ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SL Bhyrappa: ಎಸ್‌ಎಲ್‌ ಭೈರಪ್ಪ ಕಾದಂಬರಿಗಳಿಗೆ ಮತ್ತೆ ಹೆಚ್ಚಿದ ಬೇಡಿಕೆ, ಹಲವೆಡೆ ಪುಸ್ತಕಗಳು ಖಾಲಿ

ಅವರ ಪುಸ್ತಕಗಳಿಗೆ ಈಗಷ್ಟೇ ಅಲ್ಲ, ಇನ್ನು ನೂರಾರು ವರ್ಷವಾದರೂ ಬೇಡಿಕೆ ಇದ್ದೇ ಇರುತ್ತೆ ಅನ್ನೋದನ್ನು ಅವರ ಅಭಿಮಾನಿಗಳು ಮತ್ತೆ ಮತ್ತೆ ಸಾಬೀತು ಮಾಡಿದ್ದಾರೆ. ಇದೀಗ ಅವರ ನಿಧನದ ಬಳಿಕ ಅವರ ಪುಸ್ತಕಗಳಿಗೆ ಇರೋ ಬೇಡಿಕೆ ಕಡಿಮೆಯಾಗಿಲ್ಲ, ಬದಲಾಗಿ ಮತ್ತಷ್ಟು ಜಾಸ್ತಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಎಸ್‌ಎಲ್‌ ಭೈರಪ್ಪ ಕಾದಂಬರಿಗಳಿಗೆ ಮತ್ತೆ ಹೆಚ್ಚಿದ ಬೇಡಿಕೆ, ಹಲವೆಡೆ ಖಾಲಿ

-

ಹರೀಶ್‌ ಕೇರ ಹರೀಶ್‌ ಕೇರ Sep 27, 2025 7:21 AM

ಬೆಂಗಳೂರು: ಇತ್ತೀಚೆಗೆ ನಿಧನರಾದ ಕನ್ನಡದ ಖ್ಯಾತ ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪುರಸ್ಕೃತ (Saraswati Samman) ಡಾ. ಎಸ್‌ಎಲ್‌ ಭೈರಪ್ಪ (SL Bhyrappa) ಅವರ ಕೃತಿಗಳಿಗೆ ಇದ್ದಕ್ಕಿದ್ದಂತೆ ಬೇಡಿಕೆ ಹೆಚ್ಚಿದೆ. ಬೆಂಗಳೂರಿನ (Bengaluru) ಪ್ರತಿಷ್ಠಿತ ಪುಸ್ತಕ ಮಳಿಗೆಗಳಲ್ಲಿ ಭೈರಪ್ಪ ಪುಸ್ತಕಕ್ಕೆ ಡಿಮ್ಯಾಂಡ್ ಇದ್ದು, ಹಲವೆಡೆ ಅವರ ಬುಕ್ ಖಾಲಿಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ನಿನ್ನೆ ತಾನೇ ಭೈರಪ್ಪ ಅವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಆದರೆ ಅವರ ಪುಸ್ತಕಗಳಿಗೆ ಈಗಷ್ಟೇ ಅಲ್ಲ, ಇನ್ನು ನೂರಾರು ವರ್ಷವಾದರೂ ಬೇಡಿಕೆ ಇದ್ದೇ ಇರುತ್ತೆ ಅನ್ನೋದನ್ನು ಅವರ ಅಭಿಮಾನಿಗಳು ಮತ್ತೆ ಮತ್ತೆ ಸಾಬೀತು ಮಾಡಿದ್ದಾರೆ. ಇದೀಗ ಅವರ ನಿಧನದ ಬಳಿಕ ಅವರ ಪುಸ್ತಕಗಳಿಗೆ ಇರೋ ಬೇಡಿಕೆ ಕಡಿಮೆಯಾಗಿಲ್ಲ, ಬದಲಾಗಿ ಮತ್ತಷ್ಟು ಜಾಸ್ತಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಎಸ್.ಎಲ್. ಭೈರಪ್ಪ ಅವರ ನಿಧನದ ನಂತರ ಬೆಂಗಳೂರು ನಗರದಾದ್ಯಂತ ಪುಸ್ತಕ ಮಳಿಗೆಗಳು ಅವರ ಪುಸ್ತಕಗಳ ಭರ್ಜರಿ ಮಾರಾಟವನ್ನು ನಡೆಸುತ್ತಿವೆ. ಕೆಲವು ಅಂಗಡಿಗಳಲ್ಲಿ ಅವರ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ಲೇಖಕರ ಪ್ರಕಾಶಕರಾದ ಸಾಹಿತ್ಯ ಭಂಡಾರ ಶುಕ್ರವಾರದವರೆಗೆ ಮುಚ್ಚಿರುವುದರಿಂದ, ಅಂಗಡಿಗಳು ಅವರ ಕೃತಿಗಳನ್ನು ತಕ್ಷಣ ಮರುಮುದ್ರಣ ಮಾಡಲು ಸಾಧ್ಯವಿಲ್ಲ ಅಂತ ಹೇಳಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಚರ್ಚ್ ಸ್ಟ್ರೀಟ್‌ನಲ್ಲಿರುವ ಬುಕ್‌ವರ್ಮ್‌ ಮಳಿಗೆ 'ಪರ್ವ' ಮತ್ತು 'ಆರ್ಫನ್ಡ್' ನಂತಹ ಅನುವಾದಿತ ಪುಸ್ತಕಗಳಿಗೆ ಹೆಚ್ಚಿನ ಬೇಡಿಕೆಯಿದೆ. 'ಆವರಣ' ಪುಸ್ತಕದಲ್ಲಿ ಅವರ ಸಹಿ ಮಾಡಿದ ಪ್ರತಿಗಳು ಮಾರಾಟವಾಗಿವೆ ಎಂದು ಮಾಲೀಕ ಕೃಷ್ಣ ಗೌಡ ಹೇಳಿದ್ದಾರೆ. ಈ ವಿವಾದಿತ ಕಾದಂಬರಿ 2007 ರಲ್ಲಿ ಪ್ರಕಟವಾದಾಗ ಇತಿಹಾಸ ನಿರ್ಮಿಸಿತು. ಐದು ತಿಂಗಳೊಳಗೆ ಇದನ್ನು 10 ಬಾರಿ ಮರುಮುದ್ರಣ ಮಾಡಲಾಯಿತು ಎನ್ನುವುದು ಭೈರಪ್ಪ ಬರಹದ ಹೆಚ್ಚುಗಾರಿಕೆ.

'ನಿರಾಕರಣ', 'ನಾಯಿ ನೆರಳು', 'ಭಿತ್ತಿ' ಮತ್ತು 'ಯಾನ' ಸೇರಿದಂತೆ ಎಸ್‌ಎಲ್‌ ಭೈರಪ್ಪ ಬರೆದಿರುವ ಬಹುತೇಕ ಎಲ್ಲಾ ಪುಸ್ತಕಗಳನ್ನು ಅವರ ಅಭಿಮಾನಿಗಳು ಹಾಗೂ ಕನ್ನಡ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ. ಮುಂದಿನ ವಾರದ ವೇಳೆಗೆ ಭೈರಪ್ಪ ಅವರ ಪುಸ್ತಕಗಳ ದಾಸ್ತಾನು ಹೆಚ್ಚಿಸುವ ಗುರಿಯನ್ನು ಹೊಂದಿದ್ದಾಗಿ ಕೃಷ್ಣಗೌಡ ಹೇಳಿದ್ದಾರೆ. ಗುರುವಾರ, ಸುಮಾರು 12 ಗ್ರಾಹಕರು ಅವರ ಪುಸ್ತಕಗಳನ್ನು ಹುಡುಕಿ ಬಂದರು. ಬುಧವಾರ, ವಾಟ್ಸಾಪ್‌ನಲ್ಲಿ ಸುಮಾರು 25 ಆರ್ಡರ್‌ಗಳನ್ನು ಪಡೆದಿದ್ದಾರಂತೆ.

'ಪರ್ವ', 'ಆವರಣ' ಮತ್ತು 'ಭಿತ್ತಿ' ಪುಸ್ತಕಗಳ ಜೊತೆಗೆ 'ಗೃಹಭಂಗ' ಮತ್ತು 'ಮಂದ್ರ' ಪುಸ್ತಕಗಳು ಚರ್ಚ್ ಸ್ಟ್ರೀಟ್‌ನಲ್ಲಿರುವ ದಿ ಬುಕ್ ಹೈವ್‌ನಲ್ಲಿ ಜನಪ್ರಿಯವಾಗಿವೆ. ಬುಧವಾರದಿಂದ ಭೈರಪ್ಪ ಅವರ ಸುಮಾರು 40-45 ಪುಸ್ತಕಗಳು ಮಾರಾಟವಾಗಿವೆ ಎಂದು ಅಂಗಡಿ ಮಾಲೀಕ ಕೇಶವ್ ಆರ್ ಎಂಬುವರು ಹೇಳಿದ್ದಾರೆ. ಗುರುವಾರ, ಒಬ್ಬ ಗ್ರಾಹಕರು ಎಂಟು ಭೈರಪ್ಪ ಪುಸ್ತಕಗಳನ್ನು ಖರೀದಿಸಿದ್ದಾರಂತೆ. 'ಪರ್ವ' ಮತ್ತು 'ಆವರಣ' ಪುಸ್ತಕಗಳ ಹೆಚ್ಚಿನ ಪ್ರತಿಗಳನ್ನು ಆರ್ಡರ್ ಮಾಡಿದ್ದಾರೆ. ಆದರೆ ವಿತರಕರು 10 ದಿನಗಳ ನಂತರ ಮಾತ್ರ ಅವು ಲಭ್ಯವಿರುತ್ತವೆ ಎಂದು ಹೇಳಿದ್ದಾರಂತೆ.

ಅತೀ ದೊಡ್ಡ ಪುಸ್ತಕ ಮಾಲ್ ಎಂಬ ಹೆಗ್ಗಳಿಕೆ ಪಡೆದ ಸಪ್ನಾ ಬುಕ್ ಹೌಸ್ ಗುರುವಾರ ಬೆಳಿಗ್ಗೆ ವೇಳೆಗೆ ಭೈರಪ್ಪ ಅವರ ಕೃತಿಗಳ 500 ಕ್ಕೂ ಹೆಚ್ಚು ಪ್ರತಿಗಳನ್ನು ಮಾರಾಟ ಮಾಡಿದೆ. ಅದರ ಕನ್ನಡ ಪುಸ್ತಕಗಳು ಮತ್ತು ಪ್ರಕಟಣಾ ವಿಭಾಗದ ಜನರಲ್ ಮ್ಯಾನೇಜರ್ ಆರ್ ದೊಡ್ಡೇಗೌಡ, "ನಮ್ಮಲ್ಲಿ ಎಲ್ಲಾ ಶೀರ್ಷಿಕೆಗಳು ಸ್ಟಾಕ್‌ನಲ್ಲಿವೆ, ಆದರೆ ಸೀಮಿತ ಸಂಖ್ಯೆಯಲ್ಲಿ ಮಾತ್ರ. ಬೇಡಿಕೆ ಮುಂದುವರಿಯುವ ಸಾಧ್ಯತೆಯಿದೆ. ಹೆಚ್ಚಿನ ಓದುಗರು 40 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಎಂಬ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: SL Bhyrappa: ಪ್ರಹ್ಲಾದ್‌ ಜೋಶಿ, ವಿಶ್ವೇಶ್ವರ ಭಟ್‌ ಮುಂದಾಳತ್ವದಲ್ಲಿ ಭೈರಪ್ಪ ಅಂತ್ಯಕ್ರಿಯೆ; ಚಿತೆಗೆ ಜೊತೆಯಾಗಿ ಅಗ್ನಿಸ್ಪರ್ಶ ಮಾಡಿದ ಮಕ್ಕಳು, ಸಹನಾ ವಿಜಯಕುಮಾರ್‌