ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Inspector Suspend: ಪತಿಯನ್ನು ಬಂಧಿಸಿ ಪತ್ನಿಯನ್ನು ಮಂಚಕ್ಕೆ ಕರೆದ ಕೇಸ್:‌ ಇನ್‌ಸ್ಪೆಕ್ಟರ್‌ ಸಸ್ಪೆಂಡ್‌

ವಿವಾದದ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಈಗ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ನಿನ್ನೆ ಮಧ್ಯಾಹ್ನದವರೆಗೂ ಪಣಂಬೂರು ಠಾಣೆಯಲ್ಲಿ ಸಂದೇಶ್ ವಿಚಾರಣೆ ನಡೆಸಿದ್ದಾರೆ. ಈ ಮಧ್ಯೆ, ಮೂಡುಬಿದಿರೆಯ ಶಾಸಕ ಉಮಾನಾಥ ಕೋಟ್ಯಾನ್ ಬೆಂಗಳೂರಿನಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿ, ಪತ್ರ ನೀಡಿದ್ದಾರೆ.

‌ಇನ್‌ಸ್ಪೆಕ್ಟರ್ ಸಂದೇಶ್

ಮಂಗಳೂರು, ಮಾ.18: ಪತಿಯನ್ನು (husband) ಸುಳ್ಳು ಕೇಸ್‌ನಲ್ಲಿ ಬಂಧಿಸಿ, ಆತನನ್ನು ಬಿಡಿಸಬೇಕಾದರೆ ತನ್ನೊಂದಿಗೆ ಲೈಂಗಿಕ ಸಂಪರ್ಕಕ್ಕೆ ಬರಬೇಕು ಎಂದು ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ ಎಂದು ಪತ್ನಿ (wife) ಆರೋಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂಡುಬಿದಿರೆ (Mudubidire) ಠಾಣೆ ಇನ್ಸ್‌ಪೆಕ್ಟರ್‌ ಸಂದೇಶರನ್ನು ಸಸ್ಪೆಂಡ್ (Inspector Suspend) ಮಾಡಲಾಗಿದೆ.

ಸಂತ್ರಸ್ತೆಯೊಬ್ಬರು ಪತಿಯನ್ನು ಸುಳ್ಳು ಕೇಸ್‌ನಲ್ಲಿ ಬಂಧಿಸಿ, ಆತನನ್ನು ಬಿಡಿಸಬೇಕಾದ್ರೆ ಲೈಂಗಿಕ ಸಂಪರ್ಕಕ್ಕೆ ಬರಬೇಕು ಅಂತ ಇನ್ಸ್‌ಪೆಕ್ಟರ್‌ ಸಂದೇಶ್ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್‌ಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೇ ಸಂದೇಶ್, ಪೋಸ್ಟಿಂಗ್‌ಗಾಗಿ 50 ಲಕ್ಷ ರೂ. ಕೊಟ್ಟಿದ್ದೇನೆ. ನೀನು ಸಹಕರಿಸದಿದ್ದರೆ 25 ಲಕ್ಷ ರೂ. ಕೊಡು ಎಂದು ಡಿಮ್ಯಾಂಡ್ ಮಾಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಆರೋಪ ಮಾಡಿರುವ ಸಂತ್ರಸ್ತೆ ವಿರುದ್ಧ ಆಕೆಯ ಸಹೋದರಿ ಗಂಭೀರ ಆರೋಪ ಮಾಡಿದ್ದಾರೆ. ಆಕೆ ನಮ್ಮ ಮಾನ ಮರ್ಯಾದೆ ತೆಗಿದಿದ್ದಾಳೆ. ಬೆಂಗಳೂರಿನ ಮಡಿವಾಳ ಠಾಣೆಯಲ್ಲಿ ಆಕೆಯ ವಿರುದ್ಧ ವೇಶ್ಯಾವಾಟಿಕೆ ಕೇಸ್ ಇದೆ. ಹಲವಾರು ಅಧಿಕಾರಿಗಳ ವಿರುದ್ಧ ಈಕೆ ಇದೇ ರೀತಿ ಆರೋಪ ಮಾಡಿದ್ದಾಳೆ. ನನ್ನ ಕೌಟುಂಬಿಕ ಕಲಹದ ವಿಚಾರವಾಗಿ ನನ್ನ ಗಂಡನ ಪರವಾಗಿ ಆಕೆ, ಆಕೆಯ ಮಗ ಬಂದಿದ್ದರು. ಜೋರಾಗಿ ಮಾತಾಡಿದ್ದಳು. ಆಕೆ ಮಗ ವಿಡಿಯೋ ಮಾಡ್ತಿದ್ದ, ನನಗೆ ಹೊಡೆಯೋಕೆ ಬಂದ. ಆಗ ಇನ್ಸ್ಪೆಕ್ಟರ್ ಎರಡೇಟು ಬಿಗಿದು ಕೂರಿಸಿದ್ದರು. ಇದೇ ವಿಷಯಕ್ಕೆ ಆಕೆ ಇನ್ಸ್‌ಪೆಕ್ಟರ್‌ ಮೇಲೆ ಜಿದ್ದು ಸಾಧಿಸುತ್ತಿದ್ದಾಳೆ ಅಂತ ಹೇಳಿದ್ದಾರೆ.

ಈ ವಿವಾದದ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಈಗ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ನಿನ್ನೆ ಮಧ್ಯಾಹ್ನದವರೆಗೂ ಪಣಂಬೂರು ಠಾಣೆಯಲ್ಲಿ ಸಂದೇಶ್ ವಿಚಾರಣೆ ನಡೆಸಿದ್ದಾರೆ. ಈ ಮಧ್ಯೆ, ಮೂಡುಬಿದಿರೆಯ ಶಾಸಕ ಉಮಾನಾಥ ಕೋಟ್ಯಾನ್ ಬೆಂಗಳೂರಿನಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿ, ಪತ್ರ ನೀಡಿದ್ದಾರೆ. ಇನ್ಸ್‌ಪೆಕ್ಟರ್‌ ಸಂದೇಶ್‌ರನ್ನು ಅಮಾನತಿನಲ್ಲಿಟ್ಟು ತನಿಖೆ ಮಾಡಬೇಕು ಅಂದಿದ್ದಾರೆ. ಮಂಗಳೂರು ಪೊಲೀಸ್ ಕಮೀಷನರ್‌ಗೆ ವರದಿ ಕೊಡುವಂತೆ ಗೃಹ ಸಚಿವ ಪರಮೇಶ್ವರ್ ಸೂಚನೆ ನೀಡಿದ್ದಾರೆ. ಈ ಬೆನ್ನಲ್ಲೇ ಇನ್ಸ್‌ಪೆಕ್ಟರ್‌ಸಂದೇಶರನ್ನು ಸಸ್ಪೆಂಡ್ ಮಾಡಲಾಗಿದೆ.

ಹರೀಶ್‌ ಕೇರ

View all posts by this author