ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala case: ಬುರುಡೆ ಕೊಟ್ಟಿದ್ದೇ ಮಟ್ಟಣ್ಣವರ್!‌ ಬಾಯಿ ಬಿಟ್ಟ ಜಯಂತ್‌

Girish Mattannavar: ಬೆಳ್ತಂಗಡಿಯಲ್ಲಿ ಎಸ್‌ಐಟಿ ಕಚೇರಿಗೆ ಬಂದು ವಿಚಾರಣೆ ಎದುರಿಸಿದ ಜಯಂತ್, ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ. ಸದ್ಯ ಎಸ್‌ಐಟಿ ಅಧಿಕಾರಿಗಳು ಜಯಂತ್ ವಿಚಾರಣೆ ಮುಂದುವರೆಸಿದ್ದಾರೆ. ಧರ್ಮಸ್ಥಳ ಪ್ರಕರಣಕ್ಕೂ ಕೇರಳಕ್ಕೂ ಇರುವ ಸಂಬಂಧದ ಬಗ್ಗೆಯೂ ತಿಳಿಸಿದ್ದಾನೆ ಎನ್ನಲಾಗಿದೆ.

ಬುರುಡೆ ಕೊಟ್ಟಿದ್ದೇ ಮಟ್ಟಣ್ಣವರ್!‌ ಬಾಯಿ ಬಿಟ್ಟ ಜಯಂತ್‌

-

ಹರೀಶ್‌ ಕೇರ ಹರೀಶ್‌ ಕೇರ Sep 6, 2025 7:44 AM

ದಕ್ಷಿಣ ಕನ್ನಡ: ಧರ್ಮಸ್ಥಳ ಕೇಸ್‌ಗೆ (Dharmasthala case) ದಿನಕ್ಕೊಂದು ತಿರುವು ಸಿಗುತ್ತಿದೆ. ಧರ್ಮಸ್ಥಳದ ತಲೆ ಬುರುಡೆ ಪ್ರಕರಣದಲ್ಲಿ ಒಬ್ಬೊಬ್ಬರನ್ನೇ ಎಸ್ಐಟಿ (SIT) ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಇದೇ ಕೇಸ್‌ನಲ್ಲಿ ಜಯಂತ್ ಟಿ. ಯನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಲೆ ಬುರುಡೆ ರಹಸ್ಯದ ಬಗ್ಗೆ ಜಯಂತ್ ಬಾಯ್ಬಿಟ್ಟಿದ್ದು, ತಲೆ ಬುರುಡೆ ತಂದುಕೊಟ್ಟಿದ್ದು ಗಿರೀಶ್ ಮಟ್ಟಣ್ೞನವರ್ (Girish Mattannavar) ಎಂದು ಹೇಳಿಕೆ ನೀಡಿದ್ದಾನೆ ಎಂದು ಗೊತ್ತಾಗಿದೆ.

ಬೆಳ್ತಂಗಡಿಯಲ್ಲಿ ಎಸ್‌ಐಟಿ ಕಚೇರಿಗೆ ಬಂದು ವಿಚಾರಣೆ ಎದುರಿಸಿದ ಜಯಂತ್, ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ. ಸದ್ಯ ಎಸ್‌ಐಟಿ ಅಧಿಕಾರಿಗಳು ಜಯಂತ್ ವಿಚಾರಣೆ ಮುಂದುವರೆಸಿದ್ದಾರೆ. ಧರ್ಮಸ್ಥಳ ಪ್ರಕರಣಕ್ಕೂ ಕೇರಳಕ್ಕೂ ಇರುವ ಸಂಬಂಧದ ಬಗ್ಗೆಯೂ ತಿಳಿಸಿದ್ದಾನೆ ಎನ್ನಲಾಗಿದೆ.

ಯೂಟ್ಯೂಬರ್​ ಸುಮಂತ್ ಕೂಡ ಸ್ಫೋಟಕ ಮಾಹಿತಿ ನೀಡಿದ್ದಾರೆ. ಧರ್ಮಸ್ಥಳ ವಿರುದ್ಧ ಷಡ್ಯಂತ್ರ ರೂಪಿಸಲಾಗಿದ್ದು, ಈ ಷಡ್ಯಂತ್ರವನ್ನು ಉತ್ತೇಜಿಸಲು ಕೆಲವು ಯೂಟ್ಯೂಬರ್‌ಗಳಿಗೆ ದೊಡ್ಡಮಟ್ಟದಲ್ಲಿ ಆರ್ಥಿಕ ನೆರವು ಒದಗಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ, ತನಿಖೆ ನಡೆಸಬೇಕೆಂದು ಸುಮಂತ್ ಒತ್ತಾಯಿಸಿದ್ದಾರೆ. ಈ ಆರೋಪಗಳು ಧರ್ಮಸ್ಥಳದ ಖ್ಯಾತಿಗೆ ಕಳಂಕ ತರುವ ಉದ್ದೇಶದಿಂದ ರೂಪಿತವಾದ ಷಡ್ಯಂತ್ರದ ಭಾಗವಾಗಿವೆ ಎಂದು ಹೇಳಿಕೆ ನೀಡಿದ್ದಾನೆ.

ಮಂಡ್ಯ ಮೂಲದ ಯೂಟ್ಯೂಬರ್ ಸುಮಂತ್, ಧರ್ಮಸ್ಥಳದ ವಿರುದ್ಧದ ಷಡ್ಯಂತ್ರಕ್ಕೆ ಸಂಬಂಧಿಸಿದಂತೆ ತಾನೇ ಸಾಕ್ಷಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ತನಗೂ ಈ ಷಡ್ಯಂತ್ರವನ್ನು ಉತ್ತೇಜಿಸುವಂತಹ ಆಫರ್ ಬಂದಿತ್ತು ಎಂದು ಆತ ಬಹಿರಂಗಪಡಿಸಿದ್ದಾನೆ. ಸುಮಂತ್‌ನ ಪ್ರಕಾರ, ಯೂಟ್ಯೂಬರ್‌ಗಳಾದ ಸಮೀರ್, ಚಂದನ್ ಗೌಡ ಮತ್ತು ಅಭಿಗೆ ಫಂಡಿಂಗ್ ಒದಗಿಸಲಾಗಿದೆ. ಈ ತಂಡ ಧರ್ಮಸ್ಥಳದ ವಿರುದ್ಧ ತಪ್ಪು ಮಾಹಿತಿಯನ್ನು ಹರಡಲು ವೀಡಿಯೊಗಳನ್ನು ತಯಾರಿಸಿ ಟ್ರೋಲ್ ಮಾಡುವ ಕೆಲಸಕ್ಕೆ ಆರ್ಥಿಕ ಬೆಂಬಲ ಪಡೆದಿದೆ. ಈ ಬಗ್ಗೆ ಚರ್ಚಿಸಲು ಜ್ಯೂಸ್ ಹೋಟೆಲ್‌ನಲ್ಲಿ ಸಭೆ ನಡೆಸಿದ್ದಾರೆ. ಆದರೆ ತಾನು ಈ ಷಡ್ಯಂತ್ರದಲ್ಲಿ ಭಾಗಿಯಾಗಲು ಒಪ್ಪದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಸುಮಂತ್‌ನ ಹೇಳಿಕೆಯ ಪ್ರಕಾರ, ಈ ಷಡ್ಯಂತ್ರ ಎರಡು ವರ್ಷಗಳ ಹಿಂದಿನಿಂದ ಆರಂಭವಾಗಿದೆ. ಈ ಪ್ರಕರಣವನ್ನು ಕೇಂದ್ರೀಕರಿಸಿ ಕೆಲವು ಗುಂಪುಗಳು ಧರ್ಮಸ್ಥಳದ ದೇವಾಲಯದ ಆಡಳಿತಗಾರರ ವಿರುದ್ಧ ಆರೋಪಗಳನ್ನು ಮಾಡಿ, ಖ್ಯಾತಿಗೆ ಕಳಂಕ ತರುವ ಯತ್ನ ಮಾಡಿವೆ. ಈ ಷಡ್ಯಂತ್ರದ ಹಿಂದೆ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣವರ್‌ ಇದ್ದಾರೆ ಎಂದು ಸುಮಂತ್‌ ಆರೋಪಿಸಿದ್ದಾರೆ.

ಬುರುಡೆ ಕೇಸ್​​ನಲ್ಲಿ ಕೇರಳ ಮೂಲದ ಯೂಟ್ಯೂಬರ್ ಮನಾಫ್​ಗೆ ಎಸ್ಐಟಿ ನೊಟೀಸ್ ನೀಟಿದೆ. ಬುರುಡೆ ಪ್ರಕರಣ ಸಂಬಂಧಿಸಿದಂತೆ ಆರಂಭದಿಂದಲೂ ತನ್ನ ಯೂಟ್ಯೂಬ್‌ನಲ್ಲಿ ಈ ಮುನಾಫ್​ ನಾನಾ ಕಥೆಗಳನ್ನು ಕಟ್ಟಿದ್ದ. ಜಯಂತ್ ಬುರುಡೆ ತೆಗೆಯುವಂತೆ ತೋರಿಸುವ ವಿಡಿಯೋವನ್ನು ಈತ ವೈರಲ್ ಮಾಡಿದ್ದ. ಈತನ ಬಳಿ ಅಸಲಿ ಬುರುಡೆ ವಿಡಿಯೋಗಳಿರುವ ಅನುಮಾನ ಕೂಡ ಮೂಡಿದೆ.

ಇದನ್ನೂ ಓದಿ: Dharmasthala Case: ಗಿರೀಶ್‌ ಮಟ್ಟಣ್ಣವರ್‌ ವಿರುದ್ಧ ಮತ್ತೊಂದು ಎಫ್‌ಐಆರ್‌