ದಾವಣಗೆರೆ: ತಪ್ಪನ್ನು ಹೇಳಿ ಪ್ರಶ್ನೆ ಮಾಡಿದ ಜಿಲ್ಲಾಧಿಕಾರಿಗೇ ಯುವಕನೊಬ್ಬ ಅವಾಜ್ ಹಾಕಿದ್ದಾನೆ. . ಒನ್ ವೇನಲ್ಲಿ ಬಂದಂತ ಬೈಕ್ ಸವಾರನನ್ನು ಪ್ರಶ್ನಿಸಿದ್ದಕ್ಕೆ ಡಿಸಿಗೆ ಯುವಕ ಅವಾಜ್ ಹಾಕಿದ್ದಾನೆ. ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರು ಇಂದು (ಗುರುವಾರ) ಬೆಳಿಗ್ಗೆ ಸೈಕಲ್ಲಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್ ಸವಾರನೊಬ್ಬ ಒನ್ ವೇನಲ್ಲಿ ವೇಗವಾಗಿ ಬಂದಿದ್ದನು. ಇದನ್ನು ಡಿಸಿ ಗಂಗಾಧರಸ್ವಾಮಿ ಪ್ರಶ್ನೆ ಮಾಡಿದ್ದರು. ಇದಕ್ಕೆ ಸಿಟ್ಟಿಗೆದ್ದ ಯುವಕ ಅವರಿಗೆ ಬೈದಿದ್ದಾನೆ ಎಂದು ತಿಳಿದು ಬಂದಿದೆ.
ಯುವಕನಿಗೆ ಪ್ರಶ್ನೆ ಮಾಡಿದ್ದಕ್ಕಾಗಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿಗೆ ಬೈಕ್ ಸವಾರ ಅವಾಜ್ ಹಾಕಿದ್ದಾನೆ. ತಕ್ಷಣವೇ ಪೊಲೀಸರಿಗೆ ಪೋನ್ ಮಾಡಿ ಜಿಲ್ಲಾಧಿಕಾರಿ ಬೈಕ್ ಸವಾರನ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ. ಪೊಲೀಸರು ಜಿಲ್ಲಾಧಿಕಾರಿಗಳಿಂದ ಬೈಕ್ ನಂಬರ್ ಪಡೆದು ಇದೀಗ ಕಾನೂನು ಕ್ರಮ ಕೈಗೊಂಡಿರೋದಾಗಿ ಹೇಳಲಾಗಿದೆ.
IAS ಅಧಿಕಾರಿಗಳ ವರ್ಗಾವಣೆ
ದಕ್ಷಿಣ ಕನ್ನಡ, ಹಾಸನ, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ವರ್ಗಾಯಿಸಿ, ದರ್ಶನ್ ಎಚ್.ವಿ. ಅವರನ್ನು ನೇಮಿಸಲಾಗಿದೆ. ಹಾಸನ ಜಿಲ್ಲಾಧಿಕಾರಿಯಾಗಿ ಲತಾಕುಮಾರಿ ಕೆ.ಎಸ್. ನೇಮಕಗೊಂಡಿದ್ದಾರೆ. ಬಾಗಲಕೋಟೆ ಜಿಲ್ಲಾಧಿಕಾರಿಯಾಗಿ ಸಂಗಪ್ಪ ನೇಮಕವಾಗಿದ್ದಾರೆ. ಕೊಪ್ಪಳ ಡಿಸಿಯಾಗಿ ಸುರೇಶ್ ಹಿಟ್ನಾಳ್ ಮತ್ತು ಸಿಇಒ ಆಗಿ ವರ್ನಿತ ನೇಗಿ ನೇಮಕವಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ 2016ರ ಬ್ಯಾಚಿನ ಐಎಎಸ್ ಅಧಿಕಾರಿ ದರ್ಶನ್ ಎಚ್.ವಿ. ಅವರನ್ನು ನಿಯುಕ್ತಿ ಮಾಡಲಾಗಿದೆ. ದರ್ಶನ್, ಬೆಂಗಳೂರು ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತರಾಗಿದ್ದರು. ಹಾಸನ ಜಿಲ್ಲೆ, ಜಿಲ್ಲಾಧಿಕಾರಿ ಸಿ.ಸತ್ಯಭಾಮ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಲತಾಕುಮಾರಿ.ಕೆ.ಎಸ್. ನೇಮಕ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: Chikkaballapur news: ಜೂ.19ಕ್ಕೆ ನಂದಿ ಗಿರಿಧಾಮದಲ್ಲಿ ರಾಜ್ಯ ಸಚಿವ ಸಂಪುಟ ಸಭೆ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ
ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ನಲೀನ್ ಅತುಲ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದ ರಾಹುಲ್ ರತ್ನಂ ಪಾಂಡೆಯ ಅವರನ್ನು ವರ್ಗಾವಣೆಗೊಳಿಸಿ ಮಂಗಳವಾರ ಸರಕಾರ ಆದೇಶ ಹೊರಡಿಸಿದೆ. ಆರ್‌ಡಿಪಿಆರ್‌ನ ಇ ಗವರ್ನೆಸ್ ನಿರ್ದೇಶಕರಾಗಿದ್ದ ಟಿ.ಕೆ.ಸ್ವರೂಪಾ ಅವರನ್ನು ಉಡುಪಿ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಹಿಂದಿನ ಡಿಸಿ ವಿದ್ಯಾಕುಮಾರಿ ಅವರಿಗೆ ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲ.