Road Accident: ಪ್ರವಾಸಕ್ಕೆ ಬಂದವರ ಮೇಲೆ ಹರಿದ ಇನ್ನೋವಾ, ಹಾರಿಹೋಯ್ತು ಯುವಕನ ಪ್ರಾಣ
ದಾವಣೆಗೆರೆಯ ಮೂಲದ 10 ಮಂದಿ ಸ್ನೇಹಿತರು ರಾತ್ರಿ 2 ಗಂಟೆಗೆ ಟಿಟಿ ವಾಹನ ಮೂಲಕ ಕಾರವಾರದ ದಾಂಡೇಲಿಗೆ ಪ್ರವಾಸ ಹೊರಟಿದ್ದರು. ಬೆಳಗಿನ ಜಾವ 6 ಗಂಟೆಗೆ ಹಾವೇರಿಯ ತಡಸ್ ಬಳಿ ಟೀ ಶಾಪ್ ಬಳಿ ವಾಹನ ನಿಲ್ಲಿಸಿದ್ದಾರೆ. ಚಹಾ ಕುಡಿಯುತ್ತಾ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಅತೀ ವೇಗವಾಗಿ ಬಂದ ಇನ್ನೋವಾ ಕಾರು ಟಿಟಿ ವಾಹನಕ್ಕೆ ಡಿಕ್ಕಿಯಾಗಿದೆ.
ಹಾವೇರಿ ಅಪಘಾತ -
ಹುಬ್ಬಳ್ಳಿ, ಏ.08: ಪ್ರವಾಸದ ಜಾಲಿ ಮೂಡ್‌ನಲ್ಲಿ ಹರಟೆ ಹೊಡೆಯುತ್ತಾ ಟೀ ಕುಡಿಯುತ್ತಾ ನಿಂತಿದ್ದಾಗ ಯಮನಂತೆ ಬಂದೆರಗಿದ (road accident) ಇನ್ನೋವಾ ಕಾರಿನಿಂದಾಗಿ ಒಬ್ಬ ಯುವಕ ಜೀವ ಕಳೆದುಕೊಂಡಿದ್ದಾನೆ. ಈತನೂ ಸೇರಿ ಹತ್ತು ಜನ ಗೆಳೆಯರು ಪ್ರವಾಸಕ್ಕೆ ಬಂದಿದ್ದರು. ದುರ್ಘಟನೆ ಹಾವೇರಿಯ (haveri) ತಡಸ್ ಬಳಿ ನಡೆದಿದೆ.
ದಾವಣೆಗೆರೆಯ ಮೂಲದ 10 ಮಂದಿ ಸ್ನೇಹಿತರು ರಾತ್ರಿ 2 ಗಂಟೆಗೆ ಟಿಟಿ ವಾಹನ ಮೂಲಕ ಕಾರವಾರದ ದಾಂಡೇಲಿಗೆ ಪ್ರವಾಸ ಹೊರಟಿದ್ದರು. ಬೆಳಗಿನ ಜಾವ 6 ಗಂಟೆಗೆ ಹಾವೇರಿಯ ತಡಸ್ ಬಳಿ ಟೀ ಶಾಪ್ ಬಳಿ ವಾಹನ ನಿಲ್ಲಿಸಿದ್ದಾರೆ. ಚಹಾ ಕುಡಿಯುತ್ತಾ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಅತೀ ವೇಗವಾಗಿ ಬಂದ ಇನ್ನೋವಾ ಕಾರು ಟಿಟಿ ವಾಹನಕ್ಕೆ ಡಿಕ್ಕಿಯಾಗಿದೆ.
ಟಿಟಿ ವಾಹನದ ಪಕ್ಕ ನಿಂತಿದ್ದ ಸ್ನೇಹಿತರ ಮೇಲೆ ಕಾರು ಹರಿದಿದೆ. ಟಿಟಿ ವಾಹನ ಪಕ್ಕ 7 ರಿಂದ 8 ಮಂದಿ ನಿಂತಿದ್ದರು. 7 ಮಂದಿಗೆ ಗಾಯವಾಗಿದೆ. ದಾವಣಗೆರೆಯ ಭಗತ್ ಸಿಂಗ್ ನಗರ ನಿವಾಸಿ 18 ವರ್ಷ ವಯಸ್ಸಿನ ಅಲಿ ಮಾಹಿನ್ ಎಂಬ ಯುವಕ ಮೃತಪಟ್ಟಿದ್ದಾನೆ. ಅಲಿ ಸಾವಿಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಲ್ತಾಫ್ ಹಾಗೂ ಜುನೆದ್ ಎಂಬ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತ ಸರಿಸುಮಾರು 6 ಗಂಟೆಗೆ ನಡೆದಿದೆ. 7 ಗಂಟೆ ವೇಳೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಗಾಯಗೊಂಡವರನ್ನು ದಾಖಳಿಸಲಾಗಿದೆ. ಕಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಮೃತನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ತಡಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Road Accident: ಬೈಕ್‌ಗೆ ಬೊಲೆರೋ ಡಿಕ್ಕಿ, ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿ ಸಾವು
ಬೈಕ್ ಲಾರಿ ಡಿಕ್ಕಿ, ತಂದೆ- ಮಗಳು ಸಾವು
ಕಲಬುರ್ಗಿ: ನಗರದ ರಿಂಗ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸಿಮೆಂಟ್ ಮಿಕ್ಸರ್ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಂದೆ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಲಬುರ್ಗಿ ರಿಂಗ್ ರಸ್ತೆಯ ಸೈಯದ್ ಚಿಂಚೋಳಿ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ. ಮೃತರನ್ನು ನಗರದ ರಾಣೇಶಪೀರ್ ದರ್ಗಾ ಪ್ರದೇಶದ ನಿವಾಸಿಗಳಾದ ರಾಜುಕುಮಾರ್ (45) ಮತ್ತು ಅವರ ಪುತ್ರಿ ಸುಮಾ (14) ಎಂದು ಗುರುತಿಸಲಾಗಿದೆ.
ಬೈಕ್‌ನಲ್ಲಿ ತೆರಳುತ್ತಿದ್ದ ತಂದೆ-ಮಗಳಿಗೆ ವೇಗವಾಗಿ ಬಂದ ಸಿಮೆಂಟ್ ಮಿಕ್ಸರ್ ವಾಹನವು ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು, ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿದ ಕಲಬುರ್ಗಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಕಲಬುರ್ಗಿ ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.