ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅತ್ಯಾಧುನಿಕ ರೋಬೋಟಿಕ್ ಸೊಂಟ ಮತ್ತು ಮೊಣಕಾಲು ಕೀಲು ಮರುಜೋಡಣೆ ತಂತ್ರಜ್ಞಾನ ಪರಿಚಯಿಸಿದ ತಜ್ಞ ವೈದ್ಯ ಡಾ. ರಾಜಶೇಖರ್

ದಾವಣಗೆರೆ ಮೂಲದವರಾದ ಡಾ. ರಾಜಶೇಖರ್ ಅವರು ಎಂಬಿಬಿಎಸ್, ಮೂಳೆಚಿಕಿತ್ಸೆಯಲ್ಲಿ ಎಂ.ಎಸ್ಸಿ., ಎಂ.ಸಿಎಚ್. ಪದವಿಗಳನ್ನು ಹೊಂದಿದ್ದು, ಜಂಟಿ ಕೀಲು ಮರುಜೋಡಣೆ ಶಸ್ತ್ರಚಿಕಿತ್ಸೆ ಯಲ್ಲಿ ಪ್ರತಿಷ್ಠಿತ ರಾಣಾವತ್ ಫೆಲೋಶಿಪ್ ಪಡೆದಿದ್ದಾರೆ. ಪ್ರಸ್ತುತ ಅಪೋಲೋ ಆಸ್ಪತ್ರೆಯ ಮೂಳೆಚಿಕಿತ್ಸೆ ಮತ್ತು ರೋಬೋಟಿಕ್ ಕೀಲು ಮರುಜೋಡಣೆ ಶಸ್ತ್ರಚಿಕಿತ್ಸಾ ವಿಭಾಗದ ಪ್ರಮುಖ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದಾವಣಗೆರೆ: ದಾವಣಗೆರೆ ನಿವಾಸಿಗಳಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ, ಮೂಳೆ ಚಿಕಿತ್ಸಾ ತಜ್ಞರಾದ ಡಾ.ರಾಜಶೇಖರ್ ಕೆ.ಟಿ. ಅವರು ರೋಬೋಟಿಕ್ ಸೊಂಟ ಮತ್ತು ಮೊಣಕಾಲು ಕೀಲು ಮರುಜೋಡಣೆ ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ. ಅವರ ಮಹತ್ತರ ಉದ್ದೇಶದಿಂದ ಸ್ಥಳೀಯವಾಗಿಯೇ ಇನ್ನು ಮುಂದೆ ಸುಧಾರಿತ ಕೀಲು ಆರೈಕೆ ಚಿಕಿತ್ಸೆಗಳು ವಿಸ್ತೃತವಾಗಿ ಲಭ್ಯವಾಗಲಿವೆ.

ದಾವಣಗೆರೆ ಮೂಲದವರಾದ ಡಾ. ರಾಜಶೇಖರ್ ಅವರು ಎಂಬಿಬಿಎಸ್, ಮೂಳೆಚಿಕಿತ್ಸೆಯಲ್ಲಿ ಎಂ.ಎಸ್ಸಿ., ಎಂ.ಸಿಎಚ್. ಪದವಿಗಳನ್ನು ಹೊಂದಿದ್ದು, ಜಂಟಿ ಕೀಲು ಮರುಜೋಡಣೆ ಶಸ್ತ್ರಚಿಕಿತ್ಸೆ ಯಲ್ಲಿ ಪ್ರತಿಷ್ಠಿತ ರಾಣಾವತ್ ಫೆಲೋಶಿಪ್ ಪಡೆದಿದ್ದಾರೆ. ಪ್ರಸ್ತುತ ಅಪೋಲೋ ಆಸ್ಪತ್ರೆಯ ಮೂಳೆಚಿಕಿತ್ಸೆ ಮತ್ತು ರೋಬೋಟಿಕ್ ಕೀಲು ಮರುಜೋಡಣೆ ಶಸ್ತ್ರಚಿಕಿತ್ಸಾ ವಿಭಾಗದ ಪ್ರಮುಖ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತನ್ನೂರಿನ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಬೇಕು ಎಂಬ ಕಾರಣದಿಂದ ಅವರು ಪ್ರತೀ ತಿಂಗಳು ದಾವಣಗೆರೆಯಲ್ಲಿ ಹೊರರೋಗಿ ಚಿಕಿತ್ಸಾ ಕೇಂದ್ರ ನಡೆಸುತ್ತಿದ್ದು, ಇದೀಗ ವಿನೂತನ ಸೇವೆಯನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ: Davanagere News: ದಾವಣಗೆರೆಯಲ್ಲಿ ನೀಚ ಕೃತ್ಯ; ಪತಿಯೊಂದಿಗೆ ಜಗಳವಾಡಿ ತವರಿಗೆ ಹೋಗುತ್ತಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್!

24ಕ್ಕೂ ಹೆಚ್ಚು ವರ್ಷಗಳ ಸುದೀರ್ಘ ವೈದ್ಯಕೀಯ ಅನುಭವ ಹೊಂದಿರುವ ಡಾ. ರಾಜಶೇಖರ್ ಅವರು ಇದುವರೆಗೆ 7,000 ಕ್ಕೂ ಹೆಚ್ಚು ಕೀಲು ಮರುಜೋಡಣೆ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇದರಲ್ಲಿ ರೋಬೋಟಿಕ್ ತಂತ್ರಜ್ಞಾನದ ನೆರವಿನೊಂದಿಗೆ ನಡೆಸಿದ 1,000 ಕ್ಕೂ ಹೆಚ್ಚು ಸೊಂಟ ಮತ್ತು ಮೊಣಕಾಲು ಶಸ್ತ್ರಚಿಕಿತ್ಸೆಗಳು ಸೇರಿವೆ. ರಾಣಾವತ್ ಆರ್ಥೋಪೆಡಿಕ್ ಕಾನ್ಫರೆನ್ಸ್ ನಲ್ಲಿ ಇವರ ವೈದ್ಯಕೀಯ ಸಂಶೋಧನೆಗೆ ಹಲವು ಬಾರಿ ಅತ್ಯುತ್ತಮ ಪ್ರಬಂಧ ಮಂಡನೆ ಪ್ರಶಸ್ತಿಗಳು ಲಭಿಸಿವೆ. ಸ್ಥಳೀಯವಾಗಿಯೇ ಈ ಅತ್ಯಾಧುನಿಕ ರೋಬೋಟಿಕ್ ಚಿಕಿತ್ಸೆ ಲಭ್ಯ ವಾಗುತ್ತಿರುವುದರಿಂದ ದಾವಣಗೆರೆ ಮತ್ತು ಸುತ್ತಮುತ್ತಲಿನ ಭಾಗದ ರೋಗಿಗಳಿಗೆ ಬೆಂಗಳೂರಿ ನಂತಹ ಮಹಾನಗರಗಳಿಗೆ ಅಲೆಯುವ ತಾಪತ್ರಯ ತಪ್ಪಿದಂತಾಗಿದೆ.

ಈ ಕುರಿತು ಮಾತನಾಡಿರುವ ಡಾ. ರಾಜಶೇಖರ್ ಅವರು, " ರೋಬೋಟಿಕ್ ಸಹಾಯದ ಚಿಕಿತ್ಸಾ ಪ್ರಕ್ರಿಯೆಯಲ್ಲಿ ಕಂಪ್ಯೂಟರ್-ನಿರ್ದೇಶಿತ ಯೋಜನೆಯನ್ನು ರೋಬೋಟಿಕ್ ಉಪಕರಣದೊಂದಿಗೆ ಸಂಯೋಜಿಸಲಾಗುತ್ತದೆ. ಇದು ಮೂಳೆಯನ್ನು ಅತ್ಯಂತ ನಿಖರವಾಗಿ ಕತ್ತರಿಸಲು ಮತ್ತು ಇಂಪ್ಲಾಂಟ್ ಅನ್ನು ಅತ್ಯುತ್ತಮವಾಗಿ ಸರಿಯಾದ ಜಾಗದಲ್ಲಿ ಅಳವಡಿಸಲು ನೆರವಾಗುತ್ತದೆ. ರೋಬೋಟಿಕ್ ಸೊಂಟ ಮತ್ತು ಮೊಣಕಾಲು ಕೀಲು ಮರುಜೋಡಣೆ ಶಸ್ತ್ರಚಿಕಿತ್ಸೆಗಳು ಹೆಚ್ಚು ನಿಖರತೆ, ಕಡಿಮೆ ರಕ್ತಸ್ರಾವ ಹಾಗೂ ಶೀಘ್ರವಾಗಿ ಚೇತರಿಸಿಕೊಳ್ಳುವ ತಂತ್ರಜ್ಞಾನಗಳ ಮೂಲಕ ಮೂಳೆಚಿಕಿತ್ಸಾ ಕ್ಷೇತ್ರವನ್ನೇ ಸಂಪೂರ್ಣವಾಗಿ ಬದಲಾಯಿಸುತ್ತಿವೆ," ಎಂದು ಹೇಳಿದರು.

ಮಾತು ಮುಂದುವರಿಸಿದ ಅವರು, "ಈ ತಂತ್ರಜ್ಞಾನಗಳು ಶಸ್ತ್ರಚಿಕಿತ್ಸಕರ ಪರಿಣಿತಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ; ಇಲ್ಲಿ ರೋಬೋಟ್ ಕೇವಲ ಸಹಾಯ ಮಾಡುತ್ತದೆ, ಆದರೆ ಶಸ್ತ್ರಚಿಕಿತ್ಸೆಯ ಪ್ರತಿಯೊಂದು ಹಂತವೂ ಸಂಪೂರ್ಣವಾಗಿ ವೈದ್ಯರ ನಿಯಂತ್ರಣದಲ್ಲೇ ಇರುತ್ತದೆ. ತೀವ್ರವಾದ ಕೀಲು ವಾತದಿಂದ ಅಥವಾ ಆರ್ಥ್ರೈಟಿಸ್ ನಿಂದ ಬಳಲುತ್ತಿರುವ ವೃದ್ಧರು, ದೀರ್ಘಕಾಲದ ಕೀಲು ನೋವಿನಿಂದ ಬಳಲುತ್ತಿರುವ ಉದ್ಯೋಗಸ್ಥರು ಹಾಗೂ ಸಂಕೀರ್ಣ ಅಥವಾ ಮರು-ಕೀಲು ಮರುಜೋಡಣೆ (ರಿವಿಷನ್) ಶಸ್ತ್ರಚಿಕಿತ್ಸೆಯ ಅಗತ್ಯವಿರುವ ರೋಗಿಗಳು ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಈ ತಂತ್ರಜ್ಞಾನವು ವರದಾನವಾಗಿದೆ" ಎಂದರು.

ರೋಬೋಟಿಕ್ ಕೀಲು ಮರುಜೋಡಣೆ ಶಸ್ತ್ರಚಿಕಿತ್ಸೆಯಿಂದ ಗುಣಮುಖರಾದ ರೋಗಿಗಳು ಈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದು, ತಮ್ಮ ಅನುಭವಗಳನ್ನು ಹಂಚಿಕೊಂಡರು. ತದನಂತರ ನೈಜ ಪ್ರಕರಣಗಳ ಅಧ್ಯಯನದ ಪ್ರಸ್ತುತಿ ನಡೆಯಿತು. ಕೊನೆಯಲ್ಲಿ ನಡೆದ ಸಂವಾದಾತ್ಮಕ ಪ್ರಶ್ನೋತ್ತರ ಅವಧಿಯಲ್ಲಿ, ಡಾ. ರಾಜಶೇಖರ್ ಅವರು ಈ ಶಸ್ತ್ರಚಿಕಿತ್ಸಾ ವಿಧಾನಗಳು ಮತ್ತು ಅದರ ಸಕಾರಾತ್ಮಕ ಫಲಿತಾಂಶಗಳ ಕುರಿತು ಸಾರ್ವಜನಿಕರ ಪ್ರಶ್ನೆಗಳಿಗೆ ವಿವರವಾದ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಡ ಸೊಂಟದ ಕೀಲು ಮರುಜೋಡಣೆಗೆ ಒಳಗಾದ 36 ವರ್ಷದ ಮಧುಕುಮಾರಿ ಅವರು, “ನಾನು ನೋವಿಲ್ಲದ ಜೀವನವನ್ನು ನಡೆಸುವ ಭರವಸೆಯನ್ನೇ ಕಳೆದು ಕೊಂಡಿದ್ದೆ, ಆದರೆ ಈ ಶಸ್ತ್ರಚಿಕಿತ್ಸೆ ನನಗೆ ಮರುಜನ್ಮ ನೀಡಿದೆ. ಡಾ.ರಾಜಶೇಖರ್ ಅವರ ಪರಿಣಿತಿ ಮತ್ತು ಕಾಳಜಿ ಅಪ್ರತಿಮವಾದದ್ದು. ಅವರ ಸಮರ್ಪಣಾ ಮನೋಭಾವ ಮತ್ತು ಕೌಶಲ್ಯಕ್ಕೆ ನಾನು ಸದಾ ಕೃತಜ್ಞಳಾಗಿದ್ದೇನೆ” ಎಂದರು.