ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

mysterious death: ಕರ್ನಾಟಕದ ಇನ್ನೊಬ್ಬ ಯುವಕ ಐರ್ಲೆಂಡ್‌ನಲ್ಲಿ ನಿಗೂಢ ಸಾವು

ಕಡಬದ ಕುಟ್ರಪಾಡಿ ಗ್ರಾಮದ ವಿಮಲಗಿರಿ ನಿವಾಸಿ ಸಾಂಜೋ ಸುನಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದಾಗ್ಯೂ ಈ ಸಾವಿನ ಹಿಂದಿನ ಕಾರಣಗಳ ಕುರಿತು ಐರಿಶ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೇವಲ 28 ದಿನಗಳ ಹಿಂದೆ ಸುನಿಲ್‌ ಐರ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಅವರ ಪತ್ನಿ ಲಿಷ್ಮಾ ಅವರೊಂದಿಗೆ ವಾಸಿಸಲು ತೆರಳಿದ್ದರು.

ಸಾಂಜೋ ಸುನಿಲ್

ಡಬ್ಲಿನ್, ಫೆ.20: ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಸಾಕೇತ್ ಶ್ರೀನಿವಾಸಯ್ಯ ಸಾವಿನ ಬಳಿಕ ಮತ್ತೋರ್ವ ಕನ್ನಡಿಗ ವಿದೇಶದಲ್ಲಿ ನಿಗೂಢವಾಗಿ (mysterious death) ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ (Dakshina kannada) ಜಿಲ್ಲೆಯ ಕಡಬ (Kadaba) ಮೂಲದ ಯುವಕ ಸಾಂಜೋ ಸುನಿಲ್ ನಿಗೂಢವಾಗಿ ನಿಧನರಾಗಿರುವುದು ವರದಿಯಾಗಿದೆ. ಐರ್ಲೆಂಡ್‌ನ ಡಬ್ಲಿನ್​ನ ನಿವಾಸದಲ್ಲಿ ಸಾಂಜೋ ಸುನಿಲ್ (31) ಶವ ಪತ್ತೆಯಾಗಿದೆ.

ಕಡಬದ ಕುಟ್ರಪಾಡಿ ಗ್ರಾಮದ ವಿಮಲಗಿರಿ ನಿವಾಸಿ ಸಾಂಜೋ ಸುನಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದಾಗ್ಯೂ ಈ ಸಾವಿನ ಹಿಂದಿನ ಕಾರಣಗಳ ಕುರಿತು ಐರಿಶ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೇವಲ 28 ದಿನಗಳ ಹಿಂದೆ ಸುನಿಲ್‌ ಐರ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಅವರ ಪತ್ನಿ ಲಿಷ್ಮಾ ಅವರೊಂದಿಗೆ ವಾಸಿಸಲು ತೆರಳಿದ್ದರು.

ಉದ್ಯೋಗಕ್ಕಾಗಿ ಐರ್ಲೆಂಡ್‌ಗೆ ತೆರಳಿದ್ದ ಸುನಿಲ್‌ ತಮ್ಮ ನಿವಾಸದಲ್ಲೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ ಡಬ್ಲಿನ್ ನಗರದ ಫಿಂಗ್ಲಾಸ್‌ನ ಚಾರ್ಲ್ಸ್‌ ಟೌನ್ ಪ್ರದೇಶದ ಮನೆಯಲ್ಲಿ ಸಾಂಜೋ ಸುನಿಲ್ ವಾಸವಾಗಿದ್ದರು. ಪತಿಯ ಸಾವಿನಿಂದ ಸಾಂಜೋ ಅವರ ಪತ್ನಿ ಲಿಷ್ಮಾ ತೀವ್ರ ಆಘಾತಕ್ಕೊಳಗಾಗಿ ಅಸ್ವಸ್ಥಗೊಂಡಿದ್ದಾರೆ. ಲಿಷ್ಮಾ ಅವರನ್ನು ಪ್ರಸ್ತುತ ಆಸ್ಪತ್ರೆಗೆ ದಾಖಲಿಸಲಾಗಿದೆ

ನಿಗೂಢವಾಗಿ ಮೃತಪಟ್ಟ ಕರ್ನಾಟಕದ ವಿದ್ಯಾರ್ಥಿ ಸಾಕೇತ್‌ ಶ್ರೀನಿವಾಸಯ್ಯ ಪಾಲಕರು ಶೀಘ್ರದಲ್ಲೇ ಅಮೆರಿಕಕ್ಕೆ; ತನಿಖೆ ಏನಾಯ್ತು?

ಪ್ರಸ್ತುತ ಐರಿಶ್ ಪೊಲೀಸರು ಮರಣೋತ್ತರ ಪರೀಕ್ಷೆ ಹಾಗೂ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬಸ್ಥರು ಅಧಿಕಾರಿಗಳ ನೆರವು ಕೋರಿದ್ದಾರೆ. ಸಾವಿನ ಕಾರಣವನ್ನು ಕಂಡುಹಿಡಿಯಲು ಕುಟುಂಬವು ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದೆ. ಕಾನೂನು ವಿಧಿವಿಧಾನಗಳು ಪೂರ್ಣಗೊಂಡ ನಂತರ ಸಾಂಜೋ ಅವರ ಶವವನ್ನು ಕಡಬದಲ್ಲಿರುವ ಅವರ ಗ್ರಾಮಕ್ಕೆ ತರಲು ಕುಟುಂಬ ನಿರ್ಧರಿಸಿದೆ.

ಹರೀಶ್‌ ಕೇರ

View all posts by this author