ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prof Achyuth Samanth Column: ಶಿಕ್ಷಣ ಮತ್ತು ಸಂಸ್ಕಾರ: ನಾಣ್ಯದ ಎರಡು ಮುಖಗಳು

ಪಂಚತಂತ್ರದಲ್ಲಿನ ಕಥೆಗಳಲ್ಲಿ ನೈತಿಕ ಮೌಲ್ಯಗಳೇ ತುಂಬಿರುತ್ತವೆ. ಈ ಎ ಉದಾಹರಣೆಗಳು, ನಮ್ಮ ವಿಶಿಷ್ಟವಾದ ಭಾರತೀಯ ಚಿಂತನೆಯು ಯಾವಾಗಲೂ ಶಿಕ್ಷಣದ ಪಾತ್ರವು ವ್ಯಕ್ತಿತ್ವವನ್ನು ರೂಪಿಸುವು ದರಲ್ಲಿ ಒಳಗೊಂಡಿದೆ ಎಂಬುದನ್ನು ನಮಗೆ ನೆನಪಿಸುತ್ತದೆ. ಅರಿವು ಮೂಡಿಸುವ ಕೌಶಲಗಳು (ಹೆಚ್ಚಾಗಿ ತರಗತಿಗಳಲ್ಲಿ ಕಲಿಸುವುದು) ಮತ್ತು ಸಾಮಾಜಿಕ-ಭಾವನಾತ್ಮಕ ಕಲಿಕೆ ನಡುವೆ ಹೊಂದಾಣಿಕೆ ಇರಬೇಕು.

ಶಿಕ್ಷಣ ಮತ್ತು ಸಂಸ್ಕಾರ: ನಾಣ್ಯದ ಎರಡು ಮುಖಗಳು

-

Ashok Nayak Ashok Nayak Sep 27, 2025 9:39 AM

ದಾರಿದೀಪ

ಪ್ರೊ.ಅಚ್ಯುತ ಸಮಂತ

ನಮ್ಮ ಅನನ್ಯವಾದ ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಣ (ಶಿಕ್ಷಾ) ಮತ್ತು ಸಂಸ್ಕಾರ ಎಂಬ ಪದಗಳನ್ನು ನಾವು ಪದೇ ಪದೆ ಬಳಸುತ್ತೇವೆ. ಈ ಅವಳಿ ಪದಗಳು ಒಂದೇ ನಾಣ್ಯದ ಎರಡು ಮುಖಗಳಂತೆ, ಎರಡು ಎಳೆಗಳು ಸೇರಿ ನೇಯ್ದ ಒಂದೇ ಬಟ್ಟೆಯಂತೆ ಸದಾ ಒಟ್ಟಿಗೆ ಇರುತ್ತವೆ. ‘ಶಿಕ್ಷಾ’ವನ್ನು ಸಾಮಾನ್ಯವಾಗಿ ಶಿಕ್ಷಣ ಅಥವಾ ಕಲಿಕೆ ಎಂದು ಪರಿಭಾವಿಸಲಾಗುತ್ತದೆ.

ಸಂಸ್ಕಾರವು ಆಂತರಿಕವಾದ ರಚನೆ, ನೈತಿಕ ಪ್ರವೃತ್ತಿ, ನಮ್ರತೆ ಮತ್ತು ಔದಾರ್ಯಗಳನ್ನು ಒಳಗೊಂಡಿರುತ್ತದೆ. ಇದು ಇರುವ ಜ್ಞಾನವನ್ನು ಹೇಗೆ ಬಳಸುತ್ತದೆ ಎಂಬುದನ್ನು ನಿರೂಪಿಸುತ್ತದೆ. ಒಂದನ್ನು ಮತ್ತೊಂದರಿಂದ ನಾವು ಬೇರ್ಪಡಿಸಿದಾಗ, ಚಾಣಾಕ್ಷವಾದ ಸಿನಿಕತೆಯ ಜನರು ಅಥವಾ ಸದುದ್ದೇಶದ ಆದರ್ಶವಾದಿಗಳು ಹುಟ್ಟುತ್ತಾರೆ. ನಮ್ಮ ಶಿಕ್ಷಣದ ನೈಜಗುರಿಯು ಜ್ಞಾನದ ಆತ್ಮಸಾಕ್ಷಿಯೊಂದಿಗೆ ಬದುಕುವ ಜನರನ್ನು ಬೆಳೆಸುವುದೇ ಆಗಿದೆ.

ಉದಾಹರಣೆಗೆ ನಮ್ಮ ಪುರಾಣದ ಕಥೆಗಳನ್ನೇ ನೋಡಿ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ಅರ್ಜುನನಿಗೆ ನೀಡಿದ ಸೂಚನೆಯು ಕಾರ್ಯತಂತ್ರದ ಪಾಠವಾಗಿದೆ. ಇದು ನಿರ್ಲಿಪ್ತತೆ ಮತ್ತು ನಮ್ರತೆಯಿಂದ ನಿರ್ವಹಿಸಲ್ಪಟ್ಟ ಕರ್ತವ್ಯದ ಬೋಧನೆಯಾಗಿದೆ. ಇನ್ನು ಮಹಾಭಾರತವನ್ನು ನೋಡುವುದಾದರೆ ಇದು ತನ್ನ ವಿಶಾಲ ದೃಷ್ಟಿಕೋನದಲ್ಲಿ, ಬಿಲ್ಲುಗಾರಿಕೆಯಲ್ಲಿ ಪಾಂಡಿತ್ಯವನ್ನು ಪಾತ್ರದ ಸ್ಥಿರತೆಯೊಂದಿಗೆ ಹೊಗಳುತ್ತದೆ.

ಪಂಚತಂತ್ರದಲ್ಲಿನ ಕಥೆಗಳಲ್ಲಿ ನೈತಿಕ ಮೌಲ್ಯಗಳೇ ತುಂಬಿರುತ್ತವೆ. ಈ ಎ ಉದಾಹರಣೆಗಳು, ನಮ್ಮ ವಿಶಿಷ್ಟವಾದ ಭಾರತೀಯ ಚಿಂತನೆಯು ಯಾವಾಗಲೂ ಶಿಕ್ಷಣದ ಪಾತ್ರವು ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಒಳಗೊಂಡಿದೆ ಎಂಬುದನ್ನು ನಮಗೆ ನೆನಪಿಸುತ್ತದೆ. ಅರಿವು ಮೂಡಿಸುವ ಕೌಶಲಗಳು (ಹೆಚ್ಚಾಗಿ ತರಗತಿಗಳಲ್ಲಿ ಕಲಿಸುವುದು) ಮತ್ತು ಸಾಮಾಜಿಕ-ಭಾವನಾತ್ಮಕ ಕಲಿಕೆ ನಡುವೆ ಹೊಂದಾಣಿಕೆ ಇರಬೇಕು. ಆಗ ಮಾತ್ರ ಒಳ್ಳೆಯ ಫಲಿತಾಂಶಗಳು ಸಿಗಲು ಸಾಧ್ಯ. ದಯೆ ಮತ್ತು ಶಿಸ್ತು ಇರುವಲ್ಲಿ ಮಿದುಳು ಚೆನ್ನಾಗಿ ಬೆಳೆಯುತ್ತದೆ.

ಇದನ್ನೂ ಓದಿ: Prof R G Hegde Column: ರಸ್ತೆಗಳು ಇರುವುದು ಸಂಚಾರಕ್ಕಾಗಿ, ಮೆರವಣಿಗೆಗಾಗಿ ಅಲ್ಲ

ನಾವೆಲ್ಲ ನಮ್ಮ ಜೀವನದಲ್ಲಿ ಬೆಳೆಸಿಕೊಳ್ಳಬೇಕಾದ ಒಳ್ಳೆಯ ಗುಣಗಳನ್ನು ಹೆಸರಿಸಿದರೆ, ಒಂದು ಸಮೂಹ (ಇoಠಿಛ್ಟಿ) ಹೊರಹೊಮ್ಮುತ್ತವೆ. ಅವುಗಳೆಂದರೆ ಮಾನವೀಯ ಕಾಳಜಿ, ಪ್ರಾಮಾಣಿಕತೆ, ವಾಪಸು ಮಾಡುವ ಅಭ್ಯಾಸ, ಹೊಸ ಧೈರ್ಯ, ಬೇರೂರುವಿಕೆ, ನಮ್ರತೆ, ಕೃತಜ್ಞತೆ ಮತ್ತು ಅರ್ಥಕ್ಕಾಗಿ ಅಂತ್ಯವಿಲ್ಲದ ಅನ್ವೇಷಣೆ. ಈ ಎಲ್ಲದರ ಬಗ್ಗೆಯೂ ನಾವು ಸಂಕ್ಷಿಪ್ತವಾಗಿ ಒಮ್ಮೆ ಯೋಚಿಸೋಣ.

ಮಾನವೀಯತೆಯು ಶಿಕ್ಷಣವನ್ನು ಬಾಹ್ಯವಾಗಿ ಪರಿವರ್ತಿಸುತ್ತದೆ, ಇದು ಕಲಿಕೆಯನ್ನು ಜೀವನದ ಸುಧಾರಣೆಗೆ ಸಂಪನ್ಮೂಲವನ್ನಾಗಿ ಮಾಡುತ್ತದೆ. ಪ್ರಾಮಾಣಿಕತೆಯು ಬುದ್ಧಿಶಕ್ತಿಯನ್ನು ಕುಶಲತೆ ಯಿಂದ ತಡೆಯುತ್ತದೆ. ಹಿಂದಿರುಗಿಸುವುದು ಸಾಧನೆಯನ್ನು ಸಾಮಾಜಿಕ ಉನ್ನತಿಯಾಗಿ ಪರಿವರ್ತಿಸು ತ್ತದೆ.

ಸಂಪ್ರದಾಯಗಳು ನಿಶ್ಚಲವಾಗದಂತೆ, ಅವು ಹೊಂದಿಕೊಳ್ಳುವಂತೆ, ಹಳೆಯ ಉದ್ದೇಶಗಳನ್ನು ಪೂರೈಸಲು ಹೊಸ ಸಾಧನಗಳನ್ನು ಬಳಸುವುದನ್ನು ನಾವೀನ್ಯವು ಖಚಿತಪಡಿಸುತ್ತದೆ. ನಮ್ರತೆಯು ವಿಜಯೋತ್ಸವವನ್ನು ತಡೆಯುತ್ತದೆ; ಕೃತಜ್ಞತೆಯು ಅರ್ಹತೆಯನ್ನು ತಡೆಯುತ್ತದೆ.

Screenshot_9 R

ಇದರಿಂದಲೇ ಸಂಸ್ಥೆಗಳು ಜೀವನಮೌಲ್ಯಗಳಿಗೆ ಪ್ರಯೋಗಾಲಯಗಳಾಗಬಹುದು. ನನ್ನ ಪ್ರಕಾರ, ನಮ್ಮ ‘ಕಳಿಂಗ ಕೈಗಾರಿಕಾ ತಂತ್ರeನ ಸಂಸ್ಥೆ’ಯು (ಕೆಐಐಟಿ) ಕಾರ್ಯರೂಪಕ್ಕೆ ಬರುವ ನೀಲನಕ್ಷೆ ಯನ್ನು ನೀಡುತ್ತದೆ. ಸಾಮಾಜಿಕ ಪರಿವರ್ತನೆ ಆಗಬೇಕಾದರೆ ಗುಣಮಟ್ಟದ ಶಿಕ್ಷಣ ನೀಡುವ ಪ್ರದೇಶವು ಅತ್ಯಂತ ಶಕ್ತಿಶಾಲಿಯಾದ ಸಾಧನವಾಗಿದೆ. ಉತ್ತಮ ಸ್ಥಳದಲ್ಲಿ ಉತ್ತಮ ಕಲಿಕೆ ಇರುತ್ತದೆ. ಈ ಒಂದು ದೃಢನಿಶ್ಚಯ ಮತ್ತು ಸದುದ್ದೇಶದಿಂದಲೇ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು.

ಕೆಐಐಟಿಯು ಕಠಿಣ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಳವಾದ ಸಾಮಾಜಿಕ ಸಂಪರ್ಕದ ಅರಿವಿನ ಮೂಲಕ ಯೋಜಿಸುತ್ತದೆ. ಕೆಐಐಟಿ ಮತ್ತು ಅದರ ಸಹ ಸಂಸ್ಥೆಯಾದ ‘ಕಳಿಂಗ ಸಮಾಜ ವಿಜ್ಞಾನ ಸಂಸ್ಥೆ’ಯ (ಕೆಐಎಸ್ ಎಸ್) ಉಸಿರೇ ತತ್ವಶಾಸ್ತ್ರ. ಬುಡಕಟ್ಟು ಮಕ್ಕಳಿಗಾಗಿ ವಿಶ್ವದ ಅತಿದೊಡ್ಡ ಸಂಪೂರ್ಣ ಉಚಿತ ವಸತಿ ಸಂಸ್ಥೆಯಾಗಿರುವ ಕೆಐಎಸ್‌ಎಸ್, ಶಿಕ್ಷಾ ಮತ್ತು ಸಂಸ್ಕಾರವನ್ನು ಅದರ ಶುದ್ಧರೂಪದಲ್ಲಿ ಸಮರ್ಪಕವಾಗಿ ಸಾಕಾರಗೊಳಿಸುತ್ತದೆ.

ಇಲ್ಲಿ 80000ಕ್ಕೂ ಹೆಚ್ಚು ಸ್ಥಳೀಯ ವಿದ್ಯಾರ್ಥಿಗಳಿಗೆ ಶಿಕ್ಷಣ, ಪೋಷಣೆ, ಆರೋಗ್ಯ ರಕ್ಷಣೆ ಮತ್ತು ಸಾಂಸ್ಕೃತಿಕ ಸಂರಕ್ಷಣೆಯನ್ನು ಒದಗಿಸಲಾಗುತ್ತಿದೆ. ಇಲ್ಲಿ, ಸಾಧನ ಮತ್ತು ಗುರಿಯನ್ನು ಬೇರ್ಪಡಿಸ ಲಾಗದು.

ಶೈಕ್ಷಣಿಕ ಕ್ಷೇತ್ರಗಳ ಎಲ್ಲೆಯನ್ನು ಮೀರಿ, ಕೆಐಐಟಿಯು ವಿದ್ಯಾರ್ಥಿ ಸಾಮಾಜಿಕ ಸಂಸ್ಕೃತಿಯನ್ನು ಪೋಷಿಸುತ್ತದೆ. ಇಲ್ಲಿ ವೈವಿಧ್ಯಮಯ ಕ್ಲಬ್‌ಗಳು, ಸಾಂಸ್ಕೃತಿಕ ಸಂಘಗಳು ಮತ್ತು ನಾವೀನ್ಯ ಕೋಶ ಗಳಿವೆ. ಇವು ತಂಡದ ಕೆಲಸ, ಸೃಜನಶೀಲತೆ ಮತ್ತು ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಬೆಳೆಸುತ್ತವೆ. ಕೆಐಐಟಿ ಮತ್ತು ಕೆಐಎಸ್ ಎಸ್‌ನಲ್ಲಿರುವ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ (ಎನ್‌ಎಸ್‌ಎಸ್) ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.

ಇಲ್ಲಿ ಸ್ವಯಂಸೇವಕರಿಗೆ ಗ್ರಾಮೀಣ ಅಭಿವೃದ್ಧಿ, ಆರೋಗ್ಯ ಜಾಗೃತಿ ಅಭಿಯಾನಗಳು, ಪರಿಸರ ಅಭಿಯಾನಗಳು ಮತ್ತು ವಿಪತ್ತು ಪರಿಹಾರಕ್ಕಾಗಿ ನೀಡುವ ಕಲೆಯ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಕನ್ಯಾ ಕಿರಣ್ ಮತ್ತು ಕಳಿಂಗ ಫೆಲೋಶಿಪ್ ಮೂಲಕ ನೆರವು ನೀಡಲಾಗುತ್ತದೆ. ಅವು ಜೀವಂತ ಪ್ರಯೋಗಾಲಯಗಳಾಗಿದ್ದು, ಅಲ್ಲಿ ಚಟುವಟಿಕೆಯ ಮೂಲಕವೇ ಸಂಸ್ಕಾರವನ್ನು ಕಲಿಸಲಾಗುತ್ತದೆ.

ಸಂಸ್ಥಾಪಕರು ಹೊಂದಿರುವ ಉದಾತ್ತ ಮೌಲ್ಯಗಳೇ ಒಂದು ಅಮೂಲ್ಯವಾದ ಸಂಸ್ಥೆಯ ಡಿಎನ್‌ಎ ಯನ್ನು ರೂಪಿಸುತ್ತವೆ. ನನ್ನ ಸ್ವಂತ ನಂಬಿಕೆಗಳು, ಪ್ರತಿಯೊಂದು ಜೀವನದ ಪಾವಿತ್ರ್ಯ ಮತ್ತು ಬೇರೆಯವರಿಗೆ ಕೊಡುವ ಕರ್ತವ್ಯವು ವಿದ್ಯಾರ್ಥಿಗಳನ್ನು ಪರಂಪರೆಯಲ್ಲಿ ಬೇರೂರಿಸುತ್ತದೆ ಮತ್ತು ಭವಿಷ್ಯಕ್ಕಾಗಿ ಅವರನ್ನು ಸಿದ್ಧಪಡಿಸುತ್ತದೆ.

ವೈಯಕ್ತಿಕ ಸಂಪತ್ತು ಅಥವಾ ಆಸ್ತಿಯನ್ನೇ ಸಂಪಾದಿಸದ ನನ್ನ ಸರಳ ಜೀವನವೇ ವಿದ್ಯಾರ್ಥಿಗಳಿಗೆ ಸಂದೇಶ ನೀಡುತ್ತದೆ. ನಮ್ಮ ನೈತಿಕತೆಯನ್ನು ಕಾಪಾಡಿಕೊಂಡು ನಾವು ಹೊಸತನವನ್ನು ಪಡೆಯ ಬಹುದು, ಅಪಾಯವನ್ನು ಎದುರಿಸಬಹುದು, ಕನಸನ್ನು ಕಾಣಬಹುದು ಮತ್ತು ದೊಡ್ಡದನ್ನು ಸಾಧಿಸಬಹುದು.

ತಮ್ಮೊಂದಿಗೆ, ಇತರರೊಂದಿಗೆ ಮತ್ತು ತಮ್ಮ ಭಾವನೆಗಳೊಂದಿಗೆ ಹೊಂದಿಕೊಳ್ಳಲು ಕಲಿಯುವವರು ಯೌವನದಲ್ಲಿ ಸದಾ ಜೀವನದಲ್ಲಿ ಮುಂದೆ ಹೋಗುತ್ತಾರೆ ಹಾಗೂ ಯಶಸ್ಸು ಸಾಧಿಸುತ್ತಾರೆ. ಇದು ಹೊಂದಿಕೊಳ್ಳುವಿಕೆ ಮತ್ತು ಭಾವನಾತ್ಮಕ ಬುದ್ಧಿವಂತಿಕೆಯ ಪ್ರತಿಬಿಂಬ. ಶಿಸ್ತು ಸ್ವಯಂ ಪಾಂಡಿತ್ಯ ವನ್ನು ಪ್ರತಿನಿಧಿಸುತ್ತದೆ. ಸಕಾರಾತ್ಮಕ ಮನಸ್ಥಿತಿಯು ಭವಿಷ್ಯವನ್ನು ರೂಪಿಸುತ್ತದೆ ಮತ್ತು ಒಳಗಿ ನಿಂದ ಹೊರಹೊಮ್ಮುವ ನೈಸರ್ಗಿಕ ಹೊಳಪನ್ನು ತರುತ್ತದೆ, ಅಂತರ್ಗತವಾದ ಆಶಾವಾದ ವನ್ನು ಶಕ್ತಿಯಾಗಿ ತೋರಿಸುತ್ತದೆ.

ಪ್ರೀತಿಪಾತ್ರರಿಗೆ ಜೀವಮಾನದ ನೋವನ್ನು ಉಂಟುಮಾಡುವ ತಾತ್ಕಾಲಿಕ ಸಂತೋಷಗಳನ್ನು ವಿರೋಧಿಸುವುದು ಜವಾಬ್ದಾರಿ ಮತ್ತು ದೂರದೃಷ್ಟಿಯನ್ನು ಸಾಕಾರಗೊಳಿಸುತ್ತದೆ. ದೃಷ್ಟಿಕೋನವು ಎತ್ತರವನ್ನು ನಿರ್ಧರಿಸುತ್ತದೆ, ಮನೋಭಾವವನ್ನು ಯಶಸ್ಸಿನ ನಿರ್ಣಾಯಕ ಚಾಲಕಶಕ್ತಿಯನ್ನಾಗಿ ಮಾಡುತ್ತದೆ. ನಿಜವಾದ ಬೆಳವಣಿಗೆಯನ್ನು ಪ್ರತ್ಯೇಕವಾಗಿ ಅಲ್ಲ, ಇತರರೊಂದಿಗೆ ಬೆಳೆಯುವ ಮೂಲಕ, ಎಲ್ಲರನ್ನೂ ಒಟ್ಟಿಗೆ ಮೇಲಕ್ಕೆತ್ತುವ ಅಂತರ್ಗತ ಪ್ರಗತಿಯನ್ನು ಅಳವಡಿಸಿಕೊಳ್ಳುವ ಮೂಲಕ ಸಾಧಿಸಲಾಗುತ್ತದೆ.

ಅವು ಕೆಐಐಟಿಯ ಜೀವಂತ ತತ್ವಶಾಸ್ತ್ರ. ಇಲ್ಲಿ, ವಿದ್ಯಾರ್ಥಿಗಳು ಕೇವಲ ಶಿಕ್ಷಣವನ್ನು ಪಡೆಯುವು ದಿಲ್ಲ; ಅವರು ಸಂಸ್ಕಾರದೊಂದಿಗೆ ಬದುಕುತ್ತಾರೆ, ನಾನು ಹಾಕಿದ ಉದಾಹರಣೆಯ ಮೂಲಕ ಮೌಲ್ಯಗಳನ್ನು ಹೀರಿಕೊಳ್ಳುತ್ತಾರೆ. ಸಂಸ್ಕಾರದೊಂದಿಗೆ ಶಿಕ್ಷಣವನ್ನು ಮತ್ತೆ ಒಂದುಗೂಡಿಸಿದರೆ ನಾವು ಸಮರ್ಥ ಮನಸ್ಸುಗಳನ್ನು ಮಾತ್ರವಲ್ಲದೆ ಆತ್ಮಸಾಕ್ಷಿಯ ಹೃದಯ ಗಳನ್ನು ಕಾಣಬಹುದು.

ಭಾರತದಲ್ಲಿ ಶಿಕ್ಷಣವು ಯಾವಾಗಲೂ ಕೌಶಲ ತರಬೇತಿಗಿಂತ ಹೆಚ್ಚಿನದಾಗಿದೆ; ಶಿಕ್ಷಣವನ್ನು ಸಂಸ್ಕಾರದೊಂದಿಗೆ ಒಂದುಗೂಡಿಸುವುದು ಪವಿತ್ರ ಕರ್ತವ್ಯ ಸಹ ಆಗಿದೆ. ಮೌಲ್ಯಗಳಿಲ್ಲದ ಜ್ಞಾನವು ಬೇರುರಹಿತ ಸಸಿಯಂತೆ. ಧಿನವಿಲ್ಲದ ಮೌಲ್ಯಗಳು ಶಕ್ತಿಹೀನವಾಗಿವೆ. ನಮ್ಮ ಯುವಕರು ಆಧುನಿಕ ಸಾಮರ್ಥ್ಯದಿಂದ ಸಜ್ಜಾದಾಗ ಮತ್ತು ನಮ್ಮ ನಾಗರಿಕತೆಯ ಶಾಶ್ವತ ಆದರ್ಶಗಳಲ್ಲಿ ಲಂಗರು ಹಾಕಿದಾಗ, ಅವರು ಆತ್ಮನಿರ್ಭರ ಮತ್ತು ವಿಶ್ವಗುರು ಭಾರತದ ನಿಜವಾದ ವಾಸ್ತುಶಿಲ್ಪಿಗಳಾಗುತ್ತಾರೆ.

ಇದು ಕೆಐಐಟಿ ಮತ್ತು ಕೆಐಎಸ್‌ಎಸ್‌ನ ಪ್ರತಿದಿನದ ಧ್ಯೇಯವಾಗಿದೆ. ಇದು ತಮ್ಮ ವೃತ್ತಿಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸುವ, ತಮ್ಮ ಸಮುದಾಯಗಳಿಗೆ ಸೇವೆ ಸಲ್ಲಿಸುವ ಮತ್ತು ನಮ್ಮ ರಾಷ್ಟ್ರದ ಕಾಲಾತೀತ ಸ್ಪೂರ್ತಿಯನ್ನು ಮುಂದಕ್ಕೆ ಸಾಗಿಸುವ ಪದವೀಧರರನ್ನು ಸಜ್ಜುಗೊಳಿಸುತ್ತದೆ.

(ಲೇಖಕರು: ಸಂಸ್ಥಾಪಕರು ಆರ್ಟ್ ಆಫ್ ಗಿವಿಂಗ್ ಮತ್ತು ಮಾಜಿ ಸಂಸದರು)