋಗಿರಲಿಲ್ಲ. ಸಂತೋಷ್ ರಾವ್ ಅವರನ್ನು ಈ ಕೃತ್ಯಕ್ಕೆ ಬಳಸಿಕೊಂಡಿರಬಹುದು. ಈ ಬಗ್ಗೆ ನಾನು ಬಹಳ ದಿನಗಳಿಂದ ಮಾಹಿತಿಗಳನ್ನು ಕಲೆ ಹಾಕುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Sasikanth senthil: ಧರ್ಮಸ್ಥಳ ಪ್ರಕರಣ; ಜನಾರ್ದನ ರೆಡ್ಡಿ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಿದ ಸೆಂಥಿಲ್
ಸಾಂದರ್ಭಿಕ ಸಾಕ್ಷಿಗಳನ್ನು ಇಟ್ಟುಕೊಂಡು ತನಿಖೆ ಮಾಡಬೇಕು. ಪ್ರಕರಣದ ಸಂಪೂರ್ಣ ಮರು ತನಿಖೆ ನಡೆಸಿ ಆರೋಪಿಗೆ ಶಿಕ್ಷೆ ವಿಧಿಸಬೇಕು. ವಿಠಲ ಗೌಡನ ಮಂಪರು ಪರೀಕ್ಷೆ ಮಾಡಬೇಕು. ಮಂಪರು ಪರೀಕ್ಷೆಯಿಂದ ಸತ್ಯ ಬಹಿರಂಗವಾಗಲಿದೆ ಎಂದು ಹೇಳಿದ್ದಾರೆ.