ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Couple Death: ಸಾವಿನಲ್ಲೂ ಒಂದಾದ ರೈತ ದಂಪತಿ

ಧಾರವಾಡ ತಾಲ್ಲೂಕಿನ ದೇವರಹುಬ್ಬಳ್ಳಿ ಗ್ರಾಮದಲ್ಲಿಈ ಘಟನೆ ನಡೆದಿದೆ. ಈಶ್ವರ್ ಅರೇರ್(82) ಹಾಗೂ ಪಾರ್ವತಿ ಅರೇರ್ (73) ಎಂಬವರೇ ಸಾವಿನಲ್ಲೂ ಒಂದಾದ ರೈತ ದಂಪತಿಗಳು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪತ್ನಿ ಪಾರ್ವತಿಯನ್ನು ಪತಿ ಈಶ್ವರ್ ಅರೇರ್ ಅವರೇ ಆರೈಕೆ ಮಾಡುತ್ತಿದ್ದರು.

Couple Death: ಸಾವಿನಲ್ಲೂ ಒಂದಾದ ರೈತ ದಂಪತಿ

ಈಶ್ವರ ಅರೇರ, ಪಾರ್ವತಿ ಅರೇರ

ಹರೀಶ್‌ ಕೇರ ಹರೀಶ್‌ ಕೇರ Feb 17, 2025 12:44 PM

ಧಾರವಾಡ: ರೈತ ದಂಪತಿ (farmer wife and husband) ನಲ್ಲೂ ಒಂದಾದ ಘಟನೆ ಧಾರವಾಡದಲ್ಲಿ (Dharawada news) ನಡೆದಿದೆ. ಈ ದಂಪತಿ ರಾತ್ರಿ ಊಟ ಮಾಡಿ ಒಟ್ಟಿಗೆ ಮಲಗಿದವರು ಬೆಳಿಗ್ಗೆಯಾದರೂ ಏಳದೇ ಇದ್ದಾಗ (Couple death) ಕುಟುಂಬಸ್ಥರು ಎದ್ದೇಳಿಸಲು ನೋಡಿದ್ದಾರೆ. ಆದರೆ ಇಬ್ಬರೂ ಎದ್ದಿಲ್ಲ. ಸಾವಿನ ಮನೆಗೆ ಇಬ್ಬರೂಜೊತೆಯಾಗಿ ನಡೆದಿದ್ದಾರೆ.

ಧಾರವಾಡ ತಾಲ್ಲೂಕಿನ ದೇವರಹುಬ್ಬಳ್ಳಿ ಗ್ರಾಮದಲ್ಲಿಈ ಘಟನೆ ನಡೆದಿದೆ. ಈಶ್ವರ್ ಅರೇರ್(82) ಹಾಗೂ ಪಾರ್ವತಿ ಅರೇರ್ (73) ಎಂಬುವರೇ ಸಾವಿನಲ್ಲೂ ಒಂದಾದ ರೈತ ದಂಪತಿಗಳು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪತ್ನಿ ಪಾರ್ವತಿಯನ್ನು ಪತಿ ಈಶ್ವರ್ ಅರೇರ್ ಅವರೇ ಆರೈಕೆ ಮಾಡುತ್ತಿದ್ದರು. ನಿನ್ನೆ ರಾತ್ರಿ ಒಟ್ಟಿಗೆ ಊಟ ಮಾಡಿದ ದಂಪತಿಗಳು ಮಲಗಿದ್ದಾರೆ. ಆದರೆ ಬೆಳಿಗ್ಗೆ ಎಬ್ಬಿಸಲು ಹೋದಾಗ ಇಬ್ಬರೂ ಎದ್ದಿಲ್ಲ.

ಈಶ್ವರ್ ಹಾಗೂ ಪಾರ್ವತಿ ದಂಪತಿಗೆ ನಾಲ್ವರು ಪುತ್ರಿಯರು. 12 ಮಂದಿ ಮೊಮ್ಮಕ್ಕಳಿದ್ದಾರೆ. ಇಂತಹ ರೈತ ದಂಪತಿಗಳು ನಿನ್ನೆ ಮಲಗಿ, ಇಂದು ಬೆಳಿಗ್ಗೆ ಇನ್ನಿಲ್ಲವಾಗಿ ಸಾವಿನಲ್ಲೂ ಒಟ್ಟಾಗಿ ಪಯಣಿಸಿದ್ದಾರೆ.

ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಅಸಹಜ ಸಾವು

ಮೈಸೂರು: ಮೈಸೂರಿನ (Mysuru news) ವಿಶ್ವೇಶ್ವರಯ್ಯ ನಗರದ ಅಪಾರ್ಟ್ಮೆಂಟ್​​ನಲ್ಲಿ ಬಾಲಕ ಸೇರಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಕೊಲೆ (Murder) ಹಾಗೂ ಆತ್ಮಹತ್ಯೆ (Self harming) ಶಂಕೆ ವ್ಯಕ್ತವಾಗಿದೆ. ತಾಯಿ, ಪತ್ನಿ ಹಾಗೂ ಮಗನಿಗೆ ವಿಷವುಣಿಸಿದ ಗಂಡಸು ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.

ಕುಶಾಲ್ ​(15), ಚೇತನ್​​ (45), ರೂಪಾಲಿ (43), ಪ್ರಿಯಂವಧಾ (62) ಮೃತ ದುರ್ದೈವಿಗಳು. ಚೇತನ್​​​ ಮೊದಲಿಗೆ ತಾಯಿ ಪ್ರಿಯಂವಧಾ, ಪತ್ನಿ ರೂಪಾಲಿ ಮತ್ತು ಮಗ ಕುಶಾಲ್​ಗೆ ವಿಷವುಣಿಸಿ ಸಾಯಿಸಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ಮೈಸೂರು ಪೊಲೀಸ್ ಕಮಿಷನರ್​ ಸೀಮಾ ಲಾಟ್ಕರ್, ಡಿಸಿಪಿ ಜಾಹ್ನವಿ, ವಿದ್ಯಾರಣ್ಯಪುರಂ ಇನ್ಸ್​ಪೆಕ್ಟರ್​ ಮೋಹಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder Case: ಬರ್ಬರ ಕೃತ್ಯ; ಅಪರಿಚಿತ ಮಹಿಳೆಯ ರೇಪ್‌ ಮಾಡಿ ಕೊಲೆ