ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Caste census: ಜಾತಿಗಣತಿ ವಿಚಾರದಲ್ಲಿ ಆತುರ ಇಲ್ಲ, ಎಲ್ಲರಿಗೂ ನ್ಯಾಯ ಸಿಗಲಿದೆ: ಡಿ.ಕೆ.ಶಿವಕುಮಾರ್

DK Shivakumar: ಜಾತಿ ಗಣತಿ ವರದಿ ಬಗ್ಗೆ ನಾವು ಈಗಿನ್ನೂ ಚರ್ಚೆ ಮಾಡುತ್ತಿದ್ದೇವೆ. ಕೆಲವರು ಸಲಹೆ ನೀಡುತ್ತಿದ್ದಾರೆ. ಈ ಸಮೀಕ್ಷೆಯಲ್ಲಿ 90% ಜನರಿಂದ ಮಾಹಿತಿ ಪಡೆದಿದ್ದಾರೆ. ನಾವಿನ್ನೂ ವರದಿ ತೆರೆದು ಅಧ್ಯಯನ ಆರಂಭಿಸಿದ್ದೇವೆ. ಇದಕ್ಕೆ ಸಮಯ ಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಜಾತಿಗಣತಿ ವಿಚಾರದಲ್ಲಿ ಎಲ್ಲರಿಗೂ ನ್ಯಾಯ ಸಿಗಲಿದೆ ಎಂದ ಡಿಕೆಶಿ

Profile Prabhakara R Apr 20, 2025 3:46 PM

ಮಂಗಳೂರು: "ತುಳಿತಕ್ಕೆ ಒಳಗಾದವರಿಗೆ ಶಕ್ತಿ ತುಂಬಿ, ಎಲ್ಲರಿಗೂ ನ್ಯಾಯ ಒದಗಿಸಿಕೊಡಲಾಗುವುದು, ಈ ವಿಚಾರದಲ್ಲಿ ಯಾವುದೇ ಆತುರದ ನಿರ್ಧಾರ ಇರುವುದಿಲ್ಲ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನ ಪಡೆದ ನಂತರ ಭಾನುವಾರ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಜಾತಿಗಣತಿಗೆ (Caste census) ಕೆಲವು ಸಮುದಾಯಗಳ ವಿರೋಧ ವ್ಯಕ್ತವಾಗುತ್ತಿದ್ದು, ರಾಹುಲ್ ಗಾಂಧಿ ಅವರ ಪತ್ರದಲ್ಲಿ ಬೇಗ ವರದಿ ಜಾರಿ ಮಾಡಿ ಎಂದು ಹೇಳಲಾಗಿದೆ ಎಂದು ಕೇಳಿದಾಗ, "ನಾನು ಆ ಪತ್ರವನ್ನು ನೋಡಿಲ್ಲ. ಕಾಂಗ್ರೆಸ್ ಎಲ್ಲಾ ಸಮುದಾಯವನ್ನು ಸರಿಸಮನಾಗಿ ತೆಗೆದುಕೊಂಡು ಹೋಗಲು ಬದ್ಧವಾಗಿದೆ. ಎಲ್ಲರಿಗೂ ನ್ಯಾಯ ಒದಗಿಸುವ ಉದ್ದೇಶವಿದೆ ಎಂದು ಹೇಳಿದರು.

ಯಾರಿಗಾದರೂ ಅನ್ಯಾಯ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ತುಳಿತಕ್ಕೆ ಒಳಗಾದವರಿಗೆ ಶಕ್ತಿ ತುಂಬುವುದು ಪ್ರಮುಖ ಉದ್ದೇಶ. ಜೈನರು, ಒಕ್ಕಲಿಗರು, ಲಿಂಗಾಯತರು ಸೇರಿದಂತೆ ಎಲ್ಲಾ ಸಮುದಾಯದಲ್ಲೂ ಬಡವರಿದ್ದಾರೆ. ಎಲ್ಲರಿಗೂ ನ್ಯಾಯ ಒದಗಿಸಿಕೊಡಲಾಗುವುದು" ಎಂದು ಹೇಳಿದರು.

ವರದಿ ಅವೈಜ್ಞಾನಿಕ ಎಂಬ ಆರೋಪಗಳ ಬಗ್ಗೆ ಕೇಳಿದಾಗ, "ನಾವು ಈಗಿನ್ನೂ ಚರ್ಚೆ ಮಾಡುತ್ತಿದ್ದೇವೆ. ಕೆಲವರು ಸಲಹೆ ನೀಡುತ್ತಿದ್ದಾರೆ. ಈ ಸಮೀಕ್ಷೆಯಲ್ಲಿ 90% ಜನರಿಂದ ಮಾಹಿತಿ ಪಡೆದಿದ್ದಾರೆ. ನಾವಿನ್ನೂ ವರದಿ ತೆರೆದು ಅಧ್ಯಯನ ಆರಂಭಿಸಿದ್ದೇವೆ. ಇದಕ್ಕೆ ಸಮಯ ಬೇಕು. ಈ ವಿಚಾರದಲ್ಲಿ ಯಾವುದೇ ಆತುರದ ತೀರ್ಮಾನವಿಲ್ಲ" ಎಂದು ತಿಳಿಸಿದರು.

ಭಾವನೆಗಿಂತ ಬದುಕು ಮುಖ್ಯ

ಕರಾವಳಿ ಭಾಗದಲ್ಲಿ ಪಕ್ಷ ಬಲವರ್ಧನೆಗೆ ಆದ್ಯತೆ ನೀಡಲಾಗುತ್ತಿದೆಯೇ ಎಂದು ಕೇಳಿದಾಗ, "ಕರಾವಳಿ ಭಾಗದಲ್ಲಿ ಜನರ ಬದುಕು ಮುಖ್ಯ. ಭಾವನೆಗಿಂತ ಬದುಕು ಮುಖ್ಯ. ಹೀಗಾಗಿ ನಾವು ಭಾವನೆಗಿಂತ ಬದುಕು ಮುಖ್ಯ. ಈ ಭಾಗದಲ್ಲಿ ನಮ್ಮ ಪಕ್ಷದಿಂದ ಕೇವಲ ಇಬ್ಬರು ಶಾಸಕರು ಮಾತ್ರ ಗೆದ್ದಿದ್ದಾರೆ. ಈ ಭಾಗದಲ್ಲಿ ಎಲ್ಲರಿಗೂ ಒಳ್ಳೆಯದಾಗಬೇಕು. ರಾಜ್ಯದಲ್ಲಿ ಬಲಿಷ್ಠ ಸರ್ಕಾರ ಆಡಳಿತದಲ್ಲಿದೆ. ಇಲ್ಲಿ ನಮ್ಮ ಪ್ರತಿನಿಧಿಗಳು ಬೇಕು. ಈ ಭಾಗದಲ್ಲಿ ಜನ ಬಿಜೆಪಿ ಗೆಲ್ಲಿಸಿದರು. ಆದರೂ ಈ ಭಾಗದ ಕುಟುಂಬಗಳಿಗೆ ಕಾಂಗ್ರೆಸ್ ನಿಂದ ಸಹಾಯವಾಗುತ್ತಿದೆಯೇ ಹೊರತು ಬಿಜೆಪಿಯಿಂದಲ್ಲ. ಇದನ್ನು ಜನರಿಗೆ ಮನದಟ್ಟು ಮಾಡಬೇಕು" ಎಂದು ತಿಳಿಸಿದರು.

ಕರಾವಳಿಯನ್ನು ಹಿಂದುತ್ವದ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದು, "ಕೇವಲ ಹಿಂದೂ ಧರ್ಮ ಮಾತ್ರವಲ್ಲ, ಎಲ್ಲ ಧರ್ಮಕ್ಕೂ ಇದು ಭದ್ರಕೋಟೆ. ಇಲ್ಲಿರುವ ನೀರು, ದೇವಾಲಯ, ದರ್ಗಾ, ವಾತಾವರಣ, ಪರಿಸರ ಜಾತಿ ಧರ್ಮದ ಮೇಲೆ ಇಲ್ಲ. ಈ ಭಾಗದ ಶಿಕ್ಷಣ ಸಂಸ್ಥೆ, ಬ್ಯಾಂಕುಗಳು ಎಲ್ಲಾ ವರ್ಗಕ್ಕೂ ಇವೆ. ಕೆಲವರು ಮಾತ್ರ ನಾವು ಹಿಂದೂ ನಾವು ಮಾತ್ರ ಮುಂದು ಎಂದು ಹೇಳುತ್ತಾರೆ. ಹಿಂದೂ, ಮುಸಲ್ಮಾನ, ಸಿಖ್, ಕ್ರೈಸ್ತ, ಜೈನ ಸೇರಿ ನಾವೆಲ್ಲರೂ ಒಂದು ಎಂದು ಹೇಳುತ್ತೇವೆ" ಎಂದರು.

ಬಿಜೆಪಿಯವರು ಇಲ್ಲಿ ಹಿಂದುತ್ವದ ಮೇಲೆ ರಾಜಕೀಯ ಮಾಡುತ್ತಾರೆ ಎಂದು ಕೇಳಿದಾಗ, "ಅವರು ಏನಾದರೂ ಮಾಡಿಕೊಳ್ಳಲಿ. ನಾವು ಎಲ್ಲಾ ವರ್ಗದ ಜನರಿಗೆ ರಕ್ಷಣೆ ಮಾಡುತ್ತೇವೆ. ಬಿಜೆಪಿಯವರ ಬಗ್ಗೆ ನಾವ್ಯಾಕೆ ಟೀಕೆ ಮಾಡೋಣ?" ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನೂ ಓದಿ | Pourakarmikas: ಎಲ್ಲಾ ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸುವ ಕಾರ್ಯ ನಡೆಯುತ್ತಿದೆ: ಸಿಎಂ ಸಿದ್ದರಾಮಯ್ಯ

ನಾವು ಧರ್ಮ ಕಾಪಾಡಿಕೊಳ್ಳಬೇಕು

"ನಮಗೆ ಧರ್ಮ ಬೇಕು, ಧರ್ಮಕ್ಕೆ ನಾವಲ್ಲ. ಈ ಧರ್ಮಕ್ಷೇತ್ರ ಜನಸೇವೆ, ಸಾಮಾಜಿಕ, ಶೈಕ್ಷಣಿಕ ಸೇವೆ ಮಾಡಿಕೊಂಡು ಬಂದಿದೆ. ಇದಕ್ಕೆ ಸಹಕಾರ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ನಾವು ಧರ್ಮವನ್ನು ಕಾಪಾಡಬೇಕು. ಕರಾವಳಿ ನಮ್ಮ ರಾಜ್ಯದ ಮುಖ್ಯವಾದ ಅಂಗ. ಮನುಷ್ಯನಿಗೆ ದೇಹದ ಅಂಗಗಳು ಎಷ್ಟು ಮುಖ್ಯವೋ, ಕರಾವಳಿ ಭಾಗವೂ ಅಷ್ಟೇ ಮುಖ್ಯ" ಎಂದು ತಿಳಿಸಿದರು.