ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala Case: ಬಂಗ್ಲೆಗುಡ್ಡದಲ್ಲಿ ಸದ್ಯಕ್ಕಿಲ್ಲ ಗುಂಡಿ ಅಗೆಯುವ ಕಾರ್ಯ; ಹೆಚ್ಚಿನ ಸಾಕ್ಷ್ಯ ಸಂಗ್ರಹಕ್ಕೆ ಮುಂದಾದ ಎಸ್‌ಐಟಿ

Dharmasthala Case: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು (ಸೋಮವಾರ) ಸ್ಥಳಕ್ಕೆ ಭೇಟಿ ನೀಡಲು ನಿರ್ಧರಿಸಿತ್ತು. ಆದರೆ, ಹೆಚ್ಚಿನ ಮಾಹಿತಿ ಸಂಗ್ರಹದ ನಂತರವಷ್ಟೇ ಬಂಗ್ಲೆಗುಡ್ಡದಲ್ಲಿ ಅಗೆಯಲು ಎಸ್‌ಐಟಿ ತೀರ್ಮಾನ ಮಾಡಿದೆ ಎನ್ನಲಾಗಿದೆ.

ಧರ್ಮಸ್ಥಳ ಪ್ರಕರಣ; ಬಂಗ್ಲೆಗುಡ್ಡದಲ್ಲಿ ಸದ್ಯಕ್ಕಿಲ್ಲ ಗುಂಡಿ ಅಗೆಯುವ ಕಾರ್ಯ

-

Prabhakara R Prabhakara R Sep 15, 2025 10:12 PM

ದಕ್ಷಿಣ ಕನ್ನಡ: ಧರ್ಮಸ್ಥಳ ಪ್ರಕರಣಕ್ಕೆ (Dharmasthala Case) ಸಂಬಂಧಿಸಿ ಎಸ್‌ಐಟಿ ತಂಡವು ಅಸ್ಥಿಪಂಜರಗಳನ್ನು ಹುಡುಕಲು ಬಂಗ್ಲೆಗುಡ್ಡದಲ್ಲಿ ಶೋಧ ಕಾರ್ಯ ಮತ್ತು ಉತ್ಖನನ ನಡೆಸಲು ಯೋಜಿಸಿತ್ತು. ಇದಕ್ಕಾಗಿ ಅಗತ್ಯ ಮಾಹಿತಿ ಒದಗಿಸಲು ಅರಣ್ಯ ಇಲಾಖೆ ಒಪ್ಪಿತ್ತು. ಆದರೆ, ಈಗ ಆಳವಾದ ಅಧ್ಯಯನ ಹಾಗೂ ಹೆಚ್ಚಿನ ಮಾಹಿತಿ ಸಂಗ್ರಹದ ನಂತರವಷ್ಟೇ ಬಂಗ್ಲೆಗುಡ್ಡದಲ್ಲಿ ಅಗೆಯಲು ಎಸ್‌ಐಟಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಸದ್ಯಕ್ಕೆ ಉತ್ಖನನದ ಬದಲು ಭೂಮಿಯ ಮೇಲ್ಭಾಗದಲ್ಲಿ ಸಿಗಬಹುದಾದ ಅಸ್ಥಿಪಂಜರಗಳ ಅವಶೇಷ ಸಂಗ್ರಹಿಸಲು ತಂಡ ನಿರ್ಧರಿಸಿದೆ. ಈ ತನಿಖೆಯ ಮುಂದಿನ ಹಂತವು ಅರಣ್ಯ ಇಲಾಖೆ ಒದಗಿಸುವ ದಾಖಲೆಗಳನ್ನು ಅವಲಂಬಿಸಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲು ಮುಂದಾಗಿದ್ದರು. ಆದರೆ, ಈಗ ಸ್ಥಳ ಭೇಟಿಯ ಬದಲು ನೇರವಾಗಿ ಉಪಗ್ರಹ ಚಿತ್ರಗಳು ಮತ್ತು ಇತರ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಅರಣ್ಯದ ವಿಸ್ತೀರ್ಣ ಮತ್ತು ಮರಗಳ ಮಾಹಿತಿಯನ್ನು ನೀಡಲು ಅರಣ್ಯ ಇಲಾಖೆ ಒಪ್ಪಿಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು (ಸೋಮವಾರ) ಸ್ಥಳಕ್ಕೆ ಭೇಟಿ ನೀಡಲು ನಿರ್ಧರಿಸಿತ್ತು. ಆದರೆ, ಹೆಚ್ಚಿನ ಮಾಹಿತಿ ಸಂಗ್ರಹದ ನಂತರವಷ್ಟೇ ಬಂಗ್ಲೆಗುಡ್ಡದಲ್ಲಿ ಅಗೆಯಲು ಎಸ್‌ಐಟಿ ತೀರ್ಮಾನ ಮಾಡಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ | Dharmasthala Case: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಕೇರಳದ ಕಮ್ಯುನಿಸ್ಟ್‌ ಸಂಸದನ ಹೆಸರು!

ಬಂಗ್ಲೆಗುಡ್ಡದಲ್ಲಿ ಮಹಜರು ವೇಳೆ ಅಧಿಕಾರಿಗಳಿಗೆ ಮತ್ತಷ್ಟು ಅಸ್ಥಿಪಂಜರ ಇರುವ ಬಗ್ಗೆ ಸೌಜನ್ಯಾ ಮಾವ ವಿಠಲ್ ಗೌಡ ಹೇಳಿದ್ದರು. ಚಿನ್ನಯ್ಯ ಸುಳ್ಳು ಹೇಳುತ್ತಿದ್ದಾನೆ, ಆತನು ಹೂತಿದ್ದನ್ನು ನಾನು ನೋಡಿದ್ದೇನೆ ಎಂದು ಆರೋಪಿಸಿದ್ದರು. ಹೀಗಾಗಿ, ವಿಠಲ್ ಗೌಡರನ್ನು ಕರೆದುಕೊಂಡು ಹೋಗಿ ಮತ್ತೆ ಶೋಧ ನಡೆಸಲು ಎಸ್‌ಐಟಿ ನಿರ್ಧರಿಸಿತ್ತು. ಆದರೆ, ಸದ್ಯಕ್ಕೆ ಭೂಮಿಯ ಮೇಲ್ಭಾಗದಲ್ಲಿ ಸಿಗುವ ಅಸ್ಥಿಪಂಜರಗಳನ್ನು ಸಂಗ್ರಹಿಸಲು ಎಸ್‌ಐಟಿ ತೀರ್ಮಾನಿಸಿದೆ.