ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala Case: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಕೇರಳದ ಕಮ್ಯುನಿಸ್ಟ್‌ ಸಂಸದನ ಹೆಸರು!

Kerala MP: ತಲೆಬುರುಡೆಯನ್ನು ತೆಗೆದುಕೊಂಡು ಆರೋಪಿ ಚಿನ್ನಯ್ಯ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಕೇರಳದ ರಾಜ್ಯಸಭಾ ಸದಸ್ಯ, ಕಮ್ಯುನಿಸ್ಟ್‌ ಸಂಸದ ಸಂದೋಷ್‌ ಕುಮಾರ್ ಬಳಿ ತೆರಳಿ ಅವರ ಮುಂದೆ ವಿಚಾರ ಪ್ರಸ್ತಾಪಿಸಿದ್ದರು ಎಂಬ ಸ್ಫೋಟಕ ಮಾಹಿತಿ ಎಸ್​​ಐಟಿ ತನಿಖೆ ವೇಳೆ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಕೇರಳದ ಕಮ್ಯುನಿಸ್ಟ್‌ ಸಂಸದನ ಹೆಸರು!

ಕೇರಳ ಸಂಸದ ಸಂದೋಷ್‌ ಕುಮಾರ್ -

ಹರೀಶ್‌ ಕೇರ ಹರೀಶ್‌ ಕೇರ Sep 6, 2025 11:58 AM

ಮಂಗಳೂರು: ಧರ್ಮಸ್ಥಳದಲ್ಲಿ (Dharmasthala Case) ನೂರಾರು ಶವಗಳನ್ನು ಹೂತಿದ್ದೆ ಎಂದು ಮಾಸ್ಕ್​ಮ್ಯಾನ್ ಚಿನ್ನಯ್ಯ (Mask man chinnayya) ತಂದಿದ್ದ ತಲೆಬುರುಡೆ (Skull) ಪ್ರಕರಣದಲ್ಲಿ ಇದೀಗ ಕೇರಳದ ಕಮ್ಯೂನಿಸ್ಟ್ (CPI MP) ಸಂಸದರೊಬ್ಬರ ಕೈವಾಡ ಇದೆ ಎಂಬ ವಿಚಾರ ಬಯಲಾಗಿದೆ. ಈ ಕಮ್ಯುನಿಸ್ಟ್‌ ಸಂಸದ‌ ಹಾಗೂ ರಾಜ್ಯಸಭಾ ಸದಸ್ಯರ ಹೆಸರು ಸಂದೋಷ್ ಕುಮಾರ್‌. ತಲೆಬುರುಡೆಯನ್ನು ತೆಗೆದುಕೊಂಡು ಆರೋಪಿ ಚಿನ್ನಯ್ಯ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಕೇರಳದ ಸಂಸದನ ಬಳಿ ತೆರಳಿ ಅವರ ಮುಂದೆ ವಿಚಾರ ಪ್ರಸ್ತಾಪಿಸಿದ್ದರು ಎಂಬ ಸ್ಫೋಟಕ ಮಾಹಿತಿ ಎಸ್​​ಐಟಿ ತನಿಖೆ ವೇಳೆ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.

ಇದರೊಂದಿಗೆ ಈ ಪ್ರಕರಣಕ್ಕೆ ಮತ್ತೊಂದು ತಿರುವು ದೊರೆತಿದೆ. ಈ ನಡುವೆ, ತಲೆಬುರುಡೆಯನ್ನು ಕೊಟ್ಟಿದ್ದು ಜಯಂತ್. ತಾನು ಅದನ್ನು ಧರ್ಮಸ್ಥಳದಿಂದ ತಂದೇ ಇಲ್ಲವೆಂದು ಚೆನ್ನಯ್ಯ ಎಸ್​ಐಟಿ ಮುಂದೆ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ, ಜಯಂತ್ ಮಾತ್ರ ಬುರುಡೆಯನ್ನು ಗಿರೀಶ್ ಮಟ್ಟಣ್ಣವರ್ ಕೊಟ್ಟಿದ್ದು ಎಂದಿದ್ದಾನೆ. ಮಟ್ಟಣ್ಣವರ್ ಇದನ್ನು ನಿರಾಕರಿಸಿದ್ದಾನೆ. ಈ ಬೆಳವಣಿಗೆಗಳ ಮಧ್ಯೆ ಕೇರಳ ಸಂಸದನ ಹೆಸರು ಪ್ರಕರಣದಲ್ಲಿ ತಳಕುಹಾಕಿಕೊಂಡಿದೆ.

11 ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿ ತನಿಖೆ

ತಲೆಬುರುಡೆ ಪ್ರಕರಣ ಹಾಗೂ ಒಟ್ಟಾರೆ ಧರ್ಮಸ್ಥಳ ಪ್ರಕರಣವನ್ನು ಎಸ್​ಐಟಿ ಪೊಲೀಸರು ಈವರೆಗೆ ಒಟ್ಟು 11 ಸೆಕ್ಷನ್​ಗಳ ಅಡಿ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈವರೆಗಿನ ತನಿಖೆಯಲ್ಲಿ ಬೆಳಕಿಗೆ ಬಂದ ವಿಚಾರಗಳನ್ನು ಆಧರಿಸಿ ಸೆಕ್ಷನ್​ಗಳನ್ನು ಅಳವಡಿಕೆ ಮಾಡಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ FIR ನಂಬರ್ 39/2025 ರಲ್ಲಿ BNS 211(A), 336, 230, 231, 229, 227, 228, 240, 236, 233, 248 ಸೆಕ್ಷನ್ ಅಳವಡಿಕೆ ಮಾಡಲಾಗಿದೆ.

ಯಾವ್ಯಾವ ಸೆಕ್ಷನ್​ಗಳ ಅಡಿ ಕೇಸ್?

BNS 211(A) – ಅಧಿಕಾರಿಗೆ ಕಾನೂನಾತ್ಮಕವಾಗಿ ನೀಡಬೇಕಾದ ಮಾಹಿತಿಯನ್ನು ನೀಡದೆ ಉದ್ದೇಶಪೂರ್ವಕವಾಗಿ ತಪ್ಪಿಸುವುದು.

BNS 336 – ನಕಲಿ ದಾಖಲೆ ಸೃಷ್ಟಿಸುವುದು‌.

BNS 230 – ಸುಳ್ಳು ಸಾಕ್ಷಿ ಕೊಡಲು ಅಥವಾ ಸುಳ್ಳು ಸಾಕ್ಷಿ ತಯಾರಿಸುವುದು‌.

BNS 231 – ಜೀವಾವಧಿ ಶಿಕ್ಷೆ ಅಥವಾ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧದ ಬಗ್ಗೆ ಸುಳ್ಳು ಸಾಕ್ಷ್ಯ ನೀಡುವುದು ಅಥವಾ ಅದನ್ನು ಸೃಷ್ಟಿಸುವುದು.

BNS 229 – ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸುಳ್ಳು ಪುರಾವೆ ನೀಡಿದರೆ.

BNS 227 – ಸುಳ್ಳೆಂದು ತಿಳಿದಿದ್ದರು ಸುಳ್ಳು ಸಾಕ್ಷ್ಯವನ್ನು ಹೇಳೋದು.

BNS 228 – ನ್ಯಾಯಾಂಗ ಅಥವಾ ಕಾನೂನು ಪ್ರಕ್ರಿಯೆಯನ್ನು ದಾರಿತಪ್ಪಿಸುವ ಉದ್ದೇಶದಿಂದ, ಪುಸ್ತಕಗಳು ಅಥವಾ ದಾಖಲೆಗಳಲ್ಲಿ ಸುಳ್ಳು ನಮೂದುಗಳನ್ನು ಮಾಡುವುದು.

BNS 240 – ಅಪರಾಧದ ಬಗ್ಗೆ ತಪ್ಪು ಮಾಹಿತಿ ನೀಡುವುದು.

BNS 236 – ನ್ಯಾಯಾಲಯಕ್ಕೆ ತಾನು ನೀಡಿದ ಮಾಹಿತಿ ಸುಳ್ಳು ಎಂದು ತಿಳಿದಿದ್ದರೂ ಅಥವಾ ನಂಬದಿದ್ದರೂ, ಅದನ್ನು ನಿಜವೆಂದು ಹೇಳುವುದು‌.

BNS 233 – ನ್ಯಾಯಾಲಯದಲ್ಲಿ ಸುಳ್ಳು ಎಂದು ತಿಳಿದಿರುವ ಯಾವುದೇ ಪುರಾವೆಯನ್ನು ನಿಜವಾದ ಪುರಾವೆಯಂತೆ ಬಳಸಲು ಪ್ರಯತ್ನಿಸುವುದು, ಈಗಾಗಲೇ ಸುಳ್ಳು ಎಂದು ತಿಳಿದಿರುವ ಪುರಾವೆಯನ್ನು ಬಳಸೋದು.

BNS 248 – ಒಬ್ಬ ವ್ಯಕ್ತಿಯನ್ನು ಹಾನಿ ಮಾಡುವ ದುರುದ್ದೇಶದಿಂದ, ಅವನ ಮೇಲೆ ಯಾವ ಕಾನೂನು ಆಧಾರಗಳೂ ಇಲ್ಲದಿದ್ದರೂ ಸುಳ್ಳು ಅಪರಾಧದ ಆರೋಪ ಹೊರಿಸುವುದು.

ಇದನ್ನೂ ಓದಿ: Dharmasthala case: ಇಂದು ಮಾಸ್ಕ್‌ ಮ್ಯಾನ್‌ ಚಿನ್ನಯ್ಯನ ಎಸ್‌ಐಟಿ ಕಸ್ಟಡಿ ಅಂತ್ಯ, ನ್ಯಾಯಾಂಗ ಬಂಧನ ಸಾಧ್ಯತೆ