ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Mangaluru Lit Fest: ಭಾಷೆ ಕಡೆಗಣನೆಗೆ ವಿಶ್ವವಿದ್ಯಾನಿಲಯಗಳು, ಅಧ್ಯಾಪಕರು ಕಾರಣ: ಶತಾವಧಾನಿ ಆರ್. ಗಣೇಶ್

Mangaluru Lit Fest: ಮಂಗಳೂರು ಲಿಟ್ ಫೆಸ್ಟ್ 8ನೇ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶತಾವಧಾನಿ ಆರ್. ಗಣೇಶ್ ಅವರು, ಪಂಪ, ಡಿವಿಜಿ, ಕುವೆಂಪು ಕಾವ್ಯಗಳ ಸಾರಾಂಶ ಹೇಳಲಾಗುತ್ತದೆಯೇ ಹೊರತು, ಆಳವಾದ ಅಧ್ಯಯನ ಆಗುವುದಿಲ್ಲ. ನಮಗೆ ಮೌಲ್ಯಗಳು ತಿಳಿಯಬೇಕು. ಮೌಲ್ಯಗಳು ಎಂದರೆ ನಮ್ಮನ್ನು ನಾವು ತಿಳಿದುಕೊಳ್ಳುವುದು. ಫ್ಯಾಕ್ಟ್ಸ್‌ ಹೇಳಲು ಆಗದಿರುವುದನ್ನು ಮೌಲ್ಯಗಳು ಹೇಳುತ್ತವೆʼ ಎಂದು ತಿಳಿಸಿದ್ದಾರೆ.

ಮಂಗಳೂರು ಲಿಟ್ ಫೆಸ್ಟ್ 8ನೇ ಆವೃತ್ತಿಯ ಕಾರ್ಯಕ್ರಮ.

ಮಂಗಳೂರು, ಜ.10: ಭಾಷೆಯ ಕಡೆಗಣನೆಗೆ ವಿಶ್ವವಿದ್ಯಾಲಯಗಳು ಹಾಗೂ ಅಧ್ಯಾಪಕರು ಕಾರಣ. ವಿಶ್ವವಿದ್ಯಾಲಯಗಳ ಪಠ್ಯಗಳಲ್ಲಿ ಕಥೆ ಹಾಗೂ ಕವಿತೆಗಳ ಸಾರಾಂಶದ ಬಗ್ಗೆ ಅಷ್ಟೇ ಪಾಠ ಮಾಡಲಾಗುತ್ತದೆ ಹೊರತು ಅದನ್ನು ಆಳವಾಗಿ ವಿವರಿಸುವ ಕೆಲಸ ಆಗುವುದಿಲ್ಲ. ಆ ಕೆಲಸ ಹೆಚ್ಚಾದಾಗ ಮೌಲ್ಯಗಳು ಹಾಗೂ ಭಾಷೆ ಎರಡೂ ಅರಿವಿಗೆ ಬರಲು ಸಾಧ್ಯ ಎಂದು ಶತಾವಧಾನಿ ಆರ್. ಗಣೇಶ್ ಹೇಳಿದರು. ಮಂಗಳೂರು ಲಿಟ್ ಫೆಸ್ಟ್ 8ನೇ ಆವೃತ್ತಿಯ (Mangaluru Lit Fest) ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನ್ಯಥಾ ಭಾವಿಸಬೇಡಿ ಎಂದು ಹೇಳಿಯೇ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳ ಪಠ್ಯಗಳಲ್ಲಿ ʼಪಂಪ, ಡಿವಿಜಿ, ಕುವೆಂಪು ಕಾವ್ಯಗಳ ಸಾರಾಂಶ ಹೇಳಲಾಗುತ್ತದೆಯೇ ಹೊರತು, ಆಳವಾದ ಅಧ್ಯಯನ ಆಗುವುದಿಲ್ಲ. ನಮಗೆ ಮೌಲ್ಯಗಳು ತಿಳಿಯಬೇಕು. ಮೌಲ್ಯಗಳು ಎಂದರೆ ನಮ್ಮನ್ನು ನಾವು ತಿಳಿದುಕೊಳ್ಳುವುದು. ಫ್ಯಾಕ್ಟ್ಸ್‌ ಹೇಳಲು ಆಗದಿರುವುದನ್ನು ಮೌಲ್ಯಗಳು ಹೇಳುತ್ತವೆʼ ಎಂದು ಹೇಳಿದರು.

ಅದಕ್ಕೂ ಮುನ್ನ ಮಂಗಳೂರು ಲಿಟ್ ಫೆಸ್ಟ್ 8ನೇ ಆವೃತ್ತಿಗೆ ಸರಸ್ವತಿ ರಥ ಎಳೆಯುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಪ್ರಧಾನ ಭಾಷಣಕಾರರಾಗಿ ಮಾತನಾಡಿದ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ರವಿ ಎಸ್. , ʼಸಮಾಜವನ್ನು ರೂಪಿಸುವಲ್ಲಿ ಸಾಹಿತ್ಯದ ಮಹತ್ವದ ಪಾತ್ರವಿದೆ. ಓದು ಮತ್ತು ಚಿಂತನೆಯ ಮೂಲಕ ವ್ಯಕ್ತಿಯ ಬೌದ್ಧಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಯುವಜನರಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಶೀಲತೆಯನ್ನು ಬೆಳೆಸುವಲ್ಲಿ ಲಿಟ್ ಫೆಸ್ಟ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆʼ ಎಂದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ.ಮೀನಾಕ್ಷಿ ಜೈನ್, ಭಾರತ್ ಫೌಂಡೇಶನ್ ಟ್ರಸ್ಟಿ ಬ್ರಿಜೇಶ್ ಚೌಟ ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನರಾದ ಡಾ. ಎಸ್.ಎಲ್. ಭೈರಪ್ಪ ಮತ್ತು ಡಾ. ವಿನಯ ಹೆಗ್ಡೆ ಅವರಿಗೆ ಗೌರವ ನಮನ ಸಲ್ಲಿಸಲಾಯಿತು. ಲಕ್ಷ್ಮೀ ಮಠದಮೂಳೆ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಶೈನಾ ಡಿಸೋಜಾ ಮತ್ತು ಆರ್‌ಜೆ ಅಭಿಷೇಕ್ ಶೆಟ್ಟಿ ನಿರೂಪಿಸಿದರು. ಡಾ. ವಿದ್ಯಾ ವಂದಿಸಿದರು.

ಸಾಹಿತ್ಯದ ಮುಖಾಂತರ ಮೌಲ್ಯಗಳ ಅನ್ವೇಷಣೆ

ಉದ್ಘಾಟನಾ ಗೋಷ್ಠಿಯಲ್ಲಿ ಸಾಹಿತ್ಯದ ಮುಖಾಂತರ ಮೌಲ್ಯಗಳ ಅನ್ವೇಷಣೆ ಎಂಬ ವಿಷಯದ ಕುರಿತು ಅಜಕ್ಕಳ ಗಿರೀಶ್‌ ಭಟ್‌ ಹಾಗೂ ಶತಾವಧಾನಿ ಆರ್‌ ಗಣೇಶ್‌ ಸಂವಾದ ನಡೆಸಿದರು. ಮೌಲ್ಯಗಳ ಬಗ್ಗೆ ಮಾತನಾಡಿದ ಆರ್.‌ ಗಣೇಶ್‌, ‘ಅಖಂಡ ಭಾರತದ ಸಂವೇದನೆಯಲ್ಲಿ ಮೌಲ್ಯ ಎನ್ನುವಂಥದ್ದು ಸಾಹಿತ್ಯ ಮಾತ್ರವಲ್ಲದೆ ಎಲ್ಲಾ ಕಲೆಗಳಲ್ಲೂ ಇದೆ. ಸಾಹಿತ್ಯದ ಮುಖಾಂತರ ಬರುವ ಮೌಲ್ಯಗಳು ಧ್ವನಿ ಹಾಗೂ ರಸ ಮಾರ್ಗದಲ್ಲಿ ಇರುತ್ತದೆ. ಸಂವೇದನೆಯನ್ನು ಬುದ್ಧಿಯ ಮೂಲಕ ಹೆಚ್ಚು ಮಾಡಲು ಆಗವುದಿಲ್ಲ, ಅದಕ್ಕೆ ಭಾವ ಬೇಕುʼ ಎಂದು ಹೇಳಿದರು.

ಹಾಗೆಯೇ ಸಾಹಿತ್ಯದ ರಚನೆಯ ಕುರಿತು ಮಾತನಾಡುತ್ತ ಅವರು, ʼಸಮಸ್ಯೆಯನ್ನೇ ಕೇಂದ್ರವಾಗಿಟ್ಟುಕೊಂಡು ರಚಿಸಿರುವ ಯಾವ ಸಾಹಿತ್ಯವೂ ನಿಲ್ಲುವುದಿಲ್ಲ. ಸಮಸ್ಯೆಯ ಆಳದಲ್ಲಿರುವ ಮಾನವನ ಮನಸ್ಥಿತಿಯನ್ನು ಗಮನಿಸಬೇಕುʼ ಎಂದರು. ‌

ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಣೆಗೆ ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಅನುಕೂಲ: ಲಕ್ಷ್ಮಿ ಹೆಬ್ಬಾಳ್ಕರ್

ಸರಸ್ವತಿ ರಥ ಎಳೆಯುವ ಮೂಲಕ ಚಾಲನೆ

ಮಂಗಳೂರು ಲಿಟ್ ಫೆಸ್ಟ್‌ ನ 8ನೇ ಆವೃತ್ತಿಗೆ ಹೊತ್ತಿಗೆಗಳು ತುಂಬಿದ್ದ ಸರಸ್ವತಿ ರಥವನ್ನು ಎಳೆಯುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದ್ದು ವಿಶೇಷ. ಭಾಗವಹಿಸಿದ್ದ ಅತಿಥಿ ಗಣ್ಯರು ವೇದಿಕೆಗೆ ಸರಸ್ವತಿ ರಥವನ್ನು ಎಳೆದುಕೊಂಡು ಬರುವ ಮೂಲಕ ಮಂಗಳೂರು ಲಿಟ್ ಫೆಸ್ಟ್ ಉದ್ಘಾಟಿಸಿದ್ದು ನೆರೆದವರ ಗಮನ ಸೆಳೆಯಿತು.