ಧರ್ಮಸ್ಥಳ, ಫೆ.1: ದೇಶದ ಪ್ರಗತಿಯ ಅಡಿಪಾಯವಾಗಿ ಮಾನವ ಸಾಮರ್ಥ್ಯವನ್ನು ಬಲಪಡಿಸುವ ಕಡೆಗೆ ಕೇಂದ್ರ ಬಜೆಟ್ ಚಿಂತನಶೀಲ ಬದಲಾವಣೆಯನ್ನು ಸೂಚಿಸುತ್ತದೆ. ಆರೋಗ್ಯ, ಶಿಕ್ಷಣ ಸಂಬಂಧಿತ ವಿಭಾಗಗಳು, ಕ್ಷೇಮ, ಆಯುರ್ವೇದ ಮತ್ತು ಆರೈಕೆದಾರರ ತರಬೇತಿಗೆ ವಿಶೇಷ ಒತ್ತು ನೀಡಿರುವುದು ಸ್ವಾಗತಾರ್ಹ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ರೋಗನಿರೋಧಕ ಆರೈಕೆ ಮತ್ತು ಮಾನವ ಕೇಂದ್ರಿತ ಅಭಿವೃದ್ಧಿಯು ಸ್ಥಿತಿಸ್ಥಾಪಕ ಸಮಾಜಕ್ಕೆ ಅತ್ಯಗತ್ಯ ಎಂಬುದನ್ನು ಬಜೆಟ್ ವಿಶ್ಲೇಷಿಸಿದೆ. ಹಾಗೂ ಆಯುರ್ವೇದ ಮತ್ತು ಸಮಗ್ರ ಆರೋಗ್ಯ ರಕ್ಷಣೆಯ ಮೇಲಿನ ಗಮನವು ಆರೋಗ್ಯ ಪ್ರವಾಸೋದ್ಯಮಕ್ಕೆ ಹೊಸ ಮಾರ್ಗಗಳನ್ನು ತೆರೆಯುತ್ತದೆ, ಪರಿಣಾಮವಾಗಿ ಭವಿಷ್ಯದಲ್ಲಿ ಭಾರತವನ್ನು ಸಮಗ್ರ ಚಿಕಿತ್ಸೆಯ ಜಾಗತಿಕ ತಾಣವಾಗಿ ಮಾರ್ಪಾಡುಮಾಡುತ್ತದೆ.
ವಿಶೇಷವಾಗಿ ಗ್ರಾಮೀಣ ಮತ್ತು ಉದಯೋನ್ಮುಖ ಕೇಂದ್ರಗಳಲ್ಲಿ ಶಿಕ್ಷಣ ಮತ್ತು ಮೂಲಸೌಕರ್ಯವನ್ನು ಬಲಪಡಿಸುವ ಮೂಲಕ, ಬಜೆಟ್ ಅಸಮಾನತೆಗಳನ್ನು ಕಡಿಮೆ ಮಾಡಲು ಮತ್ತು ಜೀವನೋಪಾಯವನ್ನು ಸೃಷ್ಟಿಸಲು ಅವಕಾಶ ಮಾಡಿಕೊಡುತ್ತದೆ. ಶಿಕ್ಷಣವು ಮೌಲ್ಯಗಳಿಂದ ಮಾರ್ಗದರ್ಶಿಸಲ್ಪಟ್ಟಾಗ ಮತ್ತು ಕೌಶಲ್ಯಗಳಿಂದ ಸಮೃದ್ಧವಾದಾಗ, ಅದು ಸ್ವಾವಲಂಬನೆ, ಅಂತರ್ಗತ ಬೆಳವಣಿಗೆ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗುವಂತೆ ಈ ಬಾರಿಯ ಬಜೆಟ್ ಇದೆ ಎಂದು ಹೇಳಿದ್ದಾರೆ.
Budget 2026: ಕೃಷಿ ವಲಯಕ್ಕೆ AI ಸ್ಪರ್ಶ; ಕೇಂದ್ರ ಬಜೆಟ್‌ನಲ್ಲಿ ರೈತರಿಗೆ ಸಿಕ್ಕಿದ್ದೇನು?
ವಿಕಸಿತ ಭಾರತದತ್ತ ಇನ್ನೊಂದು ಧೃಡ ಹೆಜ್ಜೆ: ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ಬೆಂಗಳೂರು: ಕೇಂದ್ರದ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 9 ನೇ ಬಜೆಟ್ ಮೋದಿಯವರ ಕನಸಿನ ವಿಕಸಿತ ಭಾರತದತ್ತ ಇಟ್ಟಿರುವ ಇನ್ನೊಂದು ಧೃಡ ಹೆಜ್ಜೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ವಿಶ್ಲೇಷಿಸಿದ್ದಾರೆ.
ಜಗತ್ತು ಆರ್ಥಿಕ ಅನಿಶ್ಚಿತತೆಯ ತಲ್ಲಣಗಳಲ್ಲಿ ಮುಳುಗಿರುವ ಈ ಸಂದರ್ಭದಲ್ಲಿ ದೇಶದ ಜನತಯ ಮನಸ್ಸಿನಲ್ಲಿ ಆರ್ಥಿಕ ವಿಶ್ವಾಸ ತುಂಬಿರುವ ಸ್ವಾಗತಾರ್ಹ ಬಜೆಟ್. ದೀರ್ಘಕಾಲೀನ ಆರ್ಥಿಕ ಗುರಿಯನ್ನು ಮುಟ್ಟಲು ಅಗತ್ಯವಿರುವ ಅಲ್ಪ ಕಾಲಿನ ಯೋಜನೆಗಳೊಂದಿಗೆ ಸಂತುಲನೆಯ ಸಮದೃಷ್ಟಿಯ ಸಂತುಲಿತ ಬಜೆಟ್ ಇದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು; ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಈ ಬಜೆಟ್ ಉತ್ತರ ಎಂದ ಕುಮಾರಸ್ವಾಮಿ
ಯಾವುದೇ ಸಮುದಾಯವನ್ನಾಗಲಿ, ಸಂಸ್ಥೆಯನ್ನಾಗಲಿ, ವರ್ಗವನ್ನಾಗಲಿ ತುಷ್ಟೀಕರಿಸುವ ಹಿಂದಿನ ಸರಕಾರಗಳ ಯೋಚನೆಗಳಿಗೆ ವಿರುದ್ಧವಾಗಿ, ಜಾಗತಿಕ ಆರ್ಥಿಕ ತಲ್ಲಣವನ್ನು ಗಮನದಲ್ಲಿರಿಸಿ ನಮ್ಮ ದೇಶದ ಜನತೆಯ ಭವಿಷ್ಯದ ಹಿತವನ್ನು ಕಾಪಾಡಲು ಅಗತ್ಯವಿರುವ ಯೋಚನೆ ಮತ್ತು ಯೋಜನೆಗಳನ್ನು ಹೊಂದಿರುವ ಮುಂಗಡಪತ್ರ ಇದು. ಜನತೆಯ ಆಶೋತ್ತರಗಳನ್ನು ಸಾಧಿಸಬಲ್ಲ ಯೋಜನೆಗಳು ಮತ್ತು ತುಷ್ಟೀಕರಣದ ಮಾನಸಿಕತೆಯಿಂದ ಹೊರಬಂದು ಜನಸಾಮಾನ್ಯರನ್ನು ಕೇಂದ್ರವಾಗಿರಿಸಿರುವ ಬಜೆಟ್ ಅಭಿನಂದನೀಯ ಎಂದು ತಿಳಿಸಿದ್ದಾರೆ. ಮೂಲಭೂತ ಸೌಕರ್ಯಗಳು, ಕೃಷಿ, ಉದ್ಯೋಗ, ಸೆಮಿ ಕಂಡಕ್ಟರ್, ಪ್ರೆಶಿಯಸ್ ಲೋಹಗಳು, ಡೇಟಾ ಕೇಂದ್ರಗಳು ಮುಂತಾದ ಕ್ಷೇತ್ರಗಳಲ್ಲಿ ಸ್ವಾವಲಂಬನೆಯ ಯೋಜನೆಗಳ ಅಭಿವೃದ್ಧಿಗೆ ಪೂರಕ ಬಜೆಟ್ ಎಂದು ತಿಳಿಸಿದ್ದಾರೆ.